Friday, December 5, 2025

Election Watch

Fact Check: ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ? ಈ ಹೇಳಿಕೆ ಸುಳ್ಳು

Written By Prasad S Prabhu, Translated By Ishwarachandra B G, Edited By Pankaj Menon
May 11, 2023
banner_image

Claim
ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ

Fact
ವೈರಲ್‌ ಆದ ವೀಡಿಯೋ ಬೊಮ್ಮಾಯಿಯವರಿಗೆ ಥಳಿಸಿದ್ದಲ್ಲ 2018ರಲ್ಲಿ ಹಾವೇರಿಯಲ್ಲಿ ನಡೆದ ಪ್ರತಿಭಟನೆ ಸಂದರ್ಭದ್ದು

ಕರ್ನಾಟಕ ವಿಧಾನಸಭೆ ಚುನಾವಣೆ ನಡೆದಿರುವಾಗಲೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತ ವೀಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಚುನಾವಣಾ ಪ್ರಚಾರದ ವೇಳೆ ಮತ ಕೇಳಲು ಹೋದಾಗ ಕರ್ನಾಟಕ ಸಿಎಂ ಬೊಮ್ಮಾಯಿ ಅವರಿಗೆ ಚಪ್ಪಲಿಯಿಂದ ಥಳಿಸಲಾಯಿತು ಮತ್ತು ಯಾವುದೇ ಸುದ್ದಿ ಚಾನೆಲ್ ಗಳು ಇದನ್ನು ಇನ್ನೂ ತೋರಿಸಿಲ್ಲ. “ಈ ವೀಡಿಯೋವನ್ನು ವೀಕ್ಷಿಸಿ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?
ಕೃಪೆ: ಟ್ವಿಟರ್@BPPDELNP

“ಒಂದು ಗ್ರಾಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮತ ಕೇಳಲು ಹೋದಾಗ ಶೂ ಮತ್ತು ಚಪ್ಪಲಿಯಿಂದ ಥಳಿಸಲಾಯಿತು.” ಎಂಬ ಈ ಹೇಳಿಕೆಯು ವಾಟ್ಸಾಪ್ನಲ್ಲಿ ವ್ಯಾಪಕವಾಗಿ ಪ್ರಸಾರವಾಗಿದೆ. ಚುನಾವಣೆ ಮೊದಲು ಪ್ರಸಾರವಾದ ಈ ವೈರಲ್‌ ವೀಡಿಯೋ, ಬಿಜೆಪಿ ವಿರುದ್ಧ ವ್ಯಾಪಕ ಆಕ್ರೋಶವಿದೆ ಎಂಬುದನ್ನು ತೋರಿಸಲು ಬಳಕೆಯಾಗಿದೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?

ಈ ಕ್ಲೇಮಿನ ಸತ್ಯಶೋಧನೆ ನಡೆಸಿದ್ದು ಇದೊಂದು ಸುಳ್ಳು ಕ್ಲೇಮ್‌ ಎಂಬುದು ಗೊತ್ತಾಗಿದೆ.

Fact Check/ Verification

ವೈರಲ್‌ ಕ್ಲೇಮಿನಲ್ಲಿ ಹೇಳಿದರ ರೀತಿ, ಮತ ಕೇಳಲು ಹೋದಾಗ, ಬೊಮ್ಮಾಯಿ ಅವರಿಗೆ ಥಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಯತ್ನಿಸಿದೆವು. ಆದರೆ ಯಾವುದೇ ಪುರಾವೆಗಳು ಅಥವಾ ಮಾಧ್ಯಮ ವರದಿಗಳು ಲಭ್ಯವಾಗಿರಲಿಲ್ಲ.

ಈ ವೀಡಿಯೋವನ್ನು ಪರಿಶೀಲಿಸಿದಾಗ, ಅದರಲ್ಲಿ ಧಿಕ್ಕಾರ ಧಿಕ್ಕಾರ ಎಂದು ಕೂಗುವುದು ಕೇಳಿ ಬರುತ್ತದೆ. ಮತ್ತು ಬಿಜೆಪಿ ಧ್ವಜವನ್ನು ಹಿಡಿದಿರುವುದು ಕಾಣಿಸುತ್ತದೆ. ಅದರಂತೆ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಟೈಮ್ಸ್ ಆಫ್‌ ಇಂಡಿಯಾದ ವರದಿ ಲಭ್ಯವಾಗಿದೆ.

