Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಯೋಧ್ಯೆಯ ರಾಮ ಮಂದಿರ ಎಂದು ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿದೆ.
ಸಂಪೂರ್ಣ ನಿರ್ಮಾಣಗೊಂಡ ಮಂದಿರದ ರೀತಿ ಇರುವ ವೀಡಿಯೋನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದೆ. ಆ ಪ್ರಕಾರ ಇದು ರಾಮ ಮಂದಿರವಲ್ಲ ಗುಜರಾತ್ ನ ಕೋದಲ್ ಧಾಮ್ ಮಂದಿರ ಎಂದು ಗೊತ್ತಾಗಿದೆ.
ಸತ್ಯಶೋಧನೆಗಾಗಿ ನಾವು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಒಂದು ಬೋರ್ಡ್ ಬರಹವನ್ನು ಪತ್ತೆ ಮಾಡಿದ್ದೇವೆ.
ಗೂಗಲ್ ಟ್ರಾನ್ಸ್ ಲೇಟ್ ನೆರವಿನೊಂದಿಗೆ ನಾವು ಇದನ್ನು ಪತ್ತೆ ಹಚ್ಚಿದ್ದು ಕೋದಲ್ ಧಾಮ್ ಎಂದು ಬರೆದಿದೆ ಎಂದು ಮನಗಂಡಿದ್ದೇವೆ.
ಇದರೊಂದಿಗೆ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಇದು ಫಲಿತಾಂಶಗಳು ಲಭ್ಯವಾಗಿದ್ದು ಇದು ಗುಜರಾತ್ ನಲ್ಲಿರುವ ಕೋದಲ್ ಧಾಮ್ ಎಂಬ ದೇವಸ್ಥಾನ ಎಂದು ಗೊತ್ತಾಗಿದೆ.
Foggy_fog ಹೆಸರಿನ ಯೂಟ್ಯೂಬ್ ಚಾನೆಲ್ ನಲ್ಲಿ 5 ಜನವರಿ 2024ರಂದು ಶಾರ್ಟ್ಸ್ ವೀಡಿಯೋವನ್ನು ಅಪ್ ಲೋಡ್ ಮಾಡಲಾಗಿದ್ದು, ಇದು ಕೋದಲ್ ಧಾಮ ದೇಗುಲದ ಡ್ರೋನ್ ಶಾಟ್ ಎಂದು ಹೇಳಲಾಗಿದೆ. ಈ ವೀಡಿಯೋ ವೈರಲ್ ವೀಡಿಯೋದ ರೀತಿಯದ್ದೇ ದೇಗುಲವನ್ನು ತೋರಿಸುತ್ತದೆ.
ಇದರೊಂದಿಗೆ ವೈರಲ್ ವೀಡಿಯೋದಲ್ಲಿ ಅಸ್ಪಷ್ಟವಾಗಿ ಕಾಣುತ್ತಿರುವ ಇನ್ಸ್ಟಾ ಗ್ರಾಂ ಖಾತೆಯ ವಾಟರ್ ಮಾರ್ಕ್ ಅನ್ನು ನಾವು ಶೋಧಿಸಿದ್ದು, keyurposhiya.official ನಲ್ಲಿರುವ ಡಿಸೆಂಬರ್ 17, 2023ರ ವೀಡಿಯೋವನ್ನು ಶೋಧಿಸಿದ್ದೇವೆ. ಇದರಲ್ಲಿ ಬಳಕೆದಾರರು ಕೋದಲ್ ಧಾಮ್ ದೇಗುಲ ಎಂದು ಹೆಸರಿದ್ದನ್ನೂ ನೋಡಿದ್ದೇವೆ.
ಇವುಗಳನ್ನು ಸಾಕ್ಷ್ಯವಾಗಿರಿಸಿ ನಾವು ಗೂಗಲ್ ನಲ್ಲಿ ಸರ್ಚ್ ನಡೆಸಿದ್ದೇವೆ. ಈ ವೇಳೆ ಗುಜರಾತಿನ ಕಾಗ್ವಾಡದಲ್ಲಿರುವ ಕೋದಲ್ ಧಾಮ್ ದೇಗುಲದ ವೆಬ್ ಸೈಟ್ ಲಭ್ಯವಾಗಿದೆ.
ಆ ಪ್ರಕಾರ ಇದೊಂದು ದೇವಿ ದೇಗುಲವಾಗಿದ್ದು, 2017ರಲ್ಲಿ ದೇಗುಲ ಉದ್ಘಾಟನೆಗೊಂಡಿದೆ ಎಂದು ಗೊತ್ತಾಗಿದೆ. ಗೂಗಲ್ ಮೂಲಕವೂ ನಾವು ಈ ದೇಗುಲವನ್ನು ಶೋಧಿಸಿದ್ದು, ಇದನ್ನು ಇಲ್ಲಿ ನೋಡಬಹುದು.
ಇದರೊಂದಿಗೆ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಕುರಿತ ಇತ್ತೀಚಿನ ವರದಿ ಇಲ್ಲಿದೆ.
ಆದ್ದರಿಂದ ಈ ಸತ್ಯಶೋಧನೆಗಳ ಪ್ರಕಾರ ಇದು ಅಯೋಧ್ಯೆಯ ರಾಮ ಮಂದಿರವಲ್ಲ ಬದಲಾಗಿ ಗುಜರಾತ್ನ ಕೋದಲ್ಧಾಮ್ ದೇಗುಲ ಎಂದು ತಿಳಿದುಬಂದಿದೆ.
Our Sources
YouTube Shorts By Foggy_Fog, Dated: January 5, 2024
Instagram Reels By keyurposhiya.official, Dated: December 17, 2023
Website of Khodaldhamtrust
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Runjay Kumar
July 3, 2025
Vasudha Beri
June 13, 2025
Ishwarachandra B G
May 30, 2025