Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಒಡಿಶಾದ ಬಾಲಸೋರ್ ನಲ್ಲಿ ರೈಲು ದುರಂತ ಮಸೀದಿಯೊಂದರ ಬಳಿ ನಡೆದಿದ್ದು, ಕನಿಷ್ಠ 278 ಜನ ಮೃತಪಟ್ಟಿದ್ದಾರೆ
Fact
ವೈರಲ್ ಚಿತ್ರದಲ್ಲಿ ಮಸೀದಿ ಎಂದು ಹೇಳಲಾಗಿರುವ ಕಟ್ಟಡ ನಿಜವಾಗಿ ಇಸ್ಕಾನ್ ದೇವಾಲಯ
ಕಳೆದ ವಾರ ಒಡಿಶಾದ ಬಾಲಸೋರ್ ನಲ್ಲಿ ರೈಲು ದುರಂತ ನಡೆದ ಬೆನ್ನಲ್ಲೇ ಇದು ಮಸೀದಿಯೊಂದರ ಬಳಿ ನಡೆದಿದೆ ಎಂದು ಎಂದು ಕೋಮು ಬಣ್ಣ ಹಚ್ಚುವ ಯತ್ನ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ. ಈ ಭೀಕರ ದುರಂತದಲ್ಲಿ ಕನಿಷ್ಠ 278 ಜನರು ಸಾವನ್ನಪ್ಪಿದ್ದು, ಸಾಮಾಜಿಕ ಜಾಲತಾಣಗಳು ಅಪಘಾತದ ಸ್ಥಳ, ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಚಿತ್ರ, ಮೃತಪಟ್ಟವರ ಚಿತ್ರಗಳಿಂದ ತುಂಬಿದೆ. ಇದೇ ವೇಳೆ ಅಪಘಾತದ ಸ್ಥಳದ ಬಳಿ ಮಸೀದಿಯಿದೆ ಎಂಬಂತೆ ತೋರಿಸುವ ಚಿತ್ರವೊಂದು ವೈರಲ್ ಆಗಿದ್ದು, ಬಳಕೆದಾರರು ರೈಲು ಅಪಘಾತಕ್ಕೆ ಕೋಮು ಬಣ್ಣ ಬಳಿದಿದ್ದಾರೆ. ಈ ಹೇಳಿಕೆಯ ಸತ್ಯಶೋಧನೆಯನ್ನು ನ್ಯೂಸ್‌ಚೆಕರ್ ಮಾಡಿದ್ದು ಇದು ಸುಳ್ಳು ಎಂದು ಕಂಡುಕೊಂಡಿದೆ. ಈ ಚಿತ್ರವು ಅಪಘಾತದ ಸ್ಥಳದ್ದೇ ಆಗಿದ್ದರೂ, ಆ ರಚನೆ ಇಸ್ಕಾನ್ ದೇವಾಲಯವಾಗಿದ್ದು, ಅದು ಮಸೀದಿಯಲ್ಲ ಎಂದು ಗೊತ್ತಾಗಿದೆ.
ಅಪಘಾತದ ಒಂದು ದಿನದ ನಂತರ, ಟ್ವಿಟರ್ ಬಳಕೆದಾರ @Randomsena ಅಪಘಾತದ ಸ್ಥಳದ ಪಕ್ಕದ ಕಟ್ಟಡವನ್ನು ತೋರಿಸುವ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಅಪಘಾತಕ್ಕೆ ನಿರ್ದಿಷ್ಟ ಸಮುದಾಯದ ಸಂಪರ್ಕವಿದೆ ಎಂದು ಬಣ್ಣಿಸಲು ಯತ್ನಿಸಿದ್ದಾರೆ. ಅನಂತರ ಈ ಟ್ವೀಟ್ ಡಿಲೀಟ್ ಮಾಡಿದ್ದು, ಆ ವೇಳೆಗೆ ಈ ಟ್ವೀಟ್ ಅನ್ನು 4,000 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ. ಇತರ ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಶುಕ್ರವಾರದಂದು ಮಸೀದಿಯ ಬಳಿ ತ್ರಿವಳಿ ರೈಲು ಅಪಘಾತ ಸಂಭವಿಸಿದೆ ಎಂದು ಹೇಳಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
Also Read: ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ, ಈ ಫೋಟೋ ನಿಜವೇ?



ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ವೈರಲ್ ಚಿತ್ರದ ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91-9999499044) ಗೆ ದೂರು ಬಂದಿದ್ದು, ಅದನ್ನು ಸ್ವೀಕರಿಸಲಾಗಿದೆ.
ವೈರಲ್ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು ಈ ವೇಳೆ ರಾಯಿಟರ್ಸ್ ಮತ್ತು ಅಸೋಸಿಯೇಟೆಡ್ ಪ್ರೆಸ್ ಅಪಘಾತದ ಸ್ಥಳದ ಫೊಟೋಗಳು ಲಭ್ಯವಾಗಿದೆ. ಇದನ್ನು ಸ್ಪಷ್ಟವಾಗಿ ಪರಿಶೀಲಿಸಿದಾಗ, ಅದರಲ್ಲಿ ದೇಗುಲದ “ಶಿಖರ”ದ ಭಾಗವನ್ನು ಕಾಣಬಹುದು ಮತ್ತು ಇದು ದೇವಾಲಯ ಎಂಬುದನ್ನು ಸೂಚಿಸುತ್ತದೆ.
ನಂತರ ನಾವು ಪಿಟಿಐ ವರದಿಗಾರ ಸೂಫಿಯಾನ್ ಅವರನ್ನು ಸಂಪರ್ಕಿಸಿದ್ದು, ಅವರು ವೈರಲ್ ಚಿತ್ರದಲ್ಲಿ ಕಂಡುಬರುವ ರಚನೆಯು “ಬಾಲಸೋರ್ ನ ಬಹನಾಗ ಬಜಾರ್‌ನಲ್ಲಿರುವ ಇಸ್ಕಾನ್ ದೇವಾಲಯ” ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ನಂತರ, ನಾವು ಗೂಗಲ್ ನಕ್ಷೆಗಳಲ್ಲಿ ಬಾಲಸೋರ್ನ ಬಹನಾಗ ಬಜಾರ್ ನಲ್ಲಿರುವ ಇಸ್ಕಾನ್ ದೇವಾಲಯನ್ನು ಪತ್ತೆಮಾಡಿದ್ದು, ಅದರ ಸನಿಹ ರೈಲ್ವೆ ಹಳಿಗಳು, ದಿಕ್ಕು ಮತ್ತು ಅದಿರುವ ಸ್ಥಳದಿಂದ ರೈಲ್ವೇ ಹಳಿಗಳಿಗೆ ಇರುವ ದೂರವು ವೈರಲ್ ಚಿತ್ರದಂತೆ ಕಾಣುವಂತೆಯೇ ಇದೆ ಎಂದು ನಾವು ಕಂಡುಕೊಂಡಿದ್ದೇವೆ.

ಆ ಬಳಿಕ ನ್ಯೂಸ್‌ಚೆಕರ್ ಬಹನಾಗ ಬಜಾರ್ ನ ಅಂಗಡಿಯೊಂದರ ಮಾಲೀಕ ಸಂಜೀಬ್ ಅವರನ್ನು ಸಂಪರ್ಕಿಸಿದೆ. ಅವರೂ ವೈರಲ್ ಚಿತ್ರದಲ್ಲಿ ಕಾಣುತ್ತಿರುವುದು ಇಸ್ಕಾನ್ ದೇವಾಲಯ ಎಂಬುದನ್ನು ಸ್ಪಷ್ಟೀಕರಿಸಿದ್ದಾರೆ. “ದೇವಾಲಯವು ನಮ್ಮ ಅಂಗಡಿಯಿಂದ 50 ಮೀಟರ್ ದೂರದಲ್ಲಿದೆ ಮತ್ತು ಅಪಘಾತದ ಸ್ಥಳದಿಂದ 50-100 ಮೀಟರ್ ದೂರದಲ್ಲಿದೆ. ಕಳೆದ ಕೆಲವು ತಿಂಗಳುಗಳಿಂದ ದೇವಾಲಯದಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ” ಎಂದವರು ಹೇಳಿದ್ದಾರೆ. ಜೊತೆಗೆ ಅವರು ಕೆಲವು ಚಿತ್ರಗಳನ್ನು ನ್ಯೂಸ್ ಚೆಕರ್‌ನೊಂದಿಗೆ ಹಂಚಿಕೊಂಡಿದ್ದು, ಅದನ್ನು ಈ ಕೆಳಗೆ ನೋಡಬಹುದು.

