Fact Check
ಕ್ರಿಶ್ಚಿಯನ್ ಶಾಲೆ ಮೇಲೆ ಆರೆಸ್ಸೆಸ್ ಕಾರ್ಯಕರ್ತರ ದಾಳಿ, ಅಯೋಧ್ಯೆಯಲ್ಲಿ ಧ್ವಜಾರೋಹಣ ಬಳಿಕ ಕಪಿ ಆಗಮನ, ವಾರದ ನೋಟ
ಕ್ರಿಶ್ಚಿಯನ್ ಶಾಲೆ ಮೇಲೆ ಆರೆಸ್ಸೆಸ್ ಕಾರ್ಯಕರ್ತರ ದಾಳಿ, ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಬಳಿಕ ಕಪಿ ಆಗಮನ, ಸಿದ್ಧರಾಮಯ್ಯ-ಡಿಕೆಶಿ ಜಗ್ಗಾಟದ ಮಧ್ಯೆ ಡಿಕೆ ಶಿವಕುಮಾರ್-ಚಂದ್ರಬಾಬು ನಾಯ್ಡು ಭೇಟಿಯ ಫೋಟೋ, ಇಮ್ರಾನ್ ಖಾನ್ ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನಕ್ಕೆ ವಿನಂತಿ, ಅಸಾದುದ್ದೀನ್ ಓವೈಸಿಯಿಂದ ಹನುಮಾನ್ ಮೂರ್ತಿಗೆ ಆರತಿ ಎಂಬ ಹೇಳಿಕೆಗಳು ಈ ವಾರಲ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ಸುಳ್ಳು ಎಂದು ನಿರೂಪಿಸಿದೆ.

ಸಿದ್ಧರಾಮಯ್ಯ-ಡಿಕೆಶಿ ಜಗ್ಗಾಟದ ಮಧ್ಯೆ ಡಿಕೆ ಶಿವಕುಮಾರ್-ಚಂದ್ರಬಾಬು ನಾಯ್ಡು ಭೇಟಿಯ ಹಳೆಯ ವಿಡಿಯೋ ವೈರಲ್
ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಅಧಿಕಾರ ಹಂಚಿಕೆ ಕುರಿತಂತೆ ಕಾಂಗ್ರೆಸ್ ನಾಯಕರಾದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಮಧ್ಯೆ ಗುದ್ದಾಟಗಳು ನಡೆದಿರುವಂತೆಯೇ, ಡಿಕೆ ಶಿವಕುಮಾರ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರನ್ನು ಸ್ವಾಗತಿಸುತ್ತಿರುವುದನ್ನು ತೋರಿಸುವ ವೀಡಿಯೋ ವೈರಲ್ ಆಗಿದೆ. ಆದರೆ ಇದು 2023ರ ವೀಡಿಯೋ ಆಗಿದ್ದು, ಯಾವುದೇ ರಾಜಕೀಯ ಹಿನ್ನೆಲೆಯ ಭೇಟಿ ಅಲ್ಲ, ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಇಬ್ಬರೂ ನಾಯಕರು ಸಿಕ್ಕಾಗ ತೆಗೆದಿದ್ದ ವೀಡಿಯೋ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಕ್ರಿಶ್ಚಿಯನ್ ಶಾಲೆ ಮೇಲೆ ಆರೆಸ್ಸೆಸ್ ಕಾರ್ಯಕರ್ತರ ದಾಳಿ ಎಂದು ಸಾಮೂಹಿಕ ವಿವಾಹದಲ್ಲಿ ಅವ್ಯವಸ್ಥೆಯ ವೀಡಿಯೋ ವೈರಲ್
ತೆಲಂಗಾಣದ ಮಂಚೇರಿಯಲ್ನ ಸೇಂಟ್ ಮದರ್ ತೆರೇಸಾ ಕ್ಯಾಥೋಲಿಕ್ ಶಾಲೆಯ ಪ್ರಾಂಶುಪಾಲ ಫಾದರ್ ರಾಮನ್ ಜೋಸೆಫ್ ಅವರ ಮೇಲೆ ಆರೆಸ್ಸೆಸ್ ಕಾರ್ಯಕರ್ತರ ಹಲ್ಲೆ ಎಂದು ವೀಡಿಯೋ ಒಂದು ಹರಿದಾಡಿದೆ. ಆದರೆ ಈ ವೀಡಿಯೋ ಉತ್ತರ ಪ್ರದೇಶದ ಹಮೀರ್ಪುರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಜನರು ತಿಂಡಿ ಪ್ಯಾಕೆಟ್ಗಳನ್ನು ಲೂಟಿ ಮಾಡುತ್ತಿರುವುದಾಗಿದೆ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣ ಬಳಿಕ ಕಪಿ ಆಗಮನ ಎನ್ನುವುದು ನಿಜವೇ?
ಅಯೋಧ್ಯೆಯಲ್ಲಿ ಧರ್ಮ ಧ್ವಜಾರೋಹಣದ ಬಳಿಕ ಕಪಿಯೊಂದು ಅಲ್ಲಿಗೆ ಬಂದಿದೆ ಎಂಬಂತೆ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ ಇದು ಎಐ ವೀಡಿಯೋ ಎಂದು ತಿಳಿದುಬಂದಿದೆ. ಈ ವರದಿ ಇಲ್ಲಿ ಓದಿ

ಇಮ್ರಾನ್ ಖಾನ್ ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನಕ್ಕೆ ವಿನಂತಿ? ಇಲ್ಲ ಇದು ನಕಲಿ ಪತ್ರ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ತನಗೆ ಹಸ್ತಾಂತರಿಸುವಂತೆ ಭಾರತದ ವಿದೇಶಾಂಗ ಸಚಿವಾಲಯ ರಹಸ್ಯವಾದ ಪತ್ರವೊಂದರ ಮೂಲಕ ಕೇಳಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಆದರೆ ವೈರಲ್ ಆಗಿರುವ ಪತ್ರ ನಕಲಿ ನಿಜವಾದ್ದಲ್ಲ ಎಂದು ಗೊತ್ತಾಗಿದೆ. ಈ ವರದಿ ಇಲ್ಲಿ ಓದಿ

ಅಸಾದುದ್ದೀನ್ ಓವೈಸಿ ಹನುಮಾನ್ ಮೂರ್ತಿಗೆ ಆರತಿ ಮಾಡುತ್ತಿರುವುದು ನಿಜವೇ?
ಅಖಿಲ ಭಾರತ ಮಜ್ಲಿಸ್-ಎ-ಮುತ್ತಹಿದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಆದರೆ ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇದು ನಿಜವಲ್ಲ, ಎಐ ವೀಡಿಯೋ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