Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬಿಹಾರದಲ್ಲಿ ಬಿಜೆಪಿ ಗೆಲುವಿನ ಬಳಿಕ ರಸ್ತೆಗೆ ಇಳಿದು ಜನರ ಪ್ರತಿಭಟನೆ
ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರ ಅಂತಿಮ ಯಾತ್ರೆಯ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಬಿಹಾರದಲ್ಲಿ ಬಿಜೆಪಿ ಗೆಲುವಿನ ಬಳಿಕ ರಸ್ತೆಗೆ ಇಳಿದು ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “EVM ಮುಕಾಂತರ ಗೆದ್ದ ಬಿಹಾರದ ಬಿಜೆಪಿ ವಿರುದ್ಧ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುತ್ತಿರುವುದು ದೇಶದಲ್ಲೇ ಇದೆ ಮೊದಲು..” ಎಂದಿದೆ.

ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಹೇಳಿಕೆ, ಬಿಹಾರದಲ್ಲಿ ಅಂತಹ ಯಾವುದೇ ಪ್ರತಿಭಟನೆಗಳು ನಡೆದಿಲ್ಲ ಎಂದು ಕಂಡುಬಂದಿದೆ.
Also Read: ಪಾಟ್ನಾದಲ್ಲಿ ಬಿಜೆಪಿ ಕಚೇರಿಗೆ ಬಿಹಾರಿಗಳಿಂದ ಬೆಂಕಿ ಎಂದು ನೇಪಾಳ ವೀಡಿಯೋ ವೈರಲ್
ಸತ್ಯಶೋಧನೆಗಾಗಿ ನಾವು ಮೊದಲು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯಾವುದೇ ಮಾಧ್ಯಮಗಳಲ್ಲಿ ಚುನಾವಣೆ ಗೆಲುವಿಗೆ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ವರದಿಗಳು ಕಂಡುಬಂದಿಲ್ಲ.
ಆ ಬಳಿಕ ನಾವು ವೈರಲ್ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಸೆಪ್ಟೆಂಬರ್ 26, 2025ರಂದು samina_afruz ಎಂಬ ಬಳಕೆದಾರರು ಪೋಸ್ಟ್ ಮಾಡಿರುವ ಫೋಟೋ ಲಭ್ಯವಾಗಿದೆ. ಇದು ವೈರಲ್ ವೀಡಿಯೋದ ಕೀಫ್ರೇಂ ಜೊತೆಗೆ ಸಾಮ್ಯತೆಯನ್ನು ಹೊಂದಿದೆ. ಈ ಪೋಸ್ಟ್ ನಲ್ಲಿ ಬಳಕೆದಾರರು, “ಜುಬೀನ್ ಗಾರ್ಗ್ ಕೇವಲ ಗಾಯಕನಲ್ಲ, ಅವರು ಅಸ್ಸಾಂಗೆ ಒಂದು ಭಾವನೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತೀರಿ. ಅಸ್ಸಾಂ ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ.” ಎಂದು ಬರೆದುಕೊಂಡಿದ್ದಾರೆ.

ವೈರಲ್ ವೀಡಿಯೋ ಕೀಫ್ರೇಂ ಮತ್ತು ಮೇಲಿನ ಇನ್ಸ್ಟಾಗ್ರಾಂ ಪೋಸ್ಟ್ ಫೋಟೋ ನೋಡಿದಾಗ ಅದು ಸರಿಯಾಗಿ ಹೊಂದಾಣಿಕೆಯಾಗುತ್ತಿರುವುದು ಕಂಡುಬಂದಿದೆ.


ಸೆಪ್ಟೆಂಬರ್ 21, 2025ರಂದು mahariaprahlad ಎಂಬ ಬಳಕೆದಾರರು ಮಾಡಿರುವ ಪೋಸ್ಟ್ ನಲ್ಲಿಯೂ ವೈರಲ್ ವೀಡಿಯೋ ಹೋಲುವ ವೀಡಿಯೋ ಕಂಡುಬಂದಿದ್ದು, ಇದರ ವಿವರಣೆಯಲ್ಲಿ “ದಿವಂಗತ ಗಾಯಕ ಜುಬಿನ್ ಗಾರ್ಗ್ ಅವರಿಗೆ ಅಂತಿಮ ನಮನ ಸಲ್ಲಿಸಲು ಅಸ್ಸಾಂನಾದ್ಯಂತ ಜನರು ಜಮಾಯಿಸಿದರು! ಗುವಾಹಟಿಯಲ್ಲಿ ಲಕ್ಷಾಂತರ ಜನರು “ಜುಬಿನ್, ಜುಬಿನ್, ಜುಬಿನ್!” ಎಂಬ ಘೋಷಣೆಗಳೊಂದಿಗೆ ತಮ್ಮ ಪ್ರೀತಿಯ ಗಾಯಕನಿಗೆ ಹೃತ್ಪೂರ್ವಕ ಗೌರವ ಸಲ್ಲಿಸಿದರು.” ಎಂದಿದೆ.

ಸೆಪ್ಟೆಂಬರ್ 22, 2025ರಂದು ಇಂಡಿಯಾ ಟೈಮ್ಸ್ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಪ್ರಕಟಿಸಿದ ವೀಡಿಯೋದಲ್ಲಿ, “ಪ್ರಸಿದ್ಧ ಗಾಯಕ ಜುಬೀನ್ ಗಾರ್ಗ್ ಅವರಿಗೆ ಅಂತಿಮ ನಮನ ಸಲ್ಲಿಸಲು ಸಾವಿರಾರು ಜನರು ಗುವಾಹಟಿಯಲ್ಲಿ ನೆರೆದಿದ್ದರಿಂದ ದುಃಖದ ಸಾಗರವೇ ತುಂಬಿತ್ತು. ಅಸ್ಸಾಂ ಮತ್ತು ಅದರಾಚೆಗಿನ ಧ್ವನಿ ಎಂದು ಕರೆಯಲ್ಪಡುವ ಅವರ ಸಂಗೀತವು ಅವರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ.” ಎಂದು ವಿವರಣೆ ನೀಡಲಾಗಿದೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಬಿಹಾರದಲ್ಲಿ ಬಿಜೆಪಿ ಗೆಲುವಿನ ಬಳಿಕ ಜನರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋ ಅಸ್ಸಾಂನ ಖ್ಯಾತ ಗಾಯಕ ಜುಬೀನ್ ಗಾರ್ಗ್ ಅವರ ಅಂತಿಮ ಯಾತ್ರೆಯದ್ದಾಗಿದೆ ಎಂದು ಗೊತ್ತಾಗಿದೆ.
Also Read: ಪಶ್ಚಿಮ ಬಂಗಾಳದಲ್ಲಿ SIR ಜಾರಿ; ಓಡಿ ಹೋದ ಬಾಂಗ್ಲಾದೇಶೀಯರು?
Our Sources
Instagram post by samina_afruz, Dated: September 26, 2025
Instagram post by mahariaprahlad, Dated: September 21, 2025
YouTube Shorts by Indiatimes, Dated: September 22, 2025
Vasudha Beri
December 2, 2025
Ishwarachandra B G
November 22, 2025
Ishwarachandra B G
November 18, 2025