Authors
ಅಯೋಧ್ಯೆ ರಾಮ ಮಂದಿರ ಎಂದು ಗುಜರಾತ್ ದೇಗುಲದ ವೀಡಿಯೋ, ಅಯೋಧ್ಯೆಗೆ ಜಟಾಯು ಪಕ್ಷಿಗಳು, ಕರಡಿಗಳ ಲಗ್ಗೆ, ಅಯೋಧ್ಯೆಯಲ್ಲಿ ಜನರಿಗೆ ನಿರ್ಮಿಸಿದ ಶೌಚಾಲಯಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಮುಖ್ಯ ಕ್ಲೇಮ್ ಗಳು. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನ ಸಮೀಪಿಸುತ್ತಿರುವಂತೆಯೇ, ಈ ಕುರಿತಾಗಿ ತಪ್ಪು ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿವೆ. ಇದರೊಂದಿಗೆ ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರಗೆ ಹಾಕಿದ್ದಾರೆ, ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿದ್ದಾರೆ, ಖರ್ಜೂರವನ್ನು ಮೆಂತೆ ನೀರಿಗೆ ಸೇರಿಸಿ ಕುಡಿದರೆ ಬೆನ್ನು ನೋವಿಗೆ ಪರಿಹಾರ ಎಂಬ ಕ್ಲೇಮ್ ಗಳೂ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಸುಳ್ಳು ಎಂದು ಕಂಡುಬಂದಿವೆ.
ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?
ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಕ್ಲೇಮ್ ಹರಿದಾಡಿದೆ. ಸತ್ಯಶೋಧನೆಯಲ್ಲಿ ತಿಳಿದುಬಂದ ಪ್ರಕಾರ ಈ ಶೌಚಾಲಯಗಳನ್ನು ನಿರ್ಮಾಣ ಮಾಡಿರುವುದು ವಾರಾಣಸಿಯ ಸ್ವರವೇದ ಮಹಾಮಂದಿರದಲ್ಲಿ ಇದು ಅಯೋಧ್ಯೆಯಲ್ಲಿ ನಿರ್ಮಾಣವಾದದ್ದಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಓದಿ
ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?
ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿರುವಂತೆಯೇ, ಎಂದಿಗೂ ಕಾಣದ ಜಟಾಯುರೀತಿ ಪಕ್ಷಿಗಳು (ದೊಡ್ಡ ಹದ್ದು) ಕಾಣಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಅಯೋಧ್ಯೆಯಲ್ಲಿ ಅಂತಹ ಯಾವುದೇ ಹದ್ದುಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕರಡಿಗಳ ಹಿಂಡು ಅಯೋಧ್ಯೆ ತಲುಪಿದೆ ಎಂದ ವೈರಲ್ ವೀಡಿಯೋ ಮಧ್ಯಪ್ರದೇಶದ್ದು!
ಅಯೋಧ್ಯೆಯತ್ತ ಕರಡಿಗಳ ಹಿಂಡು ತಲುಪಿದೆ ಎಂದು ಹೇಳಿಕೆಯೊಂದು ಹರಿದಾಡಿದೆ. ಸತ್ಯಶೋಧನೆಯ ಪ್ರಕಾರ ಅಯೋಧ್ಯೆಗೆ ಕರಡಿಗಳ ಹಿಂಡು ಬಂದಿದೆ ಎಂದು ಹೇಳಿರುವುದು ಸುಳ್ಳಾಗಿದೆ. ನಿಜವಾಗಿ ಇದು ಮಧ್ಯಪ್ರದೇಶದ ಶಾಧೋಲ್ ನ ಗ್ರಾಮವೊಂದರ ವೀಡಿಯೋ ಎಂದು ತಿಳಿದುಬಂದಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಓದಿ
ಅಯೋಧ್ಯೆಯ ರಾಮ ಮಂದಿರ ಎಂದು ಗುಜರಾತಿನ ದೇಗುಲ ವೀಡಿಯೋ ವೈರಲ್
ಅಯೋಧ್ಯೆಯ ರಾಮ ಮಂದಿರ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿದೆ. ಆದರೆ ತನಿಖೆಯಲ್ಲಿ ಕಂಡುಬಂದಂತೆ ಇದು ಅಯೋಧ್ಯೆಯ ರಾಮ ಮಂದಿರವಲ್ಲ ಬದಲಾಗಿ ಗುಜರಾತ್ನ ಕೋದಲ್‌ಧಾಮ್ ದೇಗುಲ ಎಂದು ತಿಳಿದುಬಂದಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಓದಿ
ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಇಬ್ಬರು ವ್ಯಕ್ತಿಗಳು ಇಬ್ಬರು ಬಾಲಕಿಯರನ್ನು ಅಪಹರಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನುವುದರೊಂದಿಗೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ತನಿಖೆಯಲ್ಲಿ ಕಂಡುಬಂದಂತೆ ಬೆಂಗಳೂರಿನಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದ ಈ ವೀಡಿಯೋ ಈಜಿಪ್ಟ್ ನದ್ದು ಎಂದು ಗೊತ್ತಾಗಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಓದಿ
ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?
ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ, ಬ್ರಾಹ್ಮಣ ಅರ್ಚಕರೊಬ್ಬರು ಹಲ್ಲೆ ನಡೆಸಿ, ಆಕೆಯ ಕೂದಲನ್ನು ಎಳೆದು, ಹೊರ ಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ತನಿಖೆ ವೇಳೆ ಕಂಡುಬಂದಂತೆ ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ದೇಗುಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ದೇಗುಲದಿಂದ ಹೊರಗೆ ಹಾಕಿದ್ದಾರೆ. ಇದು 2023ರ ಪ್ರಕರಣವಾಗಿದ್ದು ಯಾವುದೇ ಜಾತಿ ಕಾರಣ ಹೊಂದಿಲ್ಲ ಎಂದು ಗೊತ್ತಾಗಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಓದಿ
ಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಬೆನ್ನು ನೋವಿಗೆ ಪರಿಹಾರ ಸಿಗುತ್ತದೆಯೇ?
ಖರ್ಜೂರ ಮತ್ತು ಮೆಂತೆಯನ್ನು ಸೇರಿಸಿ ಕುಡಿಯುವುದರಿಂದ ಬೆನ್ನುನೋವಿಗೆ ಪರಿಹಾರ ನೀಡುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡಿದೆ. ಸತ್ಯಶೋಧನೆ ಪ್ರಕಾರ, ಬೆನ್ನು ನೋವಿಗೆ ಖರ್ಜೂರ-ಮೆಂತೆ ನೀರಿಗೆ ಸೇರಿಸಿ ಕುಡಿದರೆ ಪ್ರಯೋಜನಕಾರಿ ಎನ್ನುವುದಕ್ಕೆ ನಿರ್ದಿಷ್ಟ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಬೆನ್ನುನೋವಿನಂತಹ ಸಮಸ್ಯೆಗಳಿಗೆ ವೈದ್ಯರನ್ನು ಕಾಣುವುದು ಉತ್ತಮವಾಗಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.