Authors
Claim
ಮತದಾರರಿಗೆ ಹಂಚಲು ಟಯರ್‌ನಲ್ಲಿಟ್ಟು ಹಣ ಸಾಗಾಟ
Fact
ಟಯರ್ ನಲ್ಲಿಟ್ಟು ಹಣ ಸಾಗಾಟ ನಡೆಸಿದ ಪ್ರಕರಣ 2019ರ ಹೊತ್ತಿನದ್ದು, ಈಗಿನ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ
ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿರುವಂತೆಯೇ, ಮತದಾರರಿಗೆ ಆಮಿಷ ಒಡ್ಡಲು ಹಣ ಹಂಚಲಾಗುತ್ತಿದೆ ಮತ್ತು ಇದಕ್ಕಾಗಿ ಹಣವನ್ನು ಗುಪ್ತವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡಿದೆ.
ಹಣ ಹಂಚುವುದಕ್ಕಾಗಿ ಟಯರ್‌ನಲ್ಲಿ ಇಟ್ಟು ಗುಪ್ತವಾಗಿ ಸಾಗಿಸಲಾಗುತ್ತಿದೆ ಎಂಬ ಕುರಿತ ಕ್ಲೇಮ್ ಫೇಸ್‌ಬುಕ್‌ನಲ್ಲಿ ಕಂಡುಬಂದಿದೆ. ಈ ಕ್ಲೇಮಿನಲ್ಲಿ “ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಟಯರ್ ನಲ್ಲಿ ಲಕ್ಷ ಲಕ್ಷ ರೂಪಾಯಿ ಸಾಗಸುವ ದೃಶ್ಯ” ಎಂದು ಹೇಳಲಾಗಿದೆ.
ಈ ಕ್ಲೇಮಿನ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಈ ಸುದ್ದಿಯ ಬಗ್ಗೆ ಹುಡುಕಾಟ ನಡೆಸಲಾಯಿತು. ಈ ವೇಳೆ ನ್ಯೂಸ್ 18 ಕನ್ನಡ ಎಪ್ರಿಲ್ 20, 2019ರಂದು ಪ್ರಕಟಿಸಿದ ಈ ವರದಿ ಲಭ್ಯವಾಗಿದೆ. “ಕಾರಿನ ಸ್ಟೆಪ್ನಿ ಟಯರ್ನಲ್ಲಿತ್ತು ಭಾರೀ ಮೊತ್ತ; ರಾಜ್ಯದ ಹಲವೆಡೆ ಒಂದೇ ದಿನ 4 ಕೋಟಿ ರೂ. ವಶಪಡಿಸಿಕೊಂಡ ಐಟಿ ಇಲಾಖೆ” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿದ್ದು, ಇದು ಲೋಕಸಭೆ ಚುನಾವಣೆ ಸಮಯದ್ದಾಗಿದೆ. ಈ ವರದಿಯಲ್ಲಿ “ಲೋಕಸಭಾ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಮತದಾರರಿಗೆ ಹಣದ ಹೊಳೆ ಹರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಐಟಿ ಅಧಿಕಾರಿಗಳು ಮತ್ತು ಪೊಲೀಸರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇಂದು ಐಟಿ ಇಲಾಖೆ ಭರ್ಜರಿ ಬೇಟೆಯಾಡಿದ್ದು, ಒಂದೇ ದಿನ 4 ಕೋಟಿ ಹಣವನ್ನು ವಶಪಡಿಸಿಕೊಂಡಿದೆ. ಬೆಂಗಳೂರಿನಿಂದ ಶಿವಮೊಗ್ಗ, ಭದ್ರಾವತಿಗೆ ಸಾಗಾಟ ಮಾಡುತ್ತಿದ್ದ 2 ಸಾವಿರ ರೂ. ಮುಖಬೆಲೆಯ 2.30 ಕೋಟಿ ರೂ. ಪತ್ತೆಯಾಗಿದೆ. ಕಾರಿನ ಸ್ಟೆಪ್ನಿ ಟಯರ್‌ನಲ್ಲಿ ಹಣ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.” ಎಂದಿದೆ.
