Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್

ಬೆಂಗಳೂರು, ಬಾಲಕಿಯರ ಅಪಹರಣ, ಈಜಿಪ್ಟ್ ವಿಡಿಯೋ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ

Fact
ಬೆಂಗಳೂರಿನಲ್ಲಿ ಬಾಲಕಿಯರನ್ನು ಅಪಹರಿಸಲಾಗಿದೆ ಎಂದ ಈ ವೀಡಿಯೋ ಈಜಿಪ್ಟ್ ನದ್ದು

ಇಬ್ಬರು ವ್ಯಕ್ತಿಗಳು ಇಬ್ಬರು ಬಾಲಕಿಯರನ್ನು ಅಪಹರಿಸಲು ಪ್ರಯತ್ನಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಎನ್ನುವುದರೊಂದಿಗೆ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಆದಾಗ್ಯೂ, ನಮ್ಮ ತನಿಖೆಯಲ್ಲಿ ಈ ವೀಡಿಯೋ ಬೆಂಗಳೂರಿನದ್ದಲ್ಲ, ಈಜಿಪ್ಟ್ ನದ್ದಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ವೈರಲ್ ವೀಡಿಯೋ 1 ನಿಮಿಷ 26 ಸೆಕೆಂಡುಗಳಷ್ಟಿದೆ. ಈ ವೀಡಿಯೋದಲ್ಲಿ, ಇಬ್ಬರು ಹುಡುಗಿಯರು ಎಲವೇಟರ್ನಲ್ಲಿ ನಿಂತಿರುವುದನ್ನು ಕಾಣಬಹುದು. ಏತನ್ಮಧ್ಯೆ, ಲಿಫ್ಟ್ ಬಾಗಿಲು ತೆರೆದಾಗ, ಇಬ್ಬರು ಪುರುಷರು ಒಳಗೆ ಪ್ರವೇಶಿಸಿ ಹುಡುಗಿಯರನ್ನು ಅಪಹರಿಸಲು ಪ್ರಯತ್ನಿಸುತ್ತಾರೆ. ಹುಡುಗಿಯರು ಸಹ ಈ ಸಮಯದಲ್ಲಿ ಅವರನ್ನು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಹುಡುಗಿಯರು ಪ್ರಜ್ಞೆ ತಪ್ಪಿದ ನಂತರ, ಇಬ್ಬರು ಪುರುಷರು ಅವರನ್ನು ತಮ್ಮ ಭುಜಗಳ ಮೇಲೆ ಎತ್ತಿ ಕರೆದುಕೊಂಡು ಹೋಗುತ್ತಾರೆ.

Also Read: ಬೆಂಗಳೂರಲ್ಲಿ ದಲಿತ ಮಹಿಳೆಗೆ ಥಳಿಸಿ ದೇಗುಲದಿಂದ ಹೊರ ಹಾಕಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯವೇನು?

“ಕ್ಲೋರೋಫಾರ್ಮ್ ವಾಸನೆಯಿಂದ ಹಿಂದೂ ಹುಡುಗಿಯರನ್ನು ಜಿಹಾದಿಗಳು ಲಿಫ್ಟ್ನಿಂದ ಅಪಹರಿಸಿ, ಪ್ರಜ್ಞಾಹೀನರಾದ ಆ ಇಬ್ಬರು ಹುಡುಗಿಯರನ್ನು ನೇರವಾಗಿ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕೂರಿಸಿ ಹೊರಟುಹೋದರು, ಅಪಹರಣಕ್ಕೊಳಗಾದ ಹುಡುಗಿಯರು ಮತ್ತು ಅಪಹರಣಕಾರರು ಯಾರು ಎಂದು ಗೊತ್ತೇ ಆಗದಂತೆ ಮಾಯವಾದರು” ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಟ್ವಿಟರ್ ನಲ್ಲಿ ಕಂಡುಬಂದ ಕ್ಲೇಮ್

Fact Check/ Verification

ವೈರಲ್ ಹೇಳಿಕೆಯನ್ನು ಪರಿಶೀಲಿಸಲು ನ್ಯೂಸ್‌ ಚೆಕರ್ ಕೀಫ್ರೇಮ್ಗಳ ಸಹಾಯದಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು ಮತ್ತು ಈಜಿಪ್ಟ್ ಮೂಲದ ಮಾಧ್ಯಮ ಸಂಸ್ಥೆ  ಇನ್ಸ್ಟಾಗ್ರಾಮ್ ಖಾತೆಯಿಂದ 21 ಡಿಸೆಂಬರ್ 2023 ರಂದು ಅಪ್ಲೋಡ್ ಮಾಡಿದ ವೀಡಿಯೋ ಪತ್ತೆಯಾಗಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಮಿಗೆಜೆಟಿಯರ್ಸ್ ವರದಿ


