Authors
Claim
ಚಂದ್ರಯಾನ 3 ಉಡಾವಣೆಯನ್ನು ವಿಮಾನ ಪ್ರಯಾಣಿಕರು ವೀಡಿಯೋ ರೆಕಾರ್ಡ್ ಮಾಡಿದ್ದಾರೆ
Fact
ಇದು ಚಂದ್ರಯಾನ 3 ಉಡಾವಣೆಯ ವೀಡಿಯೋವಲ್ಲ, ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಾಕೆಟ್ ಉಡಾವಣೆಯನ್ನು ಚಂದ್ರಯಾನ 3 ಉಡಾವಣೆ ದೃಶ್ಯ ಎಂದು ತಪ್ಪಾಗಿ ಸಂಬಂಧ ಕಲ್ಪಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಚಂದ್ರಯಾನ 3ರ ರಾಕೆಟ್ ಅನ್ನು ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಉಡಾವಣೆಯ ನಂತರ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಚಂದ್ರಯಾನ 3 ರ ಉಡಾವಣೆಯ ದೃಶ್ಯ, ಇದನ್ನು ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ ಎಂದು ತೋರಿಸುವ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅಂತಹ ಎರಡು ವೀಡಿಯೋಗಳನ್ನು ನ್ಯೂಸ್ಚೆಕರ್ ತನಿಖೆ ಮಾಡಿದ್ದು, ಇದು ಇತ್ತೀಚಿನ ಉಡಾವಣೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ.
Also Read: ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?
ವೀಡಿಯೋ 1
ರಾಕೆಟ್ ಉಡಾವಣೆಯ ದೃಶ್ಯವಿರುವ ಒಂದು ನಿಮಿಷ ಹದಿನೈದು ಸೆಕೆಂಡುಗಳ ವೀಡಿಯೋವನ್ನು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಚೆನ್ನೈನಿಂದ ಢಾಕಾಗೆ ಹಾರುತ್ತಿದ್ದ ಇಂಡಿಗೊ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದ ಚಂದ್ರಯಾನ 3ರ ಉಡಾವಣೆಯನ್ನು ಇದು ತೋರಿಸುತ್ತದೆ ಎಂದು ವೀಡಿಯೋವನ್ನು ಹಂಚುತ್ತಿರುವವರು ಹೇಳಿದ್ದಾರೆ. ಈ ಹೇಳಿಕೆ ಸುಳ್ಳು ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ. ಸತ್ಯಸೋಧನೆಯಲ್ಲಿ ಈ ವೀಡಿಯೋ 2022 ಡಿಸೆಂಬರ್ ಗಿಂತಲೂ ಹಿಂದಿನದ್ದ ಮತ್ತು ಅಮೆರಿಕದಲ್ಲಿ ನಡೆದ ಉಡಾವಣೆ ಇದಾಗಿದೆ ಎಂದು ಗೊತ್ತಾಗಿದೆ.
ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಇನ್ನು ಬಳಕೆದಾರರು ಈ ವೀಡಿಯೋದ ಸತ್ಯಾಸತ್ಯತೆ ಪರಿಶೀಲನೆಗೆ ನ್ಯೂಸ್ಚೆಕರ್ ವಾಟ್ಸಾಪ್ ಟಿಪ್ಲೈನ್ಗೆ (+91-9999499044) ವಿನಂತಿಸಿದ್ದಾರೆ. ಇಂತಹ ಅನೇಕ ದೂರುಗಳನ್ನು ನಾವು ಸ್ವೀಕರಿಸಲಾಗಿದೆ.
Fact Check/Verification
ವೈರಲ್ ತುಣುಕಿನ ಕೀಫ್ರೇಮ್ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದು ಡಿಸೆಂಬರ್ 17, 2022 ರ ಪ್ಯೂರ್ ಟ್ರೂಥ್ ನ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಇದರಲ್ಲಿ “ವಿಮಾನದಿಂದ ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್ ಉಡಾವಣಾ ನೋಟ” ಎಂದು ಹೇಳುವ ಅದೇ ವೈರಲ್ ವೀಡಿಯೋ ಇರುವುದು ಪತ್ತೆಯಾಗಿದೆ.
ಇದರೊಂದಿಗೆ ವೈರಲ್ ದೃಶ್ಯ ಹೊಂದಿರುವ ಪೋಸ್ಟ್ಗಳ ಕಾಮೆಂಟ್ಗಳನ್ನು ನಾವು ಪರಿಶೀಲಿಸಿದ್ದು, ಬಳಕೆದಾರರು “ಅಮೆರಿಕದ ಲಾಂಚ್ ಪ್ಯಾಡ್ 39 ಎ ನಿಂದ ಉಡಾವಣೆಗೊಂಡ ರಾಕೆಟ್ ಅನ್ನು ತೋರಿಸುತ್ತದೆ” ಎಂದು ಗಮನ ಸೆಳೆದಿದ್ದಾರೆ.
