Fact Check: ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?

ಗುಜರಾತ್, ಹೈಕೋರ್ಟ್‌, ಮೀಸಲಾತಿ ರದ್ದು

Claim
ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ

Fact
ಗುಜರಾತ್ ಹೈಕೋರ್ಟ್ ಯಾವುದೇ ಮೀಸಲಾತಿಯನ್ನು ರದ್ದುಗೊಳಿಸಿಲ್ಲ. ಇದು ಸುಳ್ಳು

ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತ ಫೇಸ್‌ಬುಕ್‌ ಕ್ಲೇಮ್‌ ಒಂದರಲ್ಲಿ “ಬಿಗ್‌ ನ್ಯೂಸ್‌- ಗುಜರಾತ್‌ ಹೈಕೋರ್ಟ್‌ನ ಐತಿಹಾಸಿಕ ತೀರ್ಪು ಸರ್ಕಾರಿ ಉದ್ಯೋಗಗಳು ಮತ್ತು ಎಲ್ಲ ಶಿಕ್ಷಣದಲ್ಲಿ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗುಜರಾತ್ ಪಾತ್ರವಾಗಿದೆ” ಎಂದು ಹೇಳಲಾಗಿದೆ.

Also Read: ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರೇ, ಸತ್ಯ ಏನು?

ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ಮಾಡಿದ್ದು ಇದು ಸುಳ್ಳು ಹೇಳಿಕೆ ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನಾವು ಗೂಗಲ್‌ ಮೂಲಕ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ 2016ರಲ್ಲಿ ಗುಜರಾತ್‌ ಹೈಕೋರ್ಟ್ ಆರ್ಥಿಕ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದಿ ಹಿಂದೂ ಆಗಸ್ಟ್ 4, 2016ರ ವರದಿಯಲ್ಲಿ “ಗುಜರಾತ್ ಸರ್ಕಾರ ಆರ್ಥಿಕ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಸುಗ್ರೀವಾಜ್ಞೆ ರದ್ದುಗೊಳಿಸಿದೆ. ಸಂವಿಧಾನ ಪ್ರಕಾರ ಇಂತಹ ಮೀಸಲಾತಿ ನೀಡಲು ಅವಕಾಶವಿಲ್ಲದಿರುವುದರಿಂದ ಅದು ರದ್ದುಗೊಳಿಸಿದೆ” ಎಂದಿದೆ.

Also Read: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?

ಈ ಕುರಿತ ವಿವಿಧ ಮಾಧ್ಯಮಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇನ್ನು ಕ್ಲೇಮಿನಲ್ಲಿ ಹೇಳಿರುವ ರೀತಿ, ಹಿಂದುಳಿದ ವರ್ಗಗಳು, ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡುವ ಮೀಸಲಾತಿಯನ್ನು ಗುಜರಾತ್ ಹೈಕೋರ್ಟ್ ರದ್ದುಮಾಡಿದೆಯೇ ಎಂದು ಪರಿಶೀಲಿಸಲು ಕೀವರ್ಡ್ ಸರ್ಚ್ ಮಾಡಲಾಗಿದೆ. ಈ ವೇಳೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ.

ಹೆಚ್ಚಿನ ಮಾಹಿತಿ ಪಡೆಯಲು ಗುಜರಾತ್ ಹೈಕೋರ್ಟ್ ವೆಬ್‌ಸೈಟ್‌ ಪರಿಶೀಲಿಸಲಾಗಿದೆ. ಅದರಲ್ಲೂ ಅಂತಹ ಯಾವುದೇ ತೀರ್ಪು ನೀಡಿದ್ದು ಕಂಡುಬಂದಿರುವುದಿಲ್ಲ.

ಇದೇ ವೇಳೆ ಗುಜರಾತ್ ಹೈಕೋರ್ಟ್ ನಲ್ಲಿ ನಡೆಸುವ ನೇಮಕಾತಿ ಕುರಿತಂತೆಯೂ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಮೇ 8, 2023ರಂದು ಗುಮಾಸ್ತ ಹುದ್ದೆಯ ನೇಮಕಾತಿ ಪ್ರಕಟಣೆ ಲಭ್ಯವಾಗಿದ್ದು, ಇದರಲ್ಲಿ ಮೀಸಲಾತಿ ಅನ್ವಯವೇ ಹುದ್ದೆ ನೇಮಕಾತಿಗೆ ಆಹ್ವಾನಿಸಿರುವುದು ಕಂಡುಬಂದಿದೆ.

Also Read: ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್‌ಗೆ ‘ಹೊಡೆದು ವಿಚಾರಣೆ’ ಎನ್ನುವ ವೀಡಿಯೋಕ್ಕೂ, ಪ್ರಕರಣಕ್ಕೂ ಸಂಬಂಧವಿಲ್ಲ!

ಗುಜರಾತ್ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್‌ ಪೋಸ್ಟ್‌ ನಿಜವೇ?

ಸ್ವತಃ ಹೈಕೋರ್ಟ್‌ ನೇಮಕಾತಿಯಲ್ಲೇ ಮೀಸಲಾತಿ ಅನ್ವಯ ಹುದ್ದೆ ತುಂಬಲು ಪ್ರಕಟಣೆ ಕೊಟ್ಟಿರುವ ಕಾರಣ ಇನ್ನೂ ಹೈಕೋರ್ಟ್ ನೇಮಕಾತಿಯನ್ನು ರದ್ದು ಮಾಡಿದೆ ಎನ್ನುವುದು ತಪ್ಪಾಗುತ್ತದೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಗುಜರಾತ್ ಹೈಕೋರ್ಟ್ ದೇಶದಲ್ಲೇ ಮೊದಲ ಬಾರಿಗೆ ಮಿಸಲಾತಿಯನ್ನು ರದ್ದುಪಡಿಸಿದೆ ಎನ್ನುವುದು ಸುಳ್ಳು ಹೇಳಿಕೆಯಾಗಿದೆ.

Result: False

Our Sources:
Report By The Hindu, Dated: August 4, 2016

Website of Gujarat High Court

Notification of Gujarat High Court


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.