Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಭೆ ಎಂದು ಪರಿಗಣಿಸಲಾದ ಮಹಾಕುಂಭಮೇಳವು ಫೆಬ್ರವರಿ 26 ರ ಬುಧವಾರದಂದು ಮುಕ್ತಾಯಗೊಂಡಿದೆ. ಜನವರಿ 13, 2025 ರಂದು ಮಹಾಕುಂಭ ಮೇಳೆ ಪ್ರಯಾಗ್ ರಾಜ್ ನಲ್ಲಿ ಆರಂಭವಾದಾಗಿನಿಂದ ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಉದ್ಯಮಿಗಳಿಂದ ಹಿಡಿದು ಚಲನಚಿತ್ರ ಸೆಲೆಬ್ರಿಟಿಗಳವರೆಗೆ ಹಲವಾರು ಅತಿಥಿಗಳು ಆಗಮಿಸಿದ್ದಾರೆ .
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕ ಪರಿಶೀಲನೆ ನಡೆಸದ ದೃಶ್ಯಗಳು ಹೇರಳವಾಗಿವೆ. ಅವುಗಳಲ್ಲಿ ಸೆಲೆಬ್ರೆಟಿಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಫೋಟೋಗಳೂ ಸೇರಿವೆ. ನ್ಯೂಸ್ಚೆಕರ್ ಅಂತಹ ಹಲವಾರು ಫೋಟೋಗಳನ್ನು ತನಿಖೆ ಮಾಡಿದ್ದು ಅವು ಎಐ ನಿಂದ ರಚಿತವಾಗಿವೆ ಎಂದು ಕಂಡುಹಿಡಿದಿದೆ.
ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳದಲ್ಲಿ ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಸಂಜಯ್ ದತ್ ಅವರನ್ನು ತೋರಿಸಲಾಗಿದೆ ಎನ್ನಲಾದ ಎರಡು ಛಾಯಾಚಿತ್ರಗಳು ಇಲ್ಲಿವೆ.

ಪೋಸ್ಟ್ ಅನ್ನು ಇಲ್ಲಿ ನೋಡಬಹುದು .
ನಟರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎನ್ನಲಾದ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಚಿತ್ರಗಳ ಹೆಚ್ಚು ಬಣ್ಣದ ಹೊಳಪನ್ನು ಹೊಂದಿರುವುದು, ಮಸುಕಾದ ಹಿನ್ನೆಲೆ ಹೊಂದಿರುವುದರಿಂದ ಇದು ಎಐ ಮೂಲಕ ಸೃಷ್ಟಿಸಲ್ಪಟ್ಟಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿತು.
ನಂತರ ನಾವು ಎಐ ಪತ್ತೆ ಸಾಧನಗಳ ಮೂಲಕ ಫೋಟೋಗಳನ್ನು ಪರಿಶೀಲಿಸಿದ್ದೇವೆ. ಈ ವೇಳೆ ಎಐ ಬಳಸಿರುವುದು ಖಚಿತವಾಗಿದೆ. ಉದಾಹರಣೆಗೆ, wasitai.com ವೆಬ್ಸೈಟ್ , “ಈ ಚಿತ್ರ ಅಥವಾ ಅದರ ಮಹತ್ವದ ಭಾಗವನ್ನು AI ರಚಿಸಿದೆ ಎಂದು ಸಾಕಷ್ಟು ವಿಶ್ವಾಸವಿದೆ” ಎಂದು ತೀರ್ಮಾನಿಸಿತು.


ಸೈಟ್ಎಂಜಿನ್ ನಲ್ಲಿ ಪರಿಶೀಲಿಸಿದಾಗ ಮಹಾಕುಂಭದಲ್ಲಿ ಅಜಯ್ ದೇವಗನ್ ಮತ್ತು ಸಂಜಯ್ ದತ್ ಅವರನ್ನು ತೋರಿಸಲಾಗಿದೆ ಎಂದು ಹೇಳಲಾದ ಎರಡೂ ಫೋಟೋಗಳು ಎಐನಿಂದ ಮಾಡಿದ್ದು ಎಂದು 99%ರಷ್ಟರ ಸಂಭವನೀಯತೆಯನ್ನು ಲೆಕ್ಕಹಾಕಿದೆ.


ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರು ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್ ಅವರೊಂದಿಗೆ ಮಹಾಕುಂಭದಲ್ಲಿ ಪೋಸ್ ನೀಡುತ್ತಿರುವ ಫೋಟೋವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

ಆ ಪೋಸ್ಟ್ ಅನ್ನು ಇಲ್ಲಿ ನೋಡಬಹುದು .
ಪ್ರೀತಿ ಜಿಂಟಾ ಇತ್ತೀಚೆಗೆ ಮಹಾಕುಂಭಕ್ಕೆ ಭೇಟಿ ನೀಡಿದ್ದರೂ, ಕ್ರಿಕೆಟಿಗನೊಂದಿಗೆ ಹೋದ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ.
ಫೋಟೋದಲ್ಲಿ ಜಿಂಟಾ ಅವರ ಬೆರಳುಗಳು ವಿರೂಪಗೊಂಡಿರುವುದನ್ನು ನಾವು ಗಮನಿಸಿದ್ದೇವೆ, ಇದು ಫೋಟೋ ಎಐ ಮೂಲಕ ರಚಿತವಾಗಿದೆ ಎಂಬುದರ ಸಂಕೇತವಾಗಿದೆ.

ಇದನ್ನು ಅನುಸರಿಸಿ, ನಾವು ಚಿತ್ರವನ್ನು ಎಐ ಪತ್ತೆ ಪರಿಕರಗಳಲ್ಲಿ ಪರಿಶೀಲಿಸಿದ್ದೇವೆ, ಅವುಗಳು ಎಐನಿಂದ ರಚಿಸಿದ್ದನ್ನು ದೃಢಪಡಿಸಿವೆ. wasitai.com ವೆಬ್ಸೈಟ್ “ಈ ಚಿತ್ರ ಅಥವಾ ಅದರ ಗಮನಾರ್ಹ ಭಾಗವು ಎಐ ನಿಂದ ರಚಿಸಲ್ಪಟ್ಟಿದೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ” ಎಂದು ಕಂಡುಹಿಡಿದಿದೆ. ಎಐ ಪತ್ತೆ ಹಚ್ಚುವ ಸೈಟ್ಇಂಜಿನ್ ಸಹ ಮಾಧ್ಯಮವು ಡೀಪ್ಫೇಕ್ (99%) ಆಗಿರಬಹುದು ಎಂದು ತೀರ್ಮಾನಿಸಿದೆ.


ಶಾರುಖ್ ಖಾನ್ ಕೂಡ ಮಹಾಕುಂಭಮೇಳಕ್ಕೆ ನೀಡಿದ್ದರು ಮತ್ತು ಅವರು ಅಮೇರಿಕನ್ ಕುಸ್ತಿಪಟುಗಳಾದ ರೋಮನ್ ರೇನ್ಸ್ ಮತ್ತು ರೊಂಡಾ ರೌಸಿ ಅವರೊಂದಿಗೆ ಕಾಣಿಸಿಕೊಂಡಿದ್ದರು ಎಂದು ಹೇಳಿಕೊಳ್ಳಲು ಬಳಕೆದಾರರು ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ಅನ್ನು ಇಲ್ಲಿ ನೋಡಬಹುದು .
ಖಾನ್ ಅವರು ಕುಂಭಮೇಳಕ್ಕೆ ಭೇಟಿ ನೀಡಿದ್ದರ ಬಗ್ಗೆ ಯಾವುದೇ ವರದಿಗಳಿಲ್ಲ. ರೋಮನ್ ರೇನ್ಸ್ ಮತ್ತು ರೊಂಡಾ ರೌಸಿ ಕುಂಭಕ್ಕೆ ಆಗಮಿಸಲಿಲ್ಲ. ಈ ಫೋಟೋಗಳೂ AI ಎಂದು ಕಂಡುಬಂದಿದೆ. ಉದಾಹರಣೆಗೆ, wasitai.com ಉಪಕರಣವು ಎರಡೂ ಚಿತ್ರಗಳನ್ನು ಅಥವಾ ಅವುಗಳ ಗಮನಾರ್ಹ ಭಾಗವನ್ನು ಎಐ ಬಳಸಿ ರಚಿಸಲಾಗಿದೆ ಎಂದು ಹೇಳಿದೆ.


ವೆಬ್ಸೈಟ್ ಈಸ್ ಇಟ್ AI AI ನಿಂದಾಗಿ ಮಾಡಲ್ಪಟ್ಟಿದೆ ಎಂಬುದನ್ನು 80% ರಷ್ಟು ಖಚಿತಪಡಿಸಿದೆ. ಹಾಗೆಯೇ ಸೈಟ್ಎಂಜಿನ್ AI ಫೋಟೋ ಎಐನಿಂದ ಮಾಡಿದ್ದಾಗಿದೆ ಎಂದು 98% ರಷ್ಟು ಖಚಿತಪಡಿಸಿದೆ.


ಇನ್ನೊಂದು ಸಂದರ್ಭದಲ್ಲಿ, ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಮತ್ತು ನಟಿ ಸನ್ನಿ ಲಿಯೋನ್ ಪ್ರಯಾಗ್ರಾಜ್ನಲ್ಲಿ ಇರುವ ಚಿತ್ರಗಳನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ.

