Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಐ ಲವ್ ಮಹಾದೇವ್ ಅಭಿಯಾನದ ಮೂಲಕ ಯು.ಪಿ. ಪೊಲೀಸರಿಗೆ ಅಭಿನಂದನೆ ಸಲ್ಲಿಸಲಾಗಿದೆ
ಇಲ್ಲ, ಈ ಹೇಳಿಕೆ ಸುಳ್ಳು ರಾಜಸ್ಥಾನದ ವೀಡಿಯೋಕ್ಕೆ ಬೇರೆ ಧ್ವನಿಯನ್ನು ಸೇರಿಸಿ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ
ಐ ಲವ್ ಮಹಾದೇವ್ ಅಭಿಯಾನದ ಮೂಲಕ ಯು.ಪಿ. ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತಿರುವ ಹಿಂದೂ ಸಮಾಜ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಾಟ್ಸಾಪ್ ನಲ್ಲಿ ಈ ಸಂದೇಶ ಕಂಡುಬಂದಿದ್ದು, ವೈರಲ್ ವೀಡಿಯೋದಲ್ಲಿ ಹಲವಾರು ಮಂದಿ ಪಂಜಿನ ಮೆರವಣಿಗೆ ನಡೆಸುವುದು ಮತ್ತು “ಯುಪಿ ಪೊಲೀಸ್ ತುಮ್ ಲಠ್ ಬಜಾವೋ, ಹಮ್ ತುಮ್ಹರೆ ಸಾಥ್ ಹೈ” (ಯುಪಿ ಪೊಲೀಸ್, ಬಲಪ್ರಯೋಗ ಮಾಡಿ, ನಾವು ನಿಮ್ಮೊಂದಿಗಿದ್ದೇವೆ) ಎಂದು ಘೋಷಣೆ ಕೂಗುವುದನ್ನು ಕೇಳಬಹುದು.

ಸೆಪ್ಟೆಂಬರ್ 26 ರಂದು ಉತ್ತರ ಪ್ರದೇಶದ ಬರೇಲಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯು ಕಲ್ಲು ತೂರಾಟ, ಗಲಾಟೆ ಮತ್ತು ಪೊಲೀಸ್ ಲಾಠಿ ಚಾರ್ಜ್ ಸೇರಿದಂತೆ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾದ ನಂತರ ವೀಡಿಯೋ ವೈರಲ್ ಆಯಿತು. “ಐ ಲವ್ ಮಹಾದೇವ್” ಪೋಸ್ಟರ್ಗಳೊಂದಿಗೆ ಪ್ರತಿ-ಪ್ರಚಾರಗಳು ಹುಟ್ಟಲೂ ಕಾರಣವಾಯಿತು. ಇಂತಹ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಸರ್ಕಾರವನ್ನು ಬೆಂಬಲಿಸಲು ಹಿಂದೂ ಯುವಕರು ನಿಂತಿದ್ದಾರೆ ಎಂದು ಹೇಳಲು ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಗೂಗಲ್ ಲೆನ್ಸ್ನಲ್ಲಿ ಕೀಫ್ರೇಮ್ಗಳ ಹುಡುಕಾಟ ನಡೆಸಿದಾಗ ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಅದೇ ಕ್ಲಿಪ್ ಅಪ್ಲೋಡ್ ಆಗಿತ್ತು , ಇದನ್ನು ರಾಜಸ್ಥಾನದ ಜೈಪುರದಲ್ಲಿ ರಾಜಕಾರಣಿ ನರೇಶ್ ಮೀನಾ ಅವರ ಬೆಂಬಲಿಗರು ನಡೆಸಿದ ಪಂಜಿನ ಮೆರವಣಿಗೆ ಎಂದು ಹೇಳಲಾಗಿದೆ.

ಗೂಗಲ್ ನಕ್ಷೆ ಮೂಲಕ, ಜೈಪುರದ ಗೋಪಾಲಪುರ ಬೈಪಾಸ್ ರಸ್ತೆಯಲ್ಲಿ ಕಮಲಾ ಟವರ್ ಮತ್ತು ಲೆನ್ಸ್ಕಾರ್ಟ್ ಅಂಗಡಿಯನ್ನು ನಾವು ಗುರುತಿಸಿದ್ದೇವೆ. ಇದು ಸ್ಥಳವನ್ನು ದೃಢಪಡಿಸಿದೆ.

