Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
AI/Deepfake
ಆಸ್ಟ್ರೇಲಿಯಾದ ಬಾಂಡಿ ಬೀಚ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿಗಳ ವೀಸಾ ರದ್ದು ಮಾಡಲಾಗಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಘೋಷಣೆ
ಈ ವೀಡಿಯೋ ಎಐ ನಿಂದ ತಿರುಚಲಾಗಿದೆ. ವೀಡಿಯೋ ಜೊತೆಗಿರುವ ಆಡಿಯೋವನ್ನು ಎಐ ಮೂಲಕ ಮಾಡಿರುವುದು ಕಂಡುಬಂದಿದೆ
ಆಸ್ಟ್ರೇಲಿಯಾದ ಬಾಂಡಿ ಬೀಚ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿಗಳ ವೀಸಾ ರದ್ದು ಮಾಡಲಾಗಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಈ ಬೀಚ್ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಇಬ್ಬರು ಇದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲ ಪಾಕಿಸ್ತಾನಿಗಳ ವೀಸಾ ರದ್ದು ಮಾಡಿದ ಆಸ್ಟ್ರೇಲಿಯಾ ಪ್ರಧಾನಿ ಎಂದು ಹೇಳಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಹೇಳಿಕೆಗಳು ಇಲ್ಲಿ, ಇಲ್ಲಿ ಕಂಡುಬಂದಿವೆ.


ಇದಕ್ಕೆ ಪೂರಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚುತ್ತಿರುವ ವೀಡಿಯೋದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬಾನೀಸ್ ಅವರು ಮಾತನಾಡುತ್ತಿರುವುದು ಕಾಣಿಸುತ್ತದೆ ಮತ್ತವರು ಎಲ್ಲ ಪಾಕಿಸ್ತಾನಿಗಳ ವೀಸಾ ರದ್ದುಮಾಡಲಾಗಿದೆ ಎಂದು ಹೇಳುವುದು ಕೇಳಿಸುತ್ತದೆ.
ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಡೀಪ್ ಫೇಕ್ ವೀಡಿಯೋ, ಇದು ನಿಜವಾದ್ದಲ್ಲ ಎಂದು ಕಂಡುಕೊಂಡಿದೆ.
ಸತ್ಯಶೋಧನೆಯ ಭಾಗವಾಗಿ ನ್ಯೂಸ್ಚೆಕರ್ ಮೊದಲು ವೀಡಿಯೋವನ್ನು ಕೂಲಂಕಷವಾಗಿ ಗಮನಿಸಿದೆ. ಈ ವೇಳೆ ಆಸ್ಟ್ರೇಲಿಯಾ ಪ್ರಧಾನಿಯವರ ಮಾತು ಮತ್ತು ತುಟಿ ಚಲನೆಗೆ ಹೊಂದಾಣಿಕೆಯಾಗದೇ ಇರುವುದು ಕಂಡುಬಂದಿದೆ. ಮತ್ತು ವೀಡಿಯೋದಲ್ಲಿರುವ ಧ್ವನಿ ಅಸಹಜವಾಗಿರುವುದನ್ನು ಗುರುತಿಸಿದ್ದೇವೆ. ಇದು ಎಐ ಮೂಲಕ ವೀಡಿಯೋ ಮಾಡಲ್ಪಟ್ಟಿದೆಯೇ ಅಥವಾ ತಿರುಚಲಾಗಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ.
ಆ ಬಳಿಕ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ 2022ರ ಮಾಧ್ಯಮ ವರದಿಗಳಲ್ಲಿ ಕೀಫ್ರೇಂಗಳನ್ನು ಹೋಲುವ ಫೋಟೋಗಳು ಕಂಡುಬಂದಿವೆ.
ಆಸ್ಟ್ರೇಲಿಯಾ ಸಂಸತ್ತಿಗೆ ಧ್ವನಿ ಪ್ರಸ್ತಾವನೆ ಕುರಿತಾಗಿ ಸರ್ಕಾರ ಮುಂದಾಗಿದ್ದು, ಇದಕ್ಕೆ ಮೊದಲು ಸಂಸತ್ತು ಇದರ ಬಗ್ಗೆ ಚರ್ಚೆ ನಡೆಸಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್ ಹೇಳಿದ್ದರು. ಇದನ್ನು ಸಂಡೇ ಮಾರ್ನಿಂಗ್ ಹೆರಾಲ್ಡ್ ಆಗಸ್ಟ್ 2, 2022ರಂದು ವರದಿ ಮಾಡಿದೆ. ಈ ವರದಿಯಲ್ಲಿ ವೈರಲ್ ಕೀಫ್ರೇಂ ಹೋಲುವ ಫೊಟೋ ಇದೆ.

