Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು
Fact
ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎಂದ ರಾಜಕಾರಣಿ ಬೃಜೇಶ್ ಕಾಳಪ್ಪ ಅವರ ಪೋಸ್ಟ್ 2019ರ ಚುನಾವಣಾ ಸಮಯದ್ದಾಗಿದೆ.
ಚಿತ್ರದುರ್ಗದಲ್ಲಿ ನಿನ್ನೆ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಯನ್ನು ಇಳಿಸಲಾಗಿದ್ದು ಅದಲ್ಲಿ ಏನಿದೆ ಎಂದು ಕೇಳಿದ ಮೆಸೇಜ್ ಒಂದು ವಾಟ್ಸಾಪ್ ನಲ್ಲಿ ವೈರಲ್ ಆಗಿದೆ. ರಾಜಕಾರಣಿ ಬೃಜೇಶ್ ಕಾಳಪ್ಪನವರು ಪ್ರಶ್ನಿಸಿದ ಈ ಫೇಸ್ ಬುಕ್ ಪೋಸ್ಟ್ ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಸತ್ಯಶೋಧನೆಗೆ ಉದ್ದೇಶಿಸಲಾಗಿದೆ.

ನ್ಯೂಸ್‌ಚೆಕರ್ ಈ ಪೋಸ್ಟ್ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಿದ್ದು, ಇದು ಒಂದು ಹಳೆ ಪೋಸ್ಟ್ ಎಂದು ಕಂಡುಕೊಂಡಿದೆ.
Also Read: ಲೋಕಸಭೆ ಚುನಾವಣೆಯಲ್ಲಿ 10 ರಾಜ್ಯಗಳಲ್ಲಿ ಐ.ಎನ್.ಡಿ.ಐ. ಬಣ ಮುನ್ನಡೆ? ಇಲ್ಲ, ವೈರಲ್ ಸುದ್ದಿ ನಕಲಿ
ಸತ್ಯಶೋಧನೆಗಾಗಿ ನಾವು ಫೇಸ್‌ಬುಕ್‌ನಲ್ಲಿ ಬೃಜೇಶ್ ಕಾಳಪ್ಪ ಅವರ ಫೇಸ್‌ಬುಕ್ ಖಾತೆಯಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಅವರ ಮೂಲ ಪೋಸ್ಟ್ ಲಭ್ಯವಾಗಿದೆ.
ಏಪ್ರಿಲ್ 13, 2019ರ ಈ ಪೋಸ್ಟ್ ನಲ್ಲಿ ಅವರು ಹೀಗೆ ಪ್ರಶ್ನಿಸಿದ್ದಾರೆ “ನಿನ್ನೆ ಚಿತ್ರದುರ್ಗದಲ್ಲಿ ಮೋದಿಯವರ ಹೆಲಿಕಾಪ್ಟರ್‌ನಿಂದ ನಿಗೂಢ ಪೆಟ್ಟಿಗೆಯನ್ನು ಇಳಿಸಲಾಯಿತು ಮತ್ತು ಅದನ್ನು ಖಾಸಗಿ ಇನ್ನೋವಾದಲ್ಲಿ ಲೋಡ್ ಮಾಡಲಾಗಿತ್ತು, ಅದು ವೇಗವಾಗಿ ಹೊರಟುಹೋಯಿತು. ಪೆಟ್ಟಿಗೆಯಲ್ಲಿ ಏನಿತ್ತು? EC ತನ್ನ ವಿಷಯಗಳನ್ನು ಏಕೆ ಪರಿಶೀಲಿಸಲಿಲ್ಲ? ಬಾಕ್ಸ್ ಭದ್ರತಾ ಪ್ರೋಟೋಕಾಲ್‌ನ ಭಾಗವಾಗಿರಲಿಲ್ಲ ಏಕೆ? ಆ ಇನ್ನೋವಾ ಪ್ರಧಾನಿಯವರ ಬೆಂಗಾವಲು ಪಡೆಯ ಭಾಗವಾಗಿರಲಿಲ್ಲ ಏಕೆ? ಚುನಾವಣಾ ಆಯೋಗವನ್ನು ತಪ್ಪಿಸಲು ಪ್ರಧಾನ ಮಂತ್ರಿಯವರೇ ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಹಣವನ್ನು ಸಾಗಿಸುತ್ತಿದ್ದಾರೆಯೇ?!” ಎಂದಿದ್ದಾರೆ. ಈ ಪೋಸ್ಟ್ ನೊಂದಿಗೆ ಒಂದು ಕಪ್ಪು ಪೆಟ್ಟಿಗೆಯನ್ನು ಸಾಗಿಸುತ್ತಿರುವ ವೀಡಿಯೋಗಳನ್ನೂ ಲಗತ್ತಿಸಿದ್ದಾರೆ.
