Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು
ಹೆರಿಗೆಯ ಸಮಯದಲ್ಲಿ ತಾಯಿ ಸಾವನ್ನಪ್ಪಿದಾಗ ವೈದ್ಯರು ದುಃಖಿತರಾದರು ಎನ್ನುವುದು ಸುಳ್ಳು. ಒಂದು ಕಟ್ಟು ಕಥೆಗೆ ಸಂಬಂಧವೇ ಇಲ್ಲದ ಎರಡು ಪ್ರತ್ಯೇಕ ಫೋಟೋಗಳನ್ನು ಒಟ್ಟಿಗೆ ಹಂಚಿಕೊಳ್ಳಲಾಗುತ್ತಿದೆ
ಹೆರಿಗೆಯ ಸಂದರ್ಭದಲ್ಲಿ ತಾಯಿ ಸಾವನ್ನಪ್ಪಿದಾಗ, ಅದರಿಂದಾಗಿ ವೈದ್ಯರು ದುಃಖಿತರಾದರು ಎಂದು ಹೇಳಿ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಈ ಪೋಸ್ಟ್ ನಲ್ಲಿ, “…. ಮದುವೆಯಾದ ಹದಿನಾಲ್ಕು ವರ್ಷಗಳ ಬಳಿಕ ಮಗುವಿಗೆ ಜನ್ಮ ನೀಡಿ ತಾನು ಕೊನೆಯುಸಿರೆಳೆದ ಮಗುವಿನ ತಾಯಿ,ಅವ್ವನ ಕೊರಳಿಗೆ ಆತು ಅಳುವ ಕುಡಿ.ಅಸಹಾಯಕತೆಯಿಂದ ದುಃಖಿಸುತ್ತಿರುವ ವೈದ್ಯರು.” ಎಂದಿದೆ.

ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ, ಫೋಟೋದೊಂದಿಗೆ ಸುಳ್ಳು ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Also Read: ಕಥುವಾದಲ್ಲಿ ಮುಸ್ಲಿಮರು ಸಿಹಿತಿಂಡಿಗೆ ಉಚ್ಚೆ ಸಿಂಪಡಿಸಿ ಗ್ರಾಹಕರಿಗೆ ಕೊಡುತ್ತಿದ್ದರೇ?
ಸತ್ಯಶೋಧನೆಯ ಭಾಗವಾಗಿ ನಾವು ವೈರಲ್ ಫೋಟೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಈ ವೇಳೆ ನವಜಾತ ಶಿಶುವಿನೊಂದಿಗೆ ಮಹಿಳೆಯ ಚಿತ್ರದ ಮೇಲೆ ವಾಟರ್ಮಾರ್ಕ್ ಅನ್ನು ನ್ಯೂಸ್ಚೆಕರ್ ಗುರುತಿಸಿದೆ.

ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ನಂತರ, Merve Tiritoğlu Şengünler Photography ಎಂಬ ಫೇಸ್ಬುಕ್ ಪುಟದಲ್ಲಿ ಈ ವೈರಲ್ ಫೋಟೋವನ್ನು ನಾವು ನೋಡಿದ್ದೇವೆ. ಈ ಫೋಟೋವನ್ನು ಡಿಸೆಂಬರ್ 14, 2015 ರಂದು ‘ಅತ್ಯಂತ ಸುಂದರವಾದ ಪುನರ್ಮಿಲನ’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ಆ ನಂತರ ಫೋಟೋದಲ್ಲಿರುವ ವ್ಯಕ್ತಿಯ ಬಗ್ಗೆ ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಅದು ozgemetinphotography ಎಂಬ ಇನ್ಸ್ಟಾಗ್ರಾಮ್ ಪುಟದಲ್ಲಿ ಪತ್ತೆಯಾಗಿದೆ. ಈ ಚಿತ್ರವನ್ನು ಸೆಪ್ಟೆಂಬರ್ 5, 2017 ರಂದು ‘azı babalar o kadar güzel yaşıyor ki bu anları. ..Icimden iyi ki baba olmuş diyorum’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ, ಇದರರ್ಥ ‘ಕೆಲವು ತಂದೆಯಂದಿರು ಈ ಕ್ಷಣಗಳಲ್ಲಿ ತುಂಬಾ ಸುಂದರವಾಗಿ ಬದುಕುತ್ತಾರೆ. .. ಅವರು ತಂದೆಯಾದರು ಎಂದು ಹೇಳಲು ನನಗೆ ಸಂತೋಷವಾಗಿದೆ.’ ಎಂದಿದೆ.

ಈ ಸತ್ಯಶೋಧನೆಯ ಪ್ರಕಾರ, ಹೆರಿಗೆಯ ಸಮಯದಲ್ಲಿ ತಾಯಿಯ ಮರಣದಿಂದ ವೈದ್ಯರು ದುಃಖಿತರಾದರು ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು. ಚಿತ್ರದಲ್ಲಿರುವ ಮಹಿಳೆ ಸಾಯಲಿಲ್ಲ, ಮತ್ತು ಫೋಟೋದಲ್ಲಿರುವ ವ್ಯಕ್ತಿ ವೈದ್ಯನೂ ಅಲ್ಲ. ಈ ಫೋಟೋಗಳನ್ನು ವಿಭಿನ್ನ ಸಮಯದಲ್ಲಿ ಬೇರೆಯದ್ದೇ ಆದ ಸ್ಥಳಗಳಲ್ಲಿ ತೆಗೆಯಲಾಗಿದೆ ಮತ್ತು ಅದನ್ನು ಒಂದು ಕಟ್ಟುಕಥೆಯ ಮೂಲಕ ಚಿತ್ರಿಸಲಾಗಿದೆ ಎಂದು ತಿಳಿದುಬಂದಿದೆ.
Also Read: ಗಣೇಶ ಮೆರವಣಿಗೆ ವೇಳೆ ಮುಸ್ಲಿಮರು ಕಲ್ಲುತೂರಿದ್ದಾರೆಯೇ? ಈ ವೈರಲ್ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
Our Sources
Facebook Post by Merve Tiritoğlu Şengünler Photography, Dated: September 11, 2015
Instagram Post by ozgemetinphotography, Dated: September 5, 2017
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)