Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅಯೋಧ್ಯೆ ರಾಮ ಮಂದಿರದಲ್ಲಿ ದೀಪಾವಳಿ
ಚೀನದ ಗುವಾಂಗ್ಕ್ಸಿಯಲ್ಲಿ ನಡೆದ ಸಾಂಸ್ಕೃತಿಕ ಹಬ್ಬದ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
ಅಯೋಧ್ಯೆ ರಾಮ ಮಂದಿರದಲ್ಲಿ ದೀಪಾವಳಿ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಈ ವೀಡಿಯೋ ಕಂಡುಬಂದಿದೆ. ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ, ಚೀನದ ಎರಡು ವರ್ಷ ಹಳೆಯ ವೀಡಿಯೋವನ್ನು ಅಯೋಧ್ಯೆ ಹೆಸರಿನಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.

ಈ ವರ್ಷವೂ ಅಯೋಧ್ಯೆಯಲ್ಲಿ ದೀಪಾವಳಿ ಅಂಗವಾಗಿ ವಾರ್ಷಿಕ ದೀಪೋತ್ಸವ ನಡೆದಿದ್ದು, ವಿಶ್ವ ದಾಖಲೆ ಸೃಷ್ಟಿಸಿದೆ. 26 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಲಾಗಿದ್ದು, ಇದನ್ನು ಗಿನ್ನೆಸ್ ದಾಖಲೆಗೆ ಸೇರಿಸಿದೆ. ಇತಿಹಾಸದಲ್ಲಿ ದಾಖಲಾದ ಅತಿದೊಡ್ಡ ಏಕ-ಸ್ಥಳ ದೀಪ ಬೆಳಗುವಿಕೆ ಎಂದು ಅಧಿಕಾರಿಗಳು ಈ ಕಾರ್ಯಕ್ರಮವನ್ನು ಬಣ್ಣಿಸಿದ್ದಾರೆ. ಈ ಕುರಿತ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಸತ್ಯಶೋಧನೆಗಾಗಿ ನ್ಯೂಸ್ ಚೆಕರ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಈ ವೇಳೆ ಹಲವು ಫಲಿತಾಂಶಗಳು ಕಂಡುಬಂದಿದ್ದು, ವೀಡಿಯೋ ಚೀನಾದ ಗುವಾಂಗ್ಸಿಯ ನಾನಿಂಗ್ ನದ್ದು ಎಂದು ತಿಳಿದುಬಂದಿದೆ.
ಚೀನ ಮೂಲದ vjshi.com ಎಂಬ ವೆಬ್ ಸೈಟ್ ನಲ್ಲಿ ಡಿಸೆಂಬರ್ 29, 2023ರಂದು ಮಾಡಿರುವ ಪೋಸ್ಟ್ ನಲ್ಲಿ ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಕಂಡುಬಂದಿದ್ದು, ಚೀನದ ಗುವಾಂಗ್ಕ್ಸಿ ನಾನಿಂಗ್ ಮಾರುಕಟ್ಟೆ ಎಂದು ಹೇಳಲಾಗಿದೆ. (ಚೀನಿ ಭಾಷೆಯಿಂದ ಅನುವಾದಿಸಲಾಗಿದೆ) ಇದರ ಕೀಫ್ರೇಮ್ಗಳನ್ನು ವೈರಲ್ ವೀಡಿಯೋದ ಕೀಫ್ರೇಂಗಳಿಗೆ ಹೋಲಿಕೆಯಾಗುವುದನ್ನು ಕಂಡಿದ್ದೇವೆ.

ಸಿಸಿಟಿವಿ ನ್ಯೂಸ್ ಜನವರಿ 17, 2024ರಂದು ಮಾಡಿರುವ ಪೋಸ್ಟ್ ನಲ್ಲಿ, “ದೀಪಗಳು ಬೆಳಗುತ್ತಿದ್ದಂತೆ, ಗುವಾಂಗ್ಕ್ಸಿಯ “ನ್ಯಾನಿಂಗ್ ನೈಟ್” ಜಿಲ್ಲೆಯು ಬೆರಗುಗೊಳಿಸುವ ದೀಪಗಳು ಮತ್ತು ಬಣ್ಣಗಳ ಬೆರಗುಗೊಳಿಸುವ ಪ್ರದರ್ಶನದಿಂದ ಹೊಳೆಯುತ್ತದೆ, ಇದು ಅದ್ಭುತವಾದ “ಸಾಂಸ್ಕೃತಿಕ ಹಬ್ಬ”ವನ್ನು ಪ್ರಸ್ತುತಪಡಿಸುತ್ತದೆ. ಈ ರಾತ್ರಿಯ ಬೀದಿ ಜಿಲ್ಲೆಯು ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಪಾಕಪದ್ಧತಿಯನ್ನು ಸಂಯೋಜಿಸುತ್ತದೆ. ಇಲ್ಲಿ, ಅದರ ರೋಮಾಂಚಕ ವಾತಾವರಣ ಮತ್ತು ಸಾಂಸ್ಕೃತಿಕ ಶೈಲಿಯೊಂದಿಗೆ, ನಿವಾಸಿಗಳು ಮತ್ತು ಪ್ರವಾಸಿಗರು ಸಾಂಪ್ರದಾಯಿಕ ಮತ್ತು ಜನಾಂಗೀಯ ಸಂಸ್ಕೃತಿಯಲ್ಲಿ ಭಾಗಿಯಾಗಿದ್ದಾರೆ ಮತ್ತು ಗುವಾಂಗ್ಕ್ಸಿಯ ಭೂದೃಶ್ಯದ ಸೌಂದರ್ಯವನ್ನು ಸವಿಯಬಹುದಾಗಿದೆ” (ಚೀನಿ ಭಾಷೆಯಿಂದ ಅನುವಾದಿಸಲಾಗಿದೆ) ಎಂದಿದೆ. ಇದರೊಂದಿಗೆ ವೀಡಿಯೋ ಕೂಡ ನೀಡಲಾಗಿದ್ದು, ಅದರ ಕೀಫ್ರೇಮ್ ಗಳು ವೈರಲ್ ವೀಡಿಯೋ ಜೊತೆಗೆ ಹೋಲಿಕೆಯಾಗುವುದನ್ನು ಗಮನಿಸಬಹುದು.



difang.gmw.cn ಹೆಸರಿನ ಇನ್ನೊಂದು ವೆಬ್ ಸೈಟ್ ಕೂಡ ಜನವರಿ 17, 2024ರಂದು ಇದು ಗುವಾಂಗ್ಸಿಯ ನಾನಿಂಗ್ ಮಾರುಕಟ್ಟೆಯಲ್ಲಿ ಸಂಸ್ಕೃತಿಕ ಹಬ್ಬದ ವೀಡಿಯೋ ಎಂದು ಸಿಸಿಟಿವಿ ನ್ಯೂಸ್ ಉಲ್ಲೇಖಿಸಿ ವರದಿ ಮಾಡಿದೆ.
ಆದ್ದರಿಂದ ಈ ಶೋಧನೆಗಳ ಪ್ರಕಾರ, ಇದು ಚೀನದ ಗುವಾಂಗ್ಸಿಯ ಸಾಂಸ್ಕೃತಿಕ ಹಬ್ಬವೊಂದರ ವೀಡಿಯೋ ಆಗಿದ್ದು, ಅಯೋಧ್ಯೆಯಲ್ಲಿ ದೀಪಾವಳಿಯ ಸಂದರ್ಭದ್ದಲ್ಲ ಎಂದು ಗೊತ್ತಾಗಿದೆ.
Also Read: ಪಾಕಿಸ್ತಾನದ ಯುದ್ಧ ವಿಮಾನವನ್ನ ಹೊಡೆದುಹಾಕಿದ ಆಫ್ಘಾನಿಸ್ತಾನ, ವೈರಲ್ ವೀಡಿಯೋ ನಿಜವೇ?
Our Sources
Report by vjshi.com, Dated: December 29, 2023
Report by CCTV News Dated: January 17, 2024
Report by difang.gmw.cn Dated: January 17, 2024
Ishwarachandra B G
September 17, 2025
Ishwarachandra B G
June 17, 2025
Ishwarachandra B G
May 30, 2025