Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಸುಳ್ಯ ಸಂಪಾಜೆ ರಸ್ತೆಯಲ್ಲಿ ಕಾಲು ಜಾರಿ ಆನೆ ಬಿದ್ದಿದೆ ಎಂದು ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಥ್ರೆಡ್ಸ್ ನಲ್ಲಿ ನಾವು ಈ ಹೇಳಿಕೆಯನ್ನು ಕಂಡಿದ್ದು, ಇದನ್ನು ನ್ಯೂಸ್ಚೆಕರ್ ತನಿಖೆ ನಡೆಸಿದೆ. ಈ ವೇಳೆ ಇದು ಸುಳ್ಳು ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಮತ್ತು ಇದು ಎಐ ಸೃಷ್ಟಿ ಎಂದು ಕಂಡುಬಂದಿದೆ.

ಸತ್ಯಶೋಧನೆಗಾಗಿ ನಾವು ಮೊದಲು ಆನೆ ರಸ್ತೆಗೆ ಬಿದ್ದ ವಿಚಾರವನ್ನು ಗೂಗಲ್ ನಲ್ಲಿ ಹುಡುಕಾಡಿದ್ದೇವೆ. ಸಂಪಾಜೆಯಲ್ಲಿ ಅಂತಹ ಯಾವುದೇ ಘಟನೆ ನಡೆದ ಬಗ್ಗೆ ಮಾಹಿತಿಗಳು ಕಂಡುಬಂದಿಲ್ಲ.
ಸತ್ಯಶೋಧನೆಯ ಭಾಗವಾಗಿ ನಾವು ವೀಡಿಯೋವನ್ನು ನೋಡಿದಾಗ, ಆನೆ ಜಾರಿ ಬೀಳುವ ವೀಡಿಯೋಗಳಲ್ಲಿ ಸಾಕಷ್ಟು ಅಸಹಜತೆಗಳು ಕಂಡುಬಂದಿವೆ. ಆನೆ ಎತ್ತರದಿಂದ ಬಿದ್ದರೂ ಎದ್ದೇಳುವುದು, ವೀಡಿಯೋ ಸೆರೆ ಹಿಡಿದ ಚಾಲಕ ತುಸುವೇ ಗಾಬರಿಯಾಗದಂತೆ ಕಾರು ನಿಲ್ಲಿಸುವುದು, ಆನೆ ಮೈಯಲ್ಲಿ ಮಣ್ಣು ಮೆತ್ತಿಕೊಳ್ಳದೇ ಇರುವುದು ಇತ್ಯಾದಿಗಳು ಇದು ಎಐ ವೀಡಿಯೋ ಎಂಬ ಸಂಶಯಕ್ಕೆ ಕಾರಣವಾಗಿದೆ.


ಆ ಬಳಿಕ ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದರಲ್ಲಿ ವಿವಿಧ ಸಾಮಾಜಿಕ ಬಳಕೆದಾರರು ಇದೇ ವೀಡಿಯೋವನ್ನು ಬೇರೆ ಬೇರೆ ಹೇಳಿಕೆಗಳೊಂದಿಗೆ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿದ್ದೇವೆ.

ಅನಂತರ ವೀಡಿಯೋ ಕೀಫ್ರೇಮ್ ಗಳನ್ನು ಎಐ ಪತ್ತೆ ಪರಿಕರಗಳ ಮೂಲಕ ವೀಡಿಯೋ ಕೀಫ್ರೇಮ್ ಗಳನ್ನು ಪರೀಕ್ಷಿಸಿದ್ದೇವೆ. ಇವುಗಳು ಎಐ ಆಗಿದೆ ಎಂಬುದನ್ನು ದೃಢಪಡಿಸಲಾಗಿದೆ.
ಸೈಟ್ ಎಂಜಿನ್ ಮೂಲಕ ಪರಿಶೀಲಿಸಿದಾಗ, ಇದು 96% ಎಐ ನಿಂದ ಮಾಡಿದ್ದಾಗಿದೆ ಎಂದು ಹೇಳಿದೆ.

ಹೈವ್ ಮಾಡರೇಶನ್ ಮೂಲಕ ಪರಿಶೀಲಿಸಿದಾಗ, 99.9% ಎಐನಿಂದ ಮಾಡಿದ್ದಾಗಿದೆ ಎಂದು ಹೇಳಿದೆ.

ವಾಸ್ ಇಟ್ ಎಐ ಮೂಲಕ ಪರಿಶೀಲಿಸಿದಾಗಲೂ ಈ ಫೋಟೋ ಎಐ ನಿಂದ ಮಾಡಿದ್ದಾಗಿದೆ ಎಂಬುದನ್ನು ದೃಢಪಡಿಸಿದೆ.

ಆದ್ದರಿಂದ ಈ ವೀಡಿಯೋ ಎಐ ಮೂಲಕ ಮಾಡಿದ್ದಾಗಿದ್ದು ನಿಜವಲ್ಲ, ಸುಳ್ಯ ಸಂಪಾಜೆ ರಸ್ತೆಯಲ್ಲಿ ಕಾಲು ಜಾರಿ ಆನೆ ರಸ್ತೆಗೆ ಬಿದ್ದಿದೆ ಎನ್ನುವುದು ಸುಳ್ಳು ಎಂದು ಕಂಡುಬಂದಿದೆ.
Also Read: ಉತ್ತರ ಪ್ರದೇಶದಲ್ಲಿ ನಗದು ತುಂಬಿದ್ದ ಲಾರಿ ಪಲ್ಟಿಯಾಗಿ ನೋಟುಗಳನ್ನು ಜನರು ಲೂಟಿ ಮಾಡಿದ್ದಾರೆಯೇ?
Our Sources
Sightengine
Hivemoderation
WasitAI
Self Analysis
Ishwarachandra B G
March 7, 2024
Ishwarachandra B G
September 5, 2023
Ishwarachandra B G
June 26, 2023