Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಟ್ನಾದಲ್ಲಿ ಬಿಜೆಪಿ ಕಚೇರಿಗೆ ಬಿಹಾರಿಗಳು ಬೆಂಕಿ ಹಾಕಿದ್ದಾರೆ
ನೇಪಾಳದ ಜೆನ್ ಝಿ ಪ್ರತಿಭಟನೆಯ ಸಂದರ್ಭ ಬಿರ್ಗುಂಜ್ ಮೇಯರ್ ರಾಜೇಶ್ ಮನ್ ಸಿಂಗ್ ಮನೆಗೆ ಬೆಂಕಿ ಹಚ್ಚಿದ ಕುರಿತ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಪಾಟ್ನಾದಲ್ಲಿ ಬಿಜೆಪಿ ಕಚೇರಿಗೆ ಬಿಹಾರಿಗಳು ಬೆಂಕಿ ಹಾಕಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಪಾಟ್ನಾದಲ್ಲಿ ಬಿಹಾರಿಗಳ ಆಕ್ರೋಶ ಬಿಜೆಪಿ ಕಚೇರಿಗೆ ಬೆಂಕಿ – ವೋಟ್ ಚೋರಿಯಿಂದ ಗೆದ್ದ ಸಂಭ್ರಮಾಚರಣೆ, ವೋಟ್ ಕಳ್ಳರಿಗೆ ತಕ್ಕ ಪೂಜೆ” ಎಂದಿದೆ.

ಈ ವೈರಲ್ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ತನಿಖೆ ಮಾಡಿದ್ದು, ಇದು ನಿಜವಲ್ಲ, ಈ ದೃಶ್ಯ ನೇಪಾಳದ ಪ್ರತಿಭಟನೆಯ ಸಮಯದ್ದಾಗಿದ್ದು, ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ಗೂಗಲ್ ಬಿಹಾರದ ಪಾಟ್ನಾ ಬಿಜೆಪಿ ಕಚೇರಿ ಬಗ್ಗೆ ಸರ್ಚ್ ಮಾಡಿದ್ದೇವೆ. ಈ ವೇಳೆ ಇತ್ತೀಚಿನ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ-ಜೆಡಿಯು ಮೈತ್ರಿಕೂಟದ ಕಾರ್ಯಕರ್ತರು ಕಚೇರಿ ಎದುರು ಸಂಭ್ರಮಿಸಿದ ಕುರಿತ ವರದಿಗಳು ಲಭ್ಯವಾಗಿವೆ. ಇದು ಹೊರತಾಗಿ ಯಾವುದೇ ಬೆಂಕಿ ಹಚ್ಚಿದ ವಿದ್ಯಮಾನ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಗಳು ಕಂಡುಬಂದಿಲ್ಲ.
ಆ ಬಳಿಕ ಗೂಗಲ್ ನಲ್ಲಿ ವೈರಲ್ ವೀಡಿಯೋದ ಕೀಫ್ರೇಂಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇದು ನೇಪಾಳದ ಪ್ರತಿಭಟನೆ ಸಂದರ್ಭದ್ದು ಎಂದು ಗೊತ್ತಾಗಿದೆ. ನೇಪಾಳದಲ್ಲಿ ಜೆನ್ ಝಿ ಪ್ರತಿಭಟನೆ ವೇಳೆ ಸರ್ಕಾರಕ್ಕೆ ಸೇರಿದವರು ಮತ್ತು ಸರ್ಕಾರಿ ಕಚೇರಿಗಳು, ಸೊತ್ತುಗಳಿಗೆ ಬೆಂಕಿ ಹಚ್ಚುವುದು, ಹಾನಿ ಎಸಗುವ ಕೃತ್ಯ ನಡೆದಿದ್ದು, ಆಗ ಬಿರ್ಗುಂಜು ನಗದಲ್ಲೂ ಹಿಂಸಾಕೃತ್ಯಗಳು ನಡೆದಿದ್ದವು.
