Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಗೋಡೆ ಮೇಲೆ ಹನುಮಂತನ ಚಿತ್ರ ಬಿಡಿಸಿದ ಕೋತಿ
ಈ ವೀಡಿಯೋ ಎಐ ಮೂಲಕ ಮಾಡಿದ್ದಾಗಿದೆ
ಕೋತಿಯೊಂದು ಗೋಡೆ ಮೇಲೆ ಹನುಮಂತನ ಚಿತ್ರವನ್ನು ಬಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೈರಲ್ ವೀಡಿಯೋವನ್ನು ಇಲ್ಲಿ ಇಲ್ಲಿ ನೋಡಬಹುದು.


ವೈರಲ್ ಆಗಿರುವ ವೀಡಿಯೋ ಬಗ್ಗೆ ನಾವು ತನಿಖೆ ಆರಂಭಿಸಿದ್ದೇವೆ. ದೃಶ್ಯಗಳನ್ನು ಎಚ್ಚರಿಕೆಯಿಂದ ನೋಡಿದ ನಂತರ, ವೀಡಿಯೋದಲ್ಲಿ ಹಲವಾರು ನ್ಯೂನತೆಗಳನ್ನು ನಾವು ಗಮನಿಸಿದ್ದೇವೆ. ವೀಡಿಯೋದಲ್ಲಿ ಕಾಣುವ ವ್ಯಕ್ತಿಯ ಕಾಲುಗಳು ತಿರುಚಲ್ಪಟ್ಟಿವೆ ಮತ್ತು ದೃಶ್ಯಗಳು ಸಹಜವಾಗಿಲ್ಲದಿರುವುದು ಗೋಚರಿಸುತ್ತದೆ.
Also Read: ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುಹಾಕಿದ ಆಫ್ಘಾನಿಸ್ತಾನ, ವೈರಲ್ ವೀಡಿಯೋ ನಿಜವೇ?

ನಮ್ಮ ತನಿಖೆಯ ವೇಳೆ, ನಾವು ವೀಡಿಯೋವನ್ನು ಕೀ ಫ್ರೇಮ್ಗಳಾಗಿ ವಿಂಗಡಿಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ‘ಮಲ್ಟಿವರ್ಸೆಮೆಟ್ರಿಕ್ಸ್’ ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದೇ ರೀತಿಯ ವೀಡಿಯೋ ಕಂಡಿದ್ದೇವೆ. ಈ ಖಾತೆಯ ಬಯೋದಲ್ಲಿ ಈ ಖಾತೆಯು AI ವೀಡಿಯೊಗಳನ್ನು ರಚಿಸುತ್ತದೆ ಎಂದು ಹೇಳಲಾಗಿದೆ.

ವೈರಲ್ ವೀಡಿಯೋ ಬಗ್ಗೆ ತನಿಖೆ ಮಾಡುವಾಗ, ನಾವು ನ್ಯೂಸ್ ಚೆಕರ್ ಒಂದು ಭಾಗವಾಗಿರುವ ಮಿಸ್ ಇನ್ಫಾರ್ಮೇಶನ್ ಕಾಂಬ್ಯಾಟ್ ಅಲೈಯನ್ಸ್ನ ಡೀಪ್ಫೇಕ್ ಅನಾಲಿಸಿಸ್ ಯೂನಿಟ್ (ಡಿಎಯು) ಅನ್ನು ಸಂಪರ್ಕಿಸಿದ್ದೇವೆ. ಡಿಎಯು ವಾಸಿಟ್ಎಐ ಮತ್ತು ಹಿಯಾ ನಂತಹ ಪರಿಕರಗಳನ್ನು ಬಳಸಿಕೊಂಡು ವೀಡಿಯೋ ಮತ್ತು ಆಡಿಯೋವನ್ನು ಪರಿಶೀಲಿಸಿದೆ. ಈ ಪರಿಕರಗಳು ವೀಡಿಯೋ ಮತ್ತು ಆಡಿಯೋವನ್ನು ಎಐ ಮೂಲಕ ರಚಿಸಿದ್ದಿರಬಹುದು ಎಂದು ಹೇಳಿದೆ.


ನಮ್ಮ ತನಿಖೆಯ ಪ್ರಕಾರ, ವೈರಲ್ ವೀಡಿಯೋವನ್ನು ಎಐ ನಿಂದ ರಚಿಸಲಾಗಿದೆ ಎಂದು ಕಂಡುಬಂದಿದೆ.
Also Read: ನೇಪಾಳದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಕಲ್ಲುತೂರಿದ್ದಕ್ಕಾಗಿ ಮಸೀದಿಗೆ ಬೆಂಕಿ?
Our Sources
Instagram post by multiversematrix, Dated October 9, 2025
Analysis By DAU
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಪಂಜಾಬಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
Ishwarachandra B G
December 19, 2025
Mohammed Zakariya
December 11, 2025
Salman
December 5, 2025