Fact Check: ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?

ವಿದ್ಯುತ್ ದರ, ಮಸೀದಿ, ಚರ್ಚ್ ಗೆ ಕಡಿಮೆ, ದೇಗುಲಕ್ಕೆ ಹೆಚ್ಚು

Authors

Claim
ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ದರ ವಿಧಿಸಲಾಗುತ್ತಿದೆ

Fact
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ, ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಒಂದೇ ರೀತಿಯ ದರವಿದೆ. ಆದರೆ ವಿಭಾಗವಾರು ಇದು ಸ್ವಲ್ಪ ವ್ಯತ್ಯಾಸವನ್ನು ಹೊಂದಿರಬಹುದು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉಚಿತ ವಿದ್ಯುತ್‌ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬೆನ್ನಲ್ಲೇ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಹೆಚ್ಚು ವಿದ್ಯುತ್‌ ದರ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

ಮಸೀದಿಗಳಿಗೆ ಅತಿ ಕಡಿಮೆ ದರದಲ್ಲಿ ವಿದ್ಯುತ್‌ ನೀಡಲಾಗುತ್ತಿದೆ ಮತ್ತು ದೇಗುಲಗಳಿಗೆ ಅತಿ ಹೆಚ್ಚು ದರ ವಿಧಿಸಲಾಗುತ್ತಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪಿನಲ್ಲಿ ಕಂಡುಬಂದ ಈ ಸಂದೇಶದ ಪ್ರಕಾರ, “ವಿದ್ಯುತ್ ದರಗಳು ಸಾಮಾನ್ಯ ನಾಗರಿಕರಿಗೆ ಪ್ರತಿ ಘಟಕಕ್ಕೆ ರೂ.7.85. ಮಸೀದಿಗೆ 1.85 ರೂ, ಚರ್ಚ್‌ಗೆ 1.85 ರೂ, ದೇವಸ್ಥಾನಕ್ಕೆ 7.85 ರೂ. ಇದು ನಮ್ಮ ಜಾತ್ಯತೀತ ಭಾರತ….” ಹೀಗಿದೆ.

Also Read: ಲುಪ್ಪೋ ಕೇಕ್‌ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?

ಈ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್ ಚೆಕರ್ ಟಿಪ್‌ಲೈನ್ (+91-9999499044) ವಿನಂತಿಸಿಕೊಂಡಿದ್ದು, ನಾವು ಸತ್ಯಶೋಧನೆಗೆ ಮುಂದಾಗಿದ್ದೇವೆ. ಈ ವೇಳೆ, ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಕರ್ನಾಟಕದಲ್ಲಿ ವಿದ್ಯುತ್ ದರವನ್ನು ತೀರ್ಮಾನಿಸುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ  Karnataka Electricity Regulatory Commission – Tariff-order-2023 (Karnataka Electricity Regulatory Commission) ವೆಬ್‌ಸೈಟ್‌ಗೆ ನಾವು ಮೊದಲು ಭೇಟಿ ನೀಡಿದ್ದೇವೆ.  ಇದರಲ್ಲಿ ವಿಭಾಗವಾರು ಮೆಸ್ಕಾ, ಎಸ್ಕಾಂ, ಹೆಸ್ಕಾಂ, ಜೆಸ್ಕಾಂ, ಚೆಸ್ಕಾಂ ಎಂದಿದ್ದು, ಆಯಾ  ವಿಭಾಗಗಳಡಿ ದರಗಳನ್ನು ನೀಡಲಾಗಿದೆ. ಕೆಲವುಗಳಲ್ಲಿ ವಿದ್ಯುತ್ ದರಗಳು ಅಲ್ಪ ವ್ಯತ್ಯಾಸವನ್ನು ಹೊಂದಿದ್ದರೆ, ಕೆಲವು ವಿಭಾಗಗಳಡಿ ಒಂದೇ ರೀತಿ ಇರುವುದನ್ನು ನಾವು ಗಮನಿಸಿದ್ದೇವೆ.  
ವೈರಲ್ ಮೆಸೇಜ್‌ನ ಸತ್ಯಾಸತ್ಯತೆ ಪರಿಶೀಲನೆಗೆ ನಾವು ಮೆಸ್ಕಾಂನ 2024ರ ವಿದ್ಯುತ್‌ ದರವನ್ನು ಶೋಧಿಸಿದ್ದೇವೆ. Karnataka Electricity Regulatory Commission Tariff Order 2023 ಈ ಪ್ರಕಾರ ವಿದ್ಯುತ್‌ ದರವನ್ನು ಲೋ ಟೆನ್ಷನ್‌ ಸಪ್ಲೈ, (400 ವೋಲ್ಟ್‌ 3 ಫೇಸ್‌ ಮತ್ತು 230 ವೋಲ್ಟ್ ಸಿಂಗಲ್‌ ಫೇಸ್‌ ವಿದ್ಯುತ್ ಪೂರೈಕೆ) ಮತ್ತು ಹೈ ಟೆನ್ಷನ್‌ ಪವರ್‌ ಸಪ್ಲೈ (11 ಕೆವಿ ಮತ್ತು ಅದಕ್ಕೂ ಹೆಚ್ಚಿನ ವೊಲ್ಟೇಜ್‌ಗಳಲ್ಲಿ ವಿದ್ಯುತ್‌ ಪೂರೈಕೆ ಸಂಬಂಧಿಸಿದಂತೆ) ಎಂದು ಎರಡು ವಿಭಾಗಗಳಿವೆ.
ಧಾರ್ಮಿಕ ಕೇಂದ್ರಗಳಾದ ದೇಗುಲಗಳು, ಚರ್ಚ್, ಮಸೀದಿ, ಗುರುದ್ವಾರ, ಆಶ್ರಮ, ಮಠ ಮತ್ತು ಇನ್ನಿತರ ಧಾರ್ಮಿಕ ಕೇಂದ್ರಗಳು ಆಸ್ಪತ್ರೆಗಳು, ಚಾರಿಟೇಬಲ್‌ ಸಂಸ್ಥೆಗಳು ನಡೆಸುತ್ತಿರುವ ಆಸ್ಪತ್ರೆಗಳು,  ಎಕ್ಸರೇ ಯುನಿಟ್, ಜೈಲುಗಳು, ಶಾಲೆ, ಕಾಲೇಜುಗಳು, ಧಾರ್ಮಿಕ, ಸಾಂಸ್ಕೃತಿಕ ಕೇಂದ್ರಗಳ ಕಟ್ಟಡಗಳು ಇತ್ಯಾದಿಗಳಿಗೆ ಎಲ್‌ಟಿ-2(ಎ) ದರಪಟ್ಟಿ ಅನ್ವಯವಾಗುತ್ತದೆ. ಈ ಪ್ರಕಾರ 0ಯಿಂದ 100 ಯುನಿಟ್‌ ವರೆಗೆ ₹4.75 ಪೈಸೆ ಮತ್ತು 100ರ ಮೇಲ್ಪಟ್ಟು 0 ಯಿಂದ ಬಳಕೆಯಾದ ವಿದ್ಯುತ್‌ ವರೆಗೆ ₹7.00 ವಿದ್ಯುತ್‌ ದರ ಅನ್ವಯವಾಗುತ್ತದೆ ಎಂದಿದೆ.