ಗೂಗಲ್ ನಲ್ಲಿ “SpaceX Falcon 9”, “Launch,” and “passenger plane” ಎಂಬ ಕೀವರ್ಡ್ ಗಳೊಂದಿಗೆ ನಾವು ಹುಡುಕಾಟ ನಡೆಸಿದ್ದು, ಇದು ಡಿಸೆಂಬರ್ 18, 17 ನ್ಯೂಸ್ 2022 ನ ಫೇಸ್ಬುಕ್ ಪೋಸ್ಟ್ ಅನ್ನು ತೋರಿಸಿದೆ. “ವಿಮಾನ ಪ್ರಯಾಣಿಕರೊಬ್ಬರು ಸ್ಪೇಸ್ಎಕ್ಸ್ ನ ಫಾಲ್ಕನ್ 9 ಉಡಾವಣೆಯ ಸ್ಕೈ ಶಾಟ್ ಅನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸುವ ವಿಡಿಯೋ!” ಎಂದು ಇದರಲ್ಲಿ ಹೇಳಲಾಗಿದೆ.
ಇದಲ್ಲದೆ, 16 ರ 2022 ರ ದಿ ಇಂಡಿಪೆಂಡೆಂಟ್ ನ ವರದಿಯನ್ನು ಕೂಡ ನಾವು ಕಂಡಿದ್ದು, ವೈರಲ್ ವೀಡಿಯೋದ ಸ್ಕ್ರೀನ್ ಶಾಟ್ ಅನ್ನು ಇದು ಹೊಂದಿದೆ. “ಫ್ಲೋರಿಡಾದ ಕೇಪ್ ಕೆನವೆರಲ್ ಮೂಲಕ ಹಾರುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಸ್ಪೇಸ್ಎಕ್ಸ್ ರಾಕೆಟ್ ಉಡಾವಣೆ ವೀಕ್ಷಣೆಗೆ ಮುಂಭಾಗದ ಸಾಲಿನ ಆಸನ ಸಿಕ್ಕಿತು” ಎಂದು ಅದು ಹೇಳಿದೆ. “ರಾಕೆಟ್ ಉಡಾವಣೆಯನ್ನು ಯಾವ ದಿನಾಂಕದಂದು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ…”
ಡಿಸೆಂಬರ್ 15, 2022 ರ ಟಿಕ್ ಟಾಕ್ ಪೋಸ್ಟ್ ಅನ್ನು ಪತ್ತೆ ಮಾಡಿದ್ದೇವೆ. ಇದರಲ್ಲಿ “ನನ್ನ ವಿಮಾನ ಕೇಪ್ ಕೆನವೆರಾಲ್ ಮೇಲೆ ಹಾರಿದಾಗ ಮತ್ತು ಸ್ಪೇಸ್ಎಕ್ಸ್ ಫಾಲ್ಕನ್ 9 ಉಡಾವಣೆ ಸೆರೆಹಿಡಿದಿದೆ.” ಎಂದಿದೆ.
Also Read: ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಆ ನಂತರ, ನಾವು ಗೂಗಲ್ ಅರ್ಥ್ ವ್ಯೂನಲ್ಲಿ “ಲಾಂಚ್ ಪ್ಯಾಡ್ 39 ಎ, ಕೇಪ್ ಕೆನವೆರಲ್” ಅನ್ನು ಹುಡುಕಿದೆವು ಮತ್ತು ರಾಕೆಟ್ ಉಡಾವಣೆಯ ನಿಖರವಾದ ಸ್ಥಳವನ್ನು ಜಿಯೋ-ಪತ್ತೆಹಚ್ಚಲು ಸಾಧ್ಯವಾಯಿತು.
ಕೇಪ್ ಕೆನವೆರಲ್ನ ಉತ್ತರಕ್ಕಿರುವ ಫ್ಲೋರಿಡಾದ ಮೆರಿಟ್ ದ್ವೀಪದಲ್ಲಿರುವ ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆಯನ್ನು ಈ ವೀಡಿಯೋ ತೋರಿಸುತ್ತದೆ.