ಸಂಸತ್ತಿಗೆ ಧ್ವನಿ ಪ್ರಸ್ತಾವನೆ ಬಗ್ಗೆ ದಿ ಏಜ್ ಕೂಡ ಪ್ರಧಾನಿಯವರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಆಗಸ್ಟ್ 4, 2022ರಂದು ವರದಿ ಮಾಡಿದ್ದು, ಇಲ್ಲೂ ನಾವು ವೈರಲ್ ವೀಡಿಯೋ ಕೀಫ್ರೇಂ ಹೋಲುವ ಫೋಟೋವನ್ನು ಗಮನಿಸಿದ್ದೇವೆ.

ಆ ಬಳಿಕ ನಾವು ವೀಡಿಯೋವನ್ನು ಪರಿಶೀಲನೆಗೆ ಒಳಪಡಿಸಿಸಿದ್ದು, ಇದರ ಆಡಿಯೋ ಎಐ ಮೂಲಕ ತಿರುಚಲಾಗಿದೆ ಎಂದು ತಿಳಿದುಬಂದಿದೆ. ಸತ್ಯಶೋಧನೆಯ ಭಾಗವಾಗಿ ಹಿಯಾ ಡೀಪ್ ಫೇಕ್ ಆಡಿಯೋ ಡಿಟೆಕ್ಟರ್ ಮೂಲಕ ಪರಿಶೀಲಿಸಿದ್ದು, ಇದು ಎಐನಿಂದ ಮಾಡಲಾಗಿದೆ ಎಂದು ಅದು ಖಚಿತಪಡಿಸಿದೆ.

ನ್ಯೂಸ್ಚೆಕರ್ ಒಂದು ಭಾಗವಾಗಿರುವ ಡೀಪ್ ಫೇಕ್ ಅನಾಲಿಸ್ ಯುನಿಟ್ (ಡಿಎಯು) ವೈರಲ್ ವೀಡಿಯೋ ಪರಿಶೀಲನೆ ಮಾಡಿದ್ದು, ಎಐ ಮೂಲಕ ಧ್ವನಿಯನ್ನು ತಿರುಚಿದ ಬಗ್ಗೆ ಹೇಳಿದೆ. ಅದು ಆರ್ಗಿನ್ ಎಐ ಮೂಲಕ ವೀಡಿಯೋದ ಆಡಿಯೋ ಪರಿಶೀಲಿಸಿದ್ದು, ಇದು ಎಐನಿಂದ ಮಾಡಿದ ಬಗ್ಗೆ 100% ರಷ್ಟು ಖಚಿತತೆ ವ್ಯಕ್ತಪಡಿಸಿದೆ.

ಈ ಸಾಕ್ಷ್ಯಗಳ ಪ್ರಕಾರ ಆಸ್ಟ್ರೇಲಿಯಾದ ಬಾಂಡಿ ಬೀಚ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನಿಗಳ ವೀಸಾ ರದ್ದು ಮಾಡಲಾಗಿದೆ ಎಂದು ಹಂಚಿಕೊಳ್ಳಲಾದ ವೀಡಿಯೋದಲ್ಲಿ ಆಡಿಯೋವನ್ನು ಎಐ ಮೂಲಕ ಮಾಡಲಾಗಿದೆ ಎಂದು ಕಂಡುಬಂದಿದೆ.
Our Sources
Report by Sunday Morning Herald, Dated: August 2, 2022
Report by The Age, Dated: August 4, 2022
Hiya deepfake voice detector
Aurigin
Self analysis
Ishwarachandra B G
April 26, 2025
Ishwarachandra B G
April 25, 2025
Ishwarachandra B G
November 21, 2023