Also Read: ಕರ್ನಾಟಕದ ಮದರಸಾ ವಿದ್ಯಾರ್ಥಿಗಳು ಭಾರತದ ಪ್ರಧಾನಿ ಹೆಸರು ತಪ್ಪಾಗಿ ಹೇಳಿದರೇ, ಸತ್ಯ ಏನು?

ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?
ಧಾರ್ಮಿಕ ಕೇಂದ್ರಗಳಿಗೆ ವಿದ್ಯುತ್‌ ದರ ಪಟ್ಟಿ
 ದರಪಟ್ಟಿಯ ಅನ್ವಯ, ಧಾರ್ಮಿಕ ಕೇಂದ್ರಗಳಾದ ದೇಗುಲಗಳು, ಚರ್ಚ್, ಮಸೀದಿ, ಗುರುದ್ವಾರ, ಆಶ್ರಮ, ಮಠ ಮತ್ತು ಇನ್ನಿತರ ಧಾರ್ಮಿಕ ಕೇಂದ್ರಗಳು/ಚಾರಿಟೇಬಲ್‌ ಸಂಸ್ಥೆಗಳು ಕಲ್ಯಾಣ ಮಂಟಪಗಳಿಗೆ, ಮದುವೆ ಮಂಟಪಗಳಿಗೆ, ರೆಸ್ಟೋರೆಂಟ್ ಅಥವಾ ಇನ್ನಿತರ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದರೆ, ಹೈಟೆನ್ಷನ್‌  ವಿಭಾಗದಡಿ ವಿದ್ಯುತ್‌ ದರಗಳನ್ನು ಪಡೆಯುತ್ತವೆ. ಇದನ್ನು ಎಚ್‌ಟಿ-4 ದರ ವಿಭಾಗದಡಿ ಗುರುತಿಸಲಾಗುತ್ತದೆ. ಜೊತೆಗೆ ಅವುಗಳು ಹೊಂದಿರುವ ಮಂಟಪ ಇತ್ಯಾದಿಗಳಿಗೆ. ಇದಕ್ಕೆ ಬಿಲ್‌ ಅನ್ನು ಎಚ್‌ಟಿ-(2ಬಿ) ಅಡಿಯಲ್ಲಿ ನೀಡಲಾಗುತ್ತದೆ. (ಕೇವಲ ವಿದ್ಯುತ್‌ ದರ) ಅನ್ವಯಿಸುತ್ತದೆ ಎಂದಿದೆ. ಜೊತೆಗೆ ಎಚ್‌ಟಿ-4 ದರದ ಅನ್ವಯ ಪ್ರತಿ ಕಿಲೋವ್ಯಾಟ್ಗೆ ₹7.25 ಪೈಸೆ ದರ ಅನ್ವಯವಾಗುತ್ತದೆ ಎಂದಿದೆ.
ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?
ವಾಣಿಜ್ಯ ವ್ಯವಹಾರಗಳನ್ನು ಹೊಂದಿದ ಧಾರ್ಮಿಕ ಕೇಂದ್ರಗಳಿಗೆ ವಿದ್ಯುತ್ ದರ ಪಟ್ಟಿ
 
 ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಮೆಸ್ಕಾಂನ ಸಾರ್ವಜನಿಕ ಸಂಪರ್ಕಾಧಿಕಾರಿ ಮತ್ತು ಲೆಕ್ಕಪತ್ರ ಅಧಿಕಾರಿ ವಸಂತ ಶೆಟ್ಟಿ ಅವರನ್ನು ಸಂಪರ್ಕಿಸಲಾಗಿದ್ದು, ಅವರು ದೇಗುಲಗಳಿಗೆ ಹೆಚ್ಚಿನ ದರದಲ್ಲಿ ವಿದ್ಯುತ್ ಬಿಲ್‌ ವಿಧಿಸಲಾಗುತ್ತದೆ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ ಜೊತೆಗೆ ಯಾವುದೇ ಧಾರ್ಮಿಕ ಕೇಂದ್ರಗಳು, ವಾಣಿಜ್ಯಿಕ ವ್ಯವಹಾರ (ಮದುವೆ ಮಂಟಪ, ಸಭಾಂಗಣ) ಇತ್ಯಾದಿಗಳನ್ನು ಹೊಂದಿದ್ದರೆ, ಅದಕ್ಕೆ ವಾಣಿಜ್ಯಿಕ ವ್ಯವಹಾರದ ಕುರಿತ ಪ್ರತ್ಯೇಕ ವಿದ್ಯುತ್ ದರ ವಿಧಿಸಲಾಗುತ್ತದೆ, ಧಾರ್ಮಿಕ ಕೇಂದ್ರಗಳಿಗೆ ಎಲ್‌ಟಿ-2(ಎ) ಅಡಿಯಲ್ಲಿ ದರಪಟ್ಟಿ ಇದ್ದು, ಸಾಮಾನ್ಯ ನಿವಾಸಿಗಳಿಗೂ ಇದೇ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ಬಿಲ್ಲುಗಳು ವಿಭಾಗವಾರು ಯುನಿಟ್ ದರ, ನಿಗದಿತ ದರಗಳಲ್ಲಿ ಅಲ್ಪ ವ್ಯತ್ಯಾಸಗಳನ್ನು ಹೊಂದಿದ್ದು, ಅವುಗಳನ್ನು ಇಲ್ಲಿ ನೋಡಬಹುದು.

ಬೆಸ್ಕಾಂ ವಿದ್ಯುತ್ ದರ ಪಟ್ಟಿ
ಹೆಸ್ಕಾಂ ವಿದ್ಯುತ್ ದರ ಪಟ್ಟಿ
ಮೆಸ್ಕಾಂ ವಿದ್ಯುತ್ ದರ ಪಟ್ಟಿ
ಚೆಸ್ಕಾಂ ವಿದ್ಯುತ್ ದರ
ಪಟ್ಟಿ

Also Read: ಹಿಂದೂಗಳ ಬಹಿಷ್ಕಾರಕ್ಕೆ ಬೆಂಗಳೂರಿನಲ್ಲಿ ಮುಸ್ಲಿಂ ಮೌಲ್ವಿ ಕರೆಕೊಟ್ಟಿದ್ದಾರೆಯೇ, ವೈರಲ್‌ ವೀಡಿಯೋ ನಿಜವೇ?

Conclusion

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ವಿದ್ಯುತ್‌ ದರ ಧಾರ್ಮಿಕ ಕೇಂದ್ರಗಳಿಗೆ ಸಮಾನವಾಗಿದ್ದು  ಸುಮಾರು ₹7.00 ಆಗಿದೆ. ಆದ್ದರಿಂದ ದೇಗುಲಕ್ಕೆ ಮಾತ್ರ ಹೆಚ್ಚುವರಿ ವಿದ್ಯುತ್‌, ಮಸೀದಿ, ಚರ್ಚ್ ಗಳಿಗೆ ಕಡಿಮೆ ಎಂಬುದು ಸುಳ್ಳಾಗಿದೆ.

Result: False

Our Sources

Website of Karnataka electricity Regulatory Commission

Conversation with Vasantha Shetty, Public Relation officer Mescom


 ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors