Fact Check: ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?

ಈರುಳ್ಳಿ ರಸ, ಕಿವಿನೋವು

Claim
ಈರುಳ್ಳಿ ರಸವನ್ನು ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ

Fact
ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಸಂಪೂರ್ಣ ಗುಣವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಹೀಗೆ ಮಾಡುವುದರಿಂದ ಕಿವಿ ಸಮಸ್ಯೆ ಬಿಗಡಾಯಿಸಬಹುದು

ಈರುಳ್ಳಿ ರಸವನ್ನು ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ಕಿವಿಯಲ್ಲಿ ನೋವು ಕಾಣಿಸಿಕೊಂಡರೆ ಈರುಳ್ಳಿಯನ್ನು ಅರೆದು ಅದರ ರಸವನ್ನು ಶೋಧಿಸಿ ಬಿಸಿ ಮಾಡಿದ ನಂತರ ನಾಲ್ಕು ಹನಿಗಳನ್ನು ಕಿವಿಗೆ ಹಾಕಿದರೆ ಕಿವಿ ನೋವು ಬೇಗ ಗುಣವಾಗುತ್ತದೆ” ಎಂದಿದೆ. ಈ ಬಗ್ಗೆ ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಮುಂದಾಗಿದೆ.

Also Read: ಹುರಿಗಡಲೆ-ಖರ್ಜೂರ ಒಟ್ಟಿಗೆ ತಿಂದರೆ ತೂಕ ಹೆಚ್ಚಿಸಬಹುದು ಅನ್ನೋದು ಸತ್ಯವೇ?

ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?

ನ್ಯೂಸ್‌ಚೆಕರ್‌ ಸತ್ಯಶೋಧನೆ ವೇಳೆ ಈ ಕ್ಲೇಮ್‌ ಸುಳ್ಳು ಎಂದು ತಿಳಿದುಬಂದಿದೆ.

Fact Check/Verification

ಇಲ್ಲ, ಈರುಳ್ಳಿ ರಸವನ್ನು ಕಿವಿಗೆ ಹಾಕುವುದು ನೋವನ್ನು ಗುಣಪಡಿಸಲು ವೈದ್ಯಕೀಯವಾಗಿ ಸಾಬೀತಾd ಅಥವಾ ಶಿಫಾರಸು ಮಾಡಲಾದ ವಿಧಾನವಲ್ಲ. ಈರುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಕೆಲವು ಸಂಯುಕ್ತಗಳನ್ನು ಹೊಂದಿದೆ. ಆದರೆ ಈರುಳ್ಳಿ ರಸವನ್ನು ಕಿವಿಗೆ ಹಾಕುವುದರಿಂದ ನೋವನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದು  ಅಥವಾ ಕಡಿಮೆ ಮಾಡಿಕೊಳ್ಳಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

ಕಿವಿ ನೋವಿಗೆ ವಿವಿಧ ಕಾರಣಗಳು ಇರಬಹುದು. ಉದಾಹರಣೆಗೆ ಕಿವಿ ಸೋಂಕುಗಳು, ಕಟ್ಟಿರುವುದು, ಗಾಯ, ಅಥವಾ ಕಿವಿ ಕಾಲುವೆಯ ಬಾವು ಇತ್ಯಾದಿ. ಇಂತಹ ಕಾರಣಗಳಿಗೆ ಆಧಾರವಾಗಿರಿಸಿ, ಕಿವಿಗೆ ಸರಿಯಾದ ರೀತಿಯ ಚಿಕಿತ್ಸೆ ಇರುತ್ತದೆ. ಕೆಲವು ಪರಿಸ್ಥಿತಿಗಳಲ್ಲಿ ಮನೆಮದ್ದುಗಳು ಕೆಲವೊಮ್ಮೆ ತಾತ್ಕಾಲಿಕ ಪರಿಹಾರವನ್ನು ನೀಡಬಹುದಾದರೂ, ಸರಿಯಾದ ರೋಗನಿರ್ಣಯ ಮತ್ತು ಚಿಕಿತ್ಸೆಗೆ ವೃತ್ತಿಪರರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ಈರುಳ್ಳಿಗಳು ಫ್ಲೇವನಾಯ್ಡ್‌ಗಳು ಮತ್ತು ಸಲ್ಫರ್ ಸಂಯುಕ್ತಗಳಂತಹ ಸಂಯುಕ್ತಗಳನ್ನು ಹೊಂದಿರುತ್ತವೆ, ಅವುಗಳು ಬಾವು ಮತ್ತು ಸೂಕ್ಷ್ಮಾಣು ಜೀವಿಗಳ ವಿರುದ್ಧದ ಗುಣಲಕ್ಷಗಳನ್ನು ಹೊಂದಿದ್ದು ಅಂತಹ ಆರೋಗ್ಯ ಪ್ರಯೋಜನಗಳ ಬಗ್ಗೆ ಅಧ್ಯಯನ ಮಾಡಲಾಗಿದ್ದು ಈರುಳ್ಳಿ ಪ್ರಯೋಜಕಾರಿಯಾಗಿದೆ. ಮತ್ತು ಬಾವು ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂದು ಹೇಳಲಾಗಿದೆ.  ಆದಾಗ್ಯೂ

