Fact Check: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?

ದಾಂಡೇಲಿ ಕೊಚ್ಚಿ ಹೋದ ಕಾರು, ಪ್ರವಾಹ,

Authors

Claim
ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು

Fact
ಇದು ದಾಂಡೇಲಿಯಲ್ಲಿ ನಡೆದ ಘಟನೆಯಲ್ಲ, ಲ್ಯಾಟಿನ್‌ ಅಮೆರಿಕಾದ ನಿಕರಗುವಾ ದೇಶದಲ್ಲಿ ನಡೆದಿದೆ

ದಾಂಡೇಲಿಯಲ್ಲಿ ಕಾರೊಂದು ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವ ಘಟನೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತ ಟ್ವಿಟರ್‌ ಹೇಳಿಕೆಯಲ್ಲಿ, “ಇದು ಕರ್ನಾಟಕದ ಹುಬ್ಬಳ್ಳಿ ಧಾರವಾಡ ಬಳಿಯ ದಾಂಡೇಲಿಯಲ್ಲಿ ನಡೆದ ಘಟನೆ. ಕೆಲವೊಮ್ಮೆ ಅತಿಯಾದ ಆತ್ಮವಿಶ್ವಾಸವು ಬಹಳಷ್ಟು ದುಬಾರಿಯಾಗುತ್ತದೆ” ಎಂದು ಹೇಳಲಾಗಿದೆ. ಈ ಟ್ವೀಟ್‌ ಇಲ್ಲಿದೆ.

Also Read: ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ಸತ್ಯ ಏನು?

ದಾಂಡೇಲಿಯ ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ವ್ಯಕ್ತಿ, ಈ ಘಟನೆ ನಿಜವೇ?
ಟ್ವಿಟರ್ ನಲ್ಲಿ ಹಂಚಿಕೊಳ್ಳಲಾದ ವೈರಲ್‌ ವೀಡಿಯೋ

ಇದೇ ರೀತಿ ಹೇಳಿಕೆಯಿರುವ ಪೋಸ್ಟ್ ಫೇಸ್ ಬುಕ್‌ನಲ್ಲಿ ಕೂಡ ಕಂಡುಬಂದಿದೆ.

ದಾಂಡೇಲಿಯ ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ವ್ಯಕ್ತಿ, ಈ ಘಟನೆ ನಿಜವೇ?
ಫೇಸ್‌ಬುಕ್‌ ನಲ್ಲಿ ಹಂಚಿಕೊಳ್ಳಲಾದ ವೈರಲ್‌ ವೀಡಿಯೋ

ಈ ವೀಡಿಯೋದ ಸತ್ಯ ಪರಿಶೀಲನೆಗೆ ಬಳಕೆದಾರರೊಬ್ಬರು ವಾಟ್ಸಾಪ್‌ ಟಿಪ್‌ಲೈನ್‌ ಗೂ ಕಳುಹಿಸಿದ್ದು, ಇದರ ಸತ್ಯಶೋಧನೆ ವೇಳೆ ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್‌ ವಿಡಿಯೋವನ್ನು ಇನ್‌ವಿಡ್‌ ಮೂಲಕ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ರಿವರ್ಸ್‌ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಈ ವೀಡಿಯೋದ ಬಗ್ಗೆ ಫಲಿತಾಂಶ  ಲಭ್ಯವಾಗಿದೆ.

ಮೇ 30, 2023ರಂದು ಎಲ್‌ ಹೆರಾಲ್ಡೋ ಪ್ರಕಟಿಸಿದ ಫೋಟೋ ವರದಿಯಲ್ಲಿ ಈ ವೀಡಿಯೋ ಲ್ಯಾಟಿನ್‌ ಅಮೆರಿಕಾದ ನಿಕರಗ್ವಾ ದೇಶದ್ದು ಎಂದಿದೆ. “ಯುರಿಯಲ್‌ ರೊಮೆರೊ ಎಂಬ ವ್ಯಕ್ತಿ ತನ್ನ ಕಾರಿನೊಂದಿಗೆ ಕೊಚ್ಚಿ ಹೋದ ದೃಶ್ಯ” ಎಂಬ ಶೀರ್ಷಿಕೆಯಡಿ ವರದಿಯಿದೆ. “ನೀರಿನ ಮಟ್ಟ ಏರಿಕೆಯಾಗುತ್ತಿದ್ದರೂ, ಪ್ರವಾಹ ಹಾದು ಹೋಗಲು ಟೊಯೊಟಾ ಟ್ರಕ್‌ ಚಾಲಕನ ಯತ್ನಿಸಿದಾಗ ನಡೆದ ಘಟನೆ” ಎಂದು ಹೇಳಲಾಗಿದೆ. (ಸ್ಪಾನಿಷ್ ಭಾಷೆಯಿಂದ ಭಾಷಾಂತರಿಸಲಾಗಿದೆ)

Also Read: ಹುರಿಗಡಲೆ-ಖರ್ಜೂರ ಒಟ್ಟಿಗೆ ತಿಂದರೆ ತೂಕ ಹೆಚ್ಚಿಸಬಹುದು ಅನ್ನೋದು ಸತ್ಯವೇ?

ದಾಂಡೇಲಿಯ ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ವ್ಯಕ್ತಿ, ಈ ಘಟನೆ ನಿಜವೇ?
ಎಲ್‌ ಹೆರಾಲ್ಡೋ ಫೋಟೋ ವರದಿ

ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ ಸ್ಪಾನಿಷ್‌ ಭಾಷೆಯಲ್ಲಿ ನಾವು ಘಟನೆ ಬಗ್ಗೆ ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇನ್ನಷ್ಟು ವರದಿಗಳು ಲಭ್ಯವಾಗಿವೆ.

