Authors
Claim
ಉತ್ತರ ಪ್ರದೇಶದ ಮದರಸಾ ಮೇಲೆ ನಡೆದ ಪೊಲೀಸ್ ದಾಳಿಯಲ್ಲಿ ಮೆಷಿನ್ ಗನ್ ಸಿಕ್ಕಿದೆ
Fact
ಉತ್ತರಪ್ರದೇಶದಲ್ಲಿ ಮದರಸಾ ಮೇಲಿನ ದಾಳಿ 2019ರಲ್ಲಿ ನಡೆದಿದ್ದಾಗಿದ್ದು, ಈ ಕುರಿತ ವರದಿಗಳಲ್ಲಿ ಪಿಸ್ತೂಲುಗಳು, ಬುಲೆಟ್ ಗಳನ್ನು ವಶಪಡಿಸಿಕೊಂಡ ವಿಚಾರಗಳು ಇವೆಯೇ ವಿನಾ, ಮೆಷಿನ್ ಗನ್ ಪತ್ತೆಯಾಗಿರುವ, ಪಶಪಡಿಸಿಕೊಂಡ ವಿಚಾರ ಕಂಡುಬಂದಿಲ್ಲ
ಉತ್ತರ ಪ್ರದೇಶದ ಮದರಸಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ ವೇಳೆ ಮೆಷಿನ್ ಗನ್ ಸೇರಿದಂತೆ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ಉತ್ತರ ಪ್ರದೇಶದ ಬಿಜ್ನೋರ್ ನ ಮದರಸಾ ಮೇಲೆ ನಡೆದ ದಾಳಿಯಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಪತ್ತೆ! 6 ಧರ್ಮಗುರುಗಳನ್ನು ಬಂಧಿಸಲಾಗಿದೆ ಕಾಳಜಿಯ ಅಂಶವೆಂದರೆ Lmg ಮೆಷಿನ್ ಗನ್ ಲಭ್ಯತೆ, ಒಂದು ನಿಮಿಷದಲ್ಲಿ ಎಂಟು ಸಾವಿರ ಸುತ್ತು ಗುಂಡು ಹಾರಿಸುವ ಸಾಮರ್ಥ್ಯ ಮೆಷಿನ್ ಗನ್! ಈ ಜನರ ತಯಾರಿಯನ್ನು ಅರ್ಥಮಾಡಿಕೊಳ್ಳಿ! ಹಿಂದೂಗಳೇ ಎದ್ದೇಳಿ, ಅವರೇ ನಿಮ್ಮ ಭವಿಷ್ಯವನ್ನು ನಿರ್ಧರಿಸಿದ್ದಾರೆ. ಮೋದಿ ಹೊರಡಲು ತಡವಾಗಿದೆ. ಈ ಸತ್ಯವನ್ನು ಪ್ರತಿಯೊಬ್ಬ ಹಿಂದೂ ಸಹೋದರರಿಗೂ ಹಂಚಿಕೊಳ್ಳಿ” ಎಂದಿದೆ.
Also Read: ಸೌದಿ ಅರೇಬಿಯಾದ ಮಸೀದಿಯಲ್ಲಿ ಇಫ್ತಾರ್ ಆಯೋಜನೆಗೆ ಹಾಗೂ ಆಜಾನ್‌ಗೆ ನಿಷೇಧ ಹೇರಲಾಗಿದೆಯೇ?
ಈ ಹೇಳಿಕೆಯ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದು, ಇದೊಂದು ತಪ್ಪಾದ ಸಂದರ್ಭ ಎಂದು ಕಂಡುಕೊಂಡಿದ್ದೇವೆ.
Fact Check/ Verification
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಜುಲೈ 11, 2019ರ ಇಂಡಿಯಾ ಟುಡೇ ವರದಿಯಲ್ಲಿ ಹೇಳಿರುವಂತೆ “ಉತ್ತರ ಪ್ರದೇಶದ ಬಿಜ್ನೂರ್ ಜಿಲ್ಲೆಯ ಶೆರಾಕೋಟ್ ಪ್ರದೇಶದ ಕಾಂಧ್ಲಾದ ದಾರುಲ್ ಖುರಾಮ್ ಹಮಿದಿಯಾ ಮದ್ರಸಾ ಮೇಲೆ ಪೊಲೀಸರು ಪೂರ್ವ ಮಾಹಿತಿಯನ್ವಯ ದಾಳಿ ನಡೆಸಿದ್ದಾರೆ ಎಂದಿದೆ. ಈ ವೇಳೆ ಮೂರು ಕಂಟ್ರಿ ಮೇಡ್ ಪಿಸ್ತೂಲ್ ಗಳು, ಒಂದು 32 ಬೋರ್ ಪಿಸ್ತೂಲ್, ಬುಲ್ಲೆಟ್ ಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿವೆ. ಶಸ್ತ್ರಾಸ್ತ್ರಗಳನ್ನು ಔಷಧ ಬಾಕ್ಸ್ ನಲ್ಲಿ ಬಚ್ಚಿಡಲಾಗಿತ್ತು ಎಂದು ಸರ್ಕಲ್ ಆಫೀಸರ್ ಕೃಪಾ ಶಂಕರ್ ಕನ್ನೂಜಿಯಾ ಹೇಳಿದ್ದಾರೆ” ಎಂದಿದೆ.