ಇದೇ ಸುದ್ದಿಯನ್ನು ಎಪ್ರಿಲ್ 21, 2019ರಂದು ಎನ್‌ಡಿಟಿವಿ ಕೂಡ “ಕರ್ನಾಟಕದಲ್ಲಿ ಕಾರು ಸ್ಟೆಪ್ನಿ ಟಯರ್‌ನಲ್ಲಿ ಸಾಗಿಸುತ್ತಿದ್ದ 2.3 ಕೋಟಿ ರೂ. ವಶ” ಎಂಬ ಶೀರ್ಷಿಕೆಯಲ್ಲಿ ವರದಿ ಮಾಡಿದೆ. “ಈ ಬಾರಿಯ ಚುನಾವಣಾ ಅವಧಿಯಲ್ಲಿ ತೆರಿಗೆ ಇಲಾಖೆ ದೇಶಾದ್ಯಂತ ವಿವಿಧೆಡೆ ನಗದು ವಶಪಡಿಸಿಕೊಂಡಿದೆ. ಇಲಾಖೆ ತನ್ನ ಇತ್ತೀಚಿನ ದಾಳಿಯಲ್ಲಿ ಕರ್ನಾಟಕದಲ್ಲಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಸಾಗುತ್ತಿದ್ದ ಕಾರಿನ ಸ್ಪೇರ್ ಟಯರ್ನಿಂದ 2.3 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ” ಎಂದು ಹೇಳಿದೆ.
ಎಪ್ರಿಲ್ 20, 2019ರಂದು ಟೈಮ್ಸ್ ಆಫ್ ಇಂಡಿಯಾ ಕೂಡ ವೈರಲ್ ವೀಡಿಯೋ ಸಾಮ್ಯತೆ ಹೊಂದಿರುವ ವೀಡಿಯೋವನ್ನು ವರದಿ ಮಾಡಿದೆ.
ಸುದ್ದಿಸಂಸ್ಥೆ ಎಎನ್ಐ ಕೂಡ ಎಪ್ರಿಲ್ 20, 2019ರಂದು ಈ ಸುದ್ದಿಯನ್ನು ವರದಿ ಮಾಡಿದ್ದು, ಕಾರಿನ ಟಯರ್ ಒಳಗಿನಿಂದ ಹಣವನ್ನು ತೆಗೆಯುತ್ತಿರುವ ದೃಶ್ಯಾವಳಿಯನ್ನು ಟ್ವೀಟ್ ಮಾಡಿದೆ. ಜೊತೆಗೆ “ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಾರಿನ ಸ್ಪೇರ್ ಟಯರ್‌ನಲ್ಲಿ ಇರಿಸಿ ಸಾಗಿಸಲಾಗುತ್ತಿದ್ದ 2.30 ಕೋಟಿ ರೂ.ಗಳನ್ನು ಆದಾಯ ತೆರರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ” ಎಂದು ಹೇಳಿದೆ. ಈ ಕುರಿತ ಟ್ವೀಟ್ ಇಲ್ಲಿದೆ.
ಇದೇ ರೀತಿಯ ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.
Conclusion
ಈ ಸತ್ಯಶೋಧನೆಯ ಪ್ರಕಾರ ಈ ವೀಡಿಯೋ ಈಗಿನದ್ದಲ್ಲ. ಅದು 2019ರ ಹೊತ್ತಿನದ್ದು. ಅದನ್ನೀಗ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೇಳಿರುವುದು ತಪ್ಪಾಗಿದೆ.
Result: False
Our Sources
Report By News 18 Kannada, Dated: April, 20, 2019
Report By NDTV, Dated: April 21, 2019
Report By Times of India, Dated: April 20, 2019
Tweet By ANI, Dated: April 20, 2019
ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.