ಜನವರಿ 30, 2018ರ ಟೈಮ್ಸ್ ಆಫ್‌ ಇಂಡಿಯಾದ ವರದಿ ಪ್ರಕಾರ, ಜನವರಿ 29, 2018ರಂದು ಬಿಜೆಪಿ ಕಾರ್ಯಕರ್ತರು ಹಾವೇರಿಯ ಜಿಲ್ಲಾಧಿಕಾರಿ ಕಚೇರಿ ಮತ್ತು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಬೆಳೆ ವಿಮೆ ಪ್ರೀಮಿಯಂ ವಿಳಂಬ ಮತ್ತು ಇತರ ಹಲವಾರು ಬೇಡಿಕೆಗಳ ಬಗ್ಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಯಿತು. ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಆಗ ಶಿಗ್ಗಾವಿ-ಸವಣೂರಿನ ಶಾಸಕರಾಗಿದ್ದರು. ಪ್ರತಿಭಟನೆಯಲ್ಲಿ ಅವರೂ ಹಾಜರಿದ್ದರು. ಬಿಜೆಪಿ ಕಾರ್ಯಕರ್ತರು ಆಕ್ರಮಣಕಾರಿಯಾಗುತ್ತಿದ್ದಂತೆ, ಪೊಲೀಸರು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರು ಆ ಗಲಾಟೆಯಲ್ಲಿ ಬೊಮ್ಮಾಯಿ ಅವರ ಕಣ್ಣಿಗೆ ಕೋಲಿನಿಂದ ಗಾಯಗಳಾಗಿವೆ. ಬೊಮ್ಮಾಯಿ ಮೇಲೆ ದಾಳಿಯಾಗಿದೆ ಅಥವಾ ಹಲ್ಲೆಯಾಗಿದೆ ಎಂಬುದನ್ನು ಈ ವರದಿಯಲ್ಲಿ ಹೇಳಿಲ್ಲ. ಪ್ರತಿಭಟನೆಯ ನಂತರ ಪೊಲೀಸರು 45 ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು” ಎಂದು ಇದರಲ್ಲಿ ಹೇಳಲಾಗಿದೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?

ಜನವರಿ 30, 2018ರ ಪ್ರಜಾವಾಣಿ ವರದಿಯಲ್ಲೂ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಸೆಗಣಿ ಎರಚಿದ್ದಾರೆ ಎಂದು ಹೇಳಿದೆ. ಜೊತೆಗೆ “ಪ್ರತಿಭಟನಕಾರರ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಸ್ಥಳಕ್ಕೆ ಬಂದಿದ್ದರು. ಸೆಗಣಿ ಎರಚಾಟ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಾಪಸ್‌ ಕಳುಹಿಸಿದೆವು ಬಳಿಕ ಬಿಜೆಪಿ ಕಾರ್ಯಕರ್ತರು ನಡೆಸಿದ ತಳ್ಳಾಟ ಸಂದರ್ಭದಲ್ಲಿ ಯಾರದೋ ಕೈಲಿದ್ದ ಕೋಲೊಂದು ಶಾಸಕ ಬಸವರಾಜ ಬೊಮ್ಮಾಯಿ ಅವರ ಕಣ್ಣಿನ ಬಳಿ ಬಡಿದಿದೆ. ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಂ ತಿಳಿಸಿದರು” ಎಂದು ವರದಿಯಲ್ಲಿದೆ.

ಈ ಪ್ರತಿಭಟನೆಗೆ ವೀಡಿಯೊ ಪುರಾವೆಗಳಿವೆಯೇ ಎಂಬುದನ್ನು ನ್ಯೂಸ್‌ಚೆಕರ್‌ ನೋಡಿದ್ದು, ಪಬ್ಲಿಕ್ ಟಿವಿ ಜನವರಿ 29, 2018 ರಂದು ತನ್ನ ಅಧಿಕೃತ ಚಾನೆಲ್‌ ನಲ್ಲಿ ಸುದ್ದಿಯಾಗಿ ಅಪ್ಲೋಡ್ ಮಾಡಿರುವುದು ಲಭ್ಯವಾಗಿದೆ.

ಪಬ್ಲಿಕ್ ಟಿವಿ ಅಪ್ಲೋಡ್ ಮಾಡಿದ ವೀಡಿಯೋ ವೈರಲ್ ವೀಡಿಯೋದ ಒಂದು ಭಾಗವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ, ಆದರೆ ಅದನ್ನು ಮತ್ತೊಂದು ಕೋನದಿಂದ ರೆಕಾರ್ಡ್‌ ಮಾಡಲಾಗಿದೆ ಎಂಬುದನ್ನು ಗಮನಿಸಿದ್ದೇವೆ.

Also Read: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಓಟು ಹಾಕಲು ಪಾಕ್‌ ಪ್ರಧಾನಿ ಮನವಿ, ಟ್ವೀಟ್‌ ಸತ್ಯವೇ?