ನರೇಶ್ ಮೀನಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ, ಸೆಪ್ಟೆಂಬರ್ 25, 2025ರ ಫೇಸ್ಬುಕ್ ಲೈವ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ , ಅದು ವೈರಲ್ ವೀಡಿಯೋದಲ್ಲಿರುವ ದೃಶ್ಯಗಳಿಗೆ ಹೋಲಿಕೆಯಾಗುತ್ತಿರುವುದನ್ನೂ ಗಮನಿಸಿದ್ದೇವೆ.

ಎನ್ಡಿಟಿವಿ ರಾಜಸ್ಥಾನ , ರಾಜಸ್ಥಾನ ಪತ್ರಿಕಾ ಮತ್ತು ನವಭಾರತ್ ಟೈಮ್ಸ್ ಸೆಪ್ಟೆಂಬರ್ 25, 2025 ರಂದು ಜೈಪುರದಲ್ಲಿ ನಡೆದ ಪಂಜಿನ ಮೆರವಣಿಗೆಯ ಬಗ್ಗೆ ವರದಿ ಮಾಡಿದೆ.
ಜಲವರ್ನ ಪಿಪ್ಲೋಡಿ ಶಾಲಾ ದುರಂತದಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ 14 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನರೇಶ್ ಮೀನಾ ಅವರ ಬೆಂಬಲಿಗರು ಈ ರಾಲಿಯನ್ನು ಆಯೋಜಿಸಿದ್ದರು. ತ್ರಿವೇಣಿ ನಗರ ಚೌಕದಿಂದ ಜೈಪುರದ ಗುರ್ಜರ್ ಕಿ ಥಾಡಿವರೆಗೆ ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ನರೇಶ್ ಮೀನಾ ಮತ್ತು ಪಂಜಾಬ್ ಕೇಸರಿ ರಾಜಸ್ಥಾನದ ಫೇಸ್ಬುಕ್ ಪುಟಗಳಲ್ಲಿ ಹಂಚಿಕೊಂಡ ಲೈವ್ ವೀಡಿಯೋಗಳನ್ನು ಪರಿಶೀಲಿಸಿದಾಗ , “ಯುಪಿ ಪೊಲೀಸರೇ, ಬಲಪ್ರಯೋಗ ಮಾಡಿ, ನಾವು ನಿಮ್ಮೊಂದಿಗಿದ್ದೇವೆ” ಎಂಬ ಘೋಷಣೆ ಎಲ್ಲಿಯೂ ಕೇಳಿಸಲಿಲ್ಲ.
ತನಿಖೆಯ ಸಮಯದಲ್ಲಿ, X ಖಾತೆಯೊಂದರ ಪೋಸ್ಟ್ ನಲ್ಲಿ ಅದೇ ಘೋಷಣೆ ಕಂಡುಬಂದಿದೆ , ಅದರಲ್ಲಿ ಒಬ್ಬ ವ್ಯಕ್ತಿಯು ಅದನ್ನು ಹೇಳುತ್ತಿರುವುದನ್ನು ಕಾಣಬಹುದು. ಈ ವ್ಯಕ್ತಿಯನ್ನು ನಾವು ದೀಪಕ್ ಶರ್ಮಾ ಎಂದು ಗುರುತಿಸಿದ್ದೇವೆ. ಈ ಘೋಷಣೆಯನ್ನು NDTV ಸಹ ವರದಿ ಮಾಡಿದೆ .
ಈ ಆಡಿಯೋವನ್ನು ಸಂಪಾದಿಸಿ ಜೈಪುರ ಮೆರವಣಿಗೆಯ ವೀಡಿಯೋಗೆ ಸೇರಿಸಲಾಯಿತು, ಅನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು.
