Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕಲ್ಲಂಗಡಿ, ಬೀಟ್ರೂಟ್ ಮತ್ತು ಶುಂಠಿ ರಸವು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಬಹುದು
ಕಲ್ಲಂಗಡಿ, ಬೀಟ್ರೂಟ್ ಮತ್ತು ಶುಂಠಿ ರಸವು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಬಹುದು ಎನ್ನುವುದು ನಿಜವಲ್ಲ, ಮೂತ್ರಪಿಂಡದ ಸಮಸ್ಯೆಗೆ ಇದು ಚಿಕಿತ್ಸೆಯಲ್ಲ, ಮೂತ್ರಪಿಂಡದಲ್ಲಿ ಸಮಸ್ಯೆ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ
ಕಲ್ಲಂಗಡಿ, ಬೀಟ್ರೂಟ್ ಮತ್ತು ಶುಂಠಿ ರಸವು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಬಹುದು ಎಂಬಂತೆ ಫೇಸ್ಬುಕ್ ಪೋಸ್ಟ್ ಒಂದರಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಈ ಹೇಳಿಕೆ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು, ಇದು ನಿಜವಲ್ಲ ಎಂದು ಕಂಡುಬಂದಿದೆ.
Also Read: ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ಯಕೃತ್ತಿನ ಕೊಬ್ಬು ಕಡಿಮೆ ಮಾಡಬಹುದೇ?
ಇಲ್ಲ, ಇದು ಮೂತ್ರಪಿಂಡಗಳನ್ನು ಹೇಳಿಕೆಯಲ್ಲಿ ಹೇಳಿದ ರೀತಿ ಸ್ವಚ್ಛ ಮಾಡುವುದಿಲ್ಲ. ಮೂತ್ರಪಿಂಡಗಳು ಈಗಾಗಲೇ ತಮ್ಮನ್ನು ಶುದ್ಧೀಕರಿಸುವಲ್ಲಿ ಉತ್ತಮವಾಗಿವೆ. ಇದು ಅದರದ್ದೇ ಕೆಲಸ. ಮೂತ್ರಪಿಂಡಗಳು ರಕ್ತದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಫಿಲ್ಟರ್ ಮಾಡುತ್ತದೆ ಮತ್ತು ಅದರ ಕೆಲಸಕ್ಕೆ ಸಹಾಯ ಮಾಡಲು ವಿಶೇಷ ಪಾನೀಯದ ಅಗತ್ಯವಿಲ್ಲ. ಕಲ್ಲಂಗಡಿ-ಬೀಟ್ರೂಟ್-ಶುಂಠಿ ರಸವು ಮೂತ್ರಪಿಂಡಗಳಿಗೆ ವಿಶೇಷ ಶುದ್ಧೀಕರಣ ಶಕ್ತಿಯನ್ನು ನೀಡುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.
ಖಚಿತವಾಗಿ ಹೇಳುವುದಾದರೆ ಸಾಕಷ್ಟು ನೀರಿನಂಶವನ್ನು ದೇಹದಲ್ಲಿ ಹೊಂದಿರುವುದು ಅಗತ್ಯ.ಕಲ್ಲಂಗಡಿಯಲ್ಲಿ ನೀರಿನಂಶ ಹೆಚ್ಚಾಗಿದೆ. ಬೀಟ್ರೂಟ್ ಮತ್ತು ಶುಂಠಿ ಕೆಲವು ಸಾಮಾನ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇದನ್ನು “ಶಕ್ತಿಯುತ ಕಿಡ್ನಿ ಶುದ್ಧೀಕರಣವಸ್ತು” ಎಂದು ಕರೆಯುವುದು ತಪ್ಪುದಾರಿಗೆಳೆಯುತ್ತದೆ. ಮೂತ್ರಪಿಂಡಗಳು ಆರೋಗ್ಯಕರವಾಗಿದ್ದರೆ, ಅದು ಆಗಾಗಲೇ ಶುದ್ಧೀಕರಣ ಕೆಲಸ ಮಾಡುತ್ತದೆ. ಮೂತ್ರಪಿಂಡದ ಕಾಯಿಲೆ ಅಥವಾ ಕಲ್ಲುಗಳನ್ನು ಹೊಂದಿದ್ದರೆ, ವೈದ್ಯಕೀಯ ಚಿಕಿತ್ಸೆ ಬೇಕೇ ಹೊರತು, ರಸವಲ್ಲ.
