Home 2023
Yearly Archives: 2023
Fact Check: ಒಡಿಶಾ ರೈಲು ದುರಂತ ಬಳಿಕ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆಯಾಗಿದ್ದಾರೆಯೇ, ಸತ್ಯ ಏನು?
Claim ಒಡಿಶಾ ರೈಲು ದುರಂತ ಬಳಿಕ ರೈಲ್ವೇ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆFact ರೈಲ್ವೇ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆಯಾಗಿಲ್ಲ. ಎಲ್ಲ ಸಿಬ್ಬಂದಿ ಸಿಬಿಐ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎಂದು ರೈಲ್ವೇ ಸ್ಪಷ್ಟೀಕರಣ ನೀಡಿದೆ.
ಒಡಿಶಾದ ರೈಲು ದುರಂತ ನಡೆದ ಬೆನ್ನಲ್ಲೇ ದುರಂತದ ಕಾರಣದ ಬಗ್ಗೆ ಸಂಶಯಗಳು ಇರುವುದರಿಂದ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಇದೇ ವೇಳೆ, ರೈಲ್ವೇ ಸಿಗ್ನಲಿಂಗ್...
Fact Check: ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆಯನ್ನು ಅಮೆರಿಕನ್ ಶೋದಲ್ಲಿ ಬಾಲಕರು ಹಾಡಿದ್ದಾರೆಯೇ? ಇಲ್ಲ, ಇದು ಸುಳ್ಳು
Claimಅಮೆರಿಕನ್ ಶೋನಲ್ಲಿ ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆ ಹಾಡಿದ ಅಮೆರಿಕನ್ ಮಕ್ಕಳುFactಇದು ಅಮೆರಿಕನ್ ಶೋ ಅಲ್ಲ, ರಾಮಾಯಣದ ಶೀರ್ಷಿಕೆ ಗೀತೆಯೂ ಅಲ್ಲ, ಇದು ಬ್ರಿಟನ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮವಾಗಿದ್ದು ಅದರಲ್ಲಿ ಹೋಪ್ ಎನ್ನುವ ಹಾಡು ಹಾಡಿದ್ದಾಗಿದೆ.
ಅಮೆರಿಕನ್ ಟ್ಯಾಲೆಂಟ್ ಶೋ ಒಂದರಲ್ಲಿ ಇಬ್ಬರು ಮಕ್ಕಳು ರಾಮಾಯಣ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡುತ್ತಿದ್ದಾರೆ ಎಂಬ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ವಾಟ್ಸಾಪ್‌ನಲ್ಲಿ ಶೇರ್ ಆಗುತ್ತಿರುವ...
Fact Check: ಬಿಪರ್ ಜಾಯ್ ಚಂಡಮಾರುತದ ಪರಿಣಾಮ ತೋರಿಸಲು ಹಳೆಯ, ಸಂಬಂಧವೇ ಇಲ್ಲದ ವೀಡಿಯೋಗಳ ಬಳಕೆ!
Claim ವೀಡಿಯೋ ದೃಶ್ಯಗಳಲ್ಲಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ Factಅಮೆರಿಕ, ಈಜಿಪ್ಟ್ ವೀಡಿಯೋಗಳನ್ನು ಬಳಸಿ ಬಿಪರ್ ಜಾಯ್ ಚಂಡಮಾರುತದ ಪರಿಣಾಮ ಎಂದು
ಬಿಪರ್ ಜಾಯ್ ಚಂಡಮಾರುತದ ಬಗೆಗಿನ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಪರಿಣಾಮವನ್ನು ತೋರಿಸುವ ಅನೇಕ ವೀಡಿಯೋಗಳು ಹರಿದಾಡಿದ್ದವು. ನ್ಯೂಸ್‌ಚೆಕರ್ ಅಂತಹ ಮೂರು ವೀಡಿಯೋಗಳ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಅವುಗಳು ಬಿಪರ್ ಜಾಯ್ ಚಂಡಮಾರುತಕ್ಕೆ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ.
ವೀಡಿಯೋ...
