Fact Check: ಹಿಜಾಬ್‌ ತೆಗೆಯಲು ಹೇಳಿದ್ದಕ್ಕೆ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯಿತೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಹಿಜಾಬ್‌, ಸ್ಪೇನ್‌, ವೈದ್ಯರ ಮೇಲೆ ಹಲ್ಲೆ

Claim

ಸ್ಪೇನ್ ನಲ್ಲಿ ವೈದ್ಯರ ಮೇಲೆ ಹಲ್ಲೆ, ಹಿಜಾಬ್‌ ತೆಗೆಯಲು ಹೇಳಿದ್ದೇ ಕಾರಣ!

Fact
ಮಹಿಳೆಯ ವೈದ್ಯಕೀಯ ಪರೀಕ್ಷೆಗೆ ವೈದ್ಯರು ಮುಂದಾಗಿದ್ದಾಗ, ಅವರ ವಿರುದ್ಧ ಮಹಿಳೆಯ ಪತಿಯಿಂದ ಹಲ್ಲೆ ನಡೆದಿದೆ. ಆದರೆ ಇದು ಸ್ಪೇನ್‌ನಲ್ಲಿ ನಡೆದ ಘಟನೆಯಲ್ಲ, ಬದಲಾಗಿ ರಷ್ಯಾದಲ್ಲಿ ನಡೆದಿದ್ದು


ಹಿಜಾಬ್ ತೆಗೆಯಲು ಹೇಳಿದ್ದಾರೆಂದು, ವ್ಯಕ್ತಿಯೋರ್ವ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಟ್ವಿಟರ್ ನಲ್ಲಿ ಕಂಡುಬಂದ ಈ ಕ್ಲೇಮ್‌ನಲ್ಲಿ “ಹಿಜಾಬ್‌ನಿಂದಾಗಿ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯಿತು. ಮುಸ್ಲಿಂ ಮಹಿಳೆಯನ್ನು ಪರೀಕ್ಷಿಸಲು ಅವಳ ಹಿಜಾಬ್‌ ಅನ್ನು ತೆಗೆದು ಹಾಕಲು ವೈದ್ಯರು ಕೇಳಿದಾಗ ಆಕೆಯ ಪತಿ ಕೋಪಗೊಂಡು ವೈದ್ಯರಿಗೆ ಥಳಿಸಿದ್ದಾನೆ. ಇವರ ಹೆಣ್ಣುಮಕ್ಕಳು ಎಂದಿಗೂ ಕಲಿಯುವುದಿಲ್ಲ, ಗಂಡಸರು ತಮ್ಮ ವರ್ತನೆಯನ್ನು ಬಿಡುವುದಿಲ್ಲ!” ಎಂದು ಹೇಳಲಾಗಿದೆ. ಇದನ್ನು ಇಲ್ಲಿ ನೋಡಬಹುದು.

Fact Check: ಹಿಜಾಬ್‌ ತೆಗೆಯಲು ಹೇಳಿದ್ದಕ್ಕೆ ಸ್ಪೇನ್‌ನಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಯಿತೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಈ ಕುರಿತು ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು ಇದೊಂದು ತಪ್ಪು ಕ್ಲೇಮ್‌ ಎಂದು ಕಂಡುಕೊಂಡಿದೆ.

