Fact Check: ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಆಗಿದೆಯೇ? ವೈರಲ್‌ ವೀಡಿಯೋ ಹಿಂದಿನ ಸತ್ಯಾಂಶ ಇಲ್ಲಿದೆ!

ಭಾರತ ವಿಶ್ವದ ನಂಬರ್‌ 1 ಎಕನಾಮಿಕ್‌ ಪವರ್‌, ಐಎಂಎಫ್‌ ವರದಿ, ವೈರಲ್‌ ವೀಡಿಯೋ

Claim
ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್

Fact
ಭಾರತ ಈಗ ವಿಶ್ವದ ನಂಬರ್‌ 1 ಎಕನಾಮಿಕ್‌ ಪವರ್‌ ಎಂದು ಐಎಂಎಫ್‌ ಹೇಳಿಲ್ಲ ಬದಲಾಗಿ, ಐಎಂಎಫ್‌ ವರದಿಯು ಆರ್ಥಿಕತೆ ಕುರಿತಂತೆ ಭವಿಷ್ಯದ ಮುನ್ನೋಟವಾಗಿದೆ

ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್ ಎಂದು ಹೇಳುವ ಕ್ಲೇಮ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಫೇಸ್‌ಬುಕ್‌, ವಾಟ್ಸಾಪ್‌ ಸೇರಿದಂತೆ ವಿವಿಧೆಡೆ ಈ ಕ್ಲೇಮ್‌ ಕಂಡು ಬಂದಿದೆ. ಈ ಕ್ಲೇಮಿನಲ್ಲಿ, “ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್, 16 ವರ್ಷಗಳ ನಂತರ ಚೀನಾ ವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. ದುರ್ದೈವ  ಏನಂದ್ರೆ ನಮ್ಮ ದೇಶದ ಯಾವ ಚಾನೆಲ್ ಬರಲ್ಲ… ಕೊರಿಯಾ ದೇಶದ ಚಾನೆಲ್ ನಲ್ಲಿ ಪ್ರಸಾರ ಆಗುತ್ತೆ” ಹೇಳಲಾಗಿದೆ. ಜೊತೆಗೆ ವೀಡಿಯೋ ಕೂಡ ಇದೆ.

ಭಾರತ,  ವಿಶ್ವದ ನಂಬರ್ 1 ಎಕನಾಮಿಕ್ ಪವರ್
ವಾಟ್ಟಾಪಿನಲ್ಲಿ ಕಂಡುಬಂದಿರುವ ಕ್ಲೇಮ್‌

ಇದೇ ಕ್ಲೇಮ್‌ ಫೇಸ್‌ಬುಕ್‌ನಲ್ಲಿಯೂ ಪತ್ತೆಯಾಗಿದ್ದು, ಅವುಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈ ಕ್ಲೇಮಿನ ಬಗ್ಗೆ ಸತ್ಯಶೋಧನೆಗಾಗಿ ವಾಟ್ಸಾಪ್‌ ಬಳಕೆದಾರರೊಬ್ಬರು ನಮ್ಮ ವಾಟ್ಸಾಪ್‌ ಟಿಪ್‌ಲೈನ್‌ (+91-9999499044) ಗೆ ದೂರನ್ನು ಸಲ್ಲಿಸಿದ್ದು, ಸತ್ಯಶೋಧನೆ ಮಾಡಲಾಗಿದೆ. ಆ ಪ್ರಕಾರ ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

Fact Check/ Verification

ಈ ಸತ್ಯಶೋಧನೆ ವೇಳೆ ಆರಂಭದಲ್ಲಿ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಇಂಗ್ಲಿಷ್‌ನಲ್ಲಿ ವಾರ್ತಾವಾಚಕಿಯೊಬ್ಬರು ಸುದ್ದಿಯನ್ನು ಓದುವ ವೀಡಿಯೋ ಇದಾಗಿದೆ. ಇದರಲ್ಲಿ ಈ ವೇಳೆ ಅವರು “India is major, fastest growing economy in the world” ಎಂದು ಹೇಳುವುದು ಕಂಡುಬಂದಿದೆ. ಜೊತೆಗೆ ಈ ಕುರಿತ ಸುದ್ದಿಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ, (ಐಎಂಎಫ್‌) ಈ ವರ್ಷ ಭಾರತ ಆರ್ಥಿಕಾಭಿವೃದ್ಧಿಯಲ್ಲಿ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ಹೇಳಿರುವುದನ್ನು ಹೇಳಲಾಗಿದೆ.

