Weekly Wrap: ಅಮಿತ್‌ ಶಾ ಪತ್ರ, ಸೋನಿಯಾ ಜೊತೆಗೆ ಕ್ವಟ್ರೋಕಿ, ಹಿಜಾಬ್‌ ವಿಚಾರಕ್ಕೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ.1 ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ ನೋಟ

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರ, ಕಾಂಗ್ರೆಸ್‌ ನಾಯಕಿ ಅವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಹಿಜಾಬ್ ತೆಗೆಯಲು ಹೇಳಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ, ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಎನ್ನುವ ಕ್ಲೇಮ್, ಬೇಸಗೆ ವಾಹನಕ್ಕೆ ಗರಿಷ್ಟ ಇಂಧನ ತುಂಬಿಸಿದರೆ ಅಪಾಯ ಎನ್ನುವ ಕ್ಲೇಮ್ಗಳು ಈ ವಾರದ ಹೈಲೈಟ್ಸ್. ವಾರದ ಕ್ಲೇಮ್‌ಗಳಲ್ಲಿ ಎರಡು ರಾಜಕಾರಣಿಗಳು ಮತ್ತು ರಾಜಕಾರಣಕ್ಕೆ ಸಂಬಧಿಸಿದ್ದಾದರೆ, ಒಂದು ಧಾರ್ಮಿಕವಾದ ಇನ್ನೊಂದು ವಿಜ್ಞಾನ ಕುರಿತ ಕ್ಲೇಮುಗಳನ್ನು ಹೊಂದಿದ್ದವು. ಇವುಗಳನ್ನು ನ್ಯೂಸ್‌ಚೆಕರ್‌ ಪರಿಶೀಲನೆ ನಡೆಸಿದ್ದು, ವಾಸ್ತವಾಂಶಗಳನ್ನು ತೆರೆದಿಟ್ಟಿದೆ.

ಅಮಿತ್‌ ಶಾ, ವಿರೂಪಾಕ್ಷಪ್ಪ, ಜೆಪಿ ನಡ್ಡಾ, ಅಮಿತ್‌ ಶಾ ಪತ್ರ,

ಭ್ರಷ್ಟಾಚಾರ ಪ್ರಕರಣ ಆರೋಪಿ, ಶಾಸಕ ವಿರೂಪಾಕ್ಷಪ್ಪ ವಿಚಾರದಲ್ಲಿ ಅಮಿತ್ ಶಾ ಬಿಜೆಪಿ ಅಧ್ಯಕ್ಷರಿಗೆ ಬರೆದ ಪತ್ರ ನಿಜವೇ?

ಭ್ರಷ್ಟಾಚಾರ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಶಾಸಕ ವಿರೂಪಾಕ್ಷಪ್ಪ ಅವರನ್ನು ಪಕ್ಷದಿಂದಿ ತಾತ್ಕಾಲಿಕವಾಗಿ ವಜಾ ಮಾಡಿ ಪಕ್ಷದ ಮೇಲಾಗುವ ಋಣಾತ್ಮಕ ಪರಿಣಾಮಗಳನ್ನು ತಡೆಯಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣಗಳ ಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ನ್ಯೂಸ್ ಚೆಕರ್ ಸತ್ಯ ಶೋಧನೆ ನಡೆಸಿದಾಗ ಇದೊಂದು ಸುಳ್ಳುಪತ್ರ ಮತ್ತು ಈ ಹಿಂದೆ ಇಂತಹುದೇ ಸುಳ್ಳು ಪತ್ರಗಳು ವೈರಲ್ ಆಗಿರುವುದು ಪತ್ತೆಯಾಗಿದ್ದವು. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ಸೋನಿಯಾ ಗಾಂಧಿ, ಒಟ್ಟಾವಿಯೋ ಕ್ವಟ್ರೋಕಿ, ವೈರಲ್‌ ಫೋಟೋ,

ಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಈ ವೈರಲ್ ಫೋಟೋ ನಿಜವೇ?

ಸೋನಿಯಾ ಗಾಂಧಿಯವರೊಂದಿಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಇದ್ದಾರೆ ಎಂದು ಹೇಳಲಾದ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತ್ತು. ಆದರೆ ಸತ್ಯಶೋಧನೆಯಲ್ಲಿ ಇದರ ನಿಜಾಂಶ ಪತ್ತೆಯಾಗಿತ್ತು. ಈ ಫೋಟೋವನ್ನು ಎಪ್ರಿಲ್‌ 8, 1996ರಂದು ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌ (ಎಸ್‌ಪಿಜಿ)ಯ ಕಾರ್ಯಕ್ರಮವೊಂದರಲ್ಲಿ ತೆಗೆಯಲಾಗಿದ್ದು ಇದನ್ನು ಡಿ, 4 2017 ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಇದನ್ನು ಪ್ರಕಟಿಸಿತ್ತು. ಇದೇ ಫೋಟೋವನ್ನು ತೆಗೆದುಕೊಂಡು ಸೋನಿಯಾ ಅವರೊಂದಿಗೆ ಕ್ವಟ್ರೋಕಿ ಎಂದು ತಪ್ಪಾದ ಕ್ಲೇಮ್ ಹಂಚಿಕೊಳ್ಳಲಾಗಿತ್ತು. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ಹಿಜಾಬ್‌ ಗಲಾಟೆ, ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ,

