Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಆಪರೇಷನ್ ಸಿಂಧೂರದ ವೇಳೆ ಭಾರತ-ಪಾಕಿಸ್ತಾನ ವೈಮಾನಿಕ ಘರ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐಶ್ವರ್ಯಾ ರೈ ಪ್ರಶ್ನೆ
ನಟಿ ಐಶ್ವರ್ಯಾ ಪ್ರಧಾನಿ ಮೋದಿಯವರನ್ನು ಪ್ರಶ್ನೆ ಮಾಡಿದ್ದಾರೆ ಎನ್ನುವ ವೀಡಿಯೋ ನಕಲಿಯಾಗಿದೆ
ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ-ಪಾಕಿಸ್ತಾನ ವೈಮಾನಿಕ ಘರ್ಷಣೆಯ ಕುರಿತು ಪ್ರಧಾನಿ ಮೋದಿ ಅವರನ್ನು ನಟಿ ಐಶ್ವರ್ಯಾ ರೈ ಪ್ರಶ್ನಿಸಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.
ಈ ಕ್ಲಿಪ್ನಲ್ಲಿ, ನಟಿ ಐಶ್ವರ್ಯಾ ಅವರು, “ನಾವು ಪಾಕಿಸ್ತಾನಕ್ಕೆ 6 ಜೆಟ್ಗಳನ್ನು ಏಕೆ ಕಳೆದುಕೊಂಡೆವು, 4 ರಫೇಲ್ಗಳು ಏಕೆ ಕಳೆದುಕೊಂಡೆವು, 2 S-400 ವ್ಯವಸ್ಥೆಗಳು ಏಕೆ ವಿಫಲವಾಯಿತು ಮತ್ತು ಕಾಶ್ಮೀರ ಮತ್ತು ರಾಜಸ್ಥಾನದಲ್ಲಿನ ನಮ್ಮ ಗಡಿಯ ಕೆಲವು ಭಾಗಗಳು ಪಾಕಿಸ್ತಾನಕ್ಕೆ ಏಕೆ ಕಳೆದವು ಎಂದು ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಲು ಬಯಸುತ್ತೇನೆ… ಪ್ರಧಾನಮಂತ್ರಿಗಳೇ, ಚಲನಚಿತ್ರೋದ್ಯಮವು ರಾಜಕೀಯದಲ್ಲಿ ಭಾಗಿಯಾಗುವುದಿಲ್ಲ ಎಂದು ನಮಗೆ ತಿಳಿದಿದೆ, ಆದರೆ ರಾಷ್ಟ್ರವು ಉತ್ತರಗಳನ್ನು ಬಯಸುತ್ತದೆ ” ಎಂದು ಕೇಳುತ್ತಿರುವುದು ಕೇಳಿಸುತ್ತದೆ.

“ಐಶ್ವರ್ಯ ರೈ”, “ಪಿಎಂ ಮೋದಿ” ಮತ್ತು “ಭಾರತ-ಪಾಕಿಸ್ತಾನ ಸಂಘರ್ಷ” ಎಂಬ ಕೀವರ್ಡ್ ಹುಡುಕಾಟವನ್ನು ಮಾಡಿದಾಗ ವೈರಲ್ ಕ್ಲಿಪ್ ಕುರಿತಂತೆ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಸಿಗಲಿಲ್ಲ.
ವೈರಲ್ ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ ANI ಯ YouTube ವೀಡಿಯೋ ಸಿಕ್ಕಿತು , ಅದರ ವಾಟರ್ಮಾರ್ಕ್ ವೈರಲ್ ಕ್ಲಿಪ್ನಲ್ಲಿ ಕಾಣಿಸಿಕೊಂಡಿದ್ದು, ಅದು ನವೆಂಬರ್ 19, 2025 ರಂದು ಆಂಧ್ರಪ್ರದೇಶದ ಪುಟ್ಟಪರ್ತಿಯಲ್ಲಿ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಐಶ್ವರ್ಯಾ ರೈ ಮಾತನಾಡುತ್ತಿರುವುದಾಗಿದೆ. ವೈರಲ್ ಕ್ಲಿಪ್ ನಲ್ಲಿಯೂ ನಟಿ ಅದೇ ಉಡುಪಿನಲ್ಲಿ ನಿಂತಿರುವುದು ಕಾಣಬಹುದು.