ಮೇ 31, 2023ರಂದು ಸೆಮಾನಾ ಪ್ರಕಟಿಸಿದ ವರದಿಯಲ್ಲಿ, “ನಿಕರಾಗುವಾದ ಭಯಾನಕ ದೃಶ್ಯ: ಪ್ರವಾಹದ ಹರಿವಿನಲ್ಲಿ ಕೊಚ್ಚಿ ಹೋದ ಚಾಲಕ ನಂತರ ತನ್ನ ಜೀವಕ್ಕಾಗಿ ಹೋರಾಡುತ್ತಾನೆ” ಎಂದಿದೆ. ಈ ಘಟನೆಯಲ್ಲಿ ಕಾರಿನೊಂದಿಗೆ ರಸ್ತೆ ದಾಟಲು ಯತ್ನಿಸಿದ ಚಾಲಕ ಬಳಿಕ ಕೊಚ್ಚಿ ಹೋಗಿದ್ದು, ಈ ವೇಳೆ ಆತ ಕಾರಿನ ಕಿಟಕಿಯಿಂದ ಹೊರಬಂದು ಪಾರಾಗಲು ಹೊರಗೆ ಹಾರುತ್ತಾನೆ. ಇದು ವೀಡಿಯೋದಲ್ಲಿ ರೆಕಾರ್ಡ್‌ ಆಗಿದೆ ಎಂದು ವರದಿ ಹೇಳಿದೆ. ಬಳಿಕ ಆತನಿಗಾಗಿ ಹುಡುಕಾಟ ನಡೆದಿದ್ದು, ಚಾಲಕ ಶವವಾಗಿ ಪತ್ತೆಯಾಗಿದ್ದ ಎಂದು ವರದಿ ಹೇಳಿದೆ. (ಸ್ಪಾನಿಷ್ ಭಾಷೆಯಿಂದ ಭಾಷಾಂತರಿಸಲಾಗಿದೆ)

ದಾಂಡೇಲಿಯ ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ವ್ಯಕ್ತಿ, ಈ ಘಟನೆ ನಿಜವೇ?
ಸೆಮಾನಾ ವರದಿ

ನಿಕರಗುವಾದ ವಾರಾಕ್ರೂಝ್‌ನ ಗೋಥೆಲ್‌ ಸೆಕ್ಟರ್‌ನಲ್ಲಿ ನಡೆದ ಘಟನೆಯಲ್ಲಿ ಚಾಲಕ ಕಾರಿನೊಂದಿಗೆ ಕೊಚ್ಚಿ ಹೋದ ಬಳಿಕ ಆತ ಪಾರಾಗಲು ನಡೆಸುವ ದೃಶ್ಯದ ಭಾಗವನ್ನು ಮೆಕ್ಸಿಕೋದ ಸುದ್ದಿಸಂಸ್ಥೆ ಆಲೆರ್ಟಾ ಮುಂಡಿಯಲ್‌ ಮೇ 30, 2023ರಂದು ಟ್ವೀಟ್‌ ಮಾಡಿದೆ. ಇದು ಇಲ್ಲಿದೆ.

ಮೇ 29, 2023ರಂದು ಇನ್ಫೋಬೆ ತನ್ನ ವರದಿಯಲ್ಲಿ ಈ ಘಟನೆಯ ವರದಿಯನ್ನು ನೀಡಿದ್ದು, “ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ವೇಳೆ ವ್ಯಕ್ತಿ ಪಾರಾಗಲು ಯತ್ನಿಸಿ ವಿಫಲವಾದ ಘಟನೆ ನಿಕರಗುವಾದಲ್ಲಿ ನಡೆದಿದೆ” ಎಂದಿದೆ. (ಸ್ಪಾನಿಷ್ ಭಾಷೆಯಿಂದ ಭಾಷಾಂತರಿಸಲಾಗಿದೆ)

Also Read: ರಾಹುಲ್‌ ಗಾಂಧಿ ‘ನಾನು ಮುಸ್ಲಿಂ’ ಎಂದು ಹೇಳಿದ್ದಾರೆನ್ನಲಾದ ತಿರುಚಿದ ಸುದ್ದಿಯ ಚಿತ್ರ ವೈರಲ್

ದಾಂಡೇಲಿಯ ಪ್ರವಾಹದಲ್ಲಿ ಕಾರಿನೊಂದಿಗೆ ಕೊಚ್ಚಿ ಹೋದ ವ್ಯಕ್ತಿ, ಈ ಘಟನೆ ನಿಜವೇ?
ಇನ್ಫೋಬೆ ವರದಿ

Conclusion

ಈ ಸತ್ಯಶೋಧನೆಯ ಪ್ರಕಾರ, ಘಟನೆ ಲ್ಯಾಟಿನ್‌ ಅಮೆರಿಕಾದ ನಿಕರಗುವಾ ದೇಶದಲ್ಲಿ ನಡೆದಿದ್ದು, ಇದು ಕರ್ನಾಟಕದ ದಾಂಡೇಲಿಯಲ್ಲಿ ನಡೆದ ಘಟನೆ ಅಲ್ಲ ಎಂಬುದು ಸಾಬೀತಾಗಿದೆ.

Results: False

Our Sources:
Report By El Heraldo, Dated: May, 30, 2023

Report By Semana, Dated: May 31, 2023

Tweet By Alera Mundial, Dated: May 29, 2023

Report By Infobae, Dated: May 29, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors