Fact Check: ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್‌ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?

ಕಾಂಗ್ರೆಸ್‌ಗೆ ಮತದಾನ ಮಾಡದಂತೆ ನಟ ಪ್ರಕಾಶ್‌ ರಾಜ್ ಮನವಿ

Claim
ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್‌ ರಾಜ್‌ ಅವರಿಂದ ಮನವಿ

Fact
ನಟ ಪ್ರಕಾಶ್‌ ರಾಜ್‌ ಅವರ ಕುರಿತ ವೀಡಿಯೋ 2019ರ ಲೋಚಕಸಭೆ ಚುನಾವಣೆ ಸಂದರ್ಭದ್ದು. ಅವರು ಸ್ವತಂತ್ರ್ಯ ಅಭ್ಯರ್ಥಿಯಾಗಿ ನಿಂತಿದ್ದ ವೇಳೆ ಹರಿದಾಡಿದ ವಾಟ್ಸಾಪ್‌ ಸಂದೇಶ ಕುರಿತು ಪ್ರತಿಕ್ರಿಯಿಸಿದ್ದಾಗಿದೆ.

ನಟ ಪ್ರಕಾಶ್‌ ರಾಜ್‌ ಕಾಂಗ್ರೆಸ್‌ಗೆ ಮತ ನೀಡದಂತೆ ಹೇಳಿದ್ದಾರೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹೊತ್ತಿನಲ್ಲೇ ಈ ವೀಡಿಯೋ ಹರಿದಾಡುತ್ತಿದ್ದು ಹಲವು ಇದನ್ನು ಹಂಚಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಕಂಡು ಬಂದ ಕ್ಲೇಮಿನಲ್ಲಿ “ಕನ್ನಡದ ಮೇರು ನಟ ಪ್ರಕಾಶ್‌ ರಾಜ್‌ ಅವರಿಂದ ಕಾಂಗ್ರೆಸ್‌ಗೆ ಮತ ನೀಡದಂತೆ ಮನವಿ” ಮಾಡಿದ್ದಾರೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್‌ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಎಂದು ಕಂಡುಬಂದಿದೆ.

Fact Chek/Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ಗೂಗಲ್‌ ಕೀವರ್ಡ್ ಸರ್ಚ್‌ ನಡೆಸಿದ್ದು, ಇದರಲ್ಲಿ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಎಪ್ರಿಲ್‌ 17, 2019ರ ಡೆಕ್ಕನ್‌ ಹೆರಾಲ್ಡ್‌ ವರದಿಯ ಪ್ರಕಾರ, “ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿಯಾದ ಪ್ರಕಾಶ್‌ ರಾಜ್‌ ಅವರು ಚುನಾವಣೆ ಹಿಂದಿನ ದಿನ ತಾನು ಕಾಂಗ್ರೆಸ್ ಬೆಂಬಲಿಸುತ್ತೇನೆ ಎಂದು ಹರಿದಾಡುತ್ತಿರುವ ಸಾಮಾಜಿಕ ಜಾಲತಾಣದ ಸಂದೇಶ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಕೆಟ್ಟ ರಾಜಕಾರಣ ಎಂದು ಅವರು ಟ್ವಿಟರ್‌ನಲ್ಲಿ ಟೀಕೆ ಮಾಡಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ ಎಂದು ವಿವರಿಸಲಾಗಿದೆ”

ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್‌ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?
ಡೆಕ್ಕನ್‌ ಹೆರಾಲ್ಡ್‌ ವರದಿ

ಎಪ್ರಿಲ್‌ 17, 2021ರ ಒನ್ ಇಂಡಿಯಾ ಕನ್ನಡ ವರದಿಯ ಪ್ರಕಾರ, “ಚುನಾವಣೆಗೆ ಒಂದು ದಿನ ಬಾಕಿ ಇರುವಂತೆಯೇ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರೈ ಅವರು ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ವಿರುದ್ಧ ಹರಿಹಾಯ್ದಿದ್ದಾರೆ. ತಾವು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರಿಗೆ ಬೆಂಬಲ ನೀಡುತ್ತಿರುವಂತೆ ಸುಳ್ಳು ಸುದ್ದಿಗಳನ್ನು ವಾಟ್ಸಾಪ್‌ಗಳಲ್ಲಿ ಹರಿಬಿಡಲಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ, ಅರ್ಷದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪ್ರಕಾಶ್ ರೈ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ರಿಜ್ವಾನ್ ಅರ್ಷದ್ ಜತೆಗೆ ಇರುವ ಚಿತ್ರವನ್ನು ಬಳಸಿಕೊಂಡು ಚುನಾವಣೆಯ ಮುನ್ನಾದಿನವಾದ ಬುಧವಾರ ಕಾಂಗ್ರೆಸ್ ಅಭ್ಯರ್ಥಿಯಾದ ರಿಜ್ವಾನ್ ಅರ್ಷದ್ ಅವರಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಲಾಗಿದೆ. ತಮ್ಮ ಸ್ವಂತ ಬಲದಿಂದ ಮತ ಗಳಿಸಿಕೊಳ್ಳಲು ಆಗದ ರಿಜ್ವಾನ್ ಅರ್ಷದ್ ಅವರೇ ಈ ರೀತಿ ಸುದ್ದಿ ಹಬ್ಬಿಸಿದ್ದಾರೆ ಎಂದು ಪ್ರಕಾಶ್ ರಾಜ್ ಸಿಟ್ಟು ತೋರಿಸಿಕೊಂಡಿದ್ದಾರೆ.” ಎಂದು ವರದಿಯಲ್ಲಿದೆ.

Also Read: ಮತದಾರರಿಗೆ ಹಂಚಲು ಟಯರ್ ನಲ್ಲಿಟ್ಟು ಹಣ ಸಾಗಾಟ, ವೈರಲ್‌ ವೀಡಿಯೋದ ಅಸಲಿಯತ್ತೇನು?

ಎಪ್ರಿಲ್‌ 17, 2019ರಂದು ಎನ್‌ಎನ್ಐ ಮಾಡಿದ ವರದಿಯ ಪ್ರಕಾರ, “ಕಾಂಗ್ರೆಸ್‌ ಬೆಂಬಲಿಸುವ ಕುರಿತ “ನಕಲಿ” ವಾಟ್ಸಾಪ್‌ ಮೆಸೇಜ್‌ ವಿರುದ್ಧ ಪ್ರಕಾಶ್ ರಾಜ್‌ ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.” ಎಂದಿದೆ.

ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್‌ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?

ಇನ್ನು ಶೋಧನೆ ವೇಳೆ ಪ್ರಕಾಶ್‌ ರಾಜ್‌ ಅವರ ಟ್ವಿಟರ್ ಖಾತೆಯಲ್ಲೇ ಈ ಕುರಿತ ವೀಡಿಯೋ ಲಭ್ಯವಾಗಿದೆ. ಈ ವೀಡಿಯೋ ವೈರಲ್‌ ವೀಡಿಯೋದೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಎಪ್ರಿಲ್‌ 17, 2019ರಂದು ಪೋಸ್ಟ್‌ ಮಾಡಲಾದ ಈ ವೀಡಿಯೋ ಸಂದೇಶದಲ್ಲಿ, ಪ್ರಕಾಶ್‌ ರಾಜ್‌ ಅವರು “ಕಾಂಗ್ರೆಸ್ಸಿನವರ ನೀಚ ರಾಜಕೀಯ ನೋಡಿ, ರಿಜ್ವಾನ್‌ ಅವರ ಪಿಎ ಎಂದು ಹೇಳಿಕೊಳ್ಳುವ ಮಝರ್‌ ಅಹ್ಮದ್‌ ಎನ್ನುವ ವ್ಯಕ್ತಿ ಈತ ನಾನು ಮತ್ತು ರಿಜ್ವಾನ್‌ ಒಂದು ಸಂವಾದದಲ್ಲಿರುವ ಫೋಟೋ ತೆಗೆದುಕೊಂಡು, ಪ್ರಕಾಶ್‌ ರಾಜ್‌ ಕಾಂಗ್ರೆಸ್‌ ಸೇರಿದ್ದಾರೆ, ಅವರಿಗೆ ಓಟು ಹಾಕಿ ವೇಸ್ಟ್‌ ಮಾಡಬೇಡಿ ಎಂದು ವಾಟ್ಸಾಪ್‌ನಲ್ಲಿ ಸುದ್ದಿ ಹರಡಿಸಿದ್ದಾರೆ. ಕಾಂಗ್ರೆಸ್‌ನ ಇಂತಹ ನೀಚ ರಾಜಕಾರಣವನ್ನು ಖಂಡಿಸುತ್ತೇನೆ, ಈ ಬಗ್ಗೆ ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ಹೇಳಿದ್ದಾರೆ. ಈ ಟ್ವೀಟ್‌ ಅನ್ನು ಇಲ್ಲಿ ನೋಡಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ, ಇದು 2019ರ ಲೋಕಸಭೆ ಚುನಾವಣೆ ಸಂದರ್ಭದ್ದಾಗಿದ್ದು, ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತ ಪ್ರಕಾಶ್‌ ರಾಜ್‌ ಅವರು ತಮ್ಮ ವಿರುದ್ಧ ಹರಿದಾಡಿದ ವಾಟ್ಸಾಪ್‌ ಸಂದೇಶಕ್ಕೆ ನೀಡಿದ ಪ್ರತಿಕ್ರಿಯೆ ಎಂದು ಗೊತ್ತಾಗಿದೆ.

Result: False

Our Sources

Report By Deccan Herald, Dated: April 17, 2019

Report By One India Kannada, Dated: April 17, 2019

Report By ANI, Dated: April 17, 2019

Tweet By Prakash Raj, Dated: April 17, 2019


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.