Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ

ಮಣಿಪುರ ಗಲಭೆ, ಮೈತೇಯಿ ಬಾಲಕಿ ಹತ್ಯೆ, ಮ್ಯಾನ್ಮಾರ್

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ

Fact
ಇದು ಮಣಿಪುರದಲ್ಲಿ ನಡೆದ ಘಟನೆಯ ವೀಡಿಯೋ ಅಲ್ಲ, 2022ರಲ್ಲಿ ಮ್ಯಾನ್ಮಾರ್ ನಲ್ಲಿ ಬಂಡುಕೋರ ಪಡೆಗಳು, ಮಿಲಿಟರಿಯ ಮಾಹಿತಿದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಹತ್ಯೆಗೈದ ಘಟನೆಯಾಗಿದೆ.

ಮಣಿಪುರದಲ್ಲಿ ಗಲಭೆ ಅವ್ಯಾಹತವಾಗಿ ನಡೆದಿರುವಂತೆಯೇ, ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಹೇಳಿಕೆಗಳೂ ನಿರಂತರವಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಮೈತೇಯಿ ಜನಾಂಗದ ಬಾಲಕಿಯೊಬ್ಬಳನ್ನು ಥಳಿಸಿ ಹತ್ಯೆ ಗೈಯಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ವಾಟ್ಸಾಪ್‌ನಲ್ಲಿ ಕಂಡುಬಂದ ಸಂದೇಶದಲ್ಲಿ “ಐಸಿಸ್ ಶೈಲಿಯಲ್ಲಿ ಮಣಿಪುರದಲ್ಲಿ ಹಿಂದೂ ಮೈತೇ (ಹಿಂದೂ) ಯ ಪುಟ್ಟ ಹುಡುಗಿಯ ಹತ್ಯೆ ಕೊಲೆಗಾರರಲ್ಲಿ ಕುಕಿ (ಕ್ರಿಶ್ಚಿಯನ್) ಮಹಿಳೆಯರೂ ಸೇರಿದ್ದಾರೆ.ಈ ವೀಡಿಯೋ ತುಂಬಾ ವೈರಲ್ ಆಗುವಂತೆ ಮಾಡಿ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್ ಅವರನ್ನು ತಲುಪಬೇಕು, ಆಮೇಲೆ ನೋಡೋಣ…” ಎಂದು ಹೇಳಲಾಗಿದೆ.

Also Read: ಮಣಿಪುರ ಬೆತ್ತಲೆ ಮೆರವಣಿಗೆ ಆರೋಪಿಗಳು ಆರೆಸ್ಸೆಸ್‌ ದಿರಿಸಿನಲ್ಲಿದ್ದ ಫೋಟೋ ನಿಜವೇ?

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ

2.59 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಸೇನೆಯ ಸಮವಸ್ತ್ರದಲ್ಲಿರುವ ರೀತಿಯ ವ್ಯಕ್ತಿಗಳು ಹೆಣ್ಮಗಳ ಮೇಲೆ ಹಲ್ಲೆ ಮಾಡುವುದರೊಂದಿಗೆ, ಪ್ರಶ್ನಿಸುತ್ತಿರುವಂತೆ ಕಾಣಿಸುತ್ತದೆ. ಆ ಬಳಿಕ ಅವರು ಆಕೆಯ ಕೈಗೆ ಕೋಳ ತೊಡಿಸಿ, ಕಣ್ಣಿಗೆ ಬಟ್ಟೆ ಕಟ್ಟಿ ಕೊನೆಗೆ ಆಕೆಯನ್ನು ಗುಂಡು ಹಾರಿಸಿ ಕೊಲ್ಲುವುದು ಕಂಡುಬರುತ್ತದೆ.

ಈ ಈ ಕುರಿತು ನಮ್ಮ ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ಲೈನ್‌ (+91-9999499044)ಗೂ ದೂರು ಬಂದಿದ್ದು, ಸತ್ಯಶೋಧನೆಗೆ ಬಳಕೆದಾರರು ಮನವಿ ಮಾಡಿದ್ದಾರೆ.

ಅದರಂತೆ ನಾವು ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಕೀಫ್ರೇಮ್‌ಗಳನ್ನು ತೆಗೆದು ವೈರಲ್‌ ವೀಡಿಯೋದ ರಿವರ್ಸ್‌ ಇಮೇಜ್‌ ಸರ್ಚ್ ಮಾಡಿದ್ದೇವೆ.

