Authors
ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್, ಚೆನ್ನೈ ಪ್ರವಾಹದಲ್ಲಿ ಕುಸಿದ ಮನೆ, ರಾಜ್ಯ ಶಾಲೆಗಳಲ್ಲಿ ಕುರಾನ್ ಬೋಧನೆ ಕಡ್ಡಾಯ, ಚಾಕೊಲೆಟ್ ಐಸ್ ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆ ಎಂಬ ಕ್ಲೇಮ್ ಗಳು ಈವಾರ ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ತಪ್ಪು ಎಂದು ರುಜುವಾತು ಪಡಿಸಿದೆ.
8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!
ಗಲ್ಫ್ ರಾಷ್ಟ್ರ ಕತಾರ್ 8 ಮಂದಿ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿಗಳಿಗ ವಿಧಿಸಿದ ಮರಣದಂಡನೆಯನ್ನು ರದ್ದುಗೊಳಿಸಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಸತ್ಯಶೋಧನೆಯಲ್ಲಿ ಮರಣದಂಡನೆ ರದ್ದುಗೊಳಿಸಿದ ಬಗ್ಗೆ ಕತಾರ್ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ, ಭಾರತ ಸರ್ಕಾರವೂ ಈ ಬಗ್ಗೆ ಯಾವುದೇ ಹೇಳಿಕೆ ನೀಡಿದೆ ಇರುವುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಎಲ್ಲಾ ಶಾಲೆಗಳಲ್ಲಿ ಕುರಾನ್ ಬೋಧನೆಯನ್ನು ಕಡ್ಡಾಯಗೊಳಿಸಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ತನಿಖೆ ವೇಳೆ ಕರ್ನಾಟಕ ಸರ್ಕಾರ ರಾಜ್ಯದ ಶಾಲೆಗಳಲ್ಲಿ ಕುರಾನ್ ಬೋಧನೆ ಕಡ್ಡಾಯಗೊಳಿಸಿಲ್ಲ. ವೈರಲ್ ಆಗಿರುವ ವೀಡಿಯೋ ಚೆನ್ನರಾಯಪಟ್ಟಣದ ಶಾಲೆಯೊಂದರದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ ಎಂದು ಕೇರಳದ ಹಳೆ ವೀಡಿಯೋ ವೈರಲ್
ಮಿಚಾಂಗ್ ಚಂಡಮಾರುತದಿಂದಾಗಿ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದ ಚೆನ್ನೈನಲ್ಲಿ ಮನೆಯೊಂದು ಕುಸಿದು ನದಿಗೆ ಉರುಳಿದೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತನಿಖೆ ವೇಳೆ ಮನೆ ಕುಸಿದು ಬಿದ್ದ ವೀಡಿಯೋ ಚೆನ್ನೈನದ್ದಲ್ಲ, ಅದು ಕೇರಳದ್ದು, ಅಕ್ಟೋಬರ್ 2021ರ ವೇಳೆ ಈ ಘಟನೆ ಸಂಭವಿಸಿತ್ತು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ವೇದಮಂತ್ರ ಘೋಷದೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆಯೇ?
ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಮಾಣ ಸ್ವೀಕಾರದ ಕಾರ್ಯಕ್ರಮ ಎಂದು ಪುರೋಹಿತರು ಮಂತ್ರ ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ ವೈರಲ್ ವೀಡಿಯೋ, ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕಾರದ್ದಲ್ಲ. ಅವರು ಮೊದದಲ ಬಾರಿಗೆ ಸಿಎಂ ಕಚೇರಿಗೆ ಬಂದು ಅಧಿಕಾರ ಸ್ವೀಕರಿಸಿದ ವೇಳೆ ಪುರೋಹಿತರು ಮಂತ್ರ ಹೇಳಿದ ಕ್ಷಣವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ಭಾವನಾತ್ಮಕ, ದೈಹಿಕ ನೋವು ಕಡಿಮೆಯಾಗುತ್ತದೆಯೇ?
ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ಭಾವನಾತ್ಮಕ ನೋವು ಮತ್ತು ದೈಹಿಕ ನೋವು ಕಡಿಮೆಯಾಗುತ್ತದೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ ಚಾಕೊಲೆಟ್ ಐಸ್ಕ್ರೀಂ ತಿನ್ನುವುದರಿಂದ ತಾತ್ಕಾಲಿಕ ಸಂತೋಷ ಸಿಗಬಹುದು, ಆದರೆ ಇದರಿಂದ ಮಾನಸಿಕ, ದೈಹಿಕ ನೋವು ಕಡಿಮೆಯಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.