ಹಿಜಾಬ್‌ ತೆಗೆಯಲು ಹೇಳಿದ್ದಕ್ಕೆ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ 

ಹಿಜಾಬ್ ತೆಗೆಯಲು ಹೇಳಿದ್ದಾರೆಂದು, ವ್ಯಕ್ತಿಯೋರ್ವ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವೊಂದು ವೈರಲ್‌ ಆಗಿತ್ತು. ನ್ಯೂಸ್‌ಚೆಕರ್‌ ಸತ್ಯಶೋಧನೆ ವೇಳೆ ಘಟನೆ ನಡೆದಿರುವುದು ರಷ್ಯಾದ ಸೈಬೀರಿಯಾದ ನಿಝಾನೆವಾರ್‌ಟೋವಸ್ಕ್‌ ಎಂಬಲ್ಲಿ ಎಂಬುದು ತಿಳಿದು ಬಂದಿದೆ. ಜೊತೆಗೆ 2021 ಸೆಪ್ಟೆಂಬರ್ ವೇಳೆಗೆ ನಡೆದಿದ್ದಾಗಿದೆ. ವೈದ್ಯರು ಹಿಜಾಬ್‌ಧಾರಿ ಮಹಿಳೆಯೊಬ್ಬರಿಗೆ ವೈದ್ಯಕೀಯ ಪರಿಶೀಲನೆ ವೇಳೆ ದೇಹದ ಭಾಗಗಳನ್ನು ತೋರಿಸಲು ಹೇಳಿದ್ದು, ಇದರ ವಿರುದ್ಧ ಆತನ ಪತಿ ಹಲ್ಲೆ ನಡೆಸಿದ್ದಾಗಿ ವರದಿಗಳು ಹೇಳಿದ್ದವು. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ಇಂಧನ ಟ್ಯಾಂಕ್ ಭರ್ತಿ, ವಾಹನ, ಬೇಸಗೆ,

ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿಯೇ?

ಬೇಸಗೆಯಲ್ಲಿ ವಾಹನದ ಇಂಧನ ಟ್ಯಾಂಕ್‌ ಪೂರ್ತಿ ತುಂಬಿಸುವುದು ಅಪಾಯಕಾರಿ, ಬಿಸಿಲು ಹೆಚ್ಚಿರುವುದರಿಂದ ಸ್ಫೋಟದ ಸಂಭವ ಇದೆ ಎಂಬರ್ಥದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕ್ಲೇಮ್‌ ಒಂದು ವೈರಲ್‌ ಆಗಿತ್ತು. ನ್ಯೂಸ್‌ಚೆಕರ್‌ ಸತ್ಯಶೋಧನೆ ವೇಳೆ ಇದೊಂದು ಹಳೆಯ ಸುಳ್ಳು ಮಾಹಿತಿಯಾಗಿದ್ದು, ಈ ಬಗ್ಗೆ ಇಂಡಿಯನ್‌ ಆಯಿಲ್‌ 2019 ಮತ್ತು 2022ರಲ್ಲಿ ಟ್ವಿಟರ್‌ ಮತ್ತು ಫೇಸ್‌ಬುಕ್‌ಗಳಲ್ಲಿ ನೀಡಿರುವ ಸ್ಪಷ್ಟೀಕರಣ ಪತ್ತೆಯಾಗಿದೆ. ಆದ್ದರಿಂದ ಈ ಕ್ಲೇಮ್‌ ಜನರ ದಿಕ್ಕುತಪ್ಪಿಸುವ ಉದ್ದೇಶ ಹೊಂದಿತ್ತು ಎಂದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ಭ್ರಷ್ಟಾಚಾರ, ಕರ್ನಾಟಕವೇ ನಂ.1. ಸಿಎಂಎಸ್‌ ಸಮೀಕ್ಷೆ, ಪತ್ರಿಕಾ ವರದಿ

ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂ.1 ಆಗಿದೆಯೇ, ವೈರಲ್‌ ಪೋಸ್ಟ್‌ ಹಿಂದಿನ ಅಸಲಿಯತ್ತು ಇದೇ!

ಭ್ರಷ್ಟಾಚಾರ ಅಥವಾ ಲಂಚಗುಳಿತನದಲ್ಲಿ ಕರ್ನಾಟಕ ನಂ.1 ಆಗಿದೆ ಎಂಬ ಕುರಿತ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು. ಮತ್ತೆ ಪದೇ ಪದೇ ಮೋದಿ ಮತ್ತು ಶಾ ಅವರು ಕರ್ನಾಟಕ ಕ್ಕೆ ಬಂದು ರಾಜ್ಯವನ್ನು ಸಂಪೂರ್ಣವಾಗಿ ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆಂದು ಹೇಳುತ್ತಿದ್ದಾರಲ್ಲ. ಈಗಾಗಲೇ ಭ್ರಷ್ಟಾಚಾರದಲ್ಲಿ ನಮ್ಮನ್ನು ನಂ.1 ಮಾಡಿರುವ ರಾಜ್ಯ ಬಿಜೆಪಿ ನಾಯಕರು ಈಗ ವಿರುದ್ಧ ದಿಕ್ಕಿನಲ್ಲಿ ಪಯಣಿಸಲು ಒಪ್ಪುವರೇ ಎಂದು ಹೇಳಲಾಗಿತ್ತು. ಈ ಬಗ್ಗೆ ಸತ್ಯಶೋಧನೆಯನ್ನು ಮಾಡಿದಾಗ, ಇದು ಸೆಂಟರ್‌ ಫಾರ್‌ ಮೀಡಿಯಾ ಸ್ಟಡೀಸ್‌ನ 2017ರ ಸಮೀಕ್ಷೆ ಎಂಬುದು ತಿಳಿದುಬಂದಿದೆ. ಇದರ ಪತ್ರಿಕಾ ವರದಿಯನ್ನು ಕ್ಲೇಮ್‌ನಲ್ಲಿ ಬಳಸಲಾಗಿದ್ದು, ವರದಿ ಈಗಿನದ್ದು ಎಂಬರ್ಥದಲ್ಲಿ ಹಾಕಲಾಗಿತ್ತು. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