Authors
Claim
ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್
Fact
ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಎಂದು ಹೇಳಲಾದ ಫೊಟೋ ಎಐ ಮೂಲಕ ಮಾಡಿದ್ದಾಗಿದೆ
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಗೌರಿ ಖಾನ್ ಮೆಕ್ಕಾದಲ್ಲಿರುವ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗಿದೆ. 33 ವರ್ಷಗಳ ದಾಂಪತ್ಯದ ನಂತರ ಗೌರಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದಾಗ್ಯೂ, ಜೆನೆರೇಟಿವ್ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಫೋಟೋವನ್ನು ರಚಿಸಲಾಗಿದೆ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ.
ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.
Also Read: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?
Fact Check/Verification
ಗೌರಿ ಖಾನ್ ಇಸ್ಲಾಂಗೆ ಮತಾಂತರಗೊಂಡಿದ್ದಾರೆಯೇ ಎಂದು ಕಂಡುಹಿಡಿಯಲು ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಗೌರಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂದು ಹೇಳುವ ಯಾವುದೇ ಸುದ್ದಿ ವರದಿಗಳು ನಮಗೆ ಸಿಗಲಿಲ್ಲ. ಅಕ್ಟೋಬರ್ 8, 2024 ರ ಟೈಮ್ಸ್ ಆಫ್ ಇಂಡಿಯಾ ವರದಿ ನಮಗೆ ಲಭ್ಯವಾಗಿದ್ದು, ಅದರಲ್ಲಿ, “ಗೌರಿ ಕಾಫಿ ವಿತ್ ಕರಣ್ ನಲ್ಲಿ ಕಾಣಿಸಿಕೊಂಡರು, ಅವರು ಮದುವೆಯ ನಂತರ ತಮ್ಮ ಧಾರ್ಮಿಕ ಗುರುತನ್ನು ತೆರೆದಿಟ್ಟರು ಮತ್ತು ‘ನಮ್ಮ ನಡುವೆ ಸಾಮರಸ್ಯವಿದೆ. ನಾನು ಶಾರುಖ್ ಅವರ ಧರ್ಮವನ್ನು ಗೌರವಿಸುತ್ತೇನೆ, ಆದರೆ ಅದರರ್ಥ ನಾನು ಮತಾಂತರಗೊಂಡು ಮುಸ್ಲಿಮ್ ಆಗುತ್ತೇನೆ ಎಂದಲ್ಲ. ನಾನು ಅದನ್ನು ನಂಬುವುದಿಲ್ಲ. ಪ್ರತಿಯೊಬ್ಬರೂ ಒಬ್ಬ ವ್ಯಕ್ತಿ ಮತ್ತು ಅವರ ಧರ್ಮವನ್ನು ಅನುಸರಿಸುತ್ತಾರೆ. ಸಹಜವಾಗಿ, ಪರಸ್ಪರ ಗೌರವ ಇರಬೇಕು. ಶಾರುಖ್ ಎಂದಿಗೂ ನನ್ನ ಧರ್ಮಕ್ಕೆ ಅಗೌರವ ತೋರಿಸುವುದಿಲ್ಲ ಮತ್ತು ನಾನು ಅವರಿಗೆ ಅಗೌರವ ತೋರಿಸುವುದಿಲ್ಲ’ ಎಂದು ಹೇಳಿದ್ದಾರೆ. ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.
ಅಕ್ಟೋಬರ್ 8, 2024 ರ ನ್ಯೂಸ್ 18 ವರದಿಯ ಪ್ರಕಾರ, ಕಾಫಿ ವಿತ್ ಕರಣ್ ನ ಮೊದಲ ಸೀಸನ್ನಲ್ಲಿ ಕರಣ್ ಜೋಹರ್ ಅವರೊಂದಿಗಿನ ಸಂಭಾಷಣೆಯಲ್ಲಿ, ಗೌರಿ ಖಾನ್ ಅವರು ಶಾರುಖ್ ಖಾನ್ ಅವರ ಧರ್ಮದ ಬಗ್ಗೆ ಅಪಾರ ಗೌರವವಿದೆ, ಆದರೆ ಅವರು ಎಂದಿಗೂ ಇಸ್ಲಾಂಗೆ ಮತಾಂತರಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಗೌರಿ ಅವರು ಹಿಂದೂ ಧರ್ಮದವರಾಗಿದ್ದಾರೆ.
ಅನಂತರ ನಾವು ಚಿತ್ರವನ್ನು ಎಐ ಬಳಸಿ ರಚಿಸಲಾಗಿದೆಯೇ ಅಥವಾ ಇದು ನಿಜವಾದದ್ದೇ ಎಂದು ಖಚಿತಪಡಿಸಿಕೊಳ್ಳಲು ಅನೇಕ ಎಐ- ಪತ್ತೆ ಪ್ಲಾಟ್ ಫಾರ್ಮ್ ಗಳ ಮೂಲಕ ಚಿತ್ರವನ್ನು ಪರೀಕ್ಷಿಸಿದ್ದೇವೆ.
ಮೆಕ್ಕಾದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ವೈರಲ್ ಚಿತ್ರದಲ್ಲಿ “ತಂತ್ರಜ್ಞಾನ ಕುಶಲತೆಯ ಹೆಚ್ಚಿನ ಸಾಕ್ಷ್ಯಗಳನ್ನು ಟ್ರೂ ಮೀಡಿಯಾ ಕಂಡುಕೊಂಡಿದೆ.
ಇನ್ನೊಂದು ಎಐ-ಇಮೇಜ್ ಡಿಟೆಕ್ಟರ್ ಹೈವ್ ಮೊಡರೇಶನ್ ,ಮೂಲಕ ಪರಿಶೀಲಿಸಿದಾಗ, ಇದು ಎಐ-ರಚಿಸಿದ ಅಥವಾ ಡೀಪ್ ಫೇಕ್ ವಿಷಯವನ್ನು ಹೊಂದಿರುವ 99.9% ಸಾಧ್ಯತೆಯನ್ನು ತೋರಿಸಿದೆ.
ಮತ್ತೊಂದು ಸಾಧನವಾದ ಫೇಕ್ ಇಮೇಜ್ ಡಿಟೆಕ್ಟರ್ ಕೂಡ ಈ ಚಿತ್ರವನ್ನು “ಕಂಪ್ಯೂಟರ್ ಮೂಲಕ ರಚಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ” ಎಂದು ದೃಢಪಡಿಸಿದೆ.
Conclusion
ಶಾರುಖ್ ಖಾನ್ ಮತ್ತು ಗೌರಿ ಖಾನ್ ಮೆಕ್ಕಾದಲ್ಲಿ ಕಾಣಿಸಿಕೊಂಡಿರುವ ವೈರಲ್ ಫೋಟೋ ಎಂದು ಹೇಳಲಾದ ಫೋಟೋ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್-ಎಐ) ಮೂಲಕ ಮಾಡಲಾಗಿದೆ ಎಂದು ಕಂಡುಬಂದಿದೆ.
Also Read: ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ
Result: Altered Photo/Video
Our Sources
News report By Times of India Dated: October 8,2024
News report By News 18 Dated: October 8,2024
TrueMedia Website
Hive Moderation Website
Fake Image Detector tool
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.