ಇದನ್ನು ಗಮನಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಲಭ್ಯವಾಗಿವೆ.
ಏಪ್ರಿಲ್ 14, 2019ರ ಎಎನ್‌ಐ ವರದಿಯಲ್ಲಿ “ಕರ್ನಾಟಕದಲ್ಲಿ ಪ್ರಧಾನಿಯವರ ಹೆಲಿಕಾಪ್ಟರ್‌ನಿಂದ ನಿಗೂಢ ಪೆಟ್ಟಿಗೆಯನ್ನು ಇಳಿಸಲಾಗಿದೆ ಎನ್ನಲಾದ ಬಗ್ಗೆ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ” ಎಂದಿದೆ.

ಏಪ್ರಿಲ್ 16, 2019ರ ಎನ್‌ಡಿಟಿವಿ ವರದಿಯಲ್ಲಿ “ರಾಲಿಗೆ ತೆರಳುತ್ತಿದ್ದ ಪ್ರಧಾನಿ ಹೆಲಿಕಾಪ್ಟರ್ ನಲ್ಲಿ ಶಂಕಾಸ್ಪದಬಾಕ್ಸ್ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಆಗ್ರಹ” ಎಂದಿದೆ. ಈ ವರದಿಯಲ್ಲಿ ಚಿತ್ರದುರ್ಗದಲ್ಲಿ ಕಳೆದ ವಾರ ನಡೆದ ರಾಲಿ ಸಂದರ್ಭದಲ್ಲಿ ಹೆಲಿಕಾಪ್ಟರ್ ನಿಂದ ಕಾರಿಗೆ ಸಾಗಿಸಲಾದ ಬಾಕ್ಸ್ ಬಗ್ಗೆ ತನಿಖೆ ನಡೆಸಿ ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಆಗ್ರಹಿಸಿದೆ ಎಂದಿದೆ.
Also Read: ‘ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ’ ಎಂಬ ಹಳೆಯ ವಿವಾದಿತ ಹೇಳಿಕೆ ಹಂಚಿಕೆ

ನಿಗೂಢ ಬಾಕ್ಸ್ ಕುರಿತಾಗಿ ನಾವು ಇನ್ನಷ್ಟು ಶೋಧ ನಡೆಸಿದ್ದು, ಈ ಕುರಿತಾಗಿ ಆಗಿನ ಚಿತ್ರದುರ್ಗ ಎಸ್‌ಪಿ, ಜಿಲ್ಲಾಧಿಕಾರಿಯವರು ಸ್ಪಷ್ಟನೆ ನೀಡಿದ ವರದಿಗಳೂ ಲಭ್ಯವಾಗಿವೆ.
ಏಪ್ರಿಲ್ 15, 2019ರ ವಿಜಯ ಕರ್ನಾಟಕ ವರದಿಯಲ್ಲಿ, “ಪ್ರಧಾನಿ ಹೆಲಿಕಾಪ್ಟರ್‌ನಲ್ಲಿ ಇದ್ದಿದ್ದು ಭದ್ರತೆಗೆ ಸಂಬಂಧಿಸಿದ ಪೆಟ್ಟಿಗೆ: ಚಿತ್ರದುರ್ಗ ಡಿಸಿ, ಎಸ್ಪಿ ಸ್ಪಷ್ಟನೆ” ಎಂದಿದೆ. ಪ್ರಧಾನಿ ಅವರ ಭದ್ರತೆ ಹಾಗೂ ಲಾಜಿಸ್ಟಿಕ್‌ಗೆ ಸಂಬಂಧಿಸಿದ ವಸ್ತುಗಳಿದ್ದ ಪೆಟ್ಟಿಗೆ ಅದಾಗಿತ್ತು. ಅದನ್ನು ಹೆಲಿಪ್ಯಾಡ್‌ನಿಂದ ವೇದಿಕೆಗೆ ತರಲಾಗಿತ್ತು. ನಂತರ ಅದನ್ನು ಮೈಸೂರಿಗೆ ಒಯ್ಯಲಾಯಿತು. ಹೆಲಿಪ್ಯಾಡ್‌ನಿಂದ ತಂದ ಪೆಟ್ಟಿಗೆಯನ್ನು ಇನೋವಾ ಕಾರಿನಲ್ಲಿ ತಂದು ಇರಿಸಲಾಗಿತ್ತು. ಅದು ಭದ್ರತೆಗೆ ಸಂಬಂಧಿಸಿದ ವಸ್ತುಗಳಿದ್ದ ಪೆಟ್ಟಿಗೆ ಎಂಬುದು ಖಾತ್ರಿಯಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಎಂದಿದೆ.
