Fact Check: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!

ಕತಾರ್, ನೌಕಾಪಡೆ ಮಾಜಿ ಅಧಿಕಾರಿಗಳು, ಮರಣದಂಡನೆ ರದ್ದು

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್

Fact
ಮರಣದಂಡನೆ ರದ್ದುಗೊಳಿಸಿದ ಬಗ್ಗೆ ಕತಾರ್ ಈವರೆಗೆ ಯಾವುದೇ ಹೇಳಿಕೆ ನೀಡಿಲ್ಲ

ಗಲ್ಫ್ ರಾಷ್ಟ್ರ ಕತಾರ್ 8 ಮಂದಿ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿಗಳಿಗ ವಿಧಿಸಿದ ಮರಣದಂಡನೆಯನ್ನು ರದ್ದುಗೊಳಿಸಿದೆ ಎಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿದೆ. “ಭಾರತೀಯ ನೌಕಾಪಡೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ 8 ಮಂದಿಯ ಮರಣದಂಡನೆ ರದ್ದುಗೊಳಿಸಿದ ಕತಾರ್, ಮೋದಿ ಮತ್ತು ಜೈಶಂಕರ್ ರವರ ರಾಜತಾಂತ್ರಿಕ ನಡೆ ಸಫಲ” ಎಂದು ವೈರಲ್ ಹೇಳಿಕೆಯಲ್ಲಿ ಹೇಳಲಾಗಿದೆ.

Also Read: ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ವೀಡಿಯೋ ನಿಜವೇ?

Fact Check: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!

ಈ ಬಗ್ಗೆ ನ್ಯೂಸ್ ಚೆಕರ್‌ ಸತ್ಯಶೋಧನೆ ನಡೆಸಿದ್ದು, ಈ ಹೇಳಿಕೆ ಸುಳ್ಳು ಎಂದು ತನಿಖೆಯಲ್ಲಿ ನಾವು ಕಂಡುಕೊಂಡಿದ್ದೇವೆ. ಕತಾರ್ ಸರ್ಕಾರ ಇನ್ನೂ ಅಂತಹ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂದು ತಿಳಿದುಬಂದಿದೆ.

ಅಕ್ಟೋಬರ್ 26, 2023 ರಂದು ಕತಾರ್ ನ್ಯಾಯಾಲಯವು ಬೇಹುಗಾರಿಕೆ ಆರೋಪದ ಮೇಲೆ ಭಾರತೀಯ ನೌಕಾಪಡೆಯ ಏಳು ಮಾಜಿ ಅಧಿಕಾರಿಗಳು ಮತ್ತು ನಾವಿಕನೊಬ್ಬನಿಗೆ ಮರಣದಂಡನೆ ವಿಧಿಸಿತ್ತು. ಈ ಭಾರತೀಯ ಪ್ರಜೆಗಳು ಕತಾರ್ ರಾಜಧಾನಿ ದೋಹಾದ ಅಲ್ ದಹ್ರಾ ಎಂಬ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಶಿಕ್ಷೆಯ ವಿರುದ್ಧ ಭಾರತ ಸರ್ಕಾರವು ಕತಾರ್ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಯ ಮೊದಲ ವಿಚಾರಣೆ ನವೆಂಬರ್ 30 ರಂದು ನಡೆಯಿತು ಮತ್ತು ಮುಂದಿನ ವಿಚಾರಣೆ ಡಿಸೆಂಬರ್ 7 ರಂದು ನಡೆಯಲಿದೆ.

Fact Check/Verification

ವೈರಲ್ ಹೇಳಿಕೆಯನ್ನು ತನಿಖೆ ಮಾಡಲು ನ್ಯೂಸ್ಚೆಕರ್ ಮೊದಲು ಸಂಬಂಧಿತ ಕೀವರ್ಡ್ಗಳ ಸಹಾಯದಿಂದ ಗೂಗಲ್ನಲ್ಲಿ ಹುಡುಕಾಟ ನಡೆಸಿದೆ. ಈ ವೇಳೆ ವೈರಲ್ ಹೇಳಿಕೆಯನ್ನು ಉಲ್ಲೇಖಿಸುವ ಯಾವುದೇ ಸುದ್ದಿ ವರದಿ ಲಭ್ಯವಾಗಿಲ್ಲ.

ನಂತರ, ನಾವು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಅಧಿಕೃತ ಎಕ್ಸ್ ಖಾತೆಯನ್ನು ಕೂಡ ಶೋಧಿಸಿದ್ದೇವೆ. ಈ ವೇಳೆ ಅವರ ಎಕ್ಸ್ ಖಾತೆಯಲ್ಲಿ ಯಾವುದೇ ಇತ್ತೀಚಿನ ಟ್ವೀಟ್ ಪತ್ತೆಯಾಗಿಲ್ಲ.