ಇದಕ್ಕೆ ಪೂರಕವಾಗಿ ಟ್ವಿಟರ್ ನಲ್ಲಿ ಐಎಂಎಫ್‌ ಮಾಡಿದ ಟ್ವೀಟ್‌ ಲಭ್ಯವಾಗಿದ್ದು, ಇದರಲ್ಲಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತದ ಜಿಡಿಪಿ ಸೂಚ್ಯಂಕ ಶೇ.6.8 ಆಗಲಿದೆ ಎಂದು ಐಎಂಎಫ್‌ 2023ನೇ ಸಾಲಿನ ಬೆಳವಣಿಗೆ ಪ್ರಕ್ಷೇಪದಲ್ಲಿ ಹೇಳಿದೆ.

ಐಎಂಎಫ್‌ 2023ರ ಜನವರಿಯಲ್ಲಿ ಪ್ರಕಟಿಸಿದ ಈ ವರದಿಯ ವಿವರಗಳು ಐಎಂಎಫ್‌ನ ವೆಬ್‌ಸೈಟ್‌ ನಲ್ಲಿ ಲಭ್ಯವಿದೆ.

Also Read: ಭ್ರಷ್ಟಾಚಾರ ಪ್ರಕರಣ ಆರೋಪಿ, ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರ ನಿಜವೇ?

ಇದರೊಂದಿಗೆ ವರದಿಯನ್ನು ವಿವಿಧ ಮಾಧ್ಯಮಗಳೂ ಸುದ್ದಿ ಮಾಡಿವೆ. ಹಿಂದೂಸ್ತಾನ್‌ ಟೈಮ್ಸ್‌ ಜನವರಿ 31 2023ರಂದು ಐಎಂಎಫ್‌ ವರದಿ ಬಗ್ಗೆ ಹೇಳಿದ್ದು, “ಪ್ರಸ್ತುತ ಅಂದಾಜಿನ ಪ್ರಕಾರ ಉದಯೋನ್ಮುಖವಾಗಿ ಅಭಿವೃದ್ಧಿ ಹೊಂದುತ್ತಿರುವ ಏಷ್ಯಾದ ಒಟ್ಟಾರೆ ಬೆಳವಣಿಗೆಯನ್ನು ಮೀರಿಸುವ ಮೂಲಕ ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ” ಎಂದು ಅದು ಹೇಳಿದೆ.

ಭಾರತ, ವಿಶ್ವದ ನಂಬರ್ 1 ಎಕನಾಮಿಕ್ ಪವರ್
ಹಿಂದೂಸ್ತಾನ್‌ ಟೈಮ್ಸ್‌ ವರದಿ

ಜನವರಿ 31, 2023ರಂದು ಮಿಂಟ್ ಕೂಡ ಐಎಂಎಫ್‌, ಮುನ್ನೆಣಿಕೆಯನ್ನು ವರದಿ ಮಾಡಿದ್ದು,  “ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯಲ್ಲಿ ಕೆಲವು ನಿಧಾನಗತಿಯನ್ನು ನಿರೀಕ್ಷಿಸಿದೆ. ಇದೇ ವೇಳೆ, ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯನ್ನು 6.8 ಪ್ರತಿಶತದಿಂದ 6.1 ಪ್ರತಿಶತಕ್ಕೆ ಯೋಜಿಸಿದೆ ಎಂದು ಹೇಳಿದೆ.

ಈ ವರದಿಗಳ ಪ್ರಕಾರ ಐಎಂಎಫ್‌ನ ಇತ್ತೀಚಿನ ವರದಿಯು ಭವಿಷ್ಯದ ಮುನ್ನೋಟದ ಬಗ್ಗೆ ಆಗಿದ್ದು ಅದು ಪ್ರಸ್ತುತ, ಭಾರತವನ್ನು ಆರ್ಥಿಕತೆಯಲ್ಲಿ ನಂಬರ್‌.1 ಎಂದು ಹೇಳಿರುವುದು ಲಭ್ಯವಾಗಿಲ್ಲ.

Conclusion

ಈ ಸತ್ಯಶೋಧನೆ ಪ್ರಕಾರ, ಐಎಂಎಫ್‌ ವರದಿಯು ಆರ್ಥಿಕತೆ ಕುರಿತಂತೆ ಭವಿಷ್ಯದ ಮುನ್ನೋಟವಾಗಿದೆ. ಆದ್ದರಿಂದ “ಭಾರತ ಈಗ ವಿಶ್ವದ ನಂಬರ್ 1 ಎಕನಾಮಿಕ್ ಪವರ್” ಎಂದು ಕ್ಲೇಮಿನಲ್ಲಿ ಹೇಳಿರುವುದು ತಪ್ಪಾದ ಸಂದರ್ಭವಾಗಿದೆ.

Result: Missing Context

Our Source
Tweet by IMF, Dated: January 31, 2023

IMF World Economic Update 2023

Report by Hindustan Times, Dated: January 31, 2023

Report by Mint, Dated: January31, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.