ಈಜಿಪ್ಟ್ ರಾಜಧಾನಿ ಕೈರೋದ ನಾಸ್ಟ್ರಾ ಸಿಟಿಯಲ್ಲಿ ಈ ಘಟನೆ ನಡೆದಿದೆ ಎಂದು ವೀಡಿಯೋದೊಂದಿಗಿರುವ ಶೀರ್ಷಿಕೆ ಹೇಳುತ್ತದೆ. ವೀಡಿಯೋದಲ್ಲಿ ಕಂಡುಬರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬಾತ ಹುಡಯಗಿಯರ ತಂದೆಯೇ ಆಗಿದ್ದು ಸಹಚರನೊಂದಿಗೆ ಅಪಹರಣ ನಡೆಸಿದ್ದಾನೆ. ಅಪಹರಣ ಬಳಿಕ ಆ ಹೆಣ್ಮಕ್ಕಳೊಂದಿಗೆ ತಂದೆ ದೇಶದಿಂದ ಪರಾರಿಯಾಗಿದ್ದಾನೆ. ಈ ಘಟನೆ ಬಳಿಕ  ಬಾಲಕಿಯರ ತಾಯಿ ನಾಸ್ಟ್ರಾ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ಸಂದರ್ಭ 2023 ರ ಡಿಸೆಂಬರ್ 23 ರಂದು ಅಲ್-ಅರೇಬಿಯಾ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಕೈರೋದಲ್ಲಿ ವಾಸಿಸುವ ಮಹಿಳೆಯೊಬ್ಬರು 2022 ರಲ್ಲಿ ವಿಚ್ಛೇದನ ಪಡೆದಿದ್ದಾರೆ ಎಂದು ಈ ವರದಿಯಲ್ಲಿ ವರದಿಯಾಗಿದೆ. ವಿಚ್ಛೇದನದ ನಂತರ, ಮಹಿಳೆಯ ಮಾಜಿ ಪತಿ ತನ್ನ ಸಹಚರರ ಸಹಾಯದಿಂದ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ ಮತ್ತು ಪುತ್ರಿಯರೊಂದಿಗೆ ದೇಶದಿಂದ ಪರಾರಿಯಾದನು ನಂತರ,  ತಂದೆಯ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದಿದೆ.

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಅಲ್‌-ಅರೇಬಿಯಾ ವರದಿ

ಈ ನಿಟ್ಟಿನಲ್ಲಿ ಈಜಿಪ್ಟ್ನ ಆಂತರಿಕ ಸಚಿವಾಲಯವು 2023 ರ ಡಿಸೆಂಬರ್ 20 ರಂದು ಮಾಡಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಟ್ವೀಟ್ ನಲ್ಲಿ ನೀಡಲಾಗಿದೆ. ಈ ಘಟನೆ ಡಿಸೆಂಬರ್ 13, 2023 ರಂದು ನಡೆದಿದೆ ಎಂದು ಟ್ವೀಟ್ನಲ್ಲಿ ವರದಿಯಾಗಿದೆ. ಈ ಪ್ರಕರಣದಲ್ಲಿ, ತಂದೆಯೊಬ್ಬ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದ ನಂತರ ಅವಳೊಂದಿಗೆ ವಾಸಿಸುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿದ್ದಾನೆ ಎಂದಿದೆ.

Also Read: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?

Fact Check: ಬೆಂಗಳೂರಲ್ಲಿ ಜಿಹಾದಿಗಳು ಬಾಲಕಿಯರನ್ನು ಅಪಹರಿಸುತ್ತಿರುವ ದೃಶ್ಯ ಎಂದು ಈಜಿಪ್ಟ್ ವೀಡಿಯೋ ವೈರಲ್
ಈಜಿಪ್ಟ್ ಆಂತರಿಕ ಸಚಿವಾಲಯದ ಹೇಳಿಕೆ

Conclusion

ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ಈ ವೀಡಿಯೋ ಕರ್ನಾಟಕದ್ದಲ್ಲ, ಬದಲಾಗಿ ಈಜಿಪ್ಟ್ ರಾಜಧಾನಿ ಕೈರೋದಿಂದ ಬಂದಿದೆ ಎಂಬುದು ಸ್ಪಷ್ಟವಾಗಿದೆ.

Also Read: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?

Result: False

Our Sources
Video posted by megazettes, Dated: 21st Dec 2023

Article Published by al-arabiya, Dated: 23st Dec 2023

Tweet by ministry of interior Egypt, Dated: 20th Dec 2023

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.