Fact Check/ Verification

ಸತ್ಯಶೋಧನೆಗಾಗಿ, ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌ ಅನ್ನು ಪಡೆದು ರಿವರ್ಸ್‌ ಇಮೇಜ್‌ ಸರ್ಚ್ ಗೆ ಒಳಪಡಿಸಲಾಗಿದೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಸೆಪ್ಟೆಂಬರ್‌ 23, 2018ರ ವೆಸ್ಟಿ.ಆರ್.ಯು ವರದಿಯ ಪ್ರಕಾರ, “ಚರ್ಮ ವೈದ್ಯರು ಹಿಜಾಬ್‌ಧಾರಿ ಮಹಿಳೆಯನ್ನು ಪರೀಕ್ಷೆ ಮಾಡಲು ಮುಂದಾಗಿದ್ದರಿಂದ ಹಲ್ಲೆಗೊಳಗಾಗಿದ್ದಾರೆ. ರಷ್ಯಾದ ನಿಝಾನೆವಾರ್‌ಟೋವಸ್ಕ್‌ ಎಂಬಲ್ಲಿ ವೈದ್ಯರು ಮಹಿಳೆಯೊಬ್ಬರನ್ನು ಪರೀಕ್ಷೆ ಮಾಡಿದ್ದು ಆ ನಂತರ ಆಕೆಯ ಪತಿ ಆಗಮಿಸಿ, “ಮಹಿಳೆಯ ಹೊಟ್ಟೆ ನೋಡಲು ನೀವು ಬಯಸುತ್ತೀರಾ?” ಎಂದು ಕೇಳಿ ಹಲ್ಲೆ ನಡೆಸಿದ್ದಾನೆ” ಎಂದಿದೆ. (ಗೂಗಲ್‌ ಟ್ರಾನ್ಸ್ ಲೇಟರ್ ಬಳಸಿ ಭಾಷಾಂತರಿಸಲಾಗಿದೆ)

Also Read: ಸೋನಿಯಾ ಗಾಂಧಿ ಜೊತೆಗೆ ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ, ಈ ವೈರಲ್ ಫೋಟೋ ನಿಜವೇ?

ಸೆಪ್ಟೆಂಬರ್‌ 28, 2021ರ ಕೊಮೊಸೊಮೊಲಸ್ಕ್ಯಾ ಪ್ರಾವ್ಡಾ ವರದಿ ಪ್ರಕಾರ, “ಪತ್ನಿಯನ್ನು ಪರೀಕ್ಷೆ ಮಾಡಿದ ವೈದ್ಯರೊಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಸೆ.21ರಂದು ನಡೆದ ಘಟನೆ ಇದಾಗಿದ್ದು, ತಜಕಿಸ್ತಾನ ಮೂಲದ ಬಕ್ರಿದ್ದೀನ್‌ ಅಜಿಮೋವ್‌ ಎಂಬಾತ ವ್ಲಾದಿಮಿರ್ ಝರ್ನೊಕ್ಲೀವ್‌ ಎಂಬ ಚರ್ಮರೋಗ ವೈದ್ಯರ ಮೇಲೆ ಮೇಲೆ ಹಲ್ಲೆ ಮಾಡಿದ್ದಾನೆ. ನಿಝಾನೆವಾರ್‌ಟೋವಸ್ಕ್‌ ಎಂಬಲ್ಲಿ ನಡೆದ ಘಟನೆಯಲ್ಲಿ, ವೈದ್ಯರ ಕ್ಲಿನಿಕ್‌ಗೆ ಮಹಿಳೆ ಬಂದಾಗ, ಹೊಟ್ಟೆ, ಕೈಗಳು, ಬೆನ್ನಿನ ಭಾಗವನ್ನು ತೋರಿಸಲು ಹೇಳಿದ್ದಾರೆ. ಆಕೆ ಮೊದಲು ಕೈಗಳನ್ನು ಮಾತ್ರ ತೋರಿಸಿದ್ದು, ಉಳಿದ ಭಾಗಗಳನ್ನು ತೋರಿಸಲು ನಿರಾಕರಿಸಿದ್ದಾಳೆ. ಬಳಿಕ ಆಕೆಗೆ ತಿಳಿವಳಿಕೆ ನೀಡಿ, ಇದು ವೈದ್ಯರ ಪರೀಕ್ಷೆಯ ಭಾಗ ಎಂದು ಹೇಳಲಾಗಿದೆ. ಇದರ ನಂತರ ಆಕೆಯ ಪತಿ ವೈದ್ಯರ ಬಳಿ ಬಂದು “ಮಹಿಳೆಯ ಹೊಟ್ಟೆ ನೋಡಲು ನೀವು ಇಚ್ಛಿಸುತ್ತೀರಾ” ಎಂದು ಕೇಳಿ ಹಲ್ಲೆ ನಡೆಸಿದ್ದಾನೆ” ಎಂದು ಹೇಳಿದೆ. ಈ ಘಟನೆಯ ಬಗ್ಗೆ ವೈದ್ಯರ ಹೇಳಿಕೆಯನ್ನೂ ಈ ವರದಿಯ ಜೊತೆಗೆ ವಿಡಿಯೋದಲ್ಲಿ ನೀಡಲಾಗಿದೆ. (ಗೂಗಲ್‌ ಟ್ರಾನ್ಸ್ ಲೇಟರ್ ಬಳಸಿ ಭಾಷಾಂತರಿಸಲಾಗಿದೆ)