ಈ ವೇಳೆ ನಾವು ಗ್ಲೋರಿನ್‌ ಸೈಟ್‌ ಹೆಸರಿನ ವೆಬ್ ಪೇಜ್‌ನಲ್ಲಿ ಡಿಸೆಂಬರ್ 10, 2022ರ ಪೋಸ್ಟ್‌ ನಲ್ಲಿ “Woman Blowing Her Brain by Firing Squad” ಶೀರ್ಷಿಕೆಯಡಿ ಇದೇ ವೈರಲ್‌ ವೀಡಿಯೋ ಹೋಲುವ ದೃಶ್ಯವನ್ನು ಪತ್ತೆ ಹಚ್ಚಿದ್ದೇವೆ. ಇದರ ವಿವರಣೆಯಲ್ಲಿ ಇದು ಮ್ಯಾನ್ಮಾರ್ ನಲ್ಲಿ ನಡೆದ ಘಟನೆಯಾಗಿದೆ, ಆದರೆ ಯಾತಕ್ಕಾಗಿ ಈ ಮಹಿಳೆಯನ್ನು ಮಿಲಿಟರಿ ಸಮವಸ್ತ್ರದಲ್ಲಿರುವ ಮಂದಿ ಹತ್ಯೆ ಮಾಡಿದ್ದಾರೆ ಎಂದು ತಿಳಿದಿಲ್ಲ” ಎನ್ನಲಾಗಿದೆ.

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ
ಗ್ಲೋರಿನ್‌ ಸೈಟ್‌ ವರದಿ

ಇದನ್ನು ಆಧಾರವಾಗಿರಿಸಿ ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದು, ಇಲೆವೆನ್‌ ಮ್ಯಾನ್ಮಾರ್ ನಲ್ಲಿ ಡಿಸೆಂಬರ್ 3, 2022ರಂದು ಪ್ರಕಟಿಸಿದ ವರದಿಯೊಂದನ್ನು ಪತ್ತೆ ಮಾಡಿದ್ದೇವೆ. ಈ ವರದಿಯಲ್ಲಿ “ ವತಿಯೊಬ್ಬಳನ್ನು “ಮಿಲಿಟರಿ ಮಾಹಿತಿದಾರೆ” ಎಂದು ಒಪ್ಪಿಕೊಳ್ಳುವಂತೆ ಹೊಡೆದು, ಗುಂಡು ಹಾರಿಸಿ ಕೊಲ್ಲುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ” ಎಂದು ಹೇಳಲಾಗಿದೆ. ಇದೇ ವರದಿಯಲ್ಲಿ ಮೃತ ಮಹಿಳೆ “ನಾಗರಿಕ ಅಸಹಕಾರ ಚಳವಳಿ”ಗೆ ಸೇರಿದವರಾಗಿದ್ದು, ಆಕೆ ಮಿಲಿಟರಿ ಮಾಹಿತಿದಾರೆ ಎಂಬ ಶಂಕೆಯಲ್ಲಿ ತಮು (ಪೀಪಲ್ಸ್‌ ಡಿಫೆನ್ಸ್ ಫೋರ್ಸ್) ನಂ.4 ಬೆಟಾಲಿಯನ್‌ಗೆ ಸೇರಿದ ಬಂಡುಕೋರರು ಆಕೆಯನ್ನು ಹತ್ಯೆಮಾಡಿದ್ದಾರೆ” ಎಂದು ಹೇಳಲಾಗಿದೆ.

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ
ಇಲೆವೆನ್‌ ವರದಿ

ಡಿಸೆಂಬರ್‌ 4 2022ರಂದು ಆರ್‌ಎಫ್ಎ ಪ್ರಕಟಿಸಿದ ಇನ್ನೊಂದು ವರದಿಯಲ್ಲಿ, “ಮಹಿಳೆಯನ್ನು ಹತ್ಯೆ ಮಾಡಿದ ಪ್ರಕರದಲ್ಲಿ ಮ್ಯಾನ್ಮಾರ್ ನ ನ್ಯಾಷನಲ್‌ ಯುನಿಟಿ ಗವರ್ನಮೆಂಟ್‌, ತನಿಖೆ ನಡೆಸಿ ಆಪಾದಿತರನ್ನು ಶಿಕ್ಷಿಸಲಿದೆ ಎಂದು ಅದರ ವಕ್ತಾರರು ಹೇಳಿದ್ದಾರೆ” ಹೇಳಿದೆ. (ಇದನ್ನು ಬರ್ಮೀಸ್ ಭಾಷೆಯಿಂದ ಅನುವಾದಿಸಲಾಗಿದೆ)

Also Read: ಒಂದೇ ಟ್ರ್ಯಾಕ್‌ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್‌ ವೀಡಿಯೋ ಸತ್ಯವೇ?

