Fact Check: ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆಯನ್ನು ಅಮೆರಿಕನ್‌ ಶೋದಲ್ಲಿ ಬಾಲಕರು ಹಾಡಿದ್ದಾರೆಯೇ? ಇಲ್ಲ, ಇದು ಸುಳ್ಳು

ರಾಮಾಯಣ ಧಾರಾವಾಹಿ ಶೀರದಷಿಕೆ ಗೀತೆ, ಅಮೆರಿಕನ್‌ ಶೋ, ಬ್ರಿಟನ್‌ ಗಾಟ್‌ ಟ್ಯಾಲೆಂಟ್ಸ್

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಅಮೆರಿಕನ್ ಶೋನಲ್ಲಿ ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆ ಹಾಡಿದ ಅಮೆರಿಕನ್ ಮಕ್ಕಳು

Fact
ಇದು ಅಮೆರಿಕನ್‌ ಶೋ ಅಲ್ಲ, ರಾಮಾಯಣದ ಶೀರ್ಷಿಕೆ ಗೀತೆಯೂ ಅಲ್ಲ, ಇದು ಬ್ರಿಟನ್‌ ಗಾಟ್‌ ಟ್ಯಾಲೆಂಟ್‌ ಕಾರ್ಯಕ್ರಮವಾಗಿದ್ದು ಅದರಲ್ಲಿ ಹೋಪ್‌ ಎನ್ನುವ ಹಾಡು ಹಾಡಿದ್ದಾಗಿದೆ.

ಅಮೆರಿಕನ್‌ ಟ್ಯಾಲೆಂಟ್‌ ಶೋ ಒಂದರಲ್ಲಿ ಇಬ್ಬರು ಮಕ್ಕಳು ರಾಮಾಯಣ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡುತ್ತಿದ್ದಾರೆ ಎಂಬ ಮೆಸೇಜ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ವಾಟ್ಸಾಪ್‌ನಲ್ಲಿ ಶೇರ್‌ ಆಗುತ್ತಿರುವ ಈ ಮೆಸೇಜ್‌ನಲ್ಲಿ “ ಅಮೆರಿಕನ್ ಶೋನಲ್ಲಿ ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆ ಹಾಡಿದ ಅಮೇರಿಕನ್ ಮಕ್ಕಳು. ಹಾಡು ಕೇಳುತ್ತಾ ಪ್ರೇಕ್ಷಕರ ಜೊತೆಗೆ ತೀರ್ಪುಗಾರರು ಕಣ್ಣೀರು ಹಾಕಿದರು. ಜೈ ಭಾರತ್ ಮಾತಾ” ಎಂದು ಹೇಳಲಾಗಿದೆ.

Also Read: ಬಿಪರ್ ಜಾಯ್‌ ಚಂಡಮಾರುತದ ಪರಿಣಾಮ ತೋರಿಸಲು ಹಳೆಯ, ಸಂಬಂಧವೇ ಇಲ್ಲದ ವೀಡಿಯೋಗಳ ಬಳಕೆ!

ಅಮೆರಿಕನ್‌ ಶೋದಲ್ಲಿ ರಾಮಾಯಣ ಶೀರ್ಷಿಕೆ ಗೀತೆ ಹಾಡಿದ್ದಾರೆ ಎನ್ನುವುದು ಸುಳ್ಳು!
ವಾಟ್ಸಾಪಿನಲ್ಲಿ ಕಂಡುಬಂದ ಕ್ಲೇಮ್‌

ಇದೇ ರೀತಿಯ ಕ್ಲೇಮ್‌ಗಳು ಟ್ವಿಟರ್ ನಲ್ಲೂ ಕಂಡುಬಂದಿದ್ದು, ಅದು ಇಲ್ಲಿ ಮತ್ತು ಇಲ್ಲಿದೆ

ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದೊಂದು ತಿರುಚಲಾದ ವೀಡಿಯೋ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ಪ್ರಸಿದ್ಧ ರಾಮಾಯಣದ ಶೀರ್ಷಿಕೆ ಗೀತೆಯನ್ನು ಹಾಡುತ್ತಿದ್ದಾರೆ ಎನ್ನುವ ಇಬ್ಬರು ಬಾಲಕರ ತುಟಿ ಚಲನೆಗೂ ಹಾಡಿಗೂ ಸಂಬಂಧ ಇಲ್ಲದೇ ಇರುವುದು ತಿಳಿದುಬಂದಿದೆ.

