Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಈದ್ ದಿನ ಆಧುನಿಕ ಉಡುಗೆ ಧರಿಸಿದ ಮಹಿಳೆಯರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ
Fact
ಈದ್ ದಿನ ಆಧುನಿಕ ಉಡುಗೆ ಧರಿಸಿದ್ದಾರೆ ಎಂಬ ವಿಚಾರಕ್ಕಲ್ಲ, ಬೇರೆ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಈದ್ ದಿನ ಆಧುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು ಇಬ್ಬರು ಮಹಿಳೆಯರನ್ನು ಥಳಿಸಿದ್ದಾರೆ ಎಂಬ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಟ್ವಿಟರ್‌ನಲ್ಲಿ ಕಂಡುಬಂದಿರುವ ಈ ಕ್ಲೇಮಿನಲ್ಲಿ, “ಈ ಮುಸ್ಲಿಂ ಮಹಿಳೆಯರು ಅವರ ಹಬ್ಬದ (ಈದ್) ದಿನದಂದು ಆದುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು ಆ ಮಹಿಳೆಯರನ್ನು ಥಳಿಸಿದ ಘಟನೆ ಅಸ್ಸಾಂ’ನ ಭಾರ್ಪೆಟಾ ಜಿಲ್ಲೆಯಲ್ಲಿ ನಡೆದಿದೆ. “ಹಿಜಾಬ್ ಇಸ್ ಎ ಚಾಯ್ಸ್” “ ಎಂದು ಬರೆಯಲಾಗಿದೆ. ಇದನ್ನು ಇಲ್ಲಿ ನೋಡಬಹುದು.

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು ಎಂದು ತಿಳಿದುಬಂದಿದೆ.
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಕ್ಲೇಮನ್ನು ಪರಿಶೀಲಿಸಿದ್ದು, ಇದು @ajaychauhan41 ಎಂಬ ಟ್ವಿಟರ್ ಪೋಸ್ಟ್‌ನಿಂದ ರೀಪೋಸ್ಟ್ ಮಾಡಿದ್ದಾಗಿದೆ.
ಈ ಟ್ವೀಟ್‌ನಲ್ಲಿ “ಅಸ್ಸಾಂನ ಬಾರ್ಪೆಟಾ ಜಿಲ್ಲೆಯಲ್ಲಿ ನಡೆದ ಘಟನೆ” ಎಂದು ಹೇಳಲಾಗಿದ್ದು, ಅದರಂತೆ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದೆ. ಸರ್ಚ್ ವೇಳೆ ಹಲವು ಸುದ್ದಿ ವರದಿಗಳು ಲಭ್ಯವಾಗಿವೆ.
ಎಪ್ರಿಲ್ 24, 2023ರಂದು ಬತೋರಿ 24 ಪ್ರಕಟಿಸಿದ ವರದಿಯೊಂದರಲ್ಲಿ, (ಗೂಗಲ್ ಭಾಷಾಂತರದ ಪ್ರಕಾರ) “ಬರ್ಪೆಟಾ ರಸ್ತೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಢಾಬಾದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಯುವಕರ ಗುಂಪು, ಇಬ್ಬರು ಯುವತಿಯರಿಗೆ ಥಳಿಸಿದ್ದಾರೆ” ಎಂದು ವರದಿ ಹೇಳಿದೆ. ಈ ವರದಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ವೈರಲ್ ವೀಡಿಯೋವನ್ನು ಕೂಡ ಈ ವರದಿಯೊಂದಿಗೆ ಹಾಕಲಾಗಿದೆ.