ತನಿಖೆಯ ಸಮಯದಲ್ಲಿ, ಡಿಸೆಂಬರ್ 1, 2023 ರಂದು ಹಿಂದೂಸ್ತಾನ್ ಟೈಮ್ಸ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಅವರ ಹೇಳಿಕೆಯನ್ನು ವರದಿ ಒಳಗೊಂಡಿದೆ. “ಕತಾರ್ನಲ್ಲಿರುವ ಎಲ್ಲಾ ಮಾಜಿ ನೌಕಾ ಅಧಿಕಾರಿಗಳು ಬಹಳ ಅನುಭವಿಗಳು. ಅವರೆಲ್ಲರ ವಾಪಸಾತಿಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಅವರು ಹೇಳಿದರು.

Fact Check: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!


ಇದರ ನಂತರ, ನಮ್ಮ ತನಿಖೆಯನ್ನು ಮುಂದುವರಿಸಲು ನಾವು ಅರೇಬಿಯಾ ಮೂಲದ ಸತ್ಯಶೋಧನಾ ಸಂಸ್ಥೆ ಮಿಸ್ಬಾರ್ ಇದರ ಫ್ಯಾಕ್ಟ್ ಚೆಕರ್ ಬಯಾನ್ ಹಮ್ದಾನ್ ಅವರನ್ನು ಸಂಪರ್ಕಿಸಿದೆವು. ವೈರಲ್ ಹೇಳಿಕೆಯನ್ನು ನಿರಾಕರಿಸಿದ ಅವರು, “ಕತಾರ್ ಸರ್ಕಾರವು ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ” ಎಂದು ಹೇಳಿದರು.

ಅಕ್ಟೋಬರ್ 26, 2023 ರಂದು, ಕತಾರ್ ನ್ಯಾಯಾಲಯವು ಬೇಹುಗಾರಿಕೆ ಆರೋಪದ ಮೇಲೆ ಏಳು ಮಾಜಿ ನೌಕಾಪಡೆಯ ಅಧಿಕಾರಿಗಳು ಮತ್ತು ನಾವಿಕನಿಗೆ ಮರಣದಂಡನೆ ವಿಧಿಸಿತು. ಈ ಎಲ್ಲ ಭಾರತೀಯರನ್ನು ಆಗಸ್ಟ್ 2022 ರಲ್ಲಿ ಬಂಧಿಸಲಾಗಿತ್ತು. ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಠ, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಅಮಿತ್ ನಾಗಪಾಲ್, ಕಮಾಂಡರ್ ಎಸ್.ಕೆ.ಗುಪ್ತಾ, ಕಮಾಂಡರ್ ಬಿ.ಕೆ.ವರ್ಮಾ, ಕಮಾಂಡರ್ ಸುಗುಣಕರ್ ಪಕಾಲ ಮತ್ತು ನಾವಿಕ ರಾಗೇಶ್ ಅವರು ಮರಣದಂಡನೆಗೆ ಒಳಗಾದವರಾಗಿದ್ದಾರೆ.


Also Read: ಮುಸ್ಲಿಂ ಮಹಿಳೆ ಭಗವದ್ಗೀತೆ ಓದಿ ಹಿಂದೂ ಧರ್ಮ ಒಪ್ಪಿ ರಾಧೆ ಆದಳು ಎನ್ನುವುದು ಹೌದೇ?

ನಮ್ಮ ತನಿಖೆಯಲ್ಲಿ ನಾವು ವಿದೇಶಾಂಗ ಸಚಿವಾಲಯ ಮತ್ತು ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯರ ಕುಟುಂಬಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ, ಅವರು ಪ್ರತಿಕ್ರಿಯಿಸಿದ ವೇಳೆ ಈ ಲೇಖನವನ್ನು ನವೀಕರಿಸಲಾಗುವುದು.  

Conclusion

ಕತಾರ್ ನಲ್ಲಿ ಭಾರತೀಯರಿಗೆ ಮರಣದಂಡನೆಯನ್ನು ರದ್ದುಗೊಳಿಸಲಾಗಿದೆ ನೀಡಲಾಗಿದೆ ಎಂಬ ವೈರಲ್ ಹೇಳಿಕೆ ಸುಳ್ಳು ಎಂದು ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ಸ್ಪಷ್ಟವಾಗಿದೆ.

Result: False

Our Sources

Report By Hindustan Times, Dated: December 1st, 2023

Conversation With Misbar Fact Checker Bayan Hamdan

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.