Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ರಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತಕ್ಕೆ ಸಂಬಂಧಿಸಿ ವಿಮಾನವೊಂದು ನೀರಿನಿಂದ ತುಂಬಿದ ರನ್ ವೇ ನಲ್ಲಿ ಚಲಿಸುತ್ತಿರುವ ವೀಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
“ವಿಮಾನ ಪತನ; ಲ್ಯಾಂಡಿಂಗ್ ಪ್ರಯತ್ನ ವಿಫಲ; 5 ಮಕ್ಕಳು, ಸಿಬ್ಬಂದಿ ಸೇರಿದಂತೆ 49 ಮಂದಿ ದುರಂತ ಸಾವು” ಎಂಬ ಹೇಳಿಕೆಯೊಂದಿಗೆ ಫೇಸ್ಬುಕ್ ನಲ್ಲಿ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ.

ಇದೇ ರೀತಿಯ ಹೇಳಿಕೆಯಿರುವ ಪೋಸ್ಟ್ಗಳನ್ನು ಇಲ್ಲಿ,ಇಲ್ಲಿಮತ್ತುಇಲ್ಲಿ ನೋಡಬಹುದು.
ವೈರಲ್ ಕ್ಲಿಪ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಮೇಲ್ನೋಟಕ್ಕೆ ವಿಮಾನಕ್ಕೆ ಯಾವುದೇ ಹಾನಿಯಿಲ್ಲದ ರೀತಿ ಸುರಕ್ಷಿತವಾಗಿ ಇಳಿದಂತೆ ಕಾಣುವುದನ್ನು ಗಮನಿಸಿದ್ದೇವೆ. ಇದಲ್ಲದೇ ರಷ್ಯಾದ ವಿಮಾನವು ದಟ್ಟವಾದ ಕಾಡಿನಲ್ಲಿ ಪತನಗೊಂಡಿರುವ ವರದಿಗಳಿದ್ದು, ವೈರಲ್ ವೀಡಿಯೋ ಅದಕ್ಕೆ ವಿರುದ್ಧವಾಗಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.
ಅನಂತರ ನಾವು Google Lens ನಲ್ಲಿ ವೈರಲ್ ಕ್ಲಿಪ್ನ ಕೀಫ್ರೇಮ್ ಗಳನ್ನು ತೆಗೆದು ಹುಡುಕಾಟ ನಡೆಸಿದ್ದೇವೆ. ಅದು ನಮ್ಮನ್ನು @Combat_learjet ನಿಂದ ಡಿಸೆಂಬರ್ 22, 2024 ರಂದು ಬಂದ ಎಕ್ಸ್ ಪೋಸ್ಟ್ನತ್ತ ಕರೆದೊಯ್ದಿದೆ. ಈ ವೀಡಿಯೋ ನೀರು ತುಂಬಿದ ರನ್ವೇಯಲ್ಲಿ ವಿಮಾನ ಇಳಿಯುವ ಅದೇ ವೀಡಿಯೊವನ್ನು ಒಳಗೊಂಡಿತ್ತು, ಇದು ಇತ್ತೀಚಿನ ಅಪಘಾತಕ್ಕಿಂತ ಹಿಂದಿನದು ಎಂದು ದೃಢಪಡಿಸುತ್ತದೆ.

ಮಳೆಯ ನಂತರ ದಕ್ಷಿಣ ಸುಡಾನ್ನ ಜುಬಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಿತಿಯನ್ನು ತೋರಿಸುವ ವೈರಲ್ ಕ್ಲಿಪ್ ಅನ್ನು ‘ SSGTV ನ್ಯೂಸ್: ಸೌತ್ ಸುಡಾನ್ ಗ್ಲೋಬಲ್ ‘ ಮಾರ್ಚ್ 29, 2023 ರಂದು ಯೂಟ್ಯೂಬ್ನಲ್ಲಿ ಪೋಸ್ಟ್ ಮಾಡಲಾಗಿದೆ.

ಈ ವೀಡಿಯೊದ ಕುರಿತು ಇತರ ವಿವರಗಳನ್ನು ನಾವು ಸ್ವತಂತ್ರವಾಗಿ ಖಚಿತಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಆದಾಗ್ಯೂ, ಇದು ಕನಿಷ್ಠ ಮಾರ್ಚ್ 2023 ರಿಂದ ಆನ್ಲೈನ್ನಲ್ಲಿ ಲಭ್ಯವಿದೆ ಮತ್ತು ಆದ್ದರಿಂದ ರಷ್ಯಾದ ಅಮುರ್ ಪ್ರದೇಶದಲ್ಲಿ ಅಂಗಾರ ಏರ್ಲೈನ್ಸ್ ವಿಮಾನ ಅಪಘಾತದ ದೃಶ್ಯ ಇದಲ್ಲ ಎಂಬುದು ಗೊತ್ತಾಗಿದೆ.
ಸಾಕ್ಷ್ಯಗಳ ಪ್ರಕಾರ, ಹಳೆಯ ಮತ್ತು ಸಂಬಂಧವಿಲ್ಲದ ದೃಶ್ಯಗಳನ್ನು ರಷ್ಯಾದಲ್ಲಿ ಇತ್ತೀಚೆಗೆ ನಡೆದ ವಿಮಾನ ಅಪಘಾತದೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Our Sources
X post By Combat_learjet, Dated: December 22, 2025
YouTube Video By SSGTV News: South Sudan Global, Dated March 29, 2023
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
Ishwarachandra B G
November 8, 2025
Ishwarachandra B G
November 4, 2025
Vasudha Beri
June 13, 2025