 ಲಭ್ಯವಿರುವ ಪುರಾವೆಗಳು ಹಸಿ ಈರುಳ್ಳಿ ರಸವನ್ನು ಹಾಕುವುದರಿಂದ ನೋವು ಸಂಪೂರ್ಣವಾಗಿ ಗುಣವಾಗುತ್ತದೆಯೇ ಎಂದು ಖಚಿತಪಡಿಸಲು ಸಾಕಾಗುವುದಿಲ್ಲ. ಈ ಸಂಯುಕ್ತಗಳನ್ನ ಸೇವಿಸಿದಾಗ ಅಥವಾ ಚರ್ಮದ ಮೇಲೆ ಹಾಕಿದಾಗ ಸ್ವಲ್ಪ ಪರಿಣಾಮ ಬೀರಬಹುದು. ಆದಾಗ್ಯೂ, ಕಿವಿ ನೋವಿಗೆ ಚಿಕಿತ್ಸೆ ನೀಡಲು ನಿರ್ದಿಷ್ಟವಾಗಿ ಈರುಳ್ಳಿ ರಸದ ಬಳಕೆಯನ್ನು ಹೇಳುವ ಬೆಂಬಲಿಸುವ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ ಅಥವಾ ಅದಕ್ಕೆ ವೈದ್ಯಕೀಯ ಸಹಮತವಿಲ್ಲ.

Also Read: ಜೋಳದ ರೊಟ್ಟಿ ತಿನ್ನುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಮತ್ತು ಯಕೃತ್ತಿನ ಸಮಸ್ಯೆಗಳನ್ನು ತಡೆಯಬಹುದೇ?

ಈರುಳ್ಳಿ ರಸವನ್ನು ಕಿವಿಗೆ ಹಾಕುವುದರಿಂದ ಬ್ಯಾಕ್ಟೀರಿಯಾ ಅಥವಾ ಇತರ ಅಂಶಗಳು ಕಿವಿಗೆ ಪ್ರವೇಶವಾಗಬಹುದು. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಅಥವಾ ಹೆಚ್ಚುವರಿ ಸಮಸ್ಯೆ ಉಂಟುಮಾಡಬಹುದು. ಕಿವಿ ಸೂಕ್ಷ್ಮವಾದ ರಚನೆಯಾಗಿದೆ ಮತ್ತು ಅದಕ್ಕೆ ಅನ್ವಯಿಸುವ ಯಾವುದೇ ಪದಾರ್ಥಗಳು ಅಥವಾ ಚಿಕಿತ್ಸೆಗಳನ್ನು ವೃತ್ತಿಪರರ ಮಾರ್ಗದರ್ಶನದಲ್ಲಿ ಮಾಡಬೇಕು ಎಂದು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಥಿಪ್‌ ಮೀಡಿಯಾ-ನ್ಯೂಸ್‌ಚೆಕರ್‌ಗೆ ಪ್ರತಿಕ್ರಿಯಿಸಿದ ಇಎನ್‌ಟಿ ತಜ್ಞ ಡಾ. ಪ್ರಿಯಜೀತ್ ಪಾಣಿಗ್ರಾಹಿ ಅವರ ಪ್ರಕಾರ, “ಇಂದು, ಆಂಟಿಬಯೋಟಿಕ್‌ ಪ್ರತಿರೋಧವು ಮಾರಣಾಂತಿಕ ಆರೋಗ್ಯ ಸಮಸ್ಯೆಯಾಗಿ ಬೆಳೆದಿದೆ. ಹಿಂದೆ ಗುಣಪಡಿಸಬಹುದಾದ ಸೋಂಕುಗಳು ಈಗ ಅದೇ ಔಷಧಗಳಿಗೇ ಪ್ರತಿಕ್ರಿಯಿಸುವುದಿಲ್ಲ. ಆದ್ದರಿಂದ, ಆಂಟಿಬಯಾಟಿಕ್‌ಗಳಿಗೆ ಪರ್ಯಾಯ ಚಿಕಿತ್ಸೆಗಳನ್ನು ಸಂಶೋಧಿಸುವುದು ಅತ್ಯಗತ್ಯ.

ಆದರೆ, ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ಅಧಿಕೃತ ಚಿಕಿತ್ಸಾ ಮಾರ್ಗಸೂಚಿಗಳು ಕಿವಿಯ ಸೋಂಕುಗಳಿಗೆ ” ಪರ್ಯಾಯ ಚಿಕಿತ್ಸೆಗಳ ಪ್ರಯೋಜನಕಾರಿ ಪರಿಣಾಮವನ್ನು ನಿರ್ಣಾಯಕವಾಗಿ ತೋರಿಸುವ ಯಾವುದೇ ಅಧ್ಯಯನಗಳಿಲ್ಲ” ಎಂದು ತಿಳಿಸುತ್ತದೆ.

Also Read: ಮೊಳೆಗಳಿರುವ ಕ್ಯಾಪ್ಸೂಲ್‌ ಮೂಲಕ ಜಿಹಾದ್, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

Conclusion

ಈ ಸತ್ಯಶೋಧನೆಯ ಪ್ರಕಾರ, ಕಿವಿ ನೋವಿಗೆ ಈರುಳ್ಳಿ ರಸವನ್ನು ಹಾಕಿದರೆ, ಅದರಿಂದ ಪ್ರಯೋಜನವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಜೊತೆಗೆ ಹೀಗೆ ಮಾಡುವುದರಿಂದ ಕಿವಿಯ ಆರೋಗ್ಯಕ್ಕೆ ಇನ್ನಷ್ಟು ಸಮಸ್ಯೆಗಳು ಉಂಟಾಗಬಹುದು.

Result: False

Our Sources
Efficacy of naturopathic extracts in the management of ear pain associated with acute otitis media – PubMed (nih.gov)

AAP, AAFP Release Guideline on Diagnosis and Management of Acute Otitis Media | AAFP

Conversation with Dr. Priyajeet Panigrahi, ENT specialist

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.