Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಪಹಲ್ಗಾಮ್ ದಾಳಿ ವೇಳೆ ತಾತನ ದೇಹದ ಮೇಲೆ ಕೂತು ಅಳುತ್ತಿರುವ ಮಗು
ಪಹಲ್ಗಾಮ್ ದಾಳಿ ವೇಳೆ ತಾತನ ದೇಹದ ಮೇಲೆ ಕೂತು ಅಳುತ್ತಿರುವ ಮಗು ಎಂದು ಹೇಳಿಕೊಳ್ಳಲಾದ ಈ ವೀಡಿಯೋ ಐದು ವರ್ಷ ಹಳೆಯದು ಮತ್ತು ಸೋಪೋರನದ್ದಾಗಿದೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಮೃತ ದೇಹದ ಮೇಲೆ ಕುಳಿತು ಅಳುತ್ತಿರುವ ಮಗುವೊಂದರ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ಈ ವಿಡಿಯೋ ಸುಮಾರು 26 ಸೆಕೆಂಡುಗಳಷ್ಟು ಉದ್ದವಾಗಿದ್ದು, ಇದರಲ್ಲಿ ಮಗುವೊಂದು ಮೃತ ದೇಹದ ಮೇಲೆ ಮಲಗಿರುವುದನ್ನು ಕಾಣಬಹುದು. ಇದಾದ ನಂತರ, ಮಗು ಕಾರಿನಲ್ಲಿ ಕುಳಿತು ಅಳುತ್ತಿರುವುದು ಕಂಡುಬರುತ್ತದೆ. ಈ ಸಮಯದಲ್ಲಿ, ಕೆಲವರು ಮಗುವನ್ನು ಮೌನಗೊಳಿಸಲು ಪ್ರಯತ್ನಿಸುತ್ತಿರುವುದು ಕೇಳಿಸುತ್ತದೆ.
ಈ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ, “ಇಂದು ಕಾಶ್ಮೀರದ ಪಹಲ್ಗಾಮ್ಗೆ ಭೇಟಿ ನೀಡಲು ಹೋದ ಈ ಮುಗ್ಧ ಮಗುವಿನ ಮುಂದೆ, ಅವನ ಅಜ್ಜ ಹಿಂದೂ ಎಂಬ ಕಾರಣಕ್ಕಾಗಿ ಗುಂಡಿಕ್ಕಿ ಕೊಲ್ಲಲಾಯಿತು.” ಎಂದಿದೆ.
Also Read ಪಹಲ್ಗಾಮ್ ದಾಳಿ ಬಳಿಕ ಓರ್ವ ಉಗ್ರವಾದಿಯನ್ನು ಭಾರತೀಯ ಸೇನೆ ಜೀವಂತವಾಗಿ ಸೆರೆಹಿಡಿದಿದೆ ಎಂದ ವೀಡಿಯೋ ಹಳೆಯದು!
ಈ ಹೇಳಿಕೆಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಆದರೆ, ನಮ್ಮ ತನಿಖೆಯಲ್ಲಿ ವೈರಲ್ ವಿಡಿಯೋ ಜಮ್ಮು ಮತ್ತು ಸೋಪೋರ್ ನದ್ದಾಗಿದ್ದು ಐದು ವರ್ಷ ಹಳೆಯದು ಎಂದು ಕಂಡುಬಂದಿದೆ . 2020 ರಲ್ಲಿ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಘರ್ಷಣೆಯಲ್ಲಿ ಒಬ್ಬ ನಾಗರಿಕ ಸಾವನ್ನಪ್ಪಿದ್ದರು. ಈ ಸಮಯದಲ್ಲಿ, ಮೃತರ ಜೊತೆಗಿದ್ದ ಅವರ 3 ವರ್ಷದ ಮೊಮ್ಮಗ ದೇಹದ ಮೇಲೆ ಕುಳಿತು ಅಳುತ್ತಿದ್ದ, ಅನಂತರ ಅಲ್ಲಿದ್ದ ಪೊಲೀಸ್ ತಂಡವು ಬಾಲಕನನ್ನು ರಕ್ಷಿಸಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾದ ಈ ವೀಡಿಯೋವನ್ನು ತನಿಖೆ ಮಾಡಲು ಕೀಫ್ರೇಮ್ ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಜುಲೈ 1, 2020 ರಂದು ಆಜ್ ತಕ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿ ಲಭ್ಯವಾಗಿದೆ. ಅದು ವೈರಲ್ ವೀಡಿಯೊದಲ್ಲಿರುವಂತೆಯೇ ದೃಶ್ಯಗಳನ್ನು ಹೊಂದಿತ್ತು.