ನಾವು ದೇವಾಲಯದ ಆಡಳಿತವನ್ನು ಮತ್ತಷ್ಟು ಸಂಪರ್ಕಿಸಿದೆವು, ಅವರು ವೈರಲ್ ಚಿತ್ರವು ನಿಜವಾಗಿಯೂ ಇಸ್ಕಾನ್ ದೇವಾಲಯವನ್ನು ಒಳಗೊಂಡಿದೆ ಎಂದು ದೃಢಪಡಿಸಿದರು.
ಪತ್ರಕರ್ತೆ ಮನೋಗ್ಯಾ ಲೋಯಿವಾಲ್ ಅವರು ಬಾಲಸೋರ್ ಅಪಘಾತದ ಸ್ಥಳದ ಬಳಿಯ ಇಸ್ಕಾನ್ ದೇವಾಲಯದ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಮಸೀದಿ ಎಂದು ಗುರುತಿಸಿದ್ದಾರೆ. ಅದನ್ನೇ ಇಲ್ಲಿಯೂ ನೋಡಬಹುದು.
ಇದನ್ನೂ ಓದಿ: ‘ಮೆಡಿಸಿನ್ ಜಿಹಾದ್’ ತೋರಿಸುವ ವೈರಲ್ ವೀಡಿಯೊದ ಹಿಂದಿನ ಸತ್ಯವೇನು?
ಇದೇ ವೇಳೆ, ಒಡಿಶಾ ಪೊಲೀಸರು “ಬಾಲಸೋರ್ ರೈಲು ಅಪಘಾತಕ್ಕೆ ಕೋಮು ಬಣ್ಣವನ್ನು ನೀಡುತ್ತಿರುವ” ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಜೂನ್ 4, 2023 ರಂದು ಸರಣಿ ಟ್ವೀಟ್ಗಳಲ್ಲಿ ಒಡಿಶಾ ಪೊಲೀಸರು, “ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಬಾಲಸೋರ್ ರೈಲು ಅಪಘಾತಕ್ಕೆ ಕೋಮು ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ. ಅಪಘಾತದ ಕಾರಣ ಮತ್ತು ಇತರ ಎಲ್ಲಾ ಅಂಶಗಳ ಬಗ್ಗೆ ಒಡಿಶಾದ ಜಿಆರ್ ಪಿ ತನಿಖೆ ನಡೆಸುತ್ತಿದೆ” ಎಂದು ಹೇಳಿದ್ದಾರೆ.
ಜೊತೆಗೆ “ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್ಗಳನ್ನು ಪ್ರಸಾರ ಮಾಡದಂತೆ ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮು ಸಾಮರಸ್ಯವನ್ನು ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
Also Read: ಮೊಳೆಗಳಿರುವ ಕ್ಯಾಪ್ಸೂಲ್ ಮೂಲಕ ಜಿಹಾದ್, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಒಡಿಶಾದ ಬಾಲಸೋರ್‌ನಲ್ಲಿ ರೈಲ್ವೇ ಅಪಘಾತ ನಡೆದ ಸ್ಥಳದ ಬಳಿ ಮಸೀದಿ ಎಂದು ಹೇಳಲಾದ ವೈರಲ್ ಪೋಸ್ಟ್ ಸುಳ್ಳು. ವೈರಲ್ ಚಿತ್ರದಲ್ಲಿ ಕಾಣುವುದು ಮಸೀದಿಯಲ್ಲ. ಅದು ದೇವಾಲಯವಾಗಿದೆ.
Our Sources
Photographs From Odisha Train Accident Site By Reuters & Associated Press
Google Maps
Telephonic Conversation With PTI Correspondent Sufiyan
Telephonic Conversation With Shop Owner In Bahanaga Bazar Sanjib
Correspondence With ISKCON Temple, Bahanaga Bazar Administration
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Runjay Kumar
October 13, 2025
Ishwarachandra B G
June 14, 2025
Ishwarachandra B G
June 10, 2025