Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ತೆಲಂಗಾಣದ ಮಂಚೇರಿಯಲ್ನ ಸೇಂಟ್ ಮದರ್ ತೆರೇಸಾ ಕ್ಯಾಥೋಲಿಕ್ ಶಾಲೆಯ ಪ್ರಾಂಶುಪಾಲ ಫಾದರ್ ರಾಮನ್ ಜೋಸೆಫ್ ಅವರ ಮೇಲೆ ಆರೆಸ್ಸೆಸ್ ಕಾರ್ಯಕರ್ತರ ಹಲ್ಲೆ
ಆರೆಸ್ಸೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎನ್ನುವುದು ನಿಜವಲ್ಲ. ಈ ವೀಡಿಯೋ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಜನರು ತಿಂಡಿ ಪ್ಯಾಕೆಟ್ಗಳನ್ನು ಲೂಟಿ ಮಾಡುತ್ತಿರುವುದಾಗಿದೆ
ಕ್ರಿಶ್ಚಿಯನ್ ಶಾಲೆಯ ಮೇಲೆ ಆರೆಸ್ಸೆಸ್ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ ಎಂದು ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಮಂಚೇರಿಯಲ್ನ ಸೇಂಟ್ ಮದರ್ ತೆರೇಸಾ ಕ್ಯಾಥೋಲಿಕ್ ಶಾಲೆಯ ಪ್ರಾಂಶುಪಾಲ ಫಾದರ್ ರಾಮನ್ ಜೋಸೆಫ್ ಅವರ ಮೇಲೆ ಹಿಂದುತ್ವ ಬೆಂಬಲಿಗರು ಹಲ್ಲೆ ನಡೆಸಿ ಬಲವಂತವಾಗಿ ಹಣೆಯ ಮೇಲೆ ತಿಲಕ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ವಿವಿಧ ಮಾಧ್ಯಮ ವರದಿಗಳು ಲಭ್ಯವಾಗಿವೆ ಆಜ್ ತಕ್ , ಯುಪಿ ತಕ್ , ಲೈವ್ ಹಿಂದೂಸ್ತಾನ್ ಮತ್ತು ಜೀ ಉತ್ತರ ಪ್ರದೇಶ ಉತ್ತರಾಖಂಡ್ನಂತಹ ಮಾಧ್ಯಮಗಳು ಈ ದೃಶ್ಯಗಳು ನವೆಂಬರ್ 25, 2025 ರಂದು ನಡೆದ ಸಾಮೂಹಿಕ ವಿವಾಹ ಸಮಾರಂಭದ್ದು ಎಂದು ವರದಿ ಮಾಡಿವೆ.
ನವೆಂಬರ್ 26 ರಂದು ನವ ಭಾರತ್ ಟೈಮ್ಸ್ ಮತ್ತು ಆಜ್ ತಕ್ ವರದಿ ಮಾಡಿದಂತೆ, ಉತ್ತರ ಪ್ರದೇಶ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಬ್ರಹ್ಮಾನಂದ ಇಂಟರ್ ಕಾಲೇಜಿನಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಒಟ್ಟು 402 ಜೋಡಿಗಳು ನೋಂದಾಯಿಸಿಕೊಂಡಿದ್ದು, ಈ ಸಂದರ್ಭದಲ್ಲಿ 380 ವಿವಾಹಗಳು ನಡೆದವು.
ನವಭಾರತ್ ಟೈಮ್ಸ್ ಪ್ರಕಾರ , ಆಹಾರ ಕೌಂಟರ್ಗಳಿಗೆ ಜನರು ಧಾವಿಸಿದಾಗ ಅವ್ಯವಸ್ಥೆ ಉಂಟಾಯಿತು. ನೂರಾರು ಜನರು ಸಿಹಿತಿಂಡಿಗಳು, ತಿಂಡಿಗಳು, ಚಿಪ್ಸ್ ಇತ್ಯಾದಿ ತೆಗೆದುಕೊಳ್ಳಲು ಮುಂದಾದರು, ಅಂತಿಮವಾಗಿ ಕೌಂಟರ್ಗಳಲ್ಲಿ ಇರಿಸಲಾಗಿದ್ದ ವಸ್ತುಗಳು ಸಂಪೂರ್ಣವಾಗಿ ಲೂಟಿಯಾದವು.
ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ಆಹಾರ ಮತ್ತು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು, ಆದರೆ ಜನಸಂದಣಿಯಿಂದಾಗಿ ಜನರು ಕೌಂಟರ್ ಗೆ ಲಗ್ಗೆ ಇಟ್ಟು ಆಹಾರ ವಸ್ತುಗಳನ್ನು ತೆಗೆದುಕೊಂಡು ಹೋದರು ಎಂದು ಪುರಸಭೆ ಅಧ್ಯಕ್ಷ ಶ್ರೀನಿವಾಸ್ ಬುಧೌಲಿಯಾ ಹೇಳಿದ್ದನ್ನು ವರದಿ ಮಾಡಲಾಗಿದೆ. ವಿವಾಹದ ವಿಧಿವಿಧಾನಗಳ ಬಳಿಕ ಈ ಘಟನೆ ನಡೆದಿದ್ದಾಗಿ ಅವರು ಹೇಳಿದ್ದಾರೆ.
ಏತನ್ಮಧ್ಯೆ, ನ್ಯೂಸ್ ಚೆಕರ್ ರಥ್ ಮುನ್ಸಿಪಲ್ ಕೌನ್ಸಿಲ್ ಸದಸ್ಯರನ್ನು ಸಂಪರ್ಕಿಸಿದಾಗ, ಅವರು ವೀಡಿಯೋ ಸಾಮೂಹಿಕ ವಿವಾಹ ಸಮಾರಂಭದದ್ದಾಗಿತ್ತು ಎಂದು ದೃಢಪಡಿಸಿದ್ದಾರೆ. ಮದುವೆ ಮುಗಿದು ಆಹಾರ ಬಡಿಸಿದ ಮೇಲೆ ಜನರು ಕೌಂಟರ್ಗಳಿಗೆ ನುಗ್ಗಿ ಚಿಪ್ಸ್, ಆಲೂ ಬೋಂಡಾಗಳು ಮತ್ತು ಇತರ ವಸ್ತುಗಳನ್ನು ತೆಗೆದುಕೊಂಡರು ಎಂದು ಅವರು ವಿವರಿಸಿದರು. ಸಮಾರಂಭದಲ್ಲಿ ಭಾಗವಹಿಸಿ ಆಹಾರ ಪ್ಯಾಕೆಟ್ಗಳನ್ನು ಲೂಟಿ ಮಾಡುತ್ತಿರುವ ಕೆಲವು ವ್ಯಕ್ತಿಗಳನ್ನೂ ಅವರು ಗುರುತಿಸಿದ್ದಾರೆ.