ಹಿಜಾಬ್‌, ವೈದ್ಯರ ಮೇಲೆ ಹಲ್ಲೆ, ಸ್ಪೇನ್‌, ವೈರಲ್‌ ವೀಡಿಯೋ,  ಕೊಮೊಸೊಮೊಲಸ್ಕ್ಯಾ ಪ್ರಾವ್ಡಾ

ಸೆಪ್ಟೆಂಬರ್‌ 28, 2021ರ ಡೈಲಿಸ್ಟಾರ್‌ ವರದಿ ಪ್ರಕಾರ, “ರಷ್ಯಾದ ಸೈಬೀರಿಯಾದ ನಿಝಾನೆವಾರ್‌ಟೋವಸ್ಕ್‌ ಎಂಬಲ್ಲಿ ನಡೆದ ಘಟನೆಯಲ್ಲಿ ಚರ್ಮರೋಗ ವೈದ್ಯರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಬಕ್ರಿದ್ದೀನ್‌ ಅಜಿಮೋವ್‌ ಎಂಬಾತ ವೈದ್ಯರಾದ ವ್ಲಾದಿಮಿರ್ ಝರ್ನೊಕ್ಲೀವ್‌ ಎಂಬವರ ಮೇಲೆ ಹಲ್ಲೆ ಮಾಡಿದ್ದಾನೆ. ಬಕ್ರಿದ್ದೀನ್‌ ಪತ್ನಿ ವೈದ್ಯರನ್ನು ಸಂದರ್ಶಿಸಿದ್ದಾಗ ವೈದ್ಯರು ಆಕೆಯ ಚರ್ಮದ ಅನಾರೋಗ್ಯ ಹಿನ್ನೆಲೆಯಲ್ಲಿ ದೇಹದ ವಿವಿಧ ಭಾಗ, ಹೊಟ್ಟೆಯನ್ನು ತೋರಿಸಲು ಹೇಳಿದ್ದರು. ಈ ಬಗ್ಗೆ ಆಕೆ ಗಂಡನಲ್ಲಿ ಹೇಳಿದ್ದು, ಸ್ವಲ್ಪ ಸಮಯದ ನಂತರ ಆತ ಬಂದು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ.” ಎಂದಿದೆ.

ಹಿಜಾಬ್, ವೈದ್ಯರ ಮೇಲೆ ಹಲ್ಲೆ, ಡೈಲಿಸ್ಟಾರ್‌, ವೈರಲ್‌ ವೀಡಿಯೋ

Conclusion

ಈ ಸತ್ಯಶೋಧನೆಯ ಪ್ರಕಾರ, ಘಟನೆ ನಡೆದಿರುವುದು ರಷ್ಯಾದ ಸೈಬೀರಿಯಾದ ನಿಝಾನೆವಾರ್‌ಟೋವಸ್ಕ್‌ ಎಂಬಲ್ಲಿ ಆಗಿದ್ದು, 2021 ಸೆಪ್ಟೆಂಬರ್ ವೇಳೆ ಆಗಿದೆ. ಜೊತೆಗೆ ವೈದ್ಯರು ವೈದ್ಯಕೀಯ ಪರಿಶೀಲನೆ ವೇಳೆ ದೇಹದ ಭಾಗಗಳನ್ನು ತೋರಿಸಲು ಹೇಳಿದ್ದು, ಇದರ ವಿರುದ್ಧ ಹಲ್ಲೆ ನಡೆಸಲಾಗಿದೆ.  ಆದ್ದರಿಂದ ಈ ಕ್ಲೇಮ್‌ ಹೇಳಿಕೆ ತಪ್ಪಾಗಿದೆ.

Result: False

Our Sources:

Report published by Vesti.ru., Dated: September 23, 2021

Report published by Komsomolskaya Pravda, Dated: September 28, 2021

Report published by Dailystar, Dated: September 28, 2021


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.