ಸೆಪ್ಟೆಂಬರ್ 14, 2025ರಂದು ಜಿಯಾ ಲಾಲ್ ಎಂಬ ಫೇಸ್ಬುಕ್ ಬಳಕೆದಾರರು ಮಾಡಿರುವ ಪೋಸ್ಟ್ ನಲ್ಲಿ ವೈರಲ್ ವೀಡಿಯೋ ಹೋಲುವ ವೀಡಿಯೋದ ದೃಶ್ಯಾವಳಿಗಳು ಕಂಡುಬಂದಿವೆ. ಇದರೊಂದಿಗೆ ನೀಡಲಾದ ವಿವರಣೆಯಲ್ಲಿ, “ಜೆನ್ ಝಿ ಆಂದೋಲನದ ಹೆಸರಿನಲ್ಲಿ ಅನಾಹುತ ಸೃಷ್ಟಿಸಲು ನಾಯಕರ ಆದೇಶದ ಮೇರೆಗೆ ಸಚಿವರು ಮತ್ತು ಸಂಸದರ ಮನೆಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಬಿರ್ಗುಂಜ್ ನಗರದ ವೀಡಿಯೋ ವರದಿಯಲ್ಲಿ ಹೆಚ್ಚಿನ ವಿವರವಾದ ಸುದ್ದಿ.” ಎಂದಿದೆ.

ಇದರನ್ವಯ ನಾವು ಹೆಚ್ಚಿನ ತನಿಖೆ ನಡೆಸಿದಾಗ, ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವ ಹಲವು ಪೋಸ್ಟ್ ಗಳು ಲಭ್ಯವಾಗಿವೆ. ಇವುಗಳಲ್ಲಿ ಬೀರ್ಗಂಜ್ ಮೇಯರ್ ರಾಜೇಶ್ ಮನ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಬರೆಯಲಾಗಿದೆ.
ಸೆಪ್ಟೆಂಬರ್ 9, 2025ರಂದು ಆಕಾಶ ಗಂಗಾ ಟೆಲಿವಿಷನ್ ಫೇಸ್ಬುಕ್ ಪೋಸ್ಟ್ ನಲ್ಲಿ “ಬಿರ್ಗುಂಜ್ ಮೇಯರ್ ರಾಜೇಶ್ ಮನ್ ಸಿಂಗ್ ಅವರ ಮನೆಯಲ್ಲೂ ಬೆಂಕಿ ಕಾಣಿಸಿಕೊಂಡಿದೆ.” ಎಂದಿದೆ.
ಸೆಪ್ಟೆಂಬರ್ 9, 2025ರಂದು ರಾತೋಪನಾ ಟಿವಿ ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಇದೇ ವೀಡಿಯೋ ಇದ್ದು, “ಬಿರ್ಗುಂಜ್ ಮೇಯರ್ ರಾಜೇಶ್ ಮನ್ ಸಿಂಗ್ ಮನೆಗೆ ಬೆಂಕಿ” ಎಂದಿದೆ.
ಇದೇ ರೀತಿಯ ಪೋಸ್ಟ್ ಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಆದ್ದರಿಂದ ಈ ತನಿಖೆಯ ಪ್ರಕಾರ, ವೈರಲ್ ವೀಡಿಯೋ ನೇಪಾಳದ ಜೆನ್ ಝಿ ಪ್ರತಿಭಟನೆಯ ಸಂದರ್ಭದ್ದಾಗಿದ್ದು ಬಿರ್ಗುಂಜ್ ಮೇಯರ್ ರಾಜೇಶ್ ಮನ್ ಸಿಂಗ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ್ದಾಗಿದೆ. ಇದು ಪಾಟ್ನಾದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎನ್ನುವುದಕ್ಕೆ ಸಂಬಂಧ ಇಲ್ಲ ಎಂದು ಕಂಡುಬಂದಿದೆ.
Our Sources
Facebook post by Jiya lal, Dated: September 14, 2025
Facebook post by Akashaganga Television, Dated: September 9, 2025
YouTube Video by Ratopana TV, Dated: September 9, 2025
Ishwarachandra B G
November 22, 2025
Ishwarachandra B G
November 21, 2025
Ishwarachandra B G
November 19, 2025