ವೀಡಿಯೋ 2
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಕೆಟ್ ಉಡಾವಣೆಯ ಒಂದು ನಿಮಿಷದ ವೀಡಿಯೋವನ್ನು ಹಂಚಿಕೊಂಡಿದ್ದು, “ಚಂದ್ರಯಾನ 3 ರ ಸುಂದರ ನೋಟ” ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ವೀಡಿಯೋವು 2021 ಕ್ಕೂ ಹಿಂದಿನದ್ದು ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ ಮತ್ತು ಯುಎಸ್ ಫ್ಲೋರಿಡಾದಿಂದ ರಾಕೆಟ್ ಉಡಾವಣೆಯನ್ನು ತೋರಿಸುತ್ತದೆ.
Fact Check/Verification
ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಿದ್ದು, ಮೇ 20, 2021 ರ ಸ್ಕೈನ್ಯೂಸ್ ಆಸ್ಟ್ರೊನೊಮಿ ಫೇಸ್ಬುಕ್ ಪೋಸ್ಟ್ ಲಭ್ಯವಾಗಿದೆ. “ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಟ್ಲಾಸ್ ವಿ ರಾಕೆಟ್ ಭೂಮಿಯ ಕಕ್ಷೆಯ ಕಡೆಗೆ ಹಾರುವ ನಿಖರ ಕ್ಷಣದ ವಿಶೇಷ ನೋಟವನ್ನು ವಾಣಿಜ್ಯ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಲಭ್ಯವಾಯಿತು” ಎಂಬ ಶೀರ್ಷಿಕೆಯೊಂದಿಗೆ ಅದು ವೀಡಿಯೋವನ್ನು ಹೊಂದಿತ್ತು.
ವೈರಲ್ ವೀಡಿಯೋದ ದೃಶ್ಯಗಳನ್ನು ಹೊಂದಿರುವ ಜೂನ್ 10, 2021 ರ ವೆದರ್ ವರದಿಯನ್ನು ಸಹ ನಾವು ಪತ್ತೆಹಚ್ಚಿದ್ದೇವೆ. “ಫ್ಲೋರಿಡಾದ ಕೇಪ್ ಕೆನವೆರಾಲ್ ಮೇಲೆ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಹೋಗುತ್ತಿದ್ದಾಗ ನಂಬಲಾಗದ ದೃಶ್ಯವನ್ನು ಸೆರೆಹಿಡಿದಿದ್ದಾರೆ” ಎಂದು ವರದಿ ಹೇಳಿದೆ.
ಜೂನ್ 16, 2021 ರಂದು Space.com ರ ವರದಿಯಲ್ಲಿ “ವಾವ್! ವಿಮಾನದಿಂದ ನೋಡಿದ ಅಟ್ಲಾಸ್ ವಿ ರಾಕೆಟ್ ಉಡಾವಣೆಯ ಈ ವೀಡಿಯೊ ಅದ್ಭುತವಾಗಿದೆ” ಎಂದಿದೆ.
ವೀಡಿಯೋವನ್ನು ಎಚ್ಚರಿಕೆಯಿಂದ ನಾವು ಪರಿಶೀಲಿಸಿದ್ದು, ಇದು ಅಮೆರಿಕದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಡೆದ ರಾಕೆಟ್ ಉಡಾವಣೆಯನ್ನು ತೋರಿಸುತ್ತದೆ – ಇದು ಈ ಸತ್ಯಶೋಧನೆಯಲ್ಲಿ ಮೊದಲು ಪರಿಶೀಲಿಸಿದ ವೀಡಿಯೋದಲ್ಲಿದ್ದ ಅದೇ ಸ್ಥಳವಾಗಿದೆ.
Also Read: ಹಿಂದೂಗಳ ಬಹಿಷ್ಕಾರಕ್ಕೆ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆಕೊಟ್ಟಿದ್ದಾರೆಯೇ, ವೈರಲ್ ವೀಡಿಯೋ ನಿಜವೇ?
Conclusion
ಅಮೆರಿಕದಲ್ಲಿ ರಾಕೆಟ್ ಉಡಾವಣೆಯ ಸಂದರ್ಭ ವಿಮಾನ ಪ್ರಯಾಣಿಕರು ಸೆರೆ ಹಿಡಿದ ಹಳೆಯ ವೀಡಿಯೋಗಳನ್ನು ಚಂದ್ರಯಾನ 3ರ ಉಡಾವಣೆಯದ್ದು ಎಂದು ಹೇಳಿ ಹಂಚಿಕೊಂಡಿರುವುದು ಸುಳ್ಳಾಗಿದೆ.
Result: False
Our Sources
YouTube Video By Pure Truth, Dated: December 17, 2022
Facebook Post By News18, Dated: December 17, 2022
TikTok Post, Dated: December 15, 2022
Facebook Post By Skynews Astronomy, Dated: May 20, 2021
Report By Weather, Dated: June 10, 2021
Google Earth View
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.