ಏಪ್ರಿಲ್ 15, 2024ರ ಪ್ರಜಾವಾಣಿ ವರದಿಯಲ್ಲಿ, “ಕಪ್ಪು ಪೆಟ್ಟಿಗೆ, ಹೆಲಿಕಾಪ್ಟರ್ ಪರಿಶೀಲಿಸಿಲ್ಲ: ಜಿಲ್ಲಾ ಚುನಾವಣಾಧಿಕಾರಿ” ಎಂದಿದೆ. ಚಿತ್ರದುರ್ಗದ ನರೇಂದ್ರ ಮೋದಿ ಸಮಾವೇಶಕ್ಕೆ ಕಪ್ಪು ಬಣ್ಣದ ಪೆಟ್ಟಿಗೆ ಹೊತ್ತು ಬಂದಿದ್ದ ಹೆಲಿಕಾಪ್ಟರ್ ಪರಿಶೀಲನೆ ಮಾಡಿಲ್ಲ. ಇದಕ್ಕೆ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಅವಕಾಶ ನೀಡಿರಲಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದರು. ಹೆಲಿಕಾಪ್ಟರ್ ಸೇರಿ ಎಲ್ಲ ವಾಹನ ತಪಾಸಣೆ ಮಾಡುವಂತೆ ವಿಚಕ್ಷಣಾ ದಳಕ್ಕೆ ಸೂಚನೆ ನೀಡಲಾಗಿತ್ತು. ಮೋದಿ ಅವರನ್ನು ಕರೆತಂದ ಹೆಲಿಕಾಪ್ಟರ್ ಪರಿಶೀಲಿಸಲು ಎಸ್‌ಪಿಜಿ ನಿರಾಕರಿಸಿತು. ಭಯೋತ್ಪಾದಕರಿಂದ ಜೀವ ಬೆದರಿಕೆ ಎದುರಿಸುತ್ತಿರುವ ರಾಜಕೀಯ ನಾಯಕರು ಹಾಗೂ ಪ್ರಧಾನಿ ಅವರ ಹೆಲಿಕಾಪ್ಟರ್ ತಪಾಸಣೆಗೆ ಚುನಾವಣಾ ಆಯೋಗ ವಿನಾಯಿತಿ ನೀಡಿರುವುದು ಬಳಿಕ ತಿಳಿಯಿತು ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು ಎಂದಿದೆ.
ಇದರೊಂದಿಗೆ ನಾವು ಪ್ರಧಾನಿ ಮೋದಿ ಇತ್ತೀಚಿಗೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದಾರೆಯೇ ಎಂದು ಪರಿಶೀಲಿಸಿದ್ದೇವೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಹೊರತು ಪಡಿಸಿ ಅವರು ಆ ಬಳಿಕ ಚಿತ್ರದುರ್ಗಕ್ಕೆ ಭೇಟಿ ನೀಡಿಲ್ಲ ಎಂದು ತಿಳಿದುಬಂದಿದೆ.
ಈ ಪುರಾವೆಗಳ ಪ್ರಕಾರ, ಚಿತ್ರದುರ್ಗದಲ್ಲಿ ನಿನ್ನೆ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಯನ್ನು ಇಳಿಸಲಾಗಿದೆ ಎಂದು ರಾಜಕಾರಣಿ ಬೃಜೇಶ್ ಕಾಳಪ್ಪ ಅವರ ಪೋಸ್ಟ್ 2019 ಏಪ್ರಿಲ್‌ನ ಚುನಾವಣಾ ಸಮಯದ್ದಾಗಿದೆ. ಜೊತೆಗೆ ಇತ್ತೀಚೆಗೆ ಯಾವುದೇ ಚುನಾವಣಾ ರಾಲಿಗೆ ಪ್ರಧಾನಿ ಮೋದಿ ಅವರು ಚಿತ್ರದುರ್ಗಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.
Also Read: ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆಯೇ?
Our Sources
Report By ANI, Dated: April 14, 2019
Report By NDTV, Dated: April 16, 2019
Report By Vijayakarnataka, Dated: April, 15, 2019
Report By Prajavani, Dated: April 15, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.