Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಉತ್ತರ ಪ್ರದೇಶದಲ್ಲಿ ನಗದು ತುಂಬಿದ್ದ ಲಾರಿ ಪಲ್ಟಿಯಾಗಿ ನೋಟುಗಳ ಲೂಟಿ, ಸುಳ್ಯ ಸಂಪಾಜೆಯಲ್ಲಿ ಕಾಲು ಜಾರಿ ರಸ್ತೆಗೆ ಬಿದ್ದ ಆನೆ, ತೇಜಸ್ ಯುದ್ಧ ವಿಮಾನ ಬಗ್ಗೆ ವಾಯುಪಡೆ ಮುಖ್ಯಸ್ಥ ಎಪಿ ಸಿಂಗ್ ಟೀಕೆ, ಸೇನೆ ‘ಹಿಂದೂಯೇತರ’ ಸೈನಿಕರ ಸಂಖ್ಯೆ ಕಡಿಮೆ ಮಾಡಲಿದೆ ಎಂಬ ವೀಡಿಯೋಗಳು ಈ ವಾರ ಪ್ರಮುಖವಾಗಿ ಹರಿದಾಡಿದ್ದವು. ಸತ್ಯಶೋಧನೆ ನಡೆಸಿದಾಗ ಇವುಗಳು ಎಐ ವೀಡಿಯೋಗಳು ಎಂದು ತಿಳಿದುಬಂದಿವೆ. ಇದಲ್ಲದೆ, ದಲಿತ ವರನನ್ನು ಕುದುರೆಯಿಂದ ಇಳಿಸುವ ವೀಡಿಯೋ, ಉಚಿತ ವಿದ್ಯುತ್ ಪಡೆಯುತ್ತಿದ್ದ ಕಾಶ್ಮೀರಿ ಮುಸ್ಲಿಮರಿಂದ ಈಗ ಸ್ಮಾರ್ಟ್ ಮೀಟರ್ ವಿರುದ್ಧ ಪ್ರತಿಭಟನೆ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಜಾಮೀನು ಎಂಬ ವಿಚಾರಗಳೂ ವೈರಲ್ ಆಗಿದ್ದವು. ನ್ಯೂಸ್ ಚೆಕರ್ ಇವುಗಳ ಮೇಲೂ ತನಿಖೆ ನಡೆಸಿ ಇದು ನಿಜವಲ್ಲ ಎಂದು ಸಾಬೀತು ಪಡಿಸಿದೆ. ಈ ವೈರಲ್ ಕ್ಲೇಮ್ ಗಳ ಕುರಿತ ವಾರದ ನೋಟ ಇಲ್ಲಿದೆ

