Authors
Claim
ಪ್ರಧಾನಿ ನರೇಂದ್ರ ಮೋದಿ ಅವರು ಕರೆಯದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾಗಿದ್ದಾರೆ
Fact
ವಿದೇಶ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಇತ್ತೀಚಿನ ಫ್ರಾನ್ಸ್ ಪ್ರವಾಸದ ವೇಳೆ ಸ್ವತಃ ಫ್ರಾನ್ಸ್ ಪ್ರಧಾನಿಯವರೇ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರಗಳ ಪ್ರಕಾರ ಸ್ವಾಗತಿಸಿದ್ದಾರೆ. ಈ ವೀಡಿಯೋದ ಆರಂಭಿಕ ದೃಶ್ಯಗಳನ್ನು ಮಾತ್ರ ವೈರಲ್ ವೀಡಿಯೋದಲ್ಲಿ ತೋರಿಸಲಾಗಿದೆ
ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯದೇ ಅತಿಥಿಯಾಗಿ ವಿದೇಶಕ್ಕೆ ಹೋದ್ದಕ್ಕೆ ಅವರ ಸ್ವಾಗತಕ್ಕೆ ಯಾರೂ ಜನರಿಲ್ಲದೆ ಅವಮಾನ ಅನುಭವಿಸುವಂತಾಗಿದೆ ಎಂಬರ್ಥದಲ್ಲಿ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಫೇಸ್ ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಕರೆಯದ ಮನೆಗೆ ಅತಿಥಿಯಾಗಿ ಹೋದರೆ ಹೀಗೇ” ಎಂದಿದೆ. ಈ ವೀಡಿಯೋದಲ್ಲಿ ಮೋದಿಯವರು ವಿಮಾನದಿಂದ ಇಳಿದು ಬರುತ್ತಿದ್ದು ಅವರನ್ನು ಓರ್ವ ಮಹಿಳೆ ಮಾತ್ರ ಸ್ವಾಗತಿಸುತ್ತಿರುವುದು ಕಾಣಿಸುತ್ತದೆ.
Also Read: ಚಂದ್ರಯಾನ 3 ಉಡಾವಣೆ ಎಂದು ತೋರಿಸಲು ಹಂಚಿಕೊಂಡ ವೈರಲ್ ವೀಡಿಯೋಗಳ ಅಸಲಿಯತ್ತೇನು?
Fact Check/Verification
ಈ ವೀಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನ್ಯೂಸ್ಚೆಕರ್ ಮುಂದಾಗಿದ್ದು, ಸತ್ಯಶೋಧನೆಯಲ್ಲಿ ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಈ ವೀಡಿಯೋ ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಫ್ರಾನ್ಸ್ ಪ್ರವಾಸದ ಸಂದರ್ಭದ್ದು ಎಂದು ಗೊತ್ತಾಗಿದೆ. ಪ್ಯಾರಿಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ರಾನ್ಸ್ ಪ್ರಧಾನಿ ಬೋರ್ನ್ ವಾರ್ಮ್ಲಿ ಅವರು ಸ್ವಾಗತಿಸುತ್ತಿರುವ ದೃಶ್ಯ ಎಂದು ಕಂಡುಬಂದಿದೆ.
ಜುಲೈ 13, 2023ರಂದು ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ನ ಶಾರ್ಟ್ಸ್ ವೀಡಿಯೋ ಆಗಿರುವ ಇದರಲ್ಲಿ ರೆಡ್ ಕಾರ್ಪೆಟ್ನಲ್ಲಿ ಫ್ರಾನ್ಸ್ ಪ್ರಧಾನಿ ಅವರು ನಿಂತಿದ್ದು, ವಿಮಾನದಿಂದ ಇಳಿಯುತ್ತಿರುವ ಮೋದಿ ಅವರನ್ನು ಸ್ವಾಗತಿಸುವುದು ಕಾಣಿಸುತ್ತದೆ. ಈ ವೀಡಿಯೋದಲ್ಲಿ ಇತರ ಯಾರೂ ಜನರು ಕಾಣಿಸುವುದಿಲ್ಲ. ಇದು ವೈರಲ್ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿರುವುದನ್ನು ಗುರುತಿಸಿದ್ದೇವೆ.
ಈ ಬಗ್ಗೆ ಹೆಚ್ಚಿನ ಶೋಧನೆಗೆ ನಾವು ಯೂಟ್ಯೂಬ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ನಲ್ಲೇ ಜುಲೈ 13 2023ರಂದು ಅಪ್ಲೋಡ್ ಆಗಿರುವ ವೀಡಿಯೋದಲ್ಲಿ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವ, ಪ್ರಧಾನಿ ಮೋದಿ ಅವರನ್ನು ಫ್ರಾನ್ಸ್ ಪ್ರಧಾನಿ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿರುವ ಪೂರ್ಣ ಆವೃತ್ತಿಯ ವೀಡಿಯೋ ನೋಡಿದ್ದೇವೆ.
Also Read: ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಆಗಮನದ ಬಗ್ಗೆ ಜುಲೈ 13, 2023ರಂದು ಝೀ ಬ್ಯುಸಿನೆಸ್ ವರದಿ ಮಾಡಿದ್ದು, ಫೋಟೋ ಸಹಿತ ವರದಿ ಪ್ರಕಟಿಸಿದೆ.
ಇದರೊಂದಿಗೆ ಹಲವು ಮಾಧ್ಯಮಗಳೂ ಮೋದಿ ಆಗಮನದ ಸಂದರ್ಭದ ವರದಿ ಮಾಡಿದ್ದು, ಅವುಗಳು ಇಲ್ಲಿ ಮತ್ತು ಇಲ್ಲಿವೆ.
ಆ ಪ್ರಕಾರ ಫ್ರಾನ್ಸ್ ಪ್ರಧಾನಿ ಅವರು ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಿ, ಅನಂತರ ಶಿಷ್ಟಾಚಾರ ಪ್ರಕಾರ ಮಿಲಿಟರಿ ಗೌರವಗಳನ್ನು ಸ್ವೀಕರಿಸಲು ಕರೆದೊಯ್ಯುತ್ತಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಜೊತೆಗೆ ಈ ವೇಳೆ ಸಾಕಷ್ಟು ಮಂದಿ ಅಲ್ಲಿ ನೆರೆದಿರುವುದು ಕಂಡುಬಂದಿದೆ.
Also Read: ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?
Conclusion
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ವೀಡಿಯೋದ ಆರಂಭಿಕ ದೃಶ್ಯಗಳನ್ನು ಮಾತ್ರ ತೋರಿಸಿ, ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅಲ್ಲಿ ಯಾರೂ ಜನರಿರಲಿಲ್ಲ. ಇದರಿಂದ ಅವಮಾನಕರ ಸನ್ನಿವೇಶ ಸೃಷ್ಟಿಯಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ.
Results: Missing Context
Our Sources
YouTube Shorts By Narendra Modi, Dated: July 13, 2023
YouTube Video By Narendra Modi, Dated: July 13, 2023
Report By Zee Business, Dated: July 13, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.