ವೈರಲ್ ಆಗಿರುವ ವಿಡಿಯೋ ಉತ್ತರ ಪ್ರದೇಶದದ್ದಲ್ಲ, ಬದಲಾಗಿ ರಾಜಸ್ಥಾನದ ಜೈಪುರದ್ದು ಎಂಬುದು ಸ್ಪಷ್ಟವಾಗಿದೆ. ನರೇಶ್ ಮೀನಾ ಅವರ ಬೆಂಬಲಿಗರು ನಡೆಸಿದ ಪಂಜಿನ ಮೆರವಣಿಗೆಯನ್ನು ಇದು ತೋರಿಸುತ್ತದೆ. ವೀಕ್ಷಕರನ್ನು ದಾರಿ ತಪ್ಪಿಸಲು ಈ ಘೋಷಣೆಯನ್ನು ನಂತರ ವೀಡಿಯೋದಲ್ಲಿ ಎಡಿಟ್ ಮಾಡಲಾಗಿದೆ.
Also Read: WEF ಶೃಂಗಸಭೆಯಲ್ಲಿ ‘ಸುಂದರ್ ಪಿಚೈ-ಟ್ರಂಪ್’ ಮಾತಿನ ಸಮರ ನಡೆದಿದೆಯೇ?
FAQಗಳು
ಪ್ರಶ್ನೆ 1. ವೈರಲ್ ಆಗಿರುವ ವೀಡಿಯೋ ಉತ್ತರ ಪ್ರದೇಶದದ್ದೇ?
ಇಲ್ಲ. ಇದನ್ನು ರಾಜಸ್ಥಾನದ ಜೈಪುರದ ಗೋಪಾಲಪುರ ಬೈಪಾಸ್ ರಸ್ತೆಯಲ್ಲಿ ಚಿತ್ರೀಕರಿಸಲಾಗಿದೆ.
ಪ್ರಶ್ನೆ 2. ಪಂಜಿನ ಮೆರವಣಿಗೆಯನ್ನು ಯಾರು ಆಯೋಜಿಸಿದ್ದರು?
ಜಲವರ್ನ ಪಿಪ್ಲೋಡಿ ಶಾಲೆಯ ದುರಂತ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ನರೇಶ್ ಮೀನಾ ಅವರ ಬೆಂಬಲಿಗರು ಇದನ್ನು ಆಯೋಜಿಸಿದ್ದರು.
ಪ್ರಶ್ನೆ 3. “ಯುಪಿ ಪೊಲೀಸ್, ಲಾತ್ ಬಜಾವೊ” ಎಂಬ ಘೋಷಣೆ ನಿಜವೇ?
ಇಲ್ಲ. ಆ ಘೋಷಣೆಯನ್ನು ಪ್ರತ್ಯೇಕ ವೀಡಿಯೊದಿಂದ ತೆಗೆದು ನಂತರ ವೈರಲ್ ವೀಡಿಯೋಗೆ ಸೇರಿಸಲಾಯಿತು.
ಪ್ರಶ್ನೆ 4. ಪಿಪ್ಲೋಡಿ ಶಾಲೆಯ ದುರಂತ ಯಾವುದು?
ಇದು ಜಲವರ್ನಲ್ಲಿ ಮಕ್ಕಳು ಪ್ರಾಣ ಕಳೆದುಕೊಂಡ ಘಟನೆಯಾಗಿದೆ. ನರೇಶ್ ಮೀನಾ ಅವರ ಪ್ರತಿಭಟನೆ ಮತ್ತು ಉಪವಾಸ ಸತ್ಯಾಗ್ರಹವು ಪೀಡಿತ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಮಾಡಲಾಗಿತ್ತು
Our Sources
Instagram Post by Rajasthan Meena Community, Dated: September 25, 2025
Instagram Post by Udaipurwati ki Jhalak, Dated: September 26, 2025
YouTube Shorts by Mukesh Meena, Dated: September 26, 2025
X Post by Deepak Sharma, Dated: September 27, 2025
Report by NDTV Rajasthan, Dated: September 25, 2025
Report by Rajasthan Patrika, Dated: September 26, 2025
Report by NavBharat Times, Dated: September 26, 2025
YouTube Shorts by NDTV, Dated: September 27, 2025
Report by Times of India, Dated: September 27, 2025
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 24, 2025
Kushel Madhusoodan
November 15, 2025
Vasudha Beri
November 12, 2025