ಅದರ ಪ್ರಕಾರ ಜುಲೈ 1, 2020 ರಂದು ಜಮ್ಮು ಮತ್ತು ಕಾಶ್ಮೀರದ ಸೋಪೋರ್ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಒಬ್ಬ ಸಿಆರ್ಪಿಎಫ್ ಜವಾನ ಮತ್ತು ನಾಗರಿಕ ಕೂಡ ಹುತಾತ್ಮರಾದರು. ಆ ವೃದ್ಧ ನಾಗರಿಕ ಹುತಾತ್ಮರಾದಾಗ, ಅವರ 3 ವರ್ಷದ ಮೊಮ್ಮಗ ಕೂಡ ಅವರೊಂದಿಗೆ ಇದ್ದನು. ಈ ಸಮಯದಲ್ಲಿ ಅವರ ಮೊಮ್ಮಗ ಅವರ ಮೃತ ದೇಹದ ಮೇಲೆ ಕುಳಿತಿದ್ದ. ಅಲ್ಲಿದ್ದ ಪೊಲೀಸ್ ತಂಡದ ಸದಸ್ಯರೊಬ್ಬರು ಮಗುವನ್ನು ಎತ್ತಿಕೊಂಡು ಭಯೋತ್ಪಾದಕರೊಂದಿಗಿನ ಎನ್ಕೌಂಟರ್ ನಡೆಯುತ್ತಿರುವ ಪ್ರದೇಶದಿಂದ ಬೇರ್ಪಡಿಸಿದರು.
ತನಿಖೆಯ ಸಮಯದಲ್ಲಿ, ಈ ಘಟನೆಗೆ ಸಂಬಂಧಿಸಿದ ವೀಡಿಯೋ ವರದಿಯನ್ನು ನಾವು ಬಿಬಿಸಿಯ ಯೂಟ್ಯೂಬ್ ಚಾನೆಲ್ನಲ್ಲಿ ಕಂಡುಕೊಂಡೆವು. ವೈರಲ್ ವೀಡಿಯೊದ ದೃಶ್ಯಗಳು ಈ ವೀಡಿಯೊದಲ್ಲಿಯೂ ಇದ್ದವು.