ಪೋಸ್ಟ್ ಅನ್ನು ಇಲ್ಲಿ ನೋಡಬಹುದು .
ಚಿತ್ರಗಳು ಎಐ ಮಾಧ್ಯಮ ಮೂಲಕ ಮಾಡಿದ ಬಗ್ಗೆ ಸ್ಪಷ್ಟ ಚಿಹ್ನೆಗಳನ್ನು ಹೊಂದಿವೆ ಎಂದು ನಾವು ಗಮನಿಸಿದ್ದೇವೆ – ಫೋಟೊದ ವಿನ್ಯಾಸ ಮತ್ತು ಮಸುಕಾದ ಹಿನ್ನೆಲೆ ಇದರಲ್ಲಿ ಪ್ರಮುಖವಾಗಿದೆ. ನಾವು ಎಐ ಪತ್ತೆ ಸಾಧನಗಳಲ್ಲಿ ಫೋಟೋಗಳನ್ನು ಪರಿಶೀಲಿಸಿದ್ದೇವೆ, ಅದು ಅವುಗಳು ಎಐ ನಿಂದ ಮಾಡಿದ್ದರ ಬಗ್ಗೆ ಹೆಚ್ಚಿನ ಸಂಭವನೀಯತೆಯನ್ನು ತೋರಿಸಿವೆ.
ಹೈವ್ ಮಾಡರೇಶನ್ 1ನೇ ಚಿತ್ರ ಎಐ ನಿಂದ ಮಾಡಿದ್ದು ಅಥವಾ ಡೀಪ್ಫೇಕ್ ಆಗಿರುವ ಸಾಧ್ಯತೆಯನ್ನು 97.4% ರಷ್ಟು ಎಂದು ಹೇಳಿದೆ. 2 ನೇ ಚಿತ್ರಕ್ಕೂ 98.4% ಎಐನಿಂದ ಮಾಡಲಾದ ಸಂಭವನೀಯತೆಯನ್ನು ಲೆಕ್ಕಹಾಕಿದೆ. ಸೈಟ್ಎಂಜಿನ್ ಚಿತ್ರ 1ನ್ನು ಎಐ ರಚಿತವಾಗುವ ಸಾಧ್ಯತೆ 99% ಎಂದು ಕಂಡುಹಿಡಿದಿದೆ.


ಕುಂಭಮೇಳದಲ್ಲಿ ರೋಮನ್ ರೇನ್ಸ್ ಜೊತೆ ಅಮೇರಿಕನ್ ನಟ ಮತ್ತು ಕುಸ್ತಿಪಟು ಡ್ವೇನ್ ಜಾನ್ಸನ್ ಇರುವ ಫೋಟೋ ಕೂಡ ಆನ್ಲೈನ್ನಲ್ಲಿ ವೈರಲ್ ಆಗಿದೆ.

ಪೋಸ್ಟ್ ಅನ್ನು ಇಲ್ಲಿ ನೋಡಬಹುದು .
ಈ ಫೋಟೋ ಸಾಮಾನ್ಯದಂತಿರದೆ ಹೆಚ್ಚಿನ ಹೊಳಪು ಮತ್ತು ಹಿನ್ನಲೆ ಮಸುಕಾಗಿರುವುದರಿಂದ ಫೋಟೋ ಎಐ ನಿಂದ ಮಾಡಿದ್ದಾಗಿದೆ ಎಂದು ಹೇಳುತ್ತದೆ. ಚಿತ್ರದ ಕೆಳಗಿನ ಬಲ ಮೂಲೆಯಲ್ಲಿ X ನ ಎಐ ಸಹಾಯಕ GROK ನ ವಾಟರ್ಮಾರ್ಕ್ ಅನ್ನು ಸಹ ನಾವು ಗಮನಿಸಿದ್ದೇವೆ.

AI ಪತ್ತೆ ಸಾಧನ ಹೈವ್ ಮಾಡರೇಶನ್ನಲ್ಲಿ ಚಿತ್ರವನ್ನು ಹಾಕಿದ್ದು ಇದು ಎಐ ನಿಂದ ಮಾಡಿದ್ದು ಅಥವಾ ಡೀಪ್ಫೇಕ್ ವಿಷಯವನ್ನು ಹೊಂದಿರುವ ಸಾಧ್ಯತೆಯನ್ನು 99.1% ಎಂದು ಹೇಳಿದೆ.

ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ನಟಿ ನೋರಾ ಫತೇಹಿ ಅವರೊಂದಿಗೆ ಈಜುಕೊಳದಲ್ಲಿ ಇರುವ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡಿವೆ.

