Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?

ಯುರೋಪಿಯನ್ ದೇಶಗಳಿಂದ ಮುಸ್ಲಿಮರ ಹೊರದಬ್ಬುವಿಕೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ

Fact
17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರ ಹಾಕುವ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಆಶ್ರಯ ಮನವಿ ತಿರಸ್ಕೃತಗೊಂಡವರು ಮತ್ತು ಕಾನೂನು ಬಾರಹಿರವಾಗಿ ಪ್ರವೇಶಿಸಿದ ವಲಸಿಗರನ್ನು ಹೊರಹಾಕುವ ಪ್ರಕ್ರಿಯೆಗೆ ಐರೋಪ್ಯ ಒಕ್ಕೂಟದ ದೇಶಗಳು ಮುಂದಾಗಿವೆ ಎಂದು ಕಂಡುಬಂದಿದೆ.

17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಓದ್ದೋಡಿಸುವ ಪ್ರಕ್ರಿಯೆ ಆರಂಭ ಎನ್ನುವ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಈ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.

Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?

ಈ ಬಗ್ಗೆ ಸತ್ಯಶೋಧನೆ ಮಾಡುವಂತೆ ನ್ಯೂಸ್ ಚೆಕರ್ ಟಿಪ್ ಲೈನ್  (+91-9999499044)ಗೆ ಬಳಕೆದಾರರೊಬ್ಬರು ಮನವಿ ಮಾಡಿದ್ದು , ಅದನ್ನು ಸತ್ಯಶೋಧನೆಗಾಗಿ ಅಂಗೀಕರಿಸಲಾಗಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ.

17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆ ಎಂಬ ಬಗ್ಗೆ ಹೇಳಲು ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಪ್ರಸ್ತುತ ಪಡಿಸಲಾಗಿದೆ. ಇದರಲ್ಲಿ ಹಲವು ವೀಡಿಯೋ ಕ್ಲಿಪ್ಪಿಂಗ್ ಗಳಿವೆ.  ಸತ್ಯಶೋಧನೆಗಾಗಿ ನಾವು 2.31 ನಿಮಿಷದ ಈ ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ.

ವೀಡಿಯೋದಲ್ಲಿ ಪ್ರಮುಖವಾಗಿ ಮೊದಲ ಕೀಫ್ರೇಂನಲ್ಲಿರುವ ದೃಶ್ಯವನ್ನು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಬೆಲರಸ್‌ ಗಡಿಯಿಂದ ಪೋಲಂಡ್ ಗೆ ನುಗ್ಗಲು, ಈ ಮೂಲಕ ಯುರೋಪ್ ಪ್ರವೇಶಿಸಲು ವಲಸಿಗರು ಯತ್ನಿಸಿದಾಗ ನಡೆದ 2021ರ ಗಲಾಟೆ ಯ ದೃಶ್ಯ ಇದೆ. ಎರಡನೇ ದೃಶ್ಯದಲ್ಲೂ ಬೆಲರಸ್‌-ಪೋಲಂಡ್ ಗಡಿಯಲ್ಲಿ ಪೋಲಂಡ್ ಪೊಲೀಸರು ಮತ್ತು ವಲಸಿಗರ ನಡುವಿನ ಗಲಾಟೆಯ ದೃಶ್ಯ ಇದೆ.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಜೈಶಂಕರ್ ಅವರು ಜಿ 20 ಶೃಂಗಸಭೆ ಪ್ರದೇಶಕ್ಕೆ ತೆರಳುತ್ತಿರುವುದು, ಜರ್ಮನಿಯಿಂದ ಟರ್ಕಿಗೆ ಅಕ್ರಮ ವಲಸಿಗರನ್ನು ಕಳುಹಿಸುವ ವೀಡಿಯೋ, ಇಟೆಲಿಯ ಪ್ರಧಾನಿ ಜಾರ್ಜಿಯ ಮೆಲೊನಿ, ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟೆರೆಸ್ಟೆನ್, ಇಟಲಿಯಲ್ಲಿ ಹಮಾಸ್ ಪರವಿದ್ದ ಧರ್ಮಗುರು ಝುಲ್ಫೀಕರ್ ಖಾನ್, ಹಂಬರ್ಗ್ ನಲ್ಲಿರುವ ಇಸ್ಲಾಮಿಕ್ ಸೆಂಟರ್ ದೃಶ್ಯ ಮುಂತಾದುವುಗಳು ಇದರಲ್ಲಿವೆ.

