Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಾಕಿಸ್ತಾನ-ಅಫ್ಘಾನಿಸ್ತಾನ ನಡುವಿನ ಇತ್ತೀಚಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಹೇಳಿಕೆಗಳು ಹರಿದಾಡಿದ್ದವು. ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುಹಾಕಿದ ಅಫ್ಘಾನಿಸ್ತಾನ, ಅಫ್ಘಾನಿಸ್ತಾನದ ದಾಳಿಗೆ ಹೆದರಿ ಪಾಕಿಸ್ತಾನಿ ಸೈನಿಕನ ಅಳು, ಅಫ್ಘಾನಿಸ್ತಾನದಲ್ಲಿ ಹಿಂದೂ ದೇಗುಲ ನಿರ್ಮಾಣ ಎಂದು ಅಲ್ಲಿನ ವಿದೇಶಾಂಗ ಸಚಿವ ಭಾರತದ ಭೇಟಿ ವೇಳೆ ಹೇಳಿದ್ದಾರೆ ಎಂಬುದು ಇದರಲ್ಲಿ ಪ್ರಮುಖವಾಗಿತ್ತು. ಇದಲ್ಲದೆ ಗೋಡೆ ಮೇಲೆ ಹನುಮಂತನ ಚಿತ್ರ ಬಿಡಿಸಿದ ಕೋತಿ, ನೇಪಾಳದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಕಲ್ಲುತೂರಿದ್ದಕ್ಕಾಗಿ ಮಸೀದಿಗೆ ಬೆಂಕಿ,ರಕ್ತದ ಅವಶ್ಯಕತೆಗೆ “104” ಹೊಸ ಹೆಲ್ಪ್ ಲೈನ್ ಎಂಬ ಹೇಳಿಕೆಗಳು ಈ ವಾರ ಹರಿದಾಡಿವೆ. ಅವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದೆ. ಈ ವೇಳೆ ಇವುಗಳು ನಿಜವಲ್ಲ ಎಂದು ಕಂಡುಬಂದಿದೆ. ಈ ಕುರಿತ ವಾರದ ನೋಟ ಇಲ್ಲಿ ಓದಿ.

ನೇಪಾಳದಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಕಲ್ಲುತೂರಿದ್ದಕ್ಕಾಗಿ ಮಸೀದಿ ಮೇಲೆ ಬೆಂಕಿ ಹಾಕಿ ಮುಸ್ಲಿಂ ಸಮುದಾಯದ ಮೇಲೆ ಹಿಂದೂಗಳು ಸೇಡು ತೀರಿಸಿಕೊಂಡರು ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಜೆನ್ ಝಿ ಪ್ರತಿಭಟನಾಕಾರರು ಬಿರ್ಗುಂಜ್ ಮೇಯರ್ ರಾಜೇಶ್ ಮಾನ್ ಸಿಂಗ್ ಅವರ ಮನೆಗೆ ಬೆಂಕಿ ಹಚ್ಚಿದ ದೃಶ್ಯ ವನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುಹಾಕಿದ ಅಫ್ಘಾನಿಸ್ತಾನ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲಿಸಿದಾಗ, ಭಾರತದ ಮಿಗ್ 21 ವಿಮಾನ ಪತನದ ದೃಶ್ಯಾವಳಿಗಳೊಂದಿಗೆ ತಪ್ಪಾದ ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

2025 ರ ಅಕ್ಟೋಬರ್ನಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಗಡಿ ಸಂಘರ್ಷದ ನಂತರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಪಾಕಿಸ್ತಾನಿ ಸೈನಿಕನೊಬ್ಬ ಅಳುತ್ತಿರುವುದು ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ವೀಡಿಯೋ ಹಳೆಯದಾಗಿದ್ದು, ಇತ್ತೀಚಿನ ಸಂಘರ್ಷದ್ದಲ್ಲ, ವೀಡಿಯೋ ಬಲೂಚಿಸ್ತಾನದಿಂದ ಬಂದಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಅಫ್ಘಾನಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ನಿರ್ಮಾಣ ಮಾಡುವುದಾಗಿ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಹೇಳಿದ್ದಾರೆ ಎಂದು ವೀಡಿಯೋ ಒಂದು ವೈರಲ್ ಆಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ಮಾಡಿದಾಗ, ಇದು ನಿಜವಲ್ಲ, ಎಐ ವೀಡಿಯೋ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಕೋತಿಯೊಂದು ಗೋಡೆ ಮೇಲೆ ಹನುಮಂತನ ಚಿತ್ರವನ್ನು ಬಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದಾಗ, ಇದು ಎಐ ಮೂಲಕ ಮಾಡಲಾದ ವೀಡಿಯೋ ಎಂದು ಕಂಡುಬಂದಿದೆ. ಈ ವರದಿ ಇಲ್ಲಿ ಓದಿ

ಸರ್ಕಾರದ ಹೊಸ ಯೋಜನೆ ರಕ್ತದ ಅವಶ್ಯಕತೆಗೆ “104” ಹೊಸ ಹೆಲ್ಪ್ ಲೈನ್ ಗೆ ಕರೆ ಮಾಡಬಹುದು ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ಅಂತಹ ಯಾವುದೇ ಹೆಲ್ಪ್ ಲೈನ್ ಲಭ್ಯವಿಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ
Raushan Thakur
December 29, 2025
Ishwarachandra B G
December 13, 2025
Mohammed Zakariya
December 11, 2025