ಮೂಲ ಭಾಷಣದಲ್ಲಿ, ರೈ ಅವರು ಪ್ರಧಾನಿ ಮೋದಿ ಅವರಿಗೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾರೆ ಮತ್ತು ಶ್ರೀ ಸತ್ಯ ಸಾಯಿ ಬಾಬಾ ಅವರ ಬೋಧನೆಗಳನ್ನು ಉಲ್ಲೇಖಿಸುತ್ತಾರೆ, ಭಾರತ-ಪಾಕಿಸ್ತಾನ ಸಂಬಂಧಗಳು ಅಥವಾ ಮಿಲಿಟರಿ ವಿಚಾರಗಳ ಬಗ್ಗೆ ಅವರೇನೂ ಹೇಳಲಿಲ್ಲ ಎಂಬುದನ್ನು ಗಮನಿಸಿದ್ದೇವೆ.
ನವೆಂಬರ್ 19, 2025 ರಂದು ಡಿಡಿ ನ್ಯೂಸ್ ನೇರ ಪ್ರಸಾರದಲ್ಲೂ ಐಶ್ವರ್ಯಾ ರೈ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿರುವ ಯಾವುದೇ ನಿದರ್ಶನವಿಲ್ಲ.
ವೈರಲ್ ಕ್ಲಿಪ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೆಲವು ಬದಲಾವಣೆಗಳು ಕಂಡುಬಂದವು:

AI-ಆಧಾರಿತ ತಪಾಸಣೆಗಳು ಈ ಕುಶಲತೆಯನ್ನು ಮತ್ತಷ್ಟು ದೃಢಪಡಿಸಿವೆ:

ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಭಾರತಕ್ಕೆ ಮಾಡಿದ ನಷ್ಟಗಳ ಬಗ್ಗೆ ನಟಿ ಐಶ್ವರ್ಯಾ ರೈ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರೆ ಎಂದು ಹೇಳುವ ವೈರಲ್ ಕ್ಲಿಪ್ ಅನ್ನು ಡಿಜಿಟಲ್ ಆಗಿ ತಿರುಚಲಾಗಿದೆ. ಆ ಕಾರ್ಯಕ್ರಮದಲ್ಲಿ ಅವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕಂಡುಬಂದಿದೆ.
FAQ ಗಳು
Q1. ಪಾಕಿಸ್ತಾನ ಭಾರತಕ್ಕೆ ಮಾಡಿದ ನಷ್ಟಗಳ ಬಗ್ಗೆ ಐಶ್ವರ್ಯಾ ರೈ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದಾರಾ?
ಇಲ್ಲ. ಅವರು ಅಂತಹ ಯಾವುದೇ ಹೇಳಿಕೆ ನೀಡಿಲ್ಲ.
Q2. ಮೂಲ ವೀಡಿಯೋ ಎಲ್ಲಿಂದ ಬಂತು?
ನವೆಂಬರ್ 19, 2025 ರಂದು ಆಂಧ್ರಪ್ರದೇಶದಲ್ಲಿ ನಡೆದ ಶ್ರೀ ಸತ್ಯ ಸಾಯಿ ಬಾಬಾ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಐಶ್ವರ್ಯಾ ರೈ ಮಾಡಿದ ಭಾಷಣದ ನಿಜವಾದ ದೃಶ್ಯಾವಳಿ ಇದು.
Q3. ಕ್ಲಿಪ್ ಅನ್ನು ಕುಶಲತೆಯಿಂದ ಮಾಡಲಾಗಿದೆ ಎಂದು ಹೇಗೆ ಗೊತ್ತು?
ತಿರುಚಿದ ದೃಶ್ಯಗಳು ಮತ್ತು AI ಆಧಾರಿತ ಡೀಪ್ಫೇಕ್ ಡಿಟೆಕ್ಟರ್ಗಳು ಕ್ಲಿಪ್ ಅನ್ನು ಬದಲಾಯಿಸಲಾಗಿದೆ ಎಂದು ಖಚಿತಪಡಿಸುತ್ತವೆ.
Our Sources
YouTube Video By ANI, Dated November 19, 2025
YouTube Video By DD News, Dated November 19, 2025
Resemble.ai Website
Hiya Deepfake Voice Detector
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Salman
December 4, 2025
Ishwarachandra B G
November 1, 2025
Runjay Kumar
October 31, 2025