ಉತ್ತರ ಪ್ರದೇಶದಲ್ಲಿ ನಗದು ತುಂಬಿದ್ದ ಲಾರಿ ಪಲ್ಟಿಯಾಗಿ, ಅದರಲ್ಲಿದ್ದ ನೋಟುಗಳನ್ನು ಜನರು ಲೂಟಿ ಮಾಡಿದ್ದಾರೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ ಇದು ನಿಜವಲ್ಲ, ವೈರಲ್ ವೀಡಿಯೋ ಎಐ ನಿಂದ ಮಾಡಿದ್ದು ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಸುಳ್ಯ ಸಂಪಾಜೆ ರಸ್ತೆಯಲ್ಲಿ ಕಾಲು ಜಾರಿ ಆನೆ ಬಿದ್ದಿದೆ ಎಂದು ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ವೇಳೆ ಅಂತಹ ಘಟನೆಗಳು ನಡೆದಿಲ್ಲ. ಇದು ಎಐ ವೀಡಿಯೋ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ತೇಜಸ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಕಟುವಾಗಿ ಟೀಕಿಸಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೋ ಆನ್ಲೈನ್ನಲ್ಲಿ ಹರಿದಾಡುತ್ತಿದೆ. ತನಿಖೆ ನಡೆಸಿದಾಗ, ಇದು ನಿಜವಲ್ಲ ಎಐ ವೀಡಿಯೋ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಹಿಂದೂಯೇತರ ಸೈನಿಕರ ಸಂಖ್ಯೆಯನ್ನು 2028 ರ ವೇಳೆಗೆ 50% ಕ್ಕಿಂತ ಕಡಿಮೆ ಮಾಡುವ ಹೊಸ ನೀತಿಯನ್ನು ಸೇನಾ ಮುಖ್ಯಸ್ಥ (COAS) ಜನರಲ್ ಉಪೇಂದ್ರ ದ್ವಿವೇದಿ ಘೋಷಿಸುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸತ್ಯಶೋಧನೆ ಮಾಡಿದಾಗ ಇದು ಎಐನಿಂದ ಮಾಡಿದ ವೀಡಿಯೋ ಆಗಿದ್ದು ವೈರಲ್ ವೀಡಿಯೋ ಸುಳ್ಳು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಪೇಟ ಧರಿಸಿ ಕುದುರೆ ಮೇಲೆ ಕುಳಿತ ವ್ಯಕ್ತಿಯೊಬ್ಬನನ್ನು ಇಳಿಸುವ ವೀಡಿಯೋ ಒಂದು ವೈರಲ್ ಆಗಿದ್ದು, ದಲಿತ ವರನನ್ನು ಮೇಲ್ಜಾತಿಯ ಜನರು ಕುದುರೆಯಿಂದ ಇಳಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋ ಆಂಧ್ರಪ್ರದೇಶದ ಮಡ್ಡಿಕೇರಾ ಗ್ರಾಮದಲ್ಲಿ ಯಾದವ ಸಮುದಾಯದ ಕುಟುಂಬಗಳನ್ನು ಒಳಗೊಂಡ ಸಾಂಪ್ರದಾಯಿಕ ದಸರಾ ಕುದುರೆ ಓಟದ ಸಂದರ್ಭದ ವಿವಾದವಾಗಿದ್ದು, ವೈರಲ್ ಹೇಳಿಕೆ ತಪ್ಪಾಗಿದೆ ಎಂದು ನ್ಯೂಸ್ಚೆಕರ್ ಬಯಲು ಮಾಡಿದೆ. ಈ ವರದಿ ಇಲ್ಲಿ ಓದಿ

ಉಚಿತ ವಿದ್ಯುತ್ ಪಡೆಯುತ್ತಿದ್ದ ಕಾಶ್ಮೀರಿ ಮುಸ್ಲಿಮರು ಈಗ ಸ್ಮಾರ್ಟ್ ಮೀಟರ್ ಅಳವಡಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನಿಖೆ ನಡೆಸಿದಾಗ, ವೈರಲ್ ವೀಡಿಯೋ ಪ್ರಸ್ತಾವಿತ ವಿದ್ಯುತ್ ದರ ಏರಿಕೆ ವಿರುದ್ಧ ಪಿಡಿಪಿ ಮಹಿಳಾ ಮೋರ್ಚಾ ನಡೆಸಿದ ಪ್ರತಿಭಟನೆಯದ್ದಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 200 ಯುನಿಟ್ ಉಚಿತ ವಿದ್ಯುತ್ ಅಂತ್ಯೋದಯ ಫಲಾನುಭವಿಗಳಿಗೆ ಸೀಮಿತವಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ

ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಜಾಮೀನು ಪಡೆದು ಹೊರಬಂದಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. 2020ರಲ್ಲಿ ಪ್ರಕರಣವೊಂದರಲ್ಲಿ ಫಜಿಲ್ಕಾ ನ್ಯಾಯಾಲಯಕ್ಕೆ ಲಾರೆನ್ಸ್ ಬಿಷ್ಣೋಯ್ ಹಾಜರು ಪಡಿಸಲಾಗಿದ್ದ ವೇಳೆ ಚಿತ್ರೀಕರಿಸಿದ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
Ishwarachandra B G
November 28, 2025
Salman
October 6, 2025
Ishwarachandra B G
June 14, 2025