ಜುಲೈ 11, 2019ರ ಟೈಮ್ಸ್ ನೌ ವರದಿಯಲ್ಲಿ ಹೇಳಿರುವಂತೆ “ಉತ್ತರ ಪ್ರದೇಶದ ಬಿಜ್ನೋರ್ ನ ಮದರಸಾದಿಂದ ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಲ್ಲಿ 6 ಬಂದೂಕುಗಳು ಮತ್ತು ಅನೇಕ ಸುತ್ತು ಮದ್ದುಗುಂಡುಗಳು ಸೇರಿವೆ. ಗುಪ್ತಚರ ಇಲಾಖೆ ಮಾಹಿತಿದಾರರಿಂದ ಪಡೆದ ಸಂದೇಶದ ಆಧಾರದ ಮೇಲೆ ಪೊಲೀಸರು ಮದರಸಾದ ಮೇಲೆ ದಾಳಿ ನಡೆಸಿದರು. ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಔಷಧಿಯ ಪೆಟ್ಟಿಗೆಗಳಲ್ಲಿ ಅಡಗಿಸಿಡಲಾಗಿತ್ತು” ಎಂದಿದೆ.
Also Read: ಪ.ಬಂಗಾಳದಲ್ಲಿ ಹಿಂದೂ ದಂಪತಿ ಹೊಲಗದ್ದೆ ಕಡೆ ಹೋದಾಗ ಮುಸ್ಲಿಮರಿಂದ ಕಿರುಕುಳಕ್ಕೆ ಈಡಾಗುತ್ತಿದ್ದಾರೆಯೇ?
ಜುಲೈ 11, 2019ರ ಇಂಡಿಯಾ ಟಿವಿ ವರದಿಯಲ್ಲೂ “ಉತ್ತರ ಪ್ರದೇಶದ ಮದರಸಾ ಮೇಲೆ ದಾಳಿ ಶಸ್ತ್ರಾಸ್ತ್ರ ಪತ್ತೆ, 6 ಮಂದಿ ಬಂಧನ ಎಂದಿದೆ. ಇಲ್ಲೂ 3 ಕಂಟ್ರಿ ಮೇಡ್ ಪಿಸ್ತೂಲ್ ಗಳು, ಒಂದು 32 ಬೋರ್ ಪಿಸ್ತೂಲ್ ಮತ್ತು ದೊಡ್ಡ ಪ್ರಮಾಣದಲ್ಲಿ ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದಿದೆ.
ಈ ಕುರಿತು ಎಎನ್‌ಐ ಸುದ್ದಿಸಂಸ್ಥೆ ಜುಲೈ 11, 2019ರಂದು ಮಾಡಿದ ಟ್ವೀಟ್ ಇಲ್ಲಿದೆ.
ಮದರಸಾ ಮೇಲಿನ ದಾಳಿ ಕುರಿತ ವರದಿಗಳಲ್ಲಿ ಪಿಸ್ತೂಲುಗಳು, ಬುಲೆಟ್ ಗಳನ್ನು ವಶಪಡಿಸಿಕೊಂಡ ವಿಚಾರಗಳು ಇವೆಯೇ ವಿನಾ, ಮೆಷಿನ್ ಗನ್ ಪತ್ತೆಯಾಗಿರುವ, ಪಶಪಡಿಸಿಕೊಂಡ ವಿಚಾರ ಕಂಡುಬಂದಿಲ್ಲ.
Conclusion
ಈ ಸತ್ಯಶೋಧನೆಯ ಪ್ರಕಾರ ಉತ್ತರಪ್ರದೇಶದ ಮದರಸಾ ಮೇಲಿನ ದಾಳಿಯೊಂದರಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು 2019ರ ಸುದ್ದಿಯಾಗಿದೆ. ಪೊಲೀಸ್ ದಾಳಿಯಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾಗಿರುವುದು ಸತ್ಯವೇ ಆದರೂ, ಅಲ್ಲಿ ಮಷೀನ್ ಗನ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
Also Read: ಪೊಲೀಸರ ಮೇಲೆ ಖಡ್ಗದಿಂದ ಹಲ್ಲೆ ನಡೆಸಿದ ರೈತ ಪ್ರತಿಭಟನಕಾರರು?
Result: Missing Context
Our Sources:
Report By India Today, Dated: July 11, 2019
Report By Times Now, Dated: July 11, 2019
Report By India Tv, Dated: July 11, 2019
Tweet By ANI Dated: July 11, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.