ಇಲ್ಲ, ಇದು ಮೂತ್ರಪಿಂಡದ ಕಲ್ಲುಗಳನ್ನು ಒಡೆಯಲು ಅಥವಾ ಹೊರಹಾಕಲು ಪೂರಕವಲ್ಲ. ಮೂತ್ರಪಿಂಡದ ಕಲ್ಲುಗಳು ವಿವಿಧ ರೀತಿಯ ಮತ್ತು ಗಾತ್ರಗಳಲ್ಲಿ ಬರುತ್ತವೆ, ಮತ್ತು ಸಣ್ಣದಾದರೆ ಸಾಕಷ್ಟು ದ್ರವಾಹಾರ ಸೇವನೆಯಲ್ಲಿ ಹಾದಹೋಗಬಹುದು. ಆದರೆ ಹೇಳಿಕೆಯಲ್ಲಿ ಹೇಳಿದ ರಸ ಪವಾಡ ಮಾಡುವುದಿಲ್ಲ. ಕಲ್ಲಂಗಡಿ, ಬೀಟ್ರೂಟ್ ಅಥವಾ ಶುಂಠಿಯು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುವ ಅಥವಾ ತೆಗೆದುಹಾಕುವ ಶಕ್ತಿಯನ್ನು ಹೊಂದಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ವಾಸ್ತವವಾಗಿ, ಬೀಟ್ರೂಟ್ ಆಕ್ಸಲೇಟ್ಗಳನ್ನು ಹೊಂದಿರುತ್ತದೆ. ಇದು ನೈಸರ್ಗಿಕವಾಗಿ ಕೆಲವು ಸಂಯುಕ್ತಗಳನ್ನು ಹೊಂದಿದ್ದು ಕೆಲವು ಕಲ್ಲುಗಳ ರಚನೆಗೆ ಸಹಾಯಮಾಡಬಹುದು. ಆದರೆ ಈಗಾಗಲೇ ಮೂತ್ರಪಿಂಡದ ಕಲ್ಲುಗಳ ವಿಚಾರದಲ್ಲಿ ಅಪಾಯದಲ್ಲದಿದ್ದರೆ ಬೀಟ್ರೂಟ್ ಕಲ್ಲುಗಳ ವಿಚಾರದಲ್ಲಿ ಹಾನಿ ಮಾಡುವ ಸಾಧ್ಯತೆ ಇದೆ.
ಹೌದು, ಆದರೆ ಎಚ್ಚರಿಕೆ ಬೇಕು ಮತ್ತು ಎಲ್ಲರಿಗೂ ಅನ್ವಯಿಸುವುದಿಲ್ಲ. ಹೆಚ್ಚಿನ ಆರೋಗ್ಯವಂತ ಜನರಿಗೆ, ಕೆಲವು ದಿನಗಳವರೆಗೆ ಈ ರಸವನ್ನು ಸೇವಿಸುವುದರಿಂದ ಹಾನಿಯಾಗುವುದಿಲ್ಲ. ಕಲ್ಲಂಗಡಿ ತೇವಾಂಶವನ್ನು ನೀಡುತ್ತದೆ, ಬೀಟ್ರೂಟ್ ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಹೊಂದಿದೆ ಮತ್ತು ಶುಂಠಿಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಆದರೆ ಇದು ಎಲ್ಲರಿಗೂ ಸೂಕ್ತವಾಗಿದೆ ಎಂದು ಅರ್ಥವಲ್ಲ.
ಮೂತ್ರಪಿಂಡದ ಕಾಯಿಲೆ, ಮಧುಮೇಹ ಅಥವಾ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳಿಗೆ ಒಳಗಾಗುವ ಜನರು ಇದನ್ನು ಪ್ರತಿದಿನ ಕುಡಿಯುವುದನ್ನು ತಪ್ಪಿಸಬೇಕು. ಕಲ್ಲಂಗಡಿ ಮತ್ತು ಬೀಟ್ರೂಟ್ ನೈಸರ್ಗಿಕ ಸಕ್ಕರೆಗಳು ಮತ್ತು ಪೊಟ್ಯಾಸಿಯಮ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ, ಇದು ಅಂತಹ ಸಂದರ್ಭಗಳಲ್ಲಿ ಸಮಸ್ಯೆಯಾಗಬಹುದು. ಇಂಟರ್ನೆಟ್ನಿಂದ ಆಹಾರ ಸಲಹೆಯನ್ನು ಅನುಸರಿಸುವ ಮೊದಲು ಯಾವಾಗಲೂ ಆಹಾರ ತಜ್ಞರು, ವೈದ್ಯರೊಂದಿಗೆ ಪರಿಶೀಲಿಸಿ.
