Fact check: ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?

ಕೊಚ್ಚಿ ಲುಲು ಮಾಲ್‌, ಭಾರತ, ಪಾಕಿಸ್ಥಾನ ಧ್ವಜ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ

Fact
ಐಸಿಸಿ ವಿಶ್ವಕಪ್‌ ಕ್ರಿಕೆಟ್ ಪಂದ್ಯಾಟದ ಆರಂಭದ ವೇಳೆ ಕೊಚ್ಚಿಯ ಲುಲು ಮಾಲ್‌ ನಲ್ಲಿ ಸಮಾನ ಎತ್ತರದಲ್ಲಿ ಒಂದೇ ಆಕಾರವನ್ನು ಹೊಂದಿದ ವಿವಿಧ ದೇಶಗಳ ಧ್ವಜಗಳನ್ನು ಹಾಕಲಾಗಿದೆ

ಕೇರಳದ ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕಿಂತ ದೊಡ್ಡದಾದ ಪಾಕಿಸ್ಥಾನದ ಧ್ವಜವನ್ನು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳು ಹರಿದಾಡಿವೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮಿನಲ್ಲಿ “ ಕೇರಳದ ಕೊಚ್ಚಿನ್‌ ಲೂಲು ಮಾಲ್ ನಲ್ಲಿ ಪಾಪಿ ಪಾಕಿಸ್ತಾನದ ಧ್ವಜ ಭಾರತದ ಧ್ವಜಕ್ಕಿಂತಲೂ ಎರಡು ಪಟ್ಟು ದೊಡ್ಡದು ಹಾಕಲಾಗಿದೆ ಲೂಲು ಮಾಲಿನ ಮಾಲೀಕ ಯೂಸುಫ್ ಆಲಿ ಪಾಪಿ ಪಾಕಿಸ್ತಾನದ ಭಯೋತ್ಪಾದಕರಿಗೆ ಹುಟ್ಟಿದವನೆ..? ಒಂದು ಕಡೆ ಭಾರತದ ಗಡಿಯಲ್ಲಿ ಪಾಪಿ ಪಾಕಿಸ್ತಾನದ ಭಯೋತ್ಪಾದಕರು ಗಡಿ ದಾಟುವ ಪ್ರಯತ್ನ.. ಇನ್ನೊಂದು ಕಡೆ ಭಾರತದಲ್ಲಿ ವಿಶ್ವ ಕಪ್ ಹೆಸರಿನಲ್ಲಿ ಪಾಪಿ ಪಾಕಿಸ್ತಾನದ ಮೇಲಿನ ಪ್ರೀತಿ ಅಂತರಿಕ ಭಯೋತ್ಪಾದಕರಿಂದ ತೋರ್ಪಡಿಕೆ..” ಎಂದಿದೆ.

Also Read: ಅಮರ್ತ್ಯ ಸೇನ್ ಅವರು ನಿಧನರಾಗಿದ್ದಾರೆ ಎನ್ನುವ ಪೋಸ್ಟ್ ನಿಜವೇ?

Fact check: ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?

ಇದೇ ರೀತಿಯ ಹೇಳಿಕೆಗಳನ್ನು ನಾವು ಇಲ್ಲಿ, ಇಲ್ಲಿ ನೋಡಿದ್ದೇವೆ.

ಈ ಕುರಿತು ನ್ಯೂಸ್ ಚೆಕರ್‌ ಸತ್ಯಶೋಧನೆ ನಡೆಸಿದ್ದು, ಈ ಹೇಳಿಕೆ ತಪ್ಪಾದ ಸಂದರ್ಭ ಎಂದು ಕಂಡುಕೊಂಡಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಪೋಸ್ಟ್ ನಲ್ಲಿರುವ ಫೋಟೋಗಳನ್ನು ಗಮನಿಸಿದ್ದೇವೆ. ಈ ವೇಳೆ ಫೋಟೋವನ್ನು ಒಂದು ಕೋನದಿಂದ ತೆಗೆದಿರುವುದು ತಿಳಿದುಬಂದಿದೆ. ಮತ್ತು ಇಂತಹ ಫೊಟೋಗಳಲ್ಲಿ ಸಾಮಾನ್ಯವಾಗಿ ಎದುರಿನ ಆಕೃತಿಗಳು ದೊಡ್ಡದಾಗಿ ಇರುವಂತೆ ಗೋಚರಿಸುತ್ತದೆ.