ತೆಲಂಗಾಣದಲ್ಲಿ ಕ್ಯಾಥೋಲಿಕ್ ಶಾಲೆ ಅಥವಾ ಅದರ ಸಿಬ್ಬಂದಿ ಮೇಲೆ ದಾಳಿ ನಡೆಸಿದ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ. ಆದಾಗ್ಯೂ, ಏಪ್ರಿಲ್ 2024 ರಲ್ಲಿ , ಮಂಚೇರಿಯಲ್ ಜಿಲ್ಲೆಯ ಮಿಷನರಿ ನಡೆಸುತ್ತಿರುವ ಶಾಲೆಯ ಮೇಲೆ ವಿದ್ಯಾರ್ಥಿಗಳು ಕೇಸರಿ ಧಾರ್ಮಿಕ ಉಡುಪು ಧರಿಸುವ ವಿವಾದದ ನಂತರ ದಾಳಿಯಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ನ ವರದಿಯ ಪ್ರಕಾರ, ಸಮವಸ್ತ್ರವಿಲ್ಲದೆ ತರಗತಿಗಳಿಗೆ ಹಾಜರಾಗಲು ಪೋಷಕರು ಪೂರ್ವಾನುಮತಿ ಪಡೆಯಬೇಕು ಎಂದು ಶಾಲೆಯು ವಿದ್ಯಾರ್ಥಿಗಳಿಗೆ ತಿಳಿಸಿತ್ತು. ಇದು ಘರ್ಷಣೆಗೆ ಕಾರಣವಾಯಿತು, ಇದರಲ್ಲಿ ಗ್ರಾಮಸ್ಥರ ಗುಂಪು ಕ್ಯಾಂಪಸ್ಗೆ ಪ್ರವೇಶಿಸಿತು ಮತ್ತು ಕೆಲವು ಪುರುಷರು ಪ್ರಾಂಶುಪಾಲ ಜೋಸೆಫ್ ಅವರನ್ನು ಸುತ್ತುವರೆದು, ಅವರ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಅವರ ಹಣೆಯ ಮೇಲೆ ತಿಲಕ ಹಚ್ಚಿದರು ಎಂದು ತಿಳಿದುಬಂದಿದೆ.
ಈ ಸತ್ಯಶೋಧನೆಯ ಪ್ರಕಾರ, ಕ್ರಿಶ್ಚಿಯನ್ ಶಾಲೆಯ ಮೇಲೆ ಆರೆಸ್ಸೆಸ್ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ ಎನ್ನುವುದು ನಿಜವಲ್ಲ. ವೀಡಿಯೋ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಜನರು ತಿಂಡಿ ಪ್ಯಾಕೆಟ್ಗಳನ್ನು ಲೂಟಿ ಮಾಡುತ್ತಿರುವುದಾಗಿದೆ.
FAQಗಳು
Q1. ವೈರಲ್ ಆಗಿರುವ ವೀಡಿಯೋ ಎಲ್ಲಿಯದ್ದು?
ಉತ್ತರ ಪ್ರದೇಶದ ಹಮೀರ್ಪುರ ಜಿಲ್ಲೆಯ ರಥ್ ಪಟ್ಟಣದಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ.
Q2. ವೀಡಿಯೋದಲ್ಲಿ ಕಾಣುವಂತೆ ಫಾದರ್ ರಾಮನ್ ಜೋಸೆಫ್ ಮೇಲೆ ಹಲ್ಲೆ ನಡೆದಿದೆಯೇ?
ಇಲ್ಲ. ವೀಡಿಯೋದಲ್ಲಿ ಕಾಣುವಂತೆ ಜನರು ಆಹಾರ ಪ್ಯಾಕೆಟ್ಗಳಿಗೆ ತಳ್ಳಾಟ ನಡೆಸುತ್ತಿರುವುದನ್ನು ಕಾಣಬಹುದು.
Q3. ಈ ಹಿಂದೆ ಸೇಂಟ್ ಮದರ್ ತೆರೇಸಾ ಶಾಲೆಯಲ್ಲಿ ದಾಳಿ ನಡೆದಿತ್ತೇ?
ಹೌದು. ಏಪ್ರಿಲ್ 2024 ರಲ್ಲಿ ಒಂದು ಘಟನೆ ನಡೆದಿತ್ತು. ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಆ ಘಟನೆಯದ್ದಲ್ಲ.
Our Sources
Report by Navbharat Times, Dated: November 26, 2025
Report by Aaj Tak, Dated: November 26, 2025
YouTube Video by UP Tak, Dated: November 27, 2025
YouTube Video Live Hindustan, Dated: November 26, 2025
YouTube Video by Zee Uttar Pradesh Uttarakhand, Dated: November 26, 2025
Report by The Indian Express, Dated: April 17, 2024
Report by NDTV, Dated: April 18, 2024
Vasudha Beri
October 24, 2025
Ishwarachandra B G
May 14, 2025
Ishwarachandra B G
March 8, 2025