ಈ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಟಿಪ್ಪು ಟ್ಯಾಬ್ಲೋ ಪ್ರದರ್ಶಸಿದೆ, ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ, ಬೈಕಿನಲ್ಲಿ ಇಬ್ಬರು ಪುರುಷ ಸವಾರರು ಸಂಚರಿಸುವಂತಿಲ್ಲ ಎಂಬ ವೀಡಿಯೋ, ನಟ ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಫೋಟೋ, ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಯನ್ನು ಥಳಿಸಿದ ವೀಡಿಯೋ, ರಾತ್ರಿಯ ಊಟಕ್ಕೆ ಚಪಾತಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಹೇಳಿಕೆಗಳು ಸುಳ್ಳು ಎಂದು ನಿರೂಪಿಸಿದೆ.

ಈ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಟಿಪ್ಪು ಟ್ಯಾಬ್ಲೋ ಪ್ರದರ್ಶಸಿದೆ ಎನ್ನುವುದು ಸುಳ್ಳು!
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕರ್ನಾಟಕವು ಟಿಪ್ಪು ಸುಲ್ತಾನ್ ಅವರ ಜೀವನವನ್ನು ಚಿತ್ರಿಸುವ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಿತು ಎಂದು ಹೇಳಿಕೆಯೊಂದು ಹರಿದಾಡಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಈ ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಟಿಪ್ಪು ಟ್ಯಾಬ್ಲೋ ಪ್ರದರ್ಶಸಿಲ್ಲ, ಈ ಬಾರಿ ಲಕ್ಕುಂಡಿಯ ದೇಗುಲಗಳ ಬಗ್ಗೆ ಟ್ಯಾಬ್ಲೋ ಮಾಡಿದ್ದು 2014ರಲ್ಲಿ ಟಿಪ್ಪು ಟ್ಯಾಬ್ಲೋ ಪ್ರದರ್ಶಿಸಿತ್ತು ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ, ಬೈಕಿನಲ್ಲಿ ಇಬ್ಬರು ಪುರುಷ ಸವಾರರು ಸಂಚರಿಸುವಂತಿಲ್ಲ ಎಂಬ ವೀಡಿಯೋ ಈಗಿನದ್ದಲ್ಲ!
ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ ಎಂಬ ಹೇಳಿಕೆಯಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವಾಟ್ಸಾಪ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, ಬೈಕಿನಲ್ಲಿ ಇಬ್ಬರು ಪುರುಷರು ಪ್ರಯಾಣಿಸುವಂತಿಲ್ಲ, ಇದಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ ಎಂದಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, ನಾಳೆಯಿಂದ ಮಂಗಳೂರಲ್ಲಿ ಹೊಸ ರೂಲ್ಸ್ ಜಾರಿ ಬೈಕ್ ನಲ್ಲಿ ಇಬ್ಬರು ಪುರುಷ ಸವಾರರಿಗೆ ನಿಷೇಧ ಎಂಬ ಸುದ್ದಿ 2022ರದ್ದಾಗಿದ್ದು ಈಗ ತಪ್ಪಾದ ಸಂದರ್ಭದಲ್ಲಿ ಹಂಚಿಕೊಳ್ಳಲಾಗುತ್ತಿದೆ ಈ ಕುರಿತ ವರದಿ ಇಲ್ಲಿದೆ

ನಟ ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಎಐ ಸೃಷ್ಟಿ!
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂದರ್ಭದಲ್ಲಿ ನಟ ಮತ್ತು ಬಿಜೆಪಿಯ ಕಟು ಟೀಕಾಕಾರರಾಗಿರುವ ಪ್ರಕಾಶ್ ರಾಜ್ ಅವರು ಪವಿತ್ರ ಸ್ನಾನ ಮಾಡುತ್ತಿದ್ದಾರೆ ಎಂಬಂತೆ ಫೊಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯ ಪ್ರಕಾರ, ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್ ಸ್ನಾನ ಮಾಡಿದ್ದಾರೆನ್ನುವ ಫೋಟೋ ಎಐ ಆಗಿದೆ. ಅದು ನಿಜವಾದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಅಮೃತಸರದಲ್ಲಿ ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ ವ್ಯಕ್ತಿಯನ್ನು ಥಳಿಸಿದ ವೀಡಿಯೋ ಇದಲ್ಲ!
ಪಂಜಾಬಿನ ಅಮೃತಸರದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರರ ಪ್ರತಿಮೆ ಧ್ವಂಸ ಮಾಡಿದ ಆರೋಪಿಯನ್ನು ಹೊಡೆಯುತ್ತಿರುವ ದೃಶ್ಯ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ತನಿಖೆಯ ಪ್ರಕಾರ, ರಾಯ್ಪುರ ನ್ಯಾಯಾಲಯದ ಆವರಣದಲ್ಲಿ ಆರೋಪಿಗಳನ್ನು ಥಳಿಸುವ ವೀಡಿಯೋವನ್ನು ಅಮೃತಸರದಲ್ಲಿ ಡಾ.ಅಂಬೇಡ್ಕರ್ ಅವರ ಪ್ರತಿಮೆ ಧ್ವಂಸ ಮಾಡಿದ ವ್ಯಕ್ತಿಗೆ ಥಳಿಸುತ್ತಿರುವ ದೃಶ್ಯ ಎಂದು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ರಾತ್ರಿಯ ಊಟಕ್ಕೆ ಚಪಾತಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವೇ?
ರಾತ್ರಿ ಊಟಕ್ಕೆ ಚಪಾತಿ ತಿನ್ನುವುದು ಒಳ್ಳೆಯದಲ್ಲ. ಇದು ಹೊಟ್ಟೆಯಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ, ಆಮ್ಲೀಯತೆ, ಗ್ಯಾಸ್ಟ್ರಿಕ್ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ಹೆಚ್ಚಿಸುತ್ತದೆ ಎಂಬ ಹೇಳಿಕೆ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ರಾತ್ರಿಯ ಊಟಕ್ಕೆ ಚಪಾತಿ ತಿನ್ನುವುದು ಆರೋಗ್ಯಕ್ಕೆ ಕೆಟ್ಟದ್ದಲ್ಲ, ಅದು ಸಮತೋಲಿತ ಆಹಾರದ ಭಾಗವಾಗಬಹುದು. ಇದು ಅಗತ್ಯವಾದ ಪೋಷಕಾಂಶಗಳು, ಫೈಬರ್ ಮತ್ತು ಶಕ್ತಿಯನ್ನು ಒದಗಿಸುವ ಪೌಷ್ಟಿಕ ಆಹಾರವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.