Fact Check: ಅಯೋಧ್ಯೆಯಲ್ಲಿ ಜಟಾಯು ಪಕ್ಷಿ ರೀತಿ ದೊಡ್ಡ ಗಾತ್ರದ ಹದ್ದುಗಳು ಕಂಡುಬಂದಿವೆಯೇ?

ಜಟಾಯು, ರಾಮ ಮಂದಿರ, ಅಯೋಧ್ಯೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗುತ್ತಿರುವಂತೆಯೇ, ಎಂದಿಗೂ ಕಾಣದ ಜಟಾಯುರೀತಿ ಪಕ್ಷಿಗಳು (ದೊಡ್ಡ ಹದ್ದು) ಕಾಣಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಶ್ರೀ ರಾಮನಿಗೆ ಸ್ವಾಗತ ಕೋರಲು ಇಂದಿನವರೆಗೆ ಅಯೋಧ್ಯೆಯಲ್ಲಿ ಎಂದಿಗೂ ಕಾಣದ ಜಟಾಯು ಪಕ್ಷಿಗಳ ದಂಡೇ ಕಾಣುತ್ತಿವೆ ಸನಾತನವೇ ಪವಾಡ.” ಎಂದು ಹೇಳಲಾಗಿದೆ.

Also Read: ಅಯೋಧ್ಯೆಯಲ್ಲಿ ತೆರೆದಿರುವ ರೀತಿಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದ ವೀಡಿಯೋ ನಿಜವೇ?

Fact

ಸತ್ಯಶೋಧನೆಗಾಗಿ ನ್ಯೂಸ್ ಚೆಕರ್ ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ನಾನಾ ಸಂದರ್ಭಗಳಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ.

ಇದರಲ್ಲಿ ಕಂಡು ಬಂದ ರೀತಿ, ಅಕ್ಟೋಬರ್ 8, 2021ರಂದು ದೂಝ್‌ ಹೆಸರಿನ ಫೇಸ್‌ಬುಕ್‌ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಅದೇ ರೀತಿ ANF1ALE ಹೆಸರಿನ ಯೂಟ್ಯೂಬ್‌ ಚಾನೆಲ್‌ ಎಪ್ರಿಲ್‌ 25, 2022ರಂದು ವೀಡಿಯೋವನ್ನು ಹಂಚಿಕೊಂಡಿದೆ. ವಿಶ್ವದ ಅತಿ ದೊಡ್ಡ ಹದ್ದು ಎಂದು ಇದರ ಶೀರ್ಷಿಕೆಯಲ್ಲಿ ಕೊಡಲಾಗಿದೆ (ಅರೆಬಿಕ್‌ ನಿಂದ ಭಾಷಾಂತರಿಸಲಾಗಿದೆ)

ಅದೇ ರೀತಿ ಇಫಿಲೋ.ನೆಟ್ ಹೆಸರಿನ ವೆಬ್‌ಸೈಟ್ ನಲ್ಲಿ ಪರ್ಷಿಯನ್ ಭಾಷೆಯಲ್ಲೂ ಹದ್ದಿನ ವೀಡಿಯೋ ಕಂಡುಬಂದಿದೆ.

ಸತ್ಯಶೋಧನೆ ವೇಳೆ ಈ ವೀಡಿಯೋ 2021ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂಬುದನ್ನು ಗಮನಿಸಿದ್ದೇವೆ.

ಇನ್ನು ನಿಜಕ್ಕೂ ಅಯೋಧ್ಯೆಯಲ್ಲಿ ದೊಡ್ಡ ಗಾತ್ರದ ರಣಹದ್ದುಗಳು ಕಾಣಸಿಕ್ಕಿವೆಯೇ, ಆ ಕುರಿತು ಸ್ಥಳೀಯವಾಗಿ ಸುದ್ದಿಯಾಗಿದೆಯೇ ಎಂದು ನಾವು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಕರ್ತವ್ಯ ನಿರತರಾಗಿರುವ ವಿಜಯವಾಣಿಯ ದಿಲ್ಲಿ ಬ್ಯೂರೋ ಪತ್ರಿಕಾ ವರದಿಗಾರ ರಾಘವ ಶರ್ಮ ಅವರನ್ನು ಕೇಳಿದ್ದೇವೆ. ಅವರು ಈ ಸುದ್ದಿಯನ್ನು ತಳ್ಳಿಹಾಕಿದ್ದು, ಅಂತಹ ಯಾವುದೇ ಹದ್ದುಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ವೈರಲ್ ವೀಡಿಯೋದ ದೃಶ್ಯ ಅಯೋಧ್ಯೆಯದ್ದಲ್ಲ ಎಂಬುದನ್ನು ನಾವು ಮನಗಂಡಿದ್ದೇವೆ.

Also Read: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

Result: False

Our Sources:
Facebook Post By Dooz: Dated: October 8, 2021

YouTube Video By ANF1ALE , Dated: April 25, 2022

Post By Ifilo.net

Conversation with Raghava Sharma, Vijayavani Delhi Bureau 


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.