ಬಸವರಾಜ ಬೊಮ್ಮಾಯಿ ಅವರು ಇದ್ದ ಈ ಘಟನೆಯನ್ನು ಈ ಯೂಟ್ಯೂಬ್ ವೀಡಿಯೊದಲ್ಲಿ 0.50 ಸೆಕೆಂಡುಗಳಿಂದ ನೋಡಬಹುದು. ಎರಡು ವೀಡಿಯೋಗಳನ್ನು ಹೋಲಿಸಿದಾಗ, ಕನ್ನಡಕ ಧರಿಸಿದ ವ್ಯಕ್ತಿ, ಬೋಳು ತಲೆಯ ವ್ಯಕ್ತಿ ಮತ್ತು ಹಿಂಭಾಗದಲ್ಲಿ ನೀಲಿ ಪೊಲೀಸ್ ಬಸ್ ಒಂದೇ ರೀತಿ ಇರುವುದನ್ನು ಗಮನಿಸಲಾಗಿದೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?

ವೈರಲ್ ಆಗಿರುವ ವೀಡಿಯೊದಲ್ಲಿ, ಕನ್ನಡಕ ಧರಿಸಿದ ವ್ಯಕ್ತಿಯೊಬ್ಬರು ಬಸವರಾಜ ಬೊಮ್ಮಾಯಿ ಅವರ ಪಕ್ಕದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲ ವೀಡಿಯೊದಲ್ಲಿಯೂ ನಾವು ಅದೇ ವ್ಯಕ್ತಿಯನ್ನು ನೋಡಿದ್ದೇವೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?

ಅದೇ ಸಮಯದಲ್ಲಿ, ಬೋಳು ತಲೆಯ ವ್ಯಕ್ತಿಯು ಎರಡೂ ವೀಡಿಯೋದಲ್ಲಿಯೂ ಇರುವುದು ಕಾಣಿಸಿದೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?


ವೈರಲ್ ವೀಡಿಯೋದ ಹಿಂದೆ ಕಂಡುಬರುವ ಪೊಲೀಸ್ ಬಸ್ ಮೂಲ ವೀಡಿಯೊದಲ್ಲಿ ಜನಸಮೂಹದ ಪಕ್ಕದಲ್ಲಿ ಕಂಡುಬರುತ್ತದೆ.

ಮತ ಕೇಳಲು ಹೋದಾಗ ಸಿಎಂ ಬಸವರಾಜ ಬೊಮ್ಮಾಯಿಗೆ ಥಳಿತ?

ಅದೇ ಸಮಯದಲ್ಲಿ, ನೇರಳೆ ಬಣ್ಣದ ಶರ್ಟ್ ಮತ್ತು ಕುತ್ತಿಗೆಗೆ ಟವೆಲ್ ಧರಿಸಿದ ವ್ಯಕ್ತಿಯು ಎರಡೂ ವೀಡಿಯೊಗಳಲ್ಲಿ ಸಾಮಾನ್ಯವಾಗಿರುವುದನ್ನು ನಾವು ಗಮನಿಸಿದ್ದೇವೆ.

ನಂತರ ನಾವು ಘಟನೆಯ ಸಮಯದಲ್ಲಿ ಹಾಜರಿದ್ದ ಹಾವೇರಿಯ ಹಿರಿಯ ಪತ್ರಕರ್ತ ಫಕೀರಯ್ಯ ಅವರನ್ನು ಸಂಪರ್ಕಿಸಿ ವೈರಲ್ ವೀಡಿಯೊದ ಬಗ್ಗೆ ಮಾಹಿತಿ ಪಡೆದಿದ್ದೇವೆ. “ಈ ವೀಡಿಯೊ ಈಗಿನದ್ದಲ್ಲ, ಆದರೆ 2018 ರಲ್ಲಿ ಹಾವೇರಿಯಲ್ಲಿ ನಡೆದ ಪ್ರತಿಭಟನೆಯದ್ದು” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಆಗಿನ ಮುಖ್ಯಮಂತ್ರಿ ಬೊಮ್ಮಾಯಿ ಶಾಸಕರಾಗಿದ್ದರು. ಅವರು ಪ್ರತಿಭಟನೆಯಲ್ಲಿ ಹಾಜರಿದ್ದರು. ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸುವಾಗ ಅವರ ಕಣ್ಣಿಗೆ ಕೋಲಿನಿಂದ ತಾಗಿದೆ” ಎಂದು ಅವರು ಹೇಳಿದರು.

Conclusion

ಈ ಸತ್ಯಶೋಧನೆಯ ಪ್ರಕಾರ, ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಥಳಿಸಲಾಯಿತು ಎನ್ನುವುದು ತಪ್ಪಾಗಿದೆ. ಬದಲಾಗಿ ಇದು 2018ರ ಪ್ರತಿಭಟನೆಯ ಸಮಯದ್ದು ಎಂದು ತಿಳಿದುಬಂದಿದೆ.

Our Sources

News published by Times of India on January 30, 2018

Report by Prajavani, Dated: January 30, 2018

Video uploaded by Public TV on January 29, 2018

Conversation with senior journalist from Haveri Mr. Fakirayya

Self Analysis


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
ifcn
fcp
fcn
fl
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

20,439

Fact checks done

FOLLOW US
imageimageimageimageimageimageimage