Authors
Claim
ಬಿಜೆಪಿ ವಿರುದ್ಧ ಜನಾಕ್ರೋಶ, ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ
Fact
ಬಿಜೆಪಿ ಚುನಾವಣೆ ಪ್ರಚಾರ ವಾಹನದ ಮೇಲೆ ದಾಳಿ ನಡೆಸುವ ಈ ವೀಡಿಯೋ, 2022ರಲ್ಲಿ ತೆಲಂಗಾಣದ ಮನುಗೂಡೆ ಎಂಬಲ್ಲಿ ಟಿಆರ್ ಎಸ್, ಬಿಜೆಪಿ ಕಾರ್ಯಕರ್ತನ ನಡುವಿನ ಗಲಾಟೆಯದ್ದು
ಬಿಜೆಪಿ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಜನ ಅಸಹ್ಯ ಪಡುತ್ತಿದ್ದಾರೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಟ್ವಿಟರ್ ನಲ್ಲಿ ಕರ್ನಾಟಕ ಕಾಂಗ್ರೆಸ್ ಕ್ಲೇಮ್ ಒಂದನ್ನು ಹಾಕಿದ್ದು, ಅದು ಹೀಗಿದೆ “ಖಾಲಿ ಕುರ್ಚಿಗಳ ಸಮಾವೇಶ ನಡೆಸುತ್ತಿದ್ದ ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ. ವಾಹನಕ್ಕೆ ಬಿದ್ದ ಒಂದೊಂದು ಕಲ್ಲೆಟುಗಳೂ @BJP4Karnataka ಯ ಬೆಲೆ ಏರಿಕೆ, ಭ್ರಷ್ಟಾಚಾರ, ವಂಚನೆ, ದುರಾಡಳಿತಕ್ಕೆ ಸಿಕ್ಕ ಉತ್ತರಗಳು.” ಎಂದು ಹೇಳಿದೆ. ಈ ಕುರಿತ ಕ್ಲೇಮ್ ಇಲ್ಲಿದೆ.
ಈ ವೈರಲ್ ವೀಡಿಯೋದಲ್ಲಿ ಜನರು ಬಿಜೆಪಿಯ ಪ್ರಚಾರ ವಾಹನವೊಂದಕ್ಕೆ ಕಲ್ಲೆಸೆಯುವುದು, ಹಾನಿ ಮಾಡುವ ದೃಶ್ಯವಿದೆ.
ನ್ಯೂಸ್‌ಚೆಕರ್ ಈ ಬಗ್ಗೆ ಸತ್ಯಶೋಧನೆ ನಡೆಸಿದ್ದು ಇದು ತೆಲಂಗಾಣದ ಘಟನೆಯಾಗಿದ್ದು, ಕರ್ನಾಟಕಕ್ಕೆ ಮತ್ತು ಇಲ್ಲಿನ ಚುನಾವಣೆ ವಿದ್ಯಮಾನಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಅನ್ನು ಪರಿಶೀಲಿಸಿದಾಗ, ಹಿಂದವಿ ಎಂಬ ದೃಢೀಕೃತ ಟ್ವಿಟರ್ ಖಾತೆಯಿಂದ ಕರ್ನಾಟಕ ಕಾಂಗ್ರೆಸ್ ಟ್ವೀಟ್‌ಗೆ ಕಮೆಂಟ್ ಹಾಕಲಾಗಿದ್ದು “ಈ ವೀಡಿಯೋ ತೆಲಂಗಾಣದ್ದು” ಎಂದು ಹೇಳಲಾಗಿದೆ.
ಇದನ್ನು ಆಧಾರವಾಗಿರಿಸಿ, ಗೂಗಲ್ನಲ್ಲಿ “telangana bjp election van attacked video” ಎಂದು ಕೀವರ್ಡ್ ಸರ್ಚ್ ನಡೆಸಲಾಗಿದ್ದು ಟೈಮ್ಸ್ ಆಫ್ ಇಂಡಿಯಾ ನವೆಂಬರ್ 1, 2022ರಂದು ಅಪ್ಲೋಡ್ ಮಾಡಿದ ವೀಡಿಯೋ ಫಲಿತಾಂಶ ಲಭ್ಯವಾಗಿದೆ.
ಈ ವೀಡಿಯೋದ ವಿವರಣೆಯಲ್ಲಿ “ತೆಲಂಗಾಣದಲ್ಲಿ ಮನುಗೊಡೆ ಉಪಚುನಾವಣೆ ಸಂದರ್ಭ, ಪಲಿವೇಲ ಎಂಬಲ್ಲಿ ಬಿಜೆಪಿ ಶಾಸಕರ ಚುನಾವಣೆ ಪ್ರಚಾರದ ವೇಳೆ ಟಿಆರ್ ಎಸ್ ಬೆಂಬಲಿಗರು ದಾಳಿಮಾಡಿದರು ಎಂದು ಆರೋಪಿಸಲಾಗಿದೆ” ಎಂದು ಹೇಳಲಾಗಿದೆ.