Fact Check: ಮಣಿಪುರದಲ್ಲಿ ಮೈತೇಯಿ ಬಾಲಕಿ ಹತ್ಯೆ ಎಂದು ಸುಳ್ಳು ಕ್ಲೇಮಿನೊಂದಿಗೆ ಮ್ಯಾನ್ಮಾರ್ ವೀಡಿಯೋ ಹಂಚಿಕೆ
ಆರ್‌ ಎಫ್‌ಎ ವರದಿ

ಸಿನೈಮ್ಯಾನ್ಮಾರ್ ಡಿಸೆಂಬರ್ 7,2022ರಂದು ಪ್ರಕಟಿಸಿದ ವರದಿಯಲ್ಲಿ “ತಮುವಿನಲ್ಲಿ ನಡೆದ ಹತ್ಯೆ ವಿರುದ್ಧ ಎನ್‌ಯುಜಿ ಸರ್ಕಾರ ಕ್ರಮಕ್ಕೆ ತೀರ್ಮಾನಿಸಿದೆ” ಎಂದಿದೆ. ಜೊತೆಗೆ ಈ ಪ್ರಕರಣದ ವಿವರವನ್ನು ನೀಡಿದ್ದು, 25 ವರ್ಷದ ಆಯೆ ಮಾರ್‌ ತುನ್‌ ಎಂಬಾಕೆ ಜುಂಟಾ ಪಡೆಯ ಸದಸ್ಯೆಯಾಗಿದ್ದು, ಪಿಡಿಎಫ್ ನ ಸದಸ್ಯನೊಬ್ಬನನ್ನು ಹತ್ಯೆಗೈದ ಪ್ರಕರಣದಲ್ಲಿ ಆಕೆ ತೊಡಗಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಿದ ಬಂಡುಕೋರ ಪಡೆಗಳು, ಆಕೆ ಪಿಯು ಸಾ ಹತೀ ಮಿಲಿಟಿಯಾ ಎಂಬ ಮ್ಯಾನ್ಮಾರ್ ಮಿಲಿಟರಿಗೆ ಸೇರಿದ ಗುಂಪಿನವಳು ಎಂದು ಆರೋಪಿಸಿ ಹತ್ಯೆಗೈದಿದ್ದಾರೆ” ಎಂದಿದೆ.

ಜುಲೈ 24, 2023ರಂದು ಮಣಿಪುರ ಪೊಲೀಸರು ಮಾಡಿರುವ ಟ್ವೀಟ್‌ ನಲ್ಲಿ ವೈರಲ್ ವೀಡಿಯೋದ ಬಗ್ಗೆ ಹೇಳಿಕೆಯನ್ನು ನೀಡಿದ್ದು, “ಮಹಿಳೆಯೊಬ್ಬರನ್ನು ಬಂದೂಕುಧಾರಿಗಳಿದ್ದ ಗುಂಪೊಂದು ಹತ್ಯೆಗೈದ ವೀಡಿಯೋ ಮಣಿಪುರದ್ದಲ್ಲ. ಇದು ಮ್ಯಾನ್ಮಾರ್ ನದ್ದು. ಆದರೆ ಇದನ್ನು ಮಣಿಪುರದ್ದು ಎಂದು ತಪ್ಪಾಗಿ ಸಂಬಂಧ ಕಲ್ಪಿಸಲಾಗಿದೆ. ಕಾನೂನು ಸುವ್ಯವಸ್ಥೆ ಹದಗೆಡಿಸುವ ಈ ಸುಳ್ಳು ಸಂದೇಶ ಬಗ್ಗೆ ಕೇಸು ದಾಖಲಿಸಲಾಗಿದ್ದು, ಸಂದೇಶ ಹರಡಿದವರನ್ನು ಪತ್ತೆ ಹಚ್ಚಿ ಬಂಧನಕ್ಕೆ ಮುಂದಾಗಲಾಗಿದೆ” ಎಂದು ಹೇಳಿದ್ದಾರೆ.

ಮಣಿಪುರ ಪೊಲೀಸರ ಟ್ವೀಟ್

Conclusion

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ. ವೈರಲ್‌ ಆಗಿರುವ ವೀಡಿಯೋ ಮಣಿಪುರದ್ದಲ್ಲ. ಇದು ಮ್ಯಾನ್ಮಾರ್ ನದ್ದು. ಮಿಲಿಟರಿ ಮಾಹಿತಿದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರನ್ನು ಬಂಡುಕೋರರು ಹತ್ಯೆಗೈಯುವ ವೀಡಿಯೋ ಇದಾಗಿದೆ ಎಂದು ತಿಳಿದುಬಂದಿದೆ.

Result: False

Our Sources

Report By Glorine site, Dated: December 10, 2022

Report By Eleven Myanmar, Dated: December 3, 2022

Report By RFA, Dated: December 4, 2022

Report By Cinymyanmar, Dated: December 7, 2022

Tweet By Manipur Police, Dated July 24, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.