ಪೋಸ್ಟ್ ಅನ್ನು ಇಲ್ಲಿ ನೋಡಬಹುದು .
ಚೋಪ್ರಾ ನಟಿಯೊಂದಿಗೆ ಇರುವ ಚಿತ್ರಗಳ ಕೆಳಗಿನ ಬಲ ಮೂಲೆಯಲ್ಲಿ X ನ ಎಐ ಸಹಾಯಕ GROK ನ ವಾಟರ್ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ.
ಇದಲ್ಲದೆ, AI ಪತ್ತೆ ಪರಿಕರಗಳು ಚಿತ್ರಗಳನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ ಎಂದು ತೀರ್ಮಾನಿಸಿವೆ. ಹೈವ್ ಮಾಡರೇಶನ್ ಚಿತ್ರಗಳು (97.9% ಮತ್ತು 78%)ರಷ್ಟು AIನಿಂದ ಮಾಡಿದ್ದು ಅಥವಾ ಡೀಪ್ಫೇಕ್ ವಿಷಯವನ್ನು ಒಳಗೊಂಡಿರುವ ಸಾಧ್ಯತೆಯನ್ನು ಕಂಡುಹಿಡಿದಿದೆ.


ಮತ್ತೊಂದು ಎಐ ಪತ್ತೆ ಸಾಧನವಾದ ಸೈಟ್ಎಂಜಿನ್ ಎರಡೂ ಫೋಟೋಗಳು ಎಐ ನಿಂದ ಮಾಡಲಾಗಿದೆ ಎಂಬ ಬಗ್ಗೆ 99% ರಷ್ಟು ಸಂಭವನೀಯತೆಯನ್ನು ಹೇಳಿದೆ.


ಮಹಾಕುಂಭ ಮೇಳದ ಸಮಯದಲ್ಲಿ, ಧಾರ್ಮಿಕ ಸಭೆಯಲ್ಲಿ ಸೆಲೆಬ್ರಿಟಿಗಳನ್ನು ತೋರಿಸುವ ಮಾಧ್ಯಮಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ಹಲವಾರು ನಿದರ್ಶನಗಳನ್ನು ನ್ಯೂಸ್ಚೆಕರ್ ಭೇದಿಸಿದೆ. ಮಹಾಕುಂಭದಲ್ಲಿ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ಫೋಟೋ ಈ ಹಿಂದೆ ವೈರಲ್ ಆಗಿತ್ತು, ಮತ್ತು ಬಳಕೆದಾರರು ಪ್ರಕಾಶ್ ರಾಜ್ ಅವರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆಂದು ಹೇಳಲಾದ ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲ್ಪಟ್ಟ ಫೋಟೋವನ್ನು ನಿಜವೆಂದು ಪ್ರಸಾರ ಮಾಡಲಾಗಿತ್ತು.
ಮಹಾಕುಂಭದಲ್ಲಿ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿಯನ್ನು ತೋರಿಸುವ ಎಐ ರಚಿಸಿದ ವೀಡಿಯೋವನ್ನು ಸಹ ನಿಜವಾದ ಘಟನೆ ಎಂದು ಹಂಚಿಕೊಳ್ಳಲಾಗಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಕುಂಭಮೇಳದಲ್ಲಿ 100 ಅಡಿ ಉದ್ದದ ಹಾವಿತ್ತು ಎಂದು ಹೇಳಿಕೊಳ್ಳುವ AI ರಚಿಸಿದ ವೀಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ.
ಮಹಾಕುಂಭ ಮೇಳದ ಕಾಲ್ತುಳಿತದ ನಂತರ, ಬಾಗೇಶ್ವರ ಧಾಮದ ಮುಖ್ಯಸ್ಥ ಧೀರೇಂದ್ರ ಶಾಸ್ತ್ರಿ ಅವರು ದುರಂತ ಘಟನೆಯ ಭವಿಷ್ಯ ನುಡಿದಿದ್ದಾರೆ ಎಂದು ಹೇಳಲಾದ ಪತ್ರವನ್ನು ತೋರಿಸಲು ಕೃತಕ ಬುದ್ಧಿಮತ್ತೆಯಿಂದ ಮಾಡಲಾದ ಫೋಟೋ ವೈರಲ್ ಆಗಿತ್ತು. ಮತ್ತೊಂದು ಸಂದರ್ಭದಲ್ಲಿ, ಸನ್ಯಾಸಿಯಂತೆ ನಟಿಸುತ್ತಿದ್ದ ಭಯೋತ್ಪಾದಕನನ್ನು ಮಹಾಕುಂಭಮೇಳದಿಂದ ಬಂಧಿಸಲಾಗಿದೆ ಎಂದು ಸುಳ್ಳು ಹೇಳಲು ಎಐನಿಂದ ರಚಿಸಲಾದ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
Sources
Hive moderation Website
Sightengine Website
wasitai.com
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)