ಕಾಶ್ಮೀರದ ಆಗಿನ ಪೊಲೀಸ್ ಐಜಿ ವಿಜಯ್ ಕುಮಾರ್ ಅವರ ಹೇಳಿಕೆಯು ವೀಡಿಯೋದಲ್ಲಿತ್ತು. ಸಿಆರ್ಪಿಎಫ್ ಜವಾನರು ಮಾಡೆಲ್ ಟೌನ್ ಪ್ರದೇಶದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಿದ್ದಾರೆ ಎಂದು ಅವರು ಹೇಳುತ್ತಿರುವುದು ಕೇಳಿಸುತ್ತದೆ. ಸಿಆರ್ಪಿಎಫ್ ಯೋಧರು ವಾಹನದಿಂದ ಇಳಿಯಲು ಪ್ರಾರಂಭಿಸಿದಾಗ, ಮಸೀದಿಯ ಒಳಗಿನಿಂದ ಮನಬಂದಂತೆ ಗುಂಡು ಹಾರಿಸಲಾಗಿದೆ. ಇದರಲ್ಲಿ ಒಬ್ಬ ಯೋಧ ಸಾವನ್ನಪ್ಪಿದರು. ಘಟನೆ ವೇಳೆ 65 ವರ್ಷದ ವೃದ್ಧರೊಬ್ಬರು ಮಗುವಿನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ದಾಳಿಯಿಂದ ಮಗುವನ್ನು ರಕ್ಷಿಸಲು ವೃದ್ಧನು ಪ್ರಯತ್ನಿಸಿದ್ದು, ಆ ವೇಳೆ ಅವರೂ ಸಾವನ್ನಪ್ಪಿದರು. ಆದರೆ, ಮೃತ ಬಶೀರ್ ಅಹ್ಮದ್ ಅವರ ಕುಟುಂಬವು ವೃದ್ಧನನ್ನು ಸಿಆರ್ಪಿಎಫ್ ಹತ್ಯೆ ಮಾಡಿದೆ ಎಂದು ಆರೋಪಿಸಿತ್ತು, ಆದರೆ ವಿಜಯ್ ಕುಮಾರ್ ಅದನ್ನು ನಿರಾಕರಿಸಿದ್ದರು.
ಇದಲ್ಲದೆ, ಜುಲೈ 1, 2020 ರಂದು ಈಟಿವಿ ಭಾರತ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ . ವೈರಲ್ ವೀಡಿಯೋಗೆ ಸಂಬಂಧಿಸಿದ ದೃಶ್ಯಗಳು ಸಹ ಈ ವರದಿಯಲ್ಲಿವೆ.
ಸೋಪೋರ್ನಲ್ಲಿ ನಡೆದ ಈ ಭಯೋತ್ಪಾದಕ ದಾಳಿಯಲ್ಲಿ ಸಿಆರ್ಪಿಎಫ್ ಹೆಡ್ ಕಾನ್ಸ್ಟೆಬಲ್ ದೀಪ್ ಚಂದ್ ಹುತಾತ್ಮರಾದರು ಮತ್ತು ಶ್ರೀನಗರದ ಹೊರವಲಯದಲ್ಲಿರುವ ಜೈನ್ಕೋಟ್ ನಿವಾಸಿ ಬಶೀರ್ ಅಹ್ಮದ್ ಖಾನ್ ಸಾವನ್ನಪ್ಪಿದರು ಎಂದು ವರದಿಯಲ್ಲಿದೆ. ಬಶೀರ್ ಅಹ್ಮದ್ ಖಾನ್ ತನ್ನ ಮೂರು ವರ್ಷದ ಮೊಮ್ಮಗನೊಂದಿಗೆ ವೈಯಕ್ತಿಕ ಕೆಲಸದ ಮೇಲೆ ಸೋಪೋರ್ಗೆ ಹೋಗುತ್ತಿದ್ದರು.
ನಮ್ಮ ತನಿಖೆಯಲ್ಲಿ ದೊರೆತ ಸಾಕ್ಷ್ಯಗಳು ಈ ನಿರ್ದಿಷ್ಟ ವೈರಲ್ ವೀಡಿಯೋ ಪಹಲ್ಗಾಮ್ ಘಟನೆಯದ್ದಲ್ಲ, ಬದಲಾಗಿ ಐದು ವರ್ಷಗಳ ಹಿಂದೆ ಸೋಪೋರ್ನಲ್ಲಿ ನಡೆದ ಭಯೋತ್ಪಾದಕ ದಾಳಿಯದ್ದಾಗಿದೆ ಎಂದು ಗೊತ್ತಾಗಿದೆ.
Our Sources
Report By AAJ TAK, Dated: 1st July 2020
Video Report by BBC Hindi, Dated: 2nd July 2020
Report By ETV Bharat, Dated: 1st July 2020
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
June 26, 2025
Runjay Kumar
June 19, 2025
Ishwarachandra B G
May 26, 2025