ಆ ನಂತರ ಈ ವೀಡಿಯೋದ 0.22ನೇ ಸೆಕೆಂಡ್ ನಲ್ಲಿರುವ ದೃಶ್ಯದಲ್ಲಿ “A group of 17 European countries call for a ‘paradigm shift’ to deport rejected asylum seekers” ಎಂಬ ಸುದ್ದಿಯ ಸ್ಕ್ರೀನ್ ಶಾಟ್ ಹಾಕಿರುವುದನ್ನು ನಾವು ಗಮನಿಸಿದ್ದೇವೆ.  ಇದರ ಪ್ರಕಾರ, 17 ಯುರೋಪಿಯನ್ ರಾಷ್ಟ್ರಗಳ ಗುಂಪಿನಲ್ಲಿ ಆಶ್ರಯ ತಿರಸ್ಕೃತರಾದವರನ್ನು ಗಡೀಪಾರು ಮಾಡುವ ಬಗ್ಗೆ ಮಾದರಿ ಬದಲಾವಣೆಗೆ ಕರೆ ನೀಡಿದೆ ಎಂದಾಗಿದೆ.

Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?
ವೀಡಿಯೋದ 0.22 ಸೆಕೆಂಡ್ ನ ಸ್ಕೀನ್ ಶಾಟ್

ಈ ವೀಡಿಯೋದ 1.08ನೇ ನಿಮಿಷದ ದೃಶ್ಯದಲ್ಲಿ “The document was led by Austria and the Netherlands and endorsed by Croatia, the Czech Republic, Denmark, Finland, France, Germany, Greece, Italy, Luxembourg, Malta, Slovakia and Sweden. Norway, Switzerland and Liechtenstein, three non-EU member states part of the Schengen Area, also lent their signatures.” ಎಂಬ ಸುದ್ದಿಯ ಸ್ಕ್ರೀನ್ ಶಾಟ್ ಲಗತ್ತಿಸಲಾಗಿದೆ.  ಇದರ ಪ್ರಕಾರ ಪತ್ರವನ್ನು ಆಸ್ಟ್ರಿಯಾ ಮತ್ತು ನೆದರ್ಲ್ಯಾಂಡ್ಸ್ ಮುನ್ನಡೆಸಿದೆ ಮತ್ತು ಕ್ರೊಯೇಷಿಯಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಇಟಲಿ, ಲಕ್ಸೆಂಬರ್ಗ್, ಮಾಲ್ಟಾ, ಸ್ಲೋವಾಕಿಯಾ ಮತ್ತು ಸ್ವೀಡನ್ ಅನುಮೋದಿಸಿದೆ. ಷೆಂಗೆನ್ ಪ್ರದೇಶದ ಭಾಗವಾಗಿರುವ ಮೂರು ಐರೋಪ್ಯ ಒಕ್ಕೂಟವಲ್ಲದ ಸದಸ್ಯ ರಾಷ್ಟ್ರಗಳಾದ ನಾರ್ವೆ, ಸ್ವಿಟ್ಜರ್ಲೆಂಡ್ ಮತ್ತು ಲಿಚ್ಟೆನ್‌ಸ್ಟೈನ್ ಸಹ ತಮ್ಮ ಸಹಿಯನ್ನು ನೀಡಿವೆ ಎಂದಾಗಿದೆ.