ಆದಾಗ್ಯೂ ಹೆಚ್ಚಿನ ಶೋಧನೆಗಾಗಿ ನಾವು ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಮಾಧ್ಯಮ ವರದಿ ಲಭ್ಯವಾಗಿದೆ.

ಪಾಕಿಸ್ಥಾನದ ಧ್ವಜವನ್ನು ಭಾರತದ ಧ್ವಜಕ್ಕಿಂತ ಎತ್ತರದಲ್ಲಿ ಹಾರಿಸಲಾಗಿದೆ ಎಂಬ ಬಗ್ಗೆ ಲುಲು ಮಾಲ್‌ ಸ್ಪಷ್ಟನೆ ನೀಡಿದ್ದಾಗಿ ಅಕ್ಟೋಬರ್ 10, 2023ರಂದು ಏಷ್ಯಾನೆಟ್ ನ್ಯೂಸ್‌ ಮಲಯಾಳ ವರದಿ ಮಾಡಿದೆ. ವಿಶ್ವಕಪ್‌ ಹಿನ್ನೆಲೆಯಲ್ಲಿ ಪಂದ್ಯ ಶುರುವಾಗುವ ದಿನ ವಿವಿಧ ದೇಶಗಳ ಧ್ವಜಗಳನ್ನು ಹಾಕಲಾಗಿದ್ದು. ಪಾಕಿಸ್ಥಾನದ ಧ್ವಜ ಮಾತ್ರ ದೊಡ್ಡದಾಗಿವೆ ಎಂಬುದು ತಪ್ಪು ಮಾಹಿತಿ ಎಂದು ಹೇಳಿದೆ. ಅಲ್ಲದೇ ಇವುಗಳು ಒಂದೇ ಅಳತೆ ಮತ್ತು ಎತ್ತರದ್ದಾಗಿದೆ. ಮಾಲ್ ನ ಮೇಲ್ಭಾಗ ಮತ್ತು ಕೆಳ ಮಹಡಿಯಿಂದ ನೋಡಿದಾಗ, ಧ್ವಜಗಳ ಅಳತೆ ಭಿನ್ನವಾಗಿ ಕಂಡಿದ್ದಾಗಿದೆ ಎಂದು ಅದು ಹೇಳಿದೆ. (ಮಲಯಾಳದಿಂದ ಅನುವಾದಿಸಲಾಗಿದೆ)

Also Read: ಸನ್ಮಾನ ತಿರಸ್ಕರಿಸಿ ಅಹಂಕಾರ ತೋರಿಸಿದ ಸಿಎಂ ಸಿದ್ದರಾಮಯ್ಯ ಎಂಬುದು ನಿಜವೇ?

Fact check: ಕೊಚ್ಚಿ ಲುಲು ಮಾಲ್‌ ನಲ್ಲಿ ಭಾರತಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?