Also Read: ಈದ್ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಹಲ್ಲೆ ನಡೆದಿದೆಯೇ, ವೈರಲ್ ವೀಡಿಯೋ ಹಿಂದಿನ ಅಸಲಿಯತ್ತೇನು?
ಈ ವೀಡಿಯೋದ ಮಾಹಿತಿ ಅನ್ವಯ ಇನ್ನಷ್ಟು ಶೋಧನೆ ನಡೆಸಲಾಗಿದ್ದು, ನವೆಂಬರ್ 1, 2022ರಂದು ಇಂಡಿಯಾ ಟಿವಿ ವರದಿ ಲಭ್ಯವಾಗಿದೆ. ಈ ವರದಿಯಲ್ಲಿ “ತೆಲಂಗಾಣದ ಮನುಗೊಡೆ ಉಪಚುನಾವಣೆ ಕಣ ಹಿಂಸಾಚಾರಕ್ಕೆ ಕಾರಣವಾಗಿದ್ದು, ಟಿಆರ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ” ಎಂದು ಹೇಳಲಾಗಿದೆ. ನಲ್ಗೊಂಡಾ ಎಂಬಲ್ಲಿ ಘಟನೆ ನಡೆದಿದ್ದು, ಎರಡೂ ಪಕ್ಷಗಳ ಜನರು ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಾಡಿದ ಘಟನೆ ನಡೆದಿದೆ” ಎಂದು ಹೇಳಲಾಗಿದೆ.
ಇಂಡಿಯಾ ಟಿವಿ ವರದಿಯಲ್ಲೇ, ಘಟನೆ ಬಗ್ಗೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಅವರ ಪ್ರತಿಕ್ರಿಯೆಯನ್ನೂ ಹಾಕಲಾಗಿದೆ. ಅವರ ಟ್ವೀಟ್ ಥ್ರೆಡ್ ಅನ್ನು ಪರಿಶೀಲಿಸಿದ ವೇಳೆ ಘಟನೆ ಕುರಿತ ಹಲವು ವೀಡಿಯೋಗಳು ಕಂಡುಬಂದಿವೆ. ಮತ್ತು ಕ್ಲೇಮ್ ವೀಡಿಯೋದೊಂದಿಗೆ ಸಾಮ್ಯತೆಯನ್ನು ಹೊಂದಿವೆ.
ಟಿಆರ್‌ಎಸ್-ಬಿಜೆಪಿ ಕಾರ್ಯಕರ್ತನ ನಡುವಿನ ಗಲಾಟೆಯ ಘಟನೆಯ ಬಗ್ಗೆ ನವೆಂಬರ್ 1, 2022ರಂದು ಎಎನ್‌ಐ ಕೂಡ ವೀಡಿಯೋ ಟ್ವೀಟ್ ಮಾಡಿದ್ದು, ಮನುಗೂಡೆ ಉಪಚುನಾವಣೆ ವೇಳೆ ಟಿಆರ್‌ಎಸ್ – ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಬಗ್ಗೆ ಹೇಳಿದೆ. ಅದು ಇಲ್ಲಿದೆ.
Conclusion
ಈ ಸತ್ಯಶೋಧನೆ ಪ್ರಕಾರ, “ಬಿಜೆಪಿಗೆ ಜನಾಕ್ರೋಶ ದರ್ಶನ ಮುಂದುವರೆದಿದೆ. ಬಿಜೆಪಿ ಅಭ್ಯರ್ಥಿಗಳಷ್ಟೇ ಅಲ್ಲ, ಬಿಜೆಪಿಯ ಪ್ರಚಾರ ವಾಹನವನ್ನು ಕಂಡರೂ ಜನರಿಗೆ ಅಸಹ್ಯ, ಆಕ್ರೋಶ ಹುಟ್ಟುವಂತಾಗಿದೆ.” ಎನ್ನುವ ಕ್ಲೇಮ್ ತಪ್ಪಾಗಿದೆ.
Results: False
Our Sources
Video report by, Times of India, Dated: November 1, 2022
Report by India Tv, Dated: November 1, 2022
Tweet by Hyndavi, Dated: April 24, 2024
Tweet by G Kishan Reddy, Dated: November 1, 2022
Tweet by ANI, Dated: November 1, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.