ಇದರ ಜೊತೆಗೆ ಶೀರ್ಷಿಕೆ ಗೀತೆ ಮಹಿಳೆಯ ಧ್ವನಿಯಲ್ಲಿದ್ದು, ವಿಭಿನ್ನವಾಗಿದೆ. ಈ ವಿಚಾರವನ್ನು ಪರಿಗಣಿಸಿ ಇನ್ನಷ್ಟು ಶೋಧನೆ ನಡೆಸಲಾಯಿತು.

Also Read: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?

ಸತ್ಯಶೋಧನೆಯ ಭಾಗವಾಗಿ, ವೈರಲ್ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌ ತೆಗೆದು ಗೂಗಲ್‌ ಲೆನ್ಸ್ ನಲ್ಲಿ ಸರ್ಚ್ ನಡೆಸಲಾಗಿದ್ದು ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಇದರಲ್ಲಿ ಲಭ್ಯವಾದ ಬ್ರಿಟನ್ಸ್‌ ಗಾಟ್‌ ಟಾಲೆಂಟ್‌ ಯೂಟ್ಯೂಬ್‌ ವೀಡಿಯೋ ಜುಲೈ 11, 2021ರಂದು ಅಪ್ಲೋಡ್‌ ಆಗಿದ್ದು, “Bars and Melody: EVERY PERFORMANCE from Audition to Champions! | Britain’s Got Talent ಎಂಬ ಶೀರ್ಷಿಕೆಯಲ್ಲಿದೆ. ಈ ಮೂಲಕ ಇದು ಬ್ರಿಟನ್‌ ಗಾಟ್‌ ಟಾಲೆಂಟ್‌ ವೇದಿಕೆಯಲ್ಲಿ ಇಬ್ಬರು ಬಾಲಕರು ಹಾಡಿದ ಕಾರ್ಯಕ್ರಮ ಎಂದು ಗೊತ್ತಾಗಿದೆ.

ಈ ಬಗ್ಗೆ ಇನ್ನಷ್ಟು ಶೋಧ ನಡೆಸಿದಾಗ, ಬಾರ್ಸ್ & ಮೆಲೊಡಿ (BAM) ಯು.ಕೆ. ಮೂಲದ ಪ್ರಸಿದ್ಧ ನಗರ ಪಾಪ್ ಜೋಡಿಯಾಗಿದ್ದು, ಲಿಯೊಂಡ್ರೆ ಡೆವ್ರೀಸ್ (ಬಾರ್) ಮತ್ತು ಚಾರ್ಲಿ ಲೆನೆಹಾನ್ (ಮೆಲೊಡಿ) ಅವರನ್ನು ಒಳಗೊಂಡಿದೆ. ಲಿಯೊಂಡ್ರೆ ಡೆವ್ರೀಸ್ ಯುಕೆ ಯ ವೇಲ್ಸ್ ನವರಾಗಿದ್ದು ಮತ್ತು ಚಾರ್ಲಿ ದಕ್ಷಿಣ ಇಂಗ್ಲೆಂಡ್‌ನವರು. ಅವರು ಭಾರತೀಯ ಮೂಲದವರಲ್ಲ ಎಂದು ಗೊತ್ತಾಗಿದೆ.

2014 ಮೇ 11 ರಂದು ಬ್ರಿಟನ್ಸ್ ಗಾಟ್‌ ಟಾಲೆಂಟ್‌ ಯೂಟ್ಯೂಬ್‌ನಲ್ಲಿ ಅಪ್ಲೋಡ್‌ ಮಾಡಿದ ವೀಡಿಯೋದಲ್ಲಿ “Bars & Melody – Simon Cowell’s Golden Buzzer act | Britain’s Got Talent 2014” ಶೀರ್ಷಿಕೆಯಿದ್ದು, ಅದೇ ಹಾಡು ಇದೆ. ಆದ್ದರಿಂದ ಇದು ಮೊದಲು ಅಪ್ಲೋಡ್‌ ಮಾಡಿದ ವೀಡಿಯೋ ಎಂದು ತಿಳಿಯಬಹುದು.