ಮೂತ್ರಪಿಂಡದ ಸಮಸ್ಯೆಗಳಿಗೆ ವೈದ್ಯಕೀಯ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಒಂದೇ ಪಾನೀಯ ಅಥವಾ ಆಹಾರವು ಮೂತ್ರಪಿಂಡಧ ಕಾಯಿಲೆಗಳನ್ನು “ಗುಣಪಡಿಸಬಹುದು” ಎಂಬ ಕಲ್ಪನೆಯನ್ನು ವಿಜ್ಞಾನವು ಬೆಂಬಲಿಸುವುದಿಲ್ಲ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಸೋಂಕುಗಳು ಅಥವಾ ಕಲ್ಲಿನ ವಿಚಾರದಲ್ಲಿ ಸರಿಯಾದ ವೈದ್ಯಕೀಯ ಆರೈಕೆಯ ಅಗತ್ಯವಿದೆ. ರೋಗಲಕ್ಷಣಗಳನ್ನು ನಿರ್ಲಕ್ಷಿಸುವುದು ಅಥವಾ ಮನೆಮದ್ದುಗಳನ್ನು ಅವಲಂಬಿಸಿ ಚಿಕಿತ್ಸೆಯನ್ನು ವಿಳಂಬಗೊಳಿಸುವುದು ವಾಸ್ತವವಾಗಿ ವಿಷಯಗಳನ್ನು ಇನ್ನಷ್ಟು ಹದಗೆಡಿಸಬಹುದು.
ಸಮತೋಲಿತ ಆಹಾರವು ಮೂತ್ರಪಿಂಡದ ಆರೋಗ್ಯವನ್ನು ನಿರ್ವಹಿಸುವಲ್ಲಿ ಸಹಾಯಕ ಪಾತ್ರವನ್ನು ವಹಿಸುತ್ತದೆ, ಆದರೆ ಇದು ಚಿಕಿತ್ಸೆ ಅಲ್ಲ. ಉಪ್ಪು ಸೇವನೆ, ರಕ್ತದೊತ್ತಡ ಮತ್ತು ದೇಹದಲ್ಲಿ ನೀರಿನಂಶವನ್ನು ಸರಿಯಾಗಿ ನಿರ್ವಹಿಸುವುದು ಮೂತ್ರಪಿಂಡದ ಆರೈಕೆಯ ಪ್ರಮುಖ ಭಾಗಗಳಾಗಿವೆ ಮತ್ತು ವೈಯಕ್ತಿಕ ಆರೋಗ್ಯದ ಅಗತ್ಯಗಳ ಆಧಾರದ ಮೇಲೆ ಅವುಗಳನ್ನು ಸರಿಹೊಂದಿಸಬೇಕಾಗಿದೆ.
ಕಲ್ಲಂಗಡಿ, ಬೀಟ್ರೂಟ್ ಮತ್ತು ಶುಂಠಿ ರಸವು ರಿಫ್ರೆಶ್ ಆಗಿ ಮಾಡಬಹುದು, ದೇಹಕ್ಕೆ ನೀರಿನಂಶ, ಪೋಷಕಾಂಶಗಳನ್ನು ನೀಡಬಹುದು. ಈ ಪಾನೀಯವನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು. ಆದರೆ ಇದು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುವುದಿಲ್ಲ, ಕಲ್ಲುಗಳನ್ನು ಹೊರಹಾಕುವುದಿಲ್ಲ ಅಥವಾ ವೈದ್ಯಕೀಯ ಸಲಹೆ ಬದಲಿಸುವುದಿಲ್ಲ. ಮೂತ್ರಪಿಂಡಗಳಿಗೆ ಮಾಡಬಹುದಾದ ಉತ್ತಮ ಕೆಲಸವೆಂದರೆ ಸಾಕಷ್ಟು ಸರಳವಾದ ನೀರನ್ನು ಕುಡಿಯುವುದು, ಸಮತೋಲಿತ ಆಹಾರವನ್ನು ಸೇವಿಸುವುದು, ಹೆಚ್ಚು ಉಪ್ಪನ್ನು ತಪ್ಪಿಸುವುದು ಮತ್ತು ನಿಯಮಿತ ತಪಾಸಣೆಗಳನ್ನು ಮಾಡುವುದಾಗಿದೆ.
ಮೂತ್ರಪಿಂಡದ ಸಮಸ್ಯೆಗೆ ಪಾನೀಯದಿಂದ ಪರಿಹಾರ ಸಾಧ್ಯವಿಲ್ಲ ಸರಿಯಾದ ವೈದ್ಯಕೀಯ ಆರೈಕೆ ಬೇಕಾಗುತ್ತದೆ. ಸಮಸ್ಯೆ ಇದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ, ಇಂಟರ್ನೆಟ್ ನಲ್ಲಿ ಕಾಣುವ ಪರಿಹಾರಗಳು ಅಪಾಯ ಉಂಟುಮಾಡಬಹುದು.
Our Sources
Kidneys: the original self-cleaning system
Types of Kidney Stones
The oxalate content of fruit and vegetable juices, nectars and drinks
(This article has been published in collaboration with THIP Media)