Fact Check: ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ ಎಂದು ಕೇರಳದ ಹಳೆ ವೀಡಿಯೋ ವೈರಲ್‌

ಚೆನ್ನೈ ಪ್ರವಾಹ, ಕೇರಳ, ಕುಸಿದು ಬಿದ್ದ ಮನೆ

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ

Fact
ಮನೆ ಕುಸಿದು ಬಿದ್ದ ವೀಡಿಯೋ ಚೆನ್ನೈನದ್ದಲ್ಲ, ಅದು ಕೇರಳದ್ದು, ಅಕ್ಟೋಬರ್ 2021ರ ವೇಳೆ ಈ ಘಟನೆ ಸಂಭವಿಸಿತ್ತು

ಮಿಚಾಂಗ್‌ ಚಂಡಮಾರುತದಿಂದಾಗಿ ಉಂಟಾದ ಭಾರೀ ಮಳೆ ಮತ್ತು ಪ್ರವಾಹದಿಂದ ಚೆನ್ನೈನಲ್ಲಿ ಮನೆಯೊಂದು ಕುಸಿದು ನದಿಗೆ ಉರುಳಿದೆ ಎಂದು ಹಲವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.  ಈ ಚಂಡಮಾರುತದಿಂದಾಗಿ 8 ಮಂದಿ ಮೃತಪಡುವುದರೊಂದಿಗೆ 18 ಸಾವಿರಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ.

Also Read: 8 ಮಂದಿ ನೌಕಾಪಡೆ ಮಾಜಿ ಅಧಿಕಾರಿಗಳಿಗೆ ಮರಣದಂಡನೆ ರದ್ದುಗೊಳಿಸಿದ ಕತಾರ್ ಎಂಬ ಹೇಳಿಕೆ ಸುಳ್ಳು!

Fact Check: ಚೆನ್ನೈ ಪ್ರವಾಹದ ವೇಳೆ ಕುಸಿದು ಬಿದ್ದ ಮನೆ ಎಂದು ಕೇರಳದ ಹಳೆ ವೀಡಿಯೋ ವೈರಲ್‌

ಇದೇ ರೀತಿಯ ಹೇಳಿಕೆಗಳಿರುವ ಟ್ವೀಟ್ ಗಳನ್ನು ಇಲ್ಲಿ ನೋಡಬಹುದು.

ಈ ಟ್ವೀಟ್ ಗಳ ಆರ್ಕೈವ್‌ ಆವೃತ್ತಿ ಇಲ್ಲಿ ಮತ್ತು ಇಲ್ಲಿದೆ.

Fact Check/Verification

ನ್ಯೂಸ್ಚೆಕರ್ ಮೊದಲು ವೀಡಿಯೋದ ಕೀಫ್ರೇಂ ಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದೆ. ಇದು ಅಕ್ಟೋಬರ್ 18, 2021 ರ ಈ ಯೂಟ್ಯೂಬ್ ವೀಡಿಯೋಗೆ ನಮ್ಮನ್ನು ಕರೆದೊಯ್ದಿದೆ. ಇದರಲ್ಲಿ ”  “Kerala Flood: Dramatic House Collapse in Kottayam”ಎಂಬ ಶೀರ್ಷಿಕೆಯನ್ನು ವೀಡಿಯೋಕ್ಕೆ ನೀಡಲಾಗಿದೆ.