ಈ ಶೋನಲ್ಲಿ ಬಾಲಕರು ಹಾಡಿರುವ ಹಾಡು ಅಮೆರಿಕನ್ ರಾಪರ್ ಆಗಿದ್ದು, “ಹೋಪ್” ಎಂಬ ಗೀತೆಯಾಗಿದೆ. ಅದನ್ನು ಇಲ್ಲಿ ಕೇಳಬಹುದು.

ಈ ಶೋದ ಬಗ್ಗೆ ಕುರಿತ ವರದಿಗಳ ಕುರಿತು ಸತ್ಯಶೋಧನೆ ನಡೆಸಿದ ವೇಳೆ ಕೆಲವು ಫಲಿತಾಂಶಗಳು ಲಭ್ಯವಾಗಿವೆ.

ಜನವರಿ 14, 2023ರಂದು ಮಿರರ್‌ ಪ್ರಕಟಿಸಿದ ವರದಿಯೊಂದರಲ್ಲಿ ಬ್ರಿಟನ್‌ ಟಾಲೆಂಟ್‌ನ ಇಬ್ಬರು ಹಾಡುಗಾರರು ಅಂದಿನ 2014ರ ಆಡಿಷನ್‌ ಬಳಿಕ ಅವರನ್ನು ಗುರುತಿಸಲೇ ಆಗಿಲ್ಲ ಎಂದು ವರದಿ ಮಾಡಿದೆ.

ಅಮೆರಿಕನ್‌ ಶೋದಲ್ಲಿ ರಾಮಾಯಣ ಶೀರ್ಷಿಕೆ ಗೀತೆ ಹಾಡಿದ್ದಾರೆ ಎನ್ನುವುದು ಸುಳ್ಳು!
ಮಿರರ್‌ ವರದಿ

ಇನ್ನು ವೈರಲ್ ವೀಡಿಯೋದಲ್ಲಿ ಕೇಳುತ್ತಿರುವ ರಾಮಾಯಣದ “ಹಮ್‌ ಕಥಾ ಸುನ್ತೇ ಹೋ” ತಿಲಕ್‌ ಯೂಟ್ಯೂಬ್‌ ಚಾನೆಲ್‌ನಲ್ಲಿದ್ದು ಅದನ್ನು ಇಲ್ಲಿ ನೋಡಬಹುದು.

ಈ ಹಾಡನ್ನು 1987ರಲ್ಲಿ ಡಿಡಿ ನ್ಯಾಷನಲ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ ರಮಾನಂದ್ ಸಾಗರ್‌ ನಿರ್ದೇಶನದ ಪ್ರಸಿದ್ಧ “ರಾಮಾಯಣ” ಧಾರಾವಾಹಿಯ ಉತ್ತರ ರಾಮಾಯಣದ ಎಪಿಸೋಡ್‌ ಒಂದರಲ್ಲಿ ಬಳಸಿಕೊಳ್ಳಲಾಗಿದೆ.

Also Read: ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?

Conclusion

ಈ ಸತ್ಯಶೋಧನೆಯ ಪ್ರಕಾರ, ಅಮೆರಿಕದ ಸ್ಟೇಜ್‌ ಶೋ ಒಂದರಲ್ಲಿ ಬಾಲಕರು ರಾಮಾಯಣದ ಶೀರ್ಷಿಕೆ ಗೀತೆ ಹಾಡುತ್ತಿದ್ದಾರೆ ಎನ್ನುವುದು ಸುಳ್ಳಾಗಿದೆ. ಬಾಲಕರು ಬ್ರಿಟನ್‌ ಗಾಟ್‌ ಟ್ಯಾಲೆಂಟ್ನಲ್ಲಿ ಹಾಡು ಹಾಡಿದ್ದು, ಅವರು ಹಾಡಿದ್ದು ‘ಹೋಪ್‌’ ಎನ್ನುವ ಎನ್ನುವ ಹಾಡಾಗಿದೆ.

Result: False

Our Sources
You Tube Video By Britain’s Got Talent, Dated: May 11, 2014

Report By Mirror, Dated: January 14, 2023

Instagram Account of BAM

You Tube Video By Tilak Dated: December 15, 2020


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.