ಪ್ರತಿದಿನ್ ಟೈಮ್ ಎಪ್ರಿಲ್ 24, 2023ರಂದು ಪ್ರಕಟಿಸಿದ ವರದಿಯ ಪ್ರಕಾರ, “ನೈತಿಕ ಪೊಲೀಸ್ ಗಿರಿ ಪ್ರಕರಣವೊಂದರಲ್ಲಿ ಅಸ್ಸಾಂ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರು ಇಲ್ಲಿನ ಬರ್ಪೆಟಾ ಜಿಲ್ಲೆಯ ಢಾಬಾದಲ್ಲಿ ಅನೈತಿಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ, ಸನಿದುಲ್ ಇಸ್ಲಾಮ್, ಬಿಲಾಲ್ ಹುಸೇನ್, ಅಮೀರ್ ಹುಸೇನ್, ಅಲಂಗಿರಿ ಅಲಿ, ಅಕಾಸ್ ಅಲಿ, ಸಕ್ಬಿಲ್ ಹುಸೇನ್, ಸದ್ದಾಂ ಹುಸೇನ್, ಜಹಿದುಲ್ ಇಸ್ಲಾಂ, ಅಬ್ದುಲ್ ಹುಸೇನ್, ಅಬ್ದುಲ್ ಲತೀಫ್, ರಾಜು ಅಹ್ಮದ್ ಎಂಬವರನ್ನು ಬಂಧಿಸಲಾಗಿದೆ ಎಂದಿದೆ. ರಾಷ್ಟ್ರೀಯ ಹೆದ್ದಾರಿಯ ಬೆಕಿ ನದಿ ತಟದ ಸೇತುವೆ ಸಮೀಪವಿರುವ ಢಾಬಾದಲ್ಲಿ ಈ ಘಟನೆ ನಡೆದಿದೆ. ಮಹಿಳೆಯರನ್ನು ಢಾಬಾದಿಂದ ಹೊರಗೆಳದು ಅವರಿಗೆ ಬೈದು ಬಳಿಕ ಗುಂಪು ದೈಹಿಕ ಹಲ್ಲೆ ನಡೆಸಲಾಗಿದೆ ಎಂದಿದೆ. ಕೆಲವು ಯುವಕರು ಆ ಮಹಿಳೆಯರನ್ನು ರಕ್ಷಿಸಿದ್ದಾರೆ ಅದರಲ್ಲೊಬ್ಬ ಮಹಿಳೆ ರಂಗಿಯಾ ಪ್ರದೇಶದವಳಾಗಿದ್ದು, ಮತ್ತೊಬ್ಬಾಕೆ ಪಾಠಶಾಲಾ ಪ್ರದೇಶದಾಕೆ” ಎಂದು ವರದಿ ಹೇಳಿದೆ.
Also Read: ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಎಪ್ರಿಲ್ 24, 2023ರಂದು ಇಂಡಿಯಾ ಟುಡೇ ನಾರ್ತ್ ಈಸ್ಟ್ ಕೂಡ ನೈತಿಕ ಪೊಲೀಸ್ ಗಿರಿಯ ಈ ಪ್ರಕರಣದ ವರದಿಯನ್ನು ಪ್ರಕಟಿಸಿದ್ದು, “11 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದೆ. ರಾಷ್ಟ್ರೀಯ ಹೆದ್ದಾರಿ 31ರ ಬೆಕಿ ನದಿ ಸನಿಹ ಈ ಘಟನೆ ನಡೆದಿದ್ದು, ಮಹಿಳೆಯರು ಅನೈತಿಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ, ಗುಂಪು ಬೈದು, ದೈಹಿಕ ಹಲ್ಲೆ ನಡೆಸಿದ್ದಾರೆ” ಎಂದಿದೆ.

ಈ ವರದಿಗಳಗಳಲ್ಲಿ ಈದ್ ಸಂದರ್ಭದಲ್ಲಿ ಆಧುನಿಕ ಬಟ್ಟೆ ಧರಿಸದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂಬ ಯಾವುದೇ ಅಂಶಗಳು ಕಂಡುಬಂದಿಲ್ಲ.
ಇನ್ನು ಎಪ್ರಿಲ್ 23, 2023ರಂದು ಇಬ್ಬರು ಮಹಿಳೆಯರ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ, ಬರ್ಪೆಟಾ ರೋಡ್ ಪೊಲೀಸ್ ಠಾಣೆಯಲ್ಇ 56/2023 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಬರ್ಪೆಟಾ ಪೊಲೀಸರು ಮಾಡಿರುವ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಸತ್ಯಶೋಧನೆಯ ಪ್ರಕಾರ, ಮುಸ್ಲಿಂ ಮಹಿಳೆಯರು ಅವರ ಹಬ್ಬದ (ಈದ್) ದಿನದಂದು ಆದುನಿಕ ಉಡುಪುಗಳನ್ನು ಧರಿಸಿದ್ದಕ್ಕಾಗಿ ಮುಸ್ಲಿಂ ಯುವಕರು ಥಳಿಸಿದ್ದಾರೆ ಎನ್ನುವುದು ತಪ್ಪಾಗಿದೆ.
Our Sources:
Report by Pratidin time, Dated: April 24, 2023
Report by Batori, Dated: April 24, 2023
Report by India Today NE, Dated: April 24, 2023
Tweet by Barpeta Police, Dated: April 24, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Runjay Kumar
July 23, 2024
Ishwarachandra B G
September 25, 2023
Ishwarachandra B G
July 11, 2023