Authors
ಮೀಸಲಾತಿ ಕುರಿತಂತೆ ಹೊಸ ಪೋಸ್ಟ್ ಒಂದು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕಂಡುಬಂದಿದ್ದು ಅದು ಹೀಗಿದೆ. ಉತ್ತರ ಪ್ರದೇಶದಲ್ಲಿ ಎಸ್‌ಸಿ ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಮೀಸಲಾತಿಯನ್ನು ಸರ್ಕಾರ ತೆಗೆದಿದೆ. ಬಿಜೆಪಿ ಬೆಂಬಲಿಸುವ ಶೂದ್ರರಿಗೆ ಮನುವಾದಿಗಳ ಹುನ್ನಾರ ಅರ್ಥವಾಗಿಲ್ಲ ಅಂದರೆ ಮುಂದೆ ಭೀಕರ ಪರಿಣಾಮ ಎದುರಿಸುತ್ತಾರೆ ಎಂದು ಇಲ್ಲಿ ಹೇಳಲಾಗಿದೆ
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು ಇದು ನಿಜವೇ ಎಂಬುದನ್ನು ನೋಡೋಣ.
Fact Check
ಪೋಸ್ಟ್‌ನಲ್ಲಿ ಹೇಳಿದ ರೀತಿ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆ ಪ್ರಕಾರ, ಉತ್ತರಪ್ರದೇಶ ಗವರ್ನ್ಮೆಂಟ್, ರಿಸರ್ವೇಶನ್, ಬಿಜೆಪಿ ಗವರ್ನ್ಮೆಂಟ್, ಮೆಡಿಕಲ್ ಎಂಬ ಶಬ್ದಗಳನ್ನು ಹಾಕಿ ಸರ್ಚ್ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳು ಕಂಡು ಬಂದಿವೆ.
ಇಂಡಿಯಾ ಟುಡೇ ವರದಿ ಪ್ರಕಾರ, ಉತ್ತರ ಪ್ರದೇಶ ಸರ್ಕಾರ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಮೀಸಲಾತಿಯನ್ನು ತೆಗೆದುಹಾಕಲಾಗುತ್ತದೆ ಎಂಬ ಬಗ್ಗೆ ವದಂತಿಗಳು ಹಬ್ಬಿವೆ. ಆದರೆ ಖಾಸಗಿ ಕಾಲೇಜುಗಳಲ್ಲಿ ಇಂತಹ ಯಾವುದೇ ಮೀಸಲಾತಿ ಈ ಮೊದಲು ಇರಲೇ ಇಲ್ಲ ಎಂದು ಅದು ಸ್ಪಷ್ಟೀಕರಿಸಿದೆ ಎಂದು ಹೇಳಲಾಗಿದೆ.
ಜೊತೆಗೆ “ಆಜ್ ತಕ್ ಟಿವಿಯ ಉಲ್ಲೇಖದೊಂದಿಗೆ ಇಂಡಿಯಾ ಟುಡೆ ಗ್ರೂಪ್ ಮೊದಲು ಸುದ್ದಿ ವರದಿಯನ್ನು ಪ್ರಕಟಿಸಿತು ಆದರೆ ತಪ್ಪು ಅರಿವಾದ ತಕ್ಷಣ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಲಾಯಿತು” ಎಂದು ಈ ಸುದ್ದಿಯಲ್ಲಿ ವರದಿ ಮಾಡಲಾಗಿದೆ.
ದಿ ಕ್ವಿಂಟ್ ಕೂಡ ಇದನ್ನು ವರದಿ ಮಾಡಿದ್ದು ಅದು ಇಂಡಿಯಾ ಟುಡೇ ವರದಿಯನ್ನು ಉಲ್ಲೇಖಿಸಿದೆ. ಆ ಪ್ರಕಾರ, ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮೀಸಲಾತಿಯನ್ನು ತೆಗೆಯಲು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾಗಿದ್ದಾಗ ಉದ್ದೇಶಿಸಿದ್ದರು. ಆದರೆ ಅದನ್ನೀಗ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತದೆ ಎಂದು ಹೇಳಲಾಗಿದೆ. ಇದೇ ವೇಳೆ ಈ ವರದಿಗಳನ್ನು ಉತ್ತರಪ್ರದೇಶ ಶಿಕ್ಷಣ ಸಚಿವಾಲಯ ನಿರಾಕರಿಸಿದೆ ಎಂದೂ ಅದು ತನ್ನ ವರದಿಯಲ್ಲಿ ಹೇಳಿದೆ.