ಇದನ್ನು ಗಮನಿಸಿ ನಾವು ಕೊಚ್ಚಿಯ ಲುಲು ಮಾಲ್‌ಗೆ ಕರೆ ಮಾಡಿದ್ದೇವೆ. ಈ ವೇಳೆ ಅವರು ಪ್ರತಿಕ್ರಿಯಿಸಿ ಪಾಕಿಸ್ಥಾನದ ದೊಡ್ಡ ಧ್ವಜ ಹಾಕಲಾಗಿದ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.  ಅಲ್ಲದೇ ವಿವಿಧ ದೇಶಗಳ ಧ್ವಜಗಳನ್ನು ವಿಶ್ವಕಪ್‌ ಕ್ರಿಕೆಟ್ ಹಿನ್ನೆಲೆಯಲ್ಲಿ ಹಾಕಲಾಗಿದ್ದು, ಒಂದೇ ಅಳತೆ ಮತ್ತು ಎತ್ತರದ್ದಾಗಿತ್ತು ಎಂದು ಹೇಳಿದ್ದಾರೆ.

ಇನ್ನೂ ಹೆಚ್ಚಿನ ಮಾಹಿತಿಗೆ ನಾವು ಲುಲು ಮಾಲ್‌ ತಿರುವನಂತಪುರದ ಮಾಧ್ಯಮ ಸಂಯೋಜಕ,  ಮಿಥುನ್‌ ಸುರೇಂದ್ರನ್‌ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ “ವಿಶ್ವಕಪ್ ಕ್ರಿಕೆಟ್ ಅಂಗವಾಗಿ ಕೊಚ್ಚಿಯ ಲುಲು ಮಾಲ್ ನಲ್ಲಿ ಕ್ರಿಕೆಟ್ ಪಂದ್ಯದ ಆರಂಭದ ದಿನವೇ ಆಯಾ ದೇಶಗಳ ಧ್ವಜ ಹಾರಿಸಲಾಗಿತ್ತು. ಮಾಲ್‌ ಮಧ್ಯದಲ್ಲಿ ವಿವಿಧ ದೇಶಗಳ ಧ್ವಜಗಳನ್ನು ಒಂದೇ ಮಟ್ಟದಲ್ಲಿ ನೇತು ಹಾಕಲಾಗಿತ್ತು. ಧ್ವಜದ ಫೋಟೋವನ್ನು ಮೇಲಿನಿಂದ ಮತ್ತು ಬದಿಯಿಂದ ತೆಗೆದಾಗ ಬದಿಯ ಧ್ವಜಗಳು ದೊಡ್ಡದಾಗಿ ಕಾಣುತ್ತವೆ. ಕೆಳಗಿನಿಂದ ನೋಡಿದಾಗ ಒಂದೇ ರೀತಿಯದ್ದಾಗಿವೆ ಎಂದು ಗೊತ್ತಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಕಂಡುಬರುತ್ತಿರುವ ಹೇಳಿಕೆಗಳು ಸುಳ್ಳು.  ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಇಂತಹ ಸುದ್ದಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ದಯವಿಟ್ಟು ಇಂತಹ ತಪ್ಪು ಮತ್ತು ಸುಳ್ಳು ಪ್ರಚಾರದಿಂದ ದೂರವಿರಬೇಕು” ಎಂದು ಅವರು ಹೇಳಿದ್ದಾರೆ.

ಜೊತೆಗೆ ನ್ಯೂಸ್‌ಚೆಕರ್ ನೊಂದಿಗೆ ಅವರು ಧ್ವಜಗಳ ಫೊಟೋಗಳನ್ನೂ ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ.

Conclusion

ಈ ಸತ್ಯಶೋಧನೆ ಪ್ರಕಾರ, ಕೊಚ್ಚಿಯ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕಿಂತ ದೊಡ್ಡದಾದ ಪಾಕಿಸ್ಥಾನದ ಧ್ವಜವನ್ನು ಹಾಕಲಾಗಿದೆ ಎಂಬ ಹೇಳಿಕೆ ತಪ್ಪಾದ ಸಂದರ್ಭವಾಗಿದೆ.

Result: Missing Context

Our Sources

Report By Asianet News Malayalam, Dated: October 10, 2023

Conversation with Lulu Mall Kochi Authority

Conversation with Mithun Surendran, Media Coordinator, LuLu Mall Trivandrum

(With inputs from Sabloo Thomas)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.