ಬಿಪರ್ ಜಾಯ್ ಕುರಿತ ಸುಳ್ಳು ವೀಡಿಯೋಗಳು, ಭಟ್ಪಾರಾದಲ್ಲಿ ಬಿಜೆಪಿ ವಿಜಯ, ಈ ವಾರದ ಸುಳ್ಳು ಕ್ಲೇಮ್‌ಗಳ ನೋಟ
ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ ಸೃಷ್ಟಿಯಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಕ್ಲೇಮುಗಳೂ ಹರಿದಾಡಿವೆ. ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋಗಳು, ಗಾಳಿಯ ರಭಸಕ್ಕೆ ತೂಗಾಡುವ ತೆಂಗಿನ ಮರದ ವೈರಲ್ ವೀಡಿಯೋಗಳನ್ನು ಹಾಕಿ ಇದು ಬಿಪರ್ ಜಾಯ್ ಎಂದು ಹೇಳಲಾಗಿತ್ತು. ಸೇತುವೆ ಮೇಲೆ ಗುಜರಾತ್ನಲ್ಲಿ ದೊಡ್ಡ ತೆರೆ ಅಪ್ಪಳಿಸಿದೆ ಎಂದು ಹಳೇ ವೈರಲ್ ವೀಡಿಯೋಕ್ಕೆ ಚಂಡಮಾರುತ ಥಳುಕು ಹಾಕಲಾಗಿತ್ತು. ಇದರೊಂದಿಗೆ ಲ್ಯಾಟಿನ್ ಅಮೆರಿಕದಲ್ಲಿ...
Fact Check: ಸೇತುವೆ ಮೇಲೆ ಭಾರೀ ತೆರೆಗಳು ಅಪ್ಪಳಿಸುವ ವೈರಲ್ ವೀಡಿಯೋ ಬಿಪರ್ ಜಾಯ್ ಚಂಡಮಾರುತದ್ದಲ್ಲ!
Claim
ಬಿಪರ್ ಜಾಯ್ ಚಂಡಮಾರುತದಿಂದಾಗಿ ಗುಜರಾತಲ್ಲಿ ಸೇತುವೆಯ ಮೇಲೆ ಭಾರೀ ತೆರೆ ಅಪ್ಪಳಿಸಿದೆ.
ಇಂತಹುದೇ ಹೇಳಿಕೆಯಿರುವ ಟ್ವೀಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ and ಇಲ್ಲಿ ನೋಡಬಹುದು.
Fact
ನ್ಯೂಸ್ಚೆಕರ್ ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ಆಗಸ್ಟ್ 26, 2017 ರಂದು ದ್ವೀಪಡೈರಿ ಲಕ್ಷದ್ವೀಪ ಅಪ್ಲೋಡ್ ಮಾಡಿದ ಈ ಯೂಟ್ಯೂಬ್ ವೀಡಿಯೊ ಲಭ್ಯವಾಗಿದೆ. ಆಗಸ್ಟ್ 23, 2017 ರಂದು ಮಿನಿಕೋಯ್ ದ್ವೀಪದ ಪೂರ್ವ ಜೆಟ್ಟಿಯ...
Fact Check: ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?
Claimಈರುಳ್ಳಿ ರಸವನ್ನು ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆFact ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಸಂಪೂರ್ಣ ಗುಣವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಹೀಗೆ ಮಾಡುವುದರಿಂದ ಕಿವಿ ಸಮಸ್ಯೆ ಬಿಗಡಾಯಿಸಬಹುದು
ಈರುಳ್ಳಿ ರಸವನ್ನು ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ "ಕಿವಿಯಲ್ಲಿ ನೋವು ಕಾಣಿಸಿಕೊಂಡರೆ ಈರುಳ್ಳಿಯನ್ನು ಅರೆದು ಅದರ ರಸವನ್ನು ಶೋಧಿಸಿ ಬಿಸಿ...
Fact Check: ತೆಂಗಿನ ಮರ ತೂಗಾಡಿದ್ದು ಬಿಪರ್ ಜಾಯ್ ಚಂಡಮಾರುತ ಕಾರಣ ಅಲ್ಲ, ಇದು ಸುಳ್ಳು!
Claim
ಬಿಪರ್ ಜಾಯ್ ಚಂಡಮಾರುತದಿಂದಾಗಿ ತೆಂಗಿನ ಮರ ತೀವ್ರವಾಗಿ ತೂಗಾಡುತ್ತಿರುವ ದೃಶ್ಯ
ಈ ಟ್ವೀಟ್‌ನ ಆರ್ಕೈವ್ ಆವೃತ್ತಿ ಇಲ್ಲಿದೆ.