ಈ ಬಳಿಕ ನಾವು ಅಕ್ಟೋಬರ್ 17, 2021 ರ ಈ ನ್ಯೂಸ್‌ ಮಿನಿಟ್ ವರದಿಯನ್ನು ನಾವು ನೋಡಿದ್ದೇವೆ. ಅದರಲ್ಲಿ ಹೇಳಿದ ಪ್ರಕಾರ, ಕೇರಳದ ಕೊಟ್ಟಾಯಂ ಜಿಲ್ಲೆಯ ಕಾಂಜಿರಪಲ್ಲಿ ತಾಲ್ಲೂಕಿನಲ್ಲಿರುವ ಮುಂಡಕಾಯಂ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಣಿಮಾಲಾ ಎಂಬ ನದಿಗೆ ಮನೆ ಕುಸಿದಿರುವುದಾಗಿ ಹೇಳಲಾಗಿದೆ. ವರದಿಯ ಪ್ರಕಾರ ಅಕ್ಟೋಬರ್ 17 ರ ಬೆಳಿಗ್ಗೆ ಮನೆ ಕುಸಿದಿದೆ. “ಎರಡು ಅಂತಸ್ತಿನ ಮನೆ ಮುಂಡಕಾಯಂ ಬಳಿಯ ಕೂಟಿಕಲ್‌ ನಲ್ಲಿತ್ತು. ಮನೆಯ ಮೊದಲ ಮಹಡಿಯನ್ನು ರಸ್ತೆ ಮಟ್ಟದಲ್ಲಿ ನಿರ್ಮಿಸಲಾಗಿದ್ದು, ನೆಲಮಹಡಿ ನದಿಗೆ ತಾಗಿಕೊಂಡಂತೆ ಕೆಳಭಾಗದಲ್ಲಿತ್ತು. ನೆಲ ಮಹಡಿಯಲ್ಲಿ ಆಳವಾದ ಬಿರುಕುಗಳು ಕಾಣಿಸಿಕೊಂಡ ನಂತರ ಮನೆ ರಸ್ತೆಯಿಂದ ಬೇರ್ಪಟ್ಟಂತೆ ಕಾಣಿಸಿದೆ. ಭಾರೀ ಮಳೆಯಿಂದಾಗಿ ಕೂಟಿಕಲ್ ನಲ್ಲಿ ಪ್ರವಾಹ ಮತ್ತು ಭೂಕುಸಿತವು ಸಂಭವಿಸಿದ್ದರಿಂದ ಮನೆಯ ಅಡಿಪಾಯ ಕೊಚ್ಚಿಹೋಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.  

Also Read: ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ವೀಡಿಯೋ ನಿಜವೇ?

Instagram will load in the frontend.

“ಕೇರಳದಲ್ಲಿ ಶನಿವಾರದಿಂದ ವಿಪರೀತ ಮಳೆಯಾಗುತ್ತಿದ್ದು, ಇದು ಕೊಟ್ಟಾಯಂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಕೂಟಿಕಲ್ ಮತ್ತು ಕೊಕ್ಕಯಾರ್ ಪಂಚಾಯತ್ ವ್ಯಾಪ್ತಿಯಲ್ಲಿ ಸರಣಿ ಭೂಕುಸಿತ ಸಂಭವಿಸಿದೆ. ಕೂಟಿಕಲ್‌ ನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 12 ಜನರು ಸಾವನ್ನಪ್ಪಿದ್ದರೆ, ಕೊಕ್ಕಯಾರ್ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ” ಎಂದು ವರದಿ ತಿಳಿಸಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು, ಆ ಪ್ರಕಾರ ವೈರಲ್ ವೀಡಿಯೋ ಕೇರಳದ 2021 ರ ಪ್ರವಾಹದ ವೀಡಿಯೋ ಎಂದು ದೃಢವಾಗಿದೆ.

Conclusion

ಮನೆ ನದಿಗೆ ಕುಸಿಯುವುದನ್ನು ತೋರಿಸುವ ವೈರಲ್ ವೀಡಿಯೋ ಹಳೆಯದು ಮತ್ತು 2023 ರ ಚೆನ್ನೈ ಪ್ರವಾಹಕ್ಕೆ ಸಂಬಂಧಿಸಿಲ್ಲ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.

Also Read: ಮುಸ್ಲಿಂ ಮಹಿಳೆ ಭಗವದ್ಗೀತೆ ಓದಿ ಹಿಂದೂ ಧರ್ಮ ಒಪ್ಪಿ ರಾಧೆ ಆದಳು ಎನ್ನುವುದು ಹೌದೇ?

Result: False

Our Source
Report By The Newsminute, Dated: October 17, 2021

Report By NDTV, Dated: October 17, 2021

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್‌ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Kushel HM is a mechanical engineer-turned-journalist, who loves all things football, tennis and films. He was with the news desk at the Hindustan Times, Mumbai, before joining Newschecker.

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.