ವೀಡಿಯೋದ 1.08ನೇ ನಿಮಿಷದ ಸ್ಕ್ರೀನ್ ಶಾಟ್

ಈ ಸುಳಿವನ್ನು ತೆಗೆದುಕೊಂಡು ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಯೂರೋ ನ್ಯೂಸ್‌ ಮಾಧ್ಯಮ ವರದಿ ಲಭ್ಯವಾಗಿದೆ. ಈ ವರದಿಯ ಭಾಗವನ್ನೇ ವೈರಲ್ ವೀಡಿಯೋದಲ್ಲಿ ಹಾಕಿರುವುದನ್ನು ನಾವು ಕಂಡುಕೊಂಡಿದ್ದೇವೆ.

ಅಕ್ಟೋಬರ್ 7, 2024ರ ಯೂರೋನ್ಯೂಸ್‌ ವರದಿ ಪ್ರಕಾರ, ಅರ್ಜಿಗಳನ್ನು ತಿರಸ್ಕರಿಸಿದ ಆಶ್ರಯ ಪಡೆಯುವವರ ಗಡೀಪಾರಾಗುವ ದರವನ್ನು ಸುಧಾರಿಸಲು ಯುರೋಪಿಯನ್ ಒಕ್ಕೂಟವು ಹೆಣಗಾಡುತ್ತಿದೆ. 17 ಯುರೋಪಿಯನ್ ರಾಷ್ಟ್ರಗಳ ಗುಂಪು ವಲಸೆ ನೀತಿಯಲ್ಲಿ “ಮಾದರಿ ಬದಲಾವಣೆ” ಗೆ ಕರೆ ನೀಡಿದ್ದು, ಆಶ್ರಯ ಬಯಸುವವರ ಅರ್ಜಿಗಳನ್ನು  ತಿರಸ್ಕರಿಸಿ, ತ್ವರಿತವಾಗಿ ಅವರನ್ನು ತಾಯ್ನಾಡಿಗೆ ಕಳುಹಿಸಲು ಹೇಳಿದೆ. ಈ ಹೊಸ ವಿಧಾನವು ರಿಟರ್ನ್ ಆರ್ಡರ್ ಅನ್ನು ಹಸ್ತಾಂತರಿಸುವವರಿಗೆ “ಪರಿಣಾಮಗಳನ್ನು” ಉಂಟುಮಾಡುತ್ತದೆ ಆದರೆ ಎಂದಿಗೂ ಖಂಡವನ್ನು ಬಿಡುವುದಿಲ್ಲ ಎನ್ನಲಾಗಿದೆ. ಉಳಿಯಲು ಹಕ್ಕಿಲ್ಲದ ಜನರು ಜವಾಬ್ದಾರರಾಗಿರಬೇಕು. ಹೊಸ ಕಾನೂನು ಅವರ ಕಟ್ಟುಪಾಡುಗಳು ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು” ಮತ್ತು ಅಸಹಾರದಿಂದ ಇರುವವರು ಪರಿಣಾಮವನ್ನೆದುರಿಸುವಂತಾಗಬೇಕು ಎಂದು ದೇಶಗಳು ಬಯಸಿದ್ದಾಗಿ ಯೂರೋನ್ಯೂಸ್‌ ಅಧಿಕೃತವಲ್ಲದ ಪತ್ರದಲ್ಲಿ ಬರೆದಿರುವುದನ್ನು ಗಮನಿಸಿದೆ. “ಮೂಲಭೂತ ಹಕ್ಕುಗಳಿಗೆ ಗೌರವ ನೀಡಿ” ಗಡೀಪಾರು ಮಾಡಲು ಅಧಿಕಾರ ನೀಡಬೇಕೆಂದು ಸರ್ಕಾರಗಳು ಬಯಸಿವೆ. ಈ ಪತ್ರ ಸಲ್ಲಿಕೆಯಲ್ಲಿ ಆಸ್ಟ್ರಿಯಾ ಮತ್ತು ನೆದರ್ಲ್ಯಾಂಡ್ಸ್ ಮುಂಚೂಣಿಯಲ್ಲಿದ್ದು, ಕ್ರೊಯೇಷಿಯಾ, ಜೆಕ್ ರಿಪಬ್ಲಿಕ್, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಇಟಲಿ, ಲಕ್ಸೆಂಬರ್ಗ್, ಮಾಲ್ಟಾ, ಸ್ಲೋವಾಕಿಯಾ ಮತ್ತು ಸ್ವೀಡನ್ ಅನುಮೋದಿಸಿದೆ. ಷೆಂಗೆನ್ ಪ್ರದೇಶದ ಭಾಗವಾಗಿರುವ ಮೂರು EU ಅಲ್ಲದ ಸದಸ್ಯ ರಾಷ್ಟ್ರಗಳಾದ ನಾರ್ವೆ, ಸ್ವಿಟ್ಜರ್ಲೆಂಡ್ ಮತ್ತು ಲಿಚ್ಟೆನ್‌ಸ್ಟೈನ್ ಕೂಡ ಇದಕ್ಕೆ ಸಹಿ ಹಾಕಿದೆ” ಎಂದಿದೆ.

Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?
ಯೂರೋ ನ್ಯೂಸ್‌ ವರದಿ

ಇದಕ್ಕೆ ಪೂರಕವಾಗಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಐರೋಪ್ಯ ಒಕ್ಕೂಟ ನಿರಾಶ್ರಿತರ ಕುರಿತಂತೆ ವಲಸೆ ನೀತಿಯಲ್ಲಿ ಬದಲು ಮಾಡುವ ಕುರಿತು ಮಾಧ್ಯಮ ವರದಿಗಳನ್ನು ಗಮನಿಸಿದ್ದೇವೆ.

ಅಕ್ಟೋಬರ್ 17, 2024ರ ಬಿಬಿಸಿ ವರದಿಯಲ್ಲಿ, “27 ಸದಸ್ಯ ರಾಷ್ಟ್ರಗಳ ನಾಯಕರು ವಲಸೆಯ ಮೇಲೆ ಕೇಂದ್ರೀಕರಿಸುವ ಐರೋಪ್ಯ ಒಕ್ಕೂಟ ಶೃಂಗಸಭೆಯನ್ನು ನಡೆಸುವುದರಿಂದ, ಅಲ್ಬೇನಿಯಾದಲ್ಲಿ ವಲಸಿಗರನ್ನು ಕಡಲಾಚೆಗೆ ಕಳಿಸುವ ಇಟಾಲಿಯನ್ ನೀತಿಯಿಂದ ಐರೋಪ್ಯ ಒಕ್ಕೂಟ “ಪಾಠಗಳನ್ನು ಕಲಿಯಬಹುದು ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ. ಬ್ರಸೆಲ್ಸ್ ಶೃಂಗಸಭೆ ನಿಗದಿಯಾಗಿರುವಂತೆ, ವಲಸಿಗರ ಗಡೀಪಾರು ಹೆಚ್ಚಿಸಲು ಶಾಸನಕ್ಕಾಗಿ ಹೊಸ ಪ್ರಸ್ತಾಪವನ್ನು ಐರೋಪ್ಯ ಒಕ್ಕೂಟದ ಕಾರ್‍ಯನಿವರ್ವಾಹಕರು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಲು ಅವರು ಐರೋಪ್ಯ ಒಕ್ಕೂಟ ನಾಯಕರಿಗೆ ಪತ್ರ ಬರೆದರು” ಎಂದಿದೆ.

Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?
ಬಿಬಿಸಿ ವರದಿ

ಡಿಸೆಂಬರ್ 11, 2024ರ ಇಟಿಯಾಸ್‌ ವರದಿಯಲ್ಲಿ, “ಐರೋಪ್ಯ ಒಕ್ಕೂಟ ತನ್ನ ವಲಸೆ ನಿಯಮಗಳನ್ನು ಕಠಿಣಗೊಳಿಸಲು ಯೋಜಿಸಿದ್ದು, ವೇಗವಾಗಿ ಗಡೀಪಾರು ಮಾಡುವುದರ ಮೇಲೆ ಗಮನವನ್ನು ಕೇಂದ್ರೀಕರಿಸಿದೆ. ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ನೇತೃತ್ವದಲ್ಲಿ, ಯುರೋಪಿಯನ್ ಕಮಿಷನ್ ಕಾನೂನುಬಾಹಿರವಾಗಿ ಪ್ರವೇಶಿಸುವ ವಲಸಿಗರನ್ನು ಗಡೀಪಾರುಗೊಳಿಸುವ ಪ್ರಕ್ರಿಯೆ ಸರಳಗೊಳಿಸಲು 2025ರ ಆರಂಭದಲ್ಲಿ ಹೊಸ ಕಾನೂನುಗಳನ್ನು ಪರಿಚಯಿಸಲು ಉದ್ದೇಶಿಸಲಾಗಿದೆ. ಸದಸ್ಯರಾಷ್ಟ್ರಗಳ ಬೇಡಿಕೆಗೆ ಇದು ಸ್ಪಂದನೆಯಾಗುವುದರೊಂದಿಗೆ  ವಲಸೆ ನೀತಿ ಮತ್ತು ಮಾನವ ಹಕ್ಕುಗಳ ಕುರಿತಾಗಿ ಕಳವಳವನ್ನು ಉಂಟುಮಾಡಿದೆ.” ಎಂದಿದೆ.

Fact Check: 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರಹಾಕಲಾಗುತ್ತಿದೆಯೇ?
ಇಟಿಯಾಸ್ ವರದಿ

ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.

ಈ ಎಲ್ಲ ವರದಿಗಳಲ್ಲಿ ನಿರ್ದಿಷ್ಟವಾಗಿ 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರ ಹಾಕುವ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ ಎಂದು ಬರೆದಿಲ್ಲ, ಬದಲಾಗಿ ಆಶ್ರಯ ಮನವಿ ತಿರಸ್ಕೃತಗೊಂಡವರನ್ನು, ಕಾನೂನು ಬಾರಹಿರವಾಗಿ ಪ್ರವೇಶಿಸಿದ ವಲಸಿಗರನ್ನು ಹೊರಹಾಕುವ ಪ್ರಕ್ರಿಯೆಗೆ ಚಿಂತನೆ ನಡೆದಿದೆ ಎಂದು ಕಂಡುಬಂದಿದೆ.

Conclusion

ಸತ್ಯಶೋಧನೆಯಲ್ಲಿ ಕಂಡುಬಂದಂತೆ 17 ಯುರೋಪಿಯನ್ ದೇಶಗಳಿಂದ ಮುಸ್ಲಿಮರನ್ನು ಹೊರ ಹಾಕುವ ಬಗ್ಗೆ ಪ್ರಕ್ರಿಯೆ ಆರಂಭವಾಗಿದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಆಶ್ರಯ ಮನವಿ ತಿರಸ್ಕೃತಗೊಂಡವರು ಮತ್ತು ಕಾನೂನು ಬಾರಹಿರವಾಗಿ ಪ್ರವೇಶಿಸಿದ ವಲಸಿಗರನ್ನು ಹೊರಹಾಕುವ ಪ್ರಕ್ರಿಯೆಗೆ ಐರೋಪ್ಯ ಒಕ್ಕೂಟದ ದೇಶಗಳು ಮುಂದಾಗಿವೆ ಎಂದು ಕಂಡುಬಂದಿದೆ.

Result: Missing Context

Our Sources
Report By euronews, Dated: October 7, 2024

Report By BBC, Dated: October 17, 2024

Report By Etias, Dated: December 11, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.