Fact
ಈ ಬಗ್ಗೆ ಸತ್ಯಶೋಧನೆಗೆ ನ್ಯೂಸ್‌ಚೆಕರ್ ಕೀಫ್ರೇಮ್‌ಗಳನ್ನು ತೆಗೆದು Google lens ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ @anish_kohli ಟ್ವೀಟ್ ಖಾತೆಯಲ್ಲಿ ಆಗಸ್ಟ್ 6, 2020ರಂದು ಮಾಡಿದ ಟ್ವೀಟ್ ಲಭ್ಯವಾಗಿದೆ. ಇದರಲ್ಲಿ ತೆಂಗಿನ ಮರ ತೂಗಾಡುತ್ತಿರುವ ದೀರ್ಘ ದೃಶ್ಯವಿದೆ. ಇದೇ ರೀತಿ ಆಗಸ್ಟ್...
Fact Check: ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿ ನಡೆಸಿದ ಪ್ರತಿಭಟನೆಗೆ ಕೋಮು ಬಣ್ಣ!
Claimಶಾಂತಿಪ್ರಿಯ ಯುವಕರು ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿದ್ದಾರೆ Factಒಡಿಶಾದಲ್ಲಿ ನಡೆದ ಕೋರಮಂಡಲ್ ಎಕ್ಸ್ ಪ್ರೆಸ್ ದುರಂತಕ್ಕೂ ಇದಕ್ಕೂ ಸಂಬಂಧವಿಲ್ಲ, ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿರುವ ವಿದ್ಯಮಾನ 2022 ಜೂನ್ ವೇಳೆ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ರಾಜಸ್ಥಾನದಲ್ಲಿ ನಡೆದ ಬಗ್ಗೆ ವರದಿಯಾಗಿತ್ತು
ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ದುರಂತ ಬೆನ್ನಲ್ಲೇ, ಇಂತಹ ಅವಘಡಕ್ಕೆ ಕೋಮು ಬಣ್ಣ ನೀಡುವ ಹೇಳಿಕೆಗಳು ಹರಿದಾಡಿವೆ.
ವಾಟ್ಸಾಪ್...
Fact Check: ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತ ಎಂದು 2022ರಲ್ಲಿ ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋ ಹಂಚಿಕೆ
Claim
ಗುಜರಾತ್ ಕರಾವಳಿಯಲ್ಲಿ ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತದ ವೀಡಿಯೋ
ಇದನ್ನು ಸತ್ಯಶೋಧನೆಗಾಗಿ ಬಳಕೆದಾರರೊಬ್ಬರು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್ (+91-9999499044) ಜೊತೆಗೆ ಹಂಚಿಕೊಂಡಿದ್ದಾರೆ.
Fact
ದ್ವಾರಕಾ ಬಳಿ ಗುಜರಾತ್ ಕರಾವಳಿಯಲ್ಲಿ ಬಿಪರ್ ಜೋಯ್ ಚಂಡಮಾರುತ ಎಂದು ಹೇಳುವ ತುಣುಕನ್ನು ನ್ಯೂಸ್‌ಚೆಕರ್ ಎಚ್ಚರಿಕೆಯಿಂದ ವೀಕ್ಷಿಸಿದೆ. ಇದರೊಂದಿಗೆ ಈ ಸುಂಟರಗಾಳಿಯ ವೀಡಿಯೋ ಎಡಿಟ್ ಮಾಡಲಾಗಿದೆ ಎಂಬುದನ್ನು ಗಮನಿಸಲಾಗಿದೆ.
Also Read: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ...
Fact Check: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?
Claimದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರುFact ಇದು ದಾಂಡೇಲಿಯಲ್ಲಿ ನಡೆದ ಘಟನೆಯಲ್ಲ, ಲ್ಯಾಟಿನ್ ಅಮೆರಿಕಾದ ನಿಕರಗುವಾ ದೇಶದಲ್ಲಿ ನಡೆದಿದೆ
ದಾಂಡೇಲಿಯಲ್ಲಿ ಕಾರೊಂದು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಘಟನೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತ ಟ್ವಿಟರ್ ಹೇಳಿಕೆಯಲ್ಲಿ, “ಇದು ಕರ್ನಾಟಕದ ಹುಬ್ಬಳ್ಳಿ ಧಾರವಾಡ ಬಳಿಯ ದಾಂಡೇಲಿಯಲ್ಲಿ ನಡೆದ ಘಟನೆ. ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವು ಬಹಳಷ್ಟು ದುಬಾರಿಯಾಗುತ್ತದೆ” ಎಂದು ಹೇಳಲಾಗಿದೆ....