Fact Check: ರಸ್ತೆಯಲ್ಲಿ ನಮಾಝ್‌ ಮಾಡುವಂತಿಲ್ಲ ಎಂದರೆ ಉದ್ಯಾನದಲ್ಲಿ ಯೋಗ ಮಾಡುವಂತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆಯೇ?

ನಮಾಜ್‌ ರಸ್ತೆ, ಯೋಗ, ಉದ್ಯಾನ ಮಾಡುವಂತಿಲ್ಲ

Claim
ರಸ್ತೆಗಳಲ್ಲಿ ನಮಾಜು ಮಾಡುವಂತಿಲ್ಲ ಎಂದರೆ, ಉದ್ಯಾನಗಳಲ್ಲಿ ಯೋಗ ಮಾಡುವಂತಿಲ್ಲ: ಪ್ರಿಯಾಂಕಾ ಗಾಂಧಿ

Fact
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಇಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ 

ಉದ್ಯಾನದಲ್ಲಿ ಯೋಗ ಮಾಡುವುದನ್ನು ತಡೆಯುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತವಾಗಿರುವ ಸಂದರ್ಭದಲ್ಲೇ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಕುರಿತಾಗಿ ಫೇಸ್ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌ ಹೀಗಿದೆ. “ರಸ್ತೆಗಳಲ್ಲಿ ನಮಾಜು ಮಾಡಬಾರದು ಎಂದು ನೀವು ಹೇಳಿದರೆ, ಉದ್ಯಾನವನಗಳಲ್ಲಿ ಯೋಗ ಮಾಡುವಂತಿಲ್ಲ-ಪ್ರಿಯಾಂಕಾ ವಾದ್ರಾ ಶಂಕೆ ನಿಜವಾಗಿ ದೂರವಾಯಿತು. ಕಾಂಗ್ರೆಸ್ಸೇ ಇಂಡಿಯನ್‌ ಮುಸ್ಲಿಂ ಲೀಗ್‌ ಎಂಬುದು ಸಾಬೀತಾಯಿತು” ಎಂದು ಹೇಳಲಾಗಿದೆ.

ರಸ್ತೆಯಲ್ಲಿ ನಮಾಝ್‌ ಮಾಡುವಂತಿಲ್ಲ ಎಂದರೆ ಉದ್ಯಾನದಲ್ಲಿ ಯೋಗ ಮಾಡುವಂತಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆಯೇ?

ಇದೇ ರೀತಿಯ ಕ್ಲೇಮ್ ಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಂಡುಬಂದಿವೆ.

Fact Check/Verification

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪು ಕ್ಲೇಮ್‌ ಎಂದು ತಿಳಿದುಬಂದಿದೆ.

ಸತ್ಯಶೋಧನೆಗಾಗಿ ನಾವು ಗೂಗಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಗೂಗಲ್ ಕೀವರ್ಡ್‌ ಸರ್ಚ್‌ ನಡೆಸಿದ್ದು, ಈ ಹೇಳಿಕೆ ನೀಡಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.

ಇದೇ ರೀತಿ ಇಂಗ್ಲಿಷ್‌ ಭಾಷೆಯಲ್ಲಿ ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ಈ ಸಂದರ್ಭದಲ್ಲೂ ಪ್ರಿಯಾಂಕಾ ಅವರು ಹೇಳಿಕೆ ನೀಡಿದ್ದಾರೆ ಎನ್ನವುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ.

Also Read : ಅಮಿತ್‌ ಶಾ ಬಸವಣ್ಣನಿಗೆ ಅವಮಾನ ಮಾಡಿದ್ದಾರೆಯೇ?

ಈ ವಿಚಾರಕ್ಕೆ ಸಂಬಂಧಿಸಿದಂತೆ, ಎಐಸಿಸಿಯ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥರಾದ ಪವನ್‌ ಖೇರಾ ಅವರನ್ನು ಸಂಪರ್ಕಿಸಲಾಗಿದ್ದು, ಇದು ಸಂಪೂರ್ಣ ಸುಳ್ಳು. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಇಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಕರ್ನಾಟಕ ಕೆಪಿಸಿಸಿ ವಕ್ತಾರರಾದ ರಝಾಕ್‌ ಉಸ್ತಾದ್‌ ಅವರನ್ನು ಈ ಬಗ್ಗೆ ಸಂಪರ್ಕಿಸಿ ಕೇಳಲಾಗಿದ್ದು, ಅವರು “ಭಾವನಾತ್ಮಕ ವಿಷಯಗಳನ್ನು ಈ ಚುನಾವಣೆಯಲ್ಲಿ ಬಡಿದೆಬ್ಬಿಸಲಾಗುತ್ತಿದೆ. ಪ್ರಿಯಾಂಕಾ ಗಾಂಧಿಯವರು ಕರ್ನಾಟಕದ ಯಾವುದೇ ಚುನಾವಣೆ ಪ್ರಚಾರದಲ್ಲೂ ಹೀಗೆ ಹೇಳಿಲ್ಲ ಮತ್ತು ಇದೊಂದು ಸಂಪೂರ್ಣ ಸುಳ್ಳು” ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಪ್ರಿಯಾಂಕಾ ಗಾಂಧಿಯವರು ರಸ್ತೆಗಳಲ್ಲಿ ನಮಾಜು ಮಾಡಬಾರದು ಎಂದು ನೀವು ಹೇಳಿದರೆ, ಉದ್ಯಾನವನಗಳಲ್ಲಿ ಯೋಗ ಮಾಡುವಂತಿಲ್ಲ ಎಂದು ಹೇಳಿದ್ದಾರೆ ಎನ್ನುವುದು ಸುಳ್ಳು ಕ್ಲೇಮ್‌ ಆಗಿದೆ.

Result: False

Our Sources

Conversation with Pawan Khera, Chairman, Media & Publicity Dept. All India Congress Committee

Conversation with Razak Ustad, Spokesmen, Karnataka Pradesh Congress Committe


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.