ಕಿರು ಸುದ್ದಿಗಳನ್ನು ಪ್ರಕಟಿಸುವ ಇನ್ ಶಾರ್ಟ್ಸ್ ಕೂಡ ಇಂಡಿಯಾ ಟುಡೇಯನ್ನು ಉಲ್ಲೇಖಿಸಿ ಈ ಸುದ್ದಿಯನ್ನು ಮಾಡಿದೆ. 2017 ಎಪ್ರಿಲ್ 13ರ ಸುದ್ದಿ ಇದಾಗಿದ್ದು, ಎಸ್‌ಸಿ ಎಸ್‌ಟಿ, ಒಬಿಸಿಗಳಿಗೆ ಮೀಸಲಾತಿ ಆಧರಿತ ಕೋಟಾಗಳನ್ನು ರದ್ದು ಮಾಡಿದೆ ಎಂದು ಹೇಳಿದೆ.
ಮೀಸಲಾತಿ ರದ್ದತಿ ಕುರಿತಂತೆ ಯಾವುದೇ ವರದಿಗಳೂ ಸುದ್ದಿಯನ್ನು ಖಚಿತ ಪಡಿಸುವಂತೆ ಯಾವ ಸುದ್ದಿಮೂಲಗಳನ್ನೂ ಉಲ್ಲೇಖಿಸಿಲ್ಲ. ಆದ್ದರಿಂದ ಇದು ಸಂಶಯಾಸ್ಪದವಾಗಿದೆ.
ಇನ್ನು, ಭಾರತದಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ನಡೆಸುವ ಸಂಸ್ಥೆ ನಡೆಸುತ್ತದೆ. ಇದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಅಡಿಯಲ್ಲಿ ಬರುತ್ತದೆ. 2021ರಲ್ಲಿ ಅದು ಹೊರಡಿಸಿದ ಸಾರ್ವಜನಿಕ ಪ್ರಕಟಣೆಯ ಪ್ರಕಾರ, 2021-22ನೇ ಸಾಲಿನಲ್ಲಿ ಭಾರತ ಸರ್ಕಾರ ಮೆಡಿಕಲ್ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಶೇ.27ರಷ್ಟು ಮೀಸಲಾತಿಯನ್ನು ಒಬಿಸಿ, ಶೇ.10ರಷ್ಟನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ಎಸ್‌ಸಿಗಳಿಗೆ ಶೇ.15ರಷ್ಟು ಮತ್ತು ಎಸ್‌ಟಿಗಳಿಗೆ ಶೇ.7.5ರಷ್ಟು ಮೀಸಲಾತಿಯನ್ನು ನೀಡಿದೆ. ಇದು ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶದ ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿದೆ.
ಈ ಬಗ್ಗೆ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಕೂಡ ವರದಿಯನ್ನು ಪ್ರಕಟಿಸಿದ್ದು, ಅದು ಇಲ್ಲಿದೆ.
Conclusion
ಭಾರತದಲ್ಲಿ ಮೆಡಿಕಲ್ ಪರೀಕ್ಷೆ, ಮೀಸಲಾತಿಯ ಕುರಿತ ತೀರ್ಮಾನಗಳು ಕೇಂದ್ರ ಸರ್ಕಾರ ನಿಯಂತ್ರಣದಲ್ಲಿದ್ದು, ಅದು ರಾಜ್ಯ ಮೆಡಿಕಲ್ ಕಾಲೇಜುಗಳಲ್ಲಿ ಅನ್ವಯವಾಗುವ ಮೀಸಲಾತಿ ಪ್ರಮಾಣವನ್ನು ಘೋಷಣೆ ಮಾಡಿದೆ. ಹೊರತಾಗಿ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ. ಮತ್ತು ಕೇಂದ್ರ ಸರ್ಕಾರದ ನಿರ್ಧಾರಗಳು ಎಲ್ಲ ಸರ್ಕಾರಿ ಮೆಡಿಕಲ್ ಕಾಲೇಜುಗಳಿಗೆ ಅನ್ವಯ ಮತ್ತು ಇದರಲ್ಲಿ ಯಾವುದೇ ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಹೇಳಿಲ್ಲ. ಇದರಿಂದ ಉತ್ತರ ಪ್ರದೇಶ ಸರ್ಕಾರ ಮೀಸಲಾತಿಯನ್ನು ರದ್ದುಮಾಡಿದೆ ಎನ್ನವುದು ತಪ್ಪಾಗುತ್ತದೆ.
Result: False
Our sources
Public notification by National Testing Agency, dated July 30, 2021
The announcement by the Ministry of Health and